ಶೇರ್.ಮಾರ್ಕೆಟ್ (ಫೋನ್‌ಪೇ ವೆಲ್ತ್) ನ ಎಂಜಿನಿಯರಿಂಗ್ ಮುಖ್ಯಸ್ಥರಾದ ಹಿಮಾಂಶು ಸಾಹು ಅವರಿಂದ ಈ ವರ್ಷ ನಕಲಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಂಚನೆಗಳು ತೀವ್ರವಾಗಿ ಹೆಚ್ಚಾಗಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ದಂತಹ ನಿಯಂತ್ರಕ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳ ಮೂಲಕ ಹೂಡಿಕೆದಾರರಿಗೆ ಎಚ್ಚರಿಕೆ ನೀಡುತ್ತಿವೆ.
ಸುದ್ದಿ ವಾಹಿನಿಗಳು ಈ ಎಚ್ಚರಿಕೆಗಳನ್ನು ಪ್ರಸಾರ ಮಾಡುತ್ತಿವೆ ಮತ್ತು ಹಗರಣಗಳು ಹೇಗೆ ನಡೆಯುತ್ತವೆ ಎಂಬುದರ ಕುರಿತು ಜಾಗೃತಿ ಮೂಡಿಸುತ್ತಿವೆ. ಆದರೂ ಬಹಳಷ್ಟು ಜನರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ಹಗರಣಗಳು ಅಪರೂಪದ ಪ್ರಕರಣಗಳಲ್ಲ. ಉದಾಹರಣೆಗೆ: 2025 ರಲ್ಲಿ, ಹೈದರಾಬಾದ್‌ನ ಉದ್ಯಮಿಯೊಬ್ಬರು ನಕಲಿ ಟ್ರೇಡಿಂಗ್ ಆ್ಯಪ್‌ನಿಂದಾಗಿ ₹3.24 ಕೋಟಿ ರೂ. ಕಳೆದುಕೊಂಡರು ಮತ್ತು ಥಾಣೆಯಲ್ಲಿ ಇದೇ ರೀತಿಯ ಹಗರಣವೊಂದರಲ್ಲಿ ವ್ಯಕ್ತಿಯೊಬ್ಬರು ₹4.11 ಕೋಟಿ ರೂ. ವಂಚನೆಗೆ ಒಳಗಾಗಿದ್ದರು. ಇವುಗಳಿಗೆ ಸಂಬಂಧಿಸಿದಂತೆ ಅನೇಕರನ್ನು ಬಂಧಿಸಿದ್ದರೂ ಹಾಗೂ ಅಕ್ರಮ ಖಾತೆಗಳನ್ನು ಸ್ಥಗಿತಗೊಳಿಸಿದ್ದರೂ, ವಂಚನೆಗಳು ಈಗಲೂ ಮುಂದುವರೆಯುತ್ತಿವೆ.
ನಿಯಂತ್ರಕರು ಮತ್ತು ಅಧಿಕಾರಿಗಳು ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೂ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ, ನಾವು ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.
ಇದನ್ನೂ ಓದಿ: Vishweshwar Bhat Column: ಟೇಕಾಫ್ ಟ್ಯಾಂಗೋ ಎಂದರೇನು ?
ಮೊದಲಿಗೆ, ಹಗರಣ ಹೇಗಾಗುತ್ತದೆ ಎಂದು ಅರ್ಥಮಾಡಿಕೊಳ್ಳೋಣ:
ವಂಚನೆ ಹೀಗಾಗಬಹುದು:: ನೀವು ವಾಟ್ಸಾಪ್, ಯೂಟ್ಯೂಬ್, X (ಟ್ವಿಟರ್) ಅಥವಾ ಟೆಲಿಗ್ರಾಮ್ ಲಿಂಕ್ ಅನ್ನು ಸ್ವೀಕರಿಸುತ್ತೀರಿ → ನಿಮ್ಮನ್ನು ಗ್ರೂಪ್‌ಗೆ ಆಹ್ವಾನಿಸಲಾಗುತ್ತದೆ → ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು ಅಥವಾ ಲಿಂಕ್ ಅನ್ನು ಬಳಸಲು ಕೇಳಲಾಗುತ್ತದೆ → ಆ್ಯಪ್ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿರುವ "ವ್ಯಾಪಾರಿಗಳು" ತ್ವರಿತ ಲಾಭಗಳನ್ನು ಗಳಿಸಬಹುದು ಎಂದು ಅಸಹಜ ಮಾಹಿತಿಗಳನ್ನು ಪ್ರದರ್ಶಿಸುತ್ತಾರೆ → ಆಗ ನೀವು ಹಣ ಗಳಿಸುತ್ತಿದ್ದೀರಿ ಎಂದು ನಿಮಗೆ ಅನಿಸುತ್ತದೆ → ನಂತರ, ನೀವು ಆ ಲಾಭವನ್ನು ವಿಥ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಬ್ರೋಕರ್ ಹೆಚ್ಚಿನ "ಶುಲ್ಕ"ಗಳನ್ನು ಕೇಳುತ್ತಾರೆ ಅಥವಾ ಕಣ್ಮರೆಯಾಗುತ್ತಾರೆ.
ಯಾವುದೇ ಟ್ರೇಡಿಂಗ್ ಆ್ಯಪ್ ಅಥವಾ ಪ್ಲಾಟ್‌ಫಾರ್ಮ್ ಅನ್ನು ನಂಬುವ ಮೊದಲು ಐದು ತ್ವರಿತ ಪರಿಶೀಲನೆಗಳನ್ನು ಮಾಡಬೇಕು. ಅವುಗಳ ವಿವರ ಇಲ್ಲಿವೆ:
SEBI ನೋಂದಣಿಯನ್ನು ಪರಿಶೀಲಿಸಿ - ಯಾವಾಗಲೂ: ಬ್ರೋಕರ್‌ನ SEBI ನೋಂದಣಿ ಸಂಖ್ಯೆ ಯನ್ನು ಕೇಳಿ. SEBI ಯಿಂದ ಗುರುತಿಸಲ್ಪಟ್ಟ ಮಧ್ಯವರ್ತಿಗಳ ಪಟ್ಟಿಯಲ್ಲಿ ಅದನ್ನು ಹುಡುಕಿ. ನೀವು SEBI ವೆಬ್‌ಸೈಟ್‌ನಲ್ಲಿ ಅದನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ ಅಥವಾ ಬ್ರೋಕರ್ ಈ ವಿವರಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುತ್ತಿದ್ದರೆ, ಅಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಬೇಡಿ.
ಅವರು ಪಾವತಿಗಳನ್ನು ಹೇಗೆ ಸ್ವೀಕರಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ: ಕಾನೂನುಬದ್ಧ ಬ್ರೋಕರ್‌ಗಳು ನೋಂದಾಯಿತ ಕಾರ್ಪೊರೇಟ್ ಬ್ಯಾಂಕ್ ಖಾತೆಗಳು ಅಥವಾ ಪರಿಶೀಲಿಸಿದ UPI ಹ್ಯಾಂಡಲ್‌ಗಳ ಮೂಲಕ ಹಣವನ್ನು ಸಂಗ್ರಹಿಸುತ್ತಾರೆಯೇ ಹೊರತು, ವೈಯಕ್ತಿಕ UPI ಐಡಿಗಳು ಅಥವಾ ಪರಿಶೀಲಿಸದ ಬ್ಯಾಂಕ್ ಖಾತೆಗಳ ಮೂಲಕ ಅಲ್ಲ. ಅವರು "ಮೊದಲು ನನ್ನ UPI/ವೈಯಕ್ತಿಕ ಖಾತೆಗೆ ಕಳುಹಿಸಿ" ಎಂದು ಹೇಳಿದರೆ, ಅದು ಎಚ್ಚರಿಕೆಯ ಕರೆಗಂಟೆ ಅಥವಾ ಅಪಾ ಯದ ಸಂಕೇತ ಎಂದು ಪರಿಗಣಿಸಿ. ಅಂತಹ ಅಪಾಯಗಳನ್ನು ತಡೆಯಲು, ನಿಯಂತ್ರಕರು ಇದೀಗ ಅಧಿಕೃತ ಮಧ್ಯವರ್ತಿಗಳು/ಬ್ರೋಕರ್‌ಗಳಿಗೆ ಮಾತ್ರ ಪರಿಶೀಲಿಸಿದ UPI ಹ್ಯಾಂಡಲ್‌ಗಳನ್ನು ಬಳಸುತ್ತಿದ್ದಾರೆ.
ನಿಜವಾಗಿಯೂ ತುಂಬ ಒಳ್ಳೆಯ ರಿಟರ್ನ್ಸ್ ದೊರೆಯುತ್ತದೆ ಎಂದು ಬಿಂಬಿಸುವುದು ಅಥವಾ ಹೆಚ್ಚಿನ ಹಣವನ್ನು ಸೇರಿಸಲು ಒತ್ತಡ ಹಾಕುವುದು: ಖಾತರಿ ಲಾಭದ ಭರವಸೆಗಳು, ತುರ್ತು "ಸೀಮಿತ ಸಮಯದ" ಕೊಡುಗೆಗಳು ಅಥವಾ ಹೆಚ್ಚಿನ ಹಣವನ್ನು ಸೇರಿಸಲು ನಿರ್ವಾಹಕರು ನಿಮ್ಮನ್ನು ಒತ್ತಾಯಿಸುವುದು, ಇವೆಲ್ಲವೂ ಪ್ರಮುಖ ಆಮಿಷಗಳಾಗಿರುತ್ತವೆ. ನಿಮ್ಮ ವಿಶ್ವಾಸ ಗಳಿಸಲು ಸ್ಕ್ಯಾಮರ್‌ಗಳು ಆರಂಭದಲ್ಲಿ ಸಣ್ಣ ಮೊತ್ತವನ್ನು ವಿಥ್‌ಡ್ರಾ ಮಾಡಲು ನಿಮಗೆ ಅವಕಾಶ ನೀಡಬಹುದು, ಆದರೆ ನಂತರ ಅವರು ದೊಡ್ಡ ಮೊತ್ತದ ವಿಥ್‌ಡ್ರಾಗಳನ್ನು ಬ್ಲಾಕ್ ಮಾಡುತ್ತಾರೆ.
ಆ್ಯಪ್‌ನ ಮೂಲವನ್ನು ಪರಿಶೀಲಿಸಿ: ಕಂಪನಿಯ ನಿಜವಾದ ಹೆಸರಿನಲ್ಲಿ ಗೂಗಲ್ ಪ್ಲೇ / ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಿ. ಚಾಟ್‌ಗಳು ಅಥವಾ ಜಾಹೀರಾತುಗಳಿಂದ ಬಂದ ಲಿಂಕ್‌ಗಳನ್ನು ಬಳಸಬೇಡಿ. ಡೆವಲಪರ್‌ನ ಹೆಸರು ಮತ್ತು ಕಂಪನಿಯ ವೆಬ್‌ಸೈಟ್ ಅನ್ನು ಪರಿಶೀಲಿಸಿ; ಆ್ಯಪ್ ಅನ್ನು ಪರಿಶೀಲಿಸಲು ಕಂಪನಿಯ ವೆಬ್‌ಸೈಟ್‌ನಲ್ಲಿರುವ ಅಧಿಕೃತ ಫೋನ್ ನಂಬರ್‌ಗೆ ಕರೆ ಮಾಡಿ.
ನಿಮ್ಮ ವಿಶ್ವಾಸಾರ್ಹ ಮೂಲವನ್ನು ಕೇಳಿ: ಗೊತ್ತಿಲ್ಲದೇ ಇರುವ ಪ್ಲಾಟ್‌ಫಾರ್ಮ್‌ನಲ್ಲಿ ಹೂಡಿಕೆ ಮಾಡುವ ಮೊದಲು, ನಿಮ್ಮ ವಿಶ್ವಾಸಾರ್ಹ ಜನರೊಂದಿಗೆ ಚರ್ಚಿಸಿ. ನಾವೆಲ್ಲರೂ ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಅಥವಾ ಇತರ ಜನರ ಸಂಪರ್ಕವನ್ನು ಹೊಂದಿದ್ದೇವೆ. ಸಲಹೆಗಾಗಿ ನಾವು ಅವರನ್ನು ಸಂಪರ್ಕಿಸುತ್ತೇವೆ - ಉದಾಹರಣೆಗೆ ಸೇವಿಸುವ ಆಹಾರ, ಪಾಕವಿಧಾನಗಳು ಅಥವಾ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಲು ಉತ್ತಮ ಸ್ಥಳ ಯಾವುದು ಎಂಬುದರ ಬಗ್ಗೆಯೂ ಇವರ ಜೊತೆ ಚರ್ಚೆ ಮಾಡುತ್ತಿರುತ್ತೇವೆ. ಅಂತಹವರನ್ನು ಸಂಪರ್ಕಿಸಿ ಮತ್ತು ಯಾರಾದರೂ ಅದರ ಬಗ್ಗೆ ಕೇಳಿದ್ದಾರೆಯೇ ಎಂದು ಪರಿಶೀಲಿಸಿ. ಹೆಚ್ಚಿನವರು ಇಲ್ಲ ಅಥವಾ ತಮಗೆ ತಿಳಿದಿಲ್ಲ ಎಂದು ಹೇಳಿದರೆ, ಅಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಬೇಡಿ.
ಈಗ ನಾವು ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿದ್ದೇವೆ. ಈಗ ನೀವು ಹಗರಣಗಳಿಂದ ದೂರವಿರಲು ಸಿದ್ಧಪಡಿಸಿಕೊಳ್ಳಬೇಕಾದ ಚೆಕ್‌ಲಿಸ್ಟ್ ಬಗ್ಗೆ ತಿಳಿದುಕೊಳ್ಳೋಣ.
ನೀವು ಇನ್‌ಸ್ಟಾಲ್ ಮಾಡುವ ಅಥವಾ ಹೂಡಿಕೆ ಮಾಡುವ ಮೊದಲು SEBI ವೆಬ್‌ಸೈಟ್ ಅನ್ನು ಪರಿಶೀಲಿಸಿ.
ವೈಯಕ್ತಿಕ ಖಾತೆಗಳಿಗೆ ಎಂದಿಗೂ ಹಣವನ್ನು ವರ್ಗಾಯಿಸಬೇಡಿ.
ನಿಮಗೆ ಈಗಾಗಲೇ ತಿಳಿದಿರುವ ಮತ್ತು ವಿಶ್ವಾಸಾರ್ಹ ಬ್ರೋಕರ್‌ಗಳು ಅಥವಾ ಬ್ಯಾಂಕ್‌ಗಳನ್ನು ಮಾತ್ರ ಬಳಸಿ.
ಅಪರಿಚಿತ ಅಥವಾ ಪರಿಶೀಲಿಸದ ಆನ್‌ಲೈನ್ ಗ್ರೂಪ್‌ನಲ್ಲಿರುವ "ರಹಸ್ಯ ಸಲಹೆಗಳಿಗೆ"(ಸೀಕ್ರೆಟ್ ಟಿಪ್ಸ್) ಗಮನ ಕೊಡಬೇಡಿ.
ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಬ್ಯಾಂಕ್ ಅಥವಾ ವಿಶ್ವಾಸಾರ್ಹ ಸಲಹೆಗಾರರೊಂದಿಗೆ ಪರಿಶೀಲಿಸಿ.
ಸ್ಕ್ರೀನ್‌ಶಾಟ್‌ಗಳು, ಚಾಟ್ ಲಾಗ್‌ಗಳು ಮತ್ತು ರಶೀದಿಗಳನ್ನು ಉಳಿಸಿಕೊಳ್ಳಿ - ಅನುಮಾನಾಸ್ಪದ ಘಟನೆಗಳನ್ನು ವರದಿ ಮಾಡಿ ಅಥವಾ ನೀವು ನಕಲಿ ವ್ಯಾಪಾರ ಹಗರಣಕ್ಕೆ ಬಲಿಯಾಗಿರಬಹು ದೆಂದು ತಿಳಿದ ತಕ್ಷಣ cybercrime.gov.in ಗೆ ವರದಿ ಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಗೆ ಕರೆ ಮಾಡಿ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ಹೂಡಿಕೆ ಆ್ಯಪ್ ತ್ವರಿತವಾಗಿ ದೊಡ್ಡ ಆದಾಯವನ್ನು ಗಳಿಸುತ್ತೀರಿ ಎಂಬ ಭರವಸೆ ನೀಡಿದರೆ, ಯಾರೋ ಒಬ್ಬರ ವೈಯಕ್ತಿಕ ಖಾತೆಗೆ ಪಾವತಿಸಲು ನಿಮ್ಮನ್ನು ಕೇಳಿದರೆ ಅಥವಾ ಯಾವುದೋ ಅಪರಿಚಿತ ಗ್ರೂಪ್‌ನ ಮೂಲಕ ನಿಮ್ಮ ಇನ್‌ಬಾಕ್ಸ್‌ಗೆ ಸಂದೇಶ ಬಂದರೆ, ಅದು ಹೂಡಿಕೆಯಾಗಿರುವುದಿಲ್ಲ - ಬದಲಿಗೆ ಅದೊಂದು ಮೋಸದ ಬಲೆ ಯಾಗಿರುತ್ತದೆ. ಅದರಿಂದ ದೂರವಿರುವುದು ಒಳ್ಳೆಯದು.