ಬೆಂಗಳೂರು: ಪ್ರೋಟಿನ್ ಸೇವನೆ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಭಾಗವಾಗಿ ಆಶೀರ್ವಾದ್ ಕೂಡ ತನ್ನ ಸಾಮಾನ್ಯ ಗೋದಿ ಹಿಟ್ಟಿನ ಬದಲು, ಇದೀಗ ಪ್ರೋಟಿನ್‌ಯುಕ್ತ ಮಲ್ಟಿಗ್ರೇನ್ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಈ ಕುರಿತು ಮಾತನಾಡಿದ ITC ಲಿಮಿಟೆಡ್ ಆಹಾರ ವಿಭಾಗದ ಸ್ಟೇಪಲ್ಸ್ ಮತ್ತು ಅಡ್ಜಸೆನ್ಸೀಸ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಶ್ರೀ ಅನುಜ್ ರುಸ್ತಗಿ, ಇಂದು ಸಾಕಷ್ಟು ಜನರು ಚಪಾತಿ ಸೇವಿಸುತ್ತಾರೆ, ಆದರೆ, ಸಾದಾಗೋದಿ ಹಿಟ್ಟಿನಲ್ಲಿ ಹೆಚ್ಚಿನ ಪೋಷಕಾಂಶ ಹಾಗೂ ಪ್ರೋಟಿನ್ ಇಲ್ಲದೇ ಇರುವುದರಿಂದ ಚಪಾತಿ ಸೇವನೆಯಿಂದ ಆರೋಗ್ಯಕ್ಕೆ ಹೆಚ್ಚು ಉಪಯೋಗವಿಲ್ಲ. ಹೀಗಾಗಿ ಚಪಾತಿಯಲ್ಲಿಯೇ ಹೆಚ್ಚಿನ ಪ್ರೋಟಿನ್ ನೀಡಲು ಚಿಂತಿಸಿ, ಮಲ್ಟಿಗೇನ್ ಹಿಟ್ಟನ್ನು ಪರಿಚಯಿಸ ಲಾಗುತ್ತಿದೆ.
ಇದನ್ನೂ ಓದಿ: Bangalore News: ಸ್ವಿಗ್ಗಿ ಇನ್‌ಸ್ಟಾಮಾರ್ಟ್ ವತಿಯಿಂದ ಗ್ರಾಹಕರಿಗಾಗಿ "ಕ್ವಿಕ್ ಇಂಡಿಯಾ ಮೂವ್‌ಮೆಂಟ್ ಘೋಷಣೆ
ಈ ಹಿಟ್ಟಿನಲ್ಲಿ ಗೋಧಿಯೊಂದಿಗೆ ಶೇ. 10ರಷ್ಟು ಸೋಯಾ , ಕಡಲೆ ಮತ್ತು ಓಟ್ಸ್‌ಗಳನ್ನು ಸಹ ಮಿಶ್ರಣ ಮಾಡಲಾಗಿದೆ. ಈ ಅಟ್ಟಾ 100 ಗ್ರಾಂಗೆ ಸುಮಾರು 15 ಗ್ರಾಂ ಪ್ರೋಟೀನ್ ದೊರೆಯಲಿದ್ದು, ರೊಟ್ಟಿಯು ಸಹ ಹೆಚ್ಚು ರುಚಿ ಮತ್ತು ಮೃದುತ್ವವನ್ನು ಉಳಿಸಿಕೊಳ್ಳುತ್ತದೆ.
ಈ ಹಿಟ್ಟಿನಿಂದ ತಯಾರಿಸಿದ ದಿನಕ್ಕೆ ಕೇವಲ 3 ರೊಟ್ಟಿಗಳು ಶಿಫಾರಸು ಮಾಡಲಾದ ದೈನಂದಿನ ಪ್ರೋಟೀನ್ ಅವಶ್ಯಕತೆಯ ಸುಮಾರು 1/4 ನೇ ಭಾಗವನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.