ಅಬಾಟ್ ಅವರ ಅತ್ಯದ್ಭುತ ತಂತ್ರಜ್ಞಾನದ ಸಹಾಯದಿಂದ AAA ಬ್ಯಾಟರಿಗಿಂತಲೂ ಸಣ್ಣದಾಗಿ ರುವ ಎರಡು ಲೀಡ್ ರಹಿತ ಪೇಸ್‌ಮೇಕರ್ಸ್ ನಡುವೆ ಜಗತ್ತಿನ ಮೊದಲ ಬಡಿತದಿಂದ ಬಡಿತ, ತಂತಿ ರಹಿತ ಸಂವಹನ ಮತ್ತು ಸಿಂಕ್ರೊನೈಸೇಷನ್ ಅನ್ನು ಸುಲಭ ಗೊಳಿಸಿದೆ. ಹೃದಯ ದರವನ್ನು ನಿಯಂತ್ರಿಸಲು ಎರಡು ಅಳವಡಿಸಿದ ಲೀಡ್-ರಹಿತ ಪೇಸ್‌ಮೇಕರ್ಸ್ ನಡುವೆ ಸಂವಹನಕ್ಕಾಗಿ ಪ್ರೊಪರ್ಟರಿ ಇಂಪ್ಲಾಂಟ್-ಟು-ಇಂಪ್ಲಾಂಟ್ (i2i™️) ಸಾಧನ ತಂತ್ರಜ್ಞಾನವನ್ನು ಬಳಸಲಾಗಿದೆ ಲೀಡ್ಸ್ ಅಥವಾ ಶಸ್ತ್ರಚಿಕಿತ್ಸಾ ಪಾಕೆಟ್ಸ್ ನಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸಾಂಪ್ರದಾಯಿಕ ವ್ಯವಸ್ಥೆಗಳ ಕ್ಲಿನಿಕಲ್ ಲಾಭಗಳನ್ನು ಒದಗಿಸುತ್ತದೆ.
ಬೆಂಗಳೂರು: ಜಾಗತಿಕ ಆರೋಗ್ಯಾರೈಕೆ ಸಂಸ್ಥೆಯಾಗಿರುವ ಅಬಾಟ್, ಜಗತ್ತಿನ ಮೊದಲ ಡ್ಯುಯಲ್ ಚೇಂಬರ್(ಡಿಆರ್) ಲೀಡ್-ರಹಿತ ಪೇಸ್‌ಮೇಕರ್ ವ್ಯವಸ್ಥೆ- ಅವೀರ್™️ ಅನ್ನು ಪರಿಚಯಿಸುತ್ತಿದೆ. ಈ ಸಣ್ಣ ಅತ್ಯಾಧುನಿಕ ತಂತ್ರಜ್ಞಾನವಿರುವ ಸಾಧನವು ಹೃದಯ ಸರಿಯಾಗಿ ಬಡಿದುಕೊಳ್ಳಲು -ಸಾಂಪ್ರದಾಯಿಕ ಪೇಸ್‌ಮೇಕರ್ ಗಳಲ್ಲಿ ಬಳಸಲಾಗುವ ತಂತಿಗಳು(ಲೀಡ್ಸ್) ಇಲ್ಲದೆ ಅಥವಾ ಶಸ್ತ್ರಚಿಕಿತ್ಸಾ ಪಾಕೆಟ್ಸ್ ಇಲ್ಲದೆ ಹೃದಯ ಸರಿಯಾದ ರೀತಿಯಲ್ಲಿ ಬಡಿದುಕೊಳ್ಳಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಬ್ರೇಡಿಕಾರ್ಡಿಯಾ ಎಂದು ಕರೆಯಲಾಗುವ ಸಮಸ್ಯೆಯಲ್ಲಿ ನಿಮ್ಮ ಹೃದಯ ಬಹಳ ನಿಧಾನವಾಗಿ ಬಡಿದುಕೊಳ್ಳುತ್ತದೆ, ಇಂತಹ ಪರಿಸ್ಥಿತಿಗಳಲ್ಲಿ ಪೇಸ್‌ಮೇಕರ್ಸ್ ನಿಮ್ಮ ಹೃದಯವನ್ನು ಆರೋಗ್ಯಕರ ಗತಿಯಲ್ಲಿ ಬಡಿದುಕೊಳ್ಳಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕ ಪೇಸ್ ಮೇಕರ್ಸ್ ನಿಮ್ಮ ಹೃದಯಬಡಿತವನ್ನು ನಿಯಂತ್ರಿಸಲು ಲೀಡ್ ಎಂದು ಕರೆಯಲಾಗುವ ಸಣ್ಣ ತಂತಿಗಳನ್ನು ಬಳಸಿ ವಿದ್ಯುತ್ ಸಂಕೇತಗಳನ್ನು ಕಳುಹಿಸುತ್ತದೆ. ಈ ತಂತಿಗಳು ಸಾಧನವನ್ನು ನಿಮ್ಮ ಹೃದಯಕ್ಕೆ ಸಂಪರ್ಕಿಸುತ್ತದೆ.
ಇದರ ತದ್ವಿರುದ್ಧವಾಗಿ, ಲೀಡ್-ರಹಿತ ಪೇಸ್‌ಮೇಕರ್ಸ್ ಹೊಸ, ಹೆಚ್ಚು ಸುಧಾರಿತ ಆಯ್ಕೆಯಾಗಿದೆ. ಇವುಗಳು ಬಹಳ ಸಣ್ಣ ಸಾಧನಗಳಾಗಿದ್ದು, ಇದನ್ನು ಒಂದು ಕ್ಯಾಥೆಟರ್ ಮೂಲಕ ರಕ್ತನಾಳಗಳಲ್ಲಿ ಹಾಕಿ, ಹೃದಯದೊಳಗೆ ನೇರವಾಗಿ ಇರಿಸಲಾಗುತ್ತದೆ- ಇದರಲ್ಲಿ ಯಾವುದೇ ತಂತಿಗಳ ಅಗತ್ಯ ವಿರುವುದಿಲ್ಲ. ಇದರಿಂದ ಈ ಪ್ರಕ್ರಿಯೆಯು ಕನಿಷ್ಠ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡುತ್ತದೆ, ಗಂಭೀರ ಅಡ್ಡಪರಿಣಾಮಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸುಲಭ ಹಾಗೂ ತ್ವರಿತ ಚೇತರಿಕೆಗೂ ಸಹಕಾರಿಯಾಗಿದೆ.
ಇದನ್ನೂ ಓದಿ: Bangalore News: ಐಬಿಎಸ್ ಬ್ಯುಸಿನೆಸ್ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಇತ್ತೀಚಿನವರೆಗೂ, ಲೀಡ್-ರಹಿತ ಪೇಸ್‌ಮೇಕರ್ಸ್ ಕೇವಲ ಹೃದಯದ ಒಂದು ಚೇಂಬರ್ ಗೆ ಮಾತ್ರ ಬೆಂಬಲ ನೀಡುತಿತ್ತು ಏಕೆಂದರೆ ಎರಡು ವಿಭಿನ್ನ ಸಾಧನಗಳನ್ನು ಜೊತೆಯಲ್ಲಿ ಕೆಲಸ ಮಾಡಿಸು ವುದು ಒಂದು ದೊಡ್ಡ ಸವಾಲಾಗಿತ್ತು. ಆದರೆ ಅಬಾಟ್ ತನ್ನ ಅತ್ಯಾಧುನಿಕ ಇಂಪ್ಲಾಂಟ್-ಟು-ಇಂಪ್ಲಾಂಟ್ (i2i) ತಂತ್ರಜ್ಞಾನದ ಮೂಲಕ ಈ ಸವಾಲಿಗೆ ಉತ್ತರ ನೀಡಿದೆ. ಈ ನಾವೀನ್ಯತೆಯು ಎರಡು ಸಣ್ಣ ಲೀಡ್-ರಹಿತ ಪೇಸ್‌ಮೇಕರ್‌ಗಳು ಹೃದಯದ ಮೇಲಿನ ಕೋಣೆಯಲ್ಲಿ (ಬಲ ಹೃತ್ಕರ್ಣ) ಮತ್ತು ಕೆಳಗಿನ ಕೋಣೆಯಲ್ಲಿ (ಬಲ ಕುಹರ) ಕಾರ್ಯನಿರ್ವಹಿಸಲು ಅನುವು ಮಾಡಿ ಕೊಡುತ್ತದೆ, ಇವು ನೈಜ ಸಮಯದಲ್ಲಿ ಪರಸ್ಪರ ಸಂವಹನ ನಡೆಸಲು ಮತ್ತು ಪ್ರತಿ ಬಡಿತಕ್ಕೂ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಮೊದಲನೆಯ ಸಲ, ರೋಗಿಗಳು ನಿಜವಾದ ಉಭಯ ಕೋಣೆಗಳ ಲೀಡ್-ರಹಿತ ಪೇಸಿಂಗ್ ನಿಂದ ಲಾಭ ಪಡೆಯಲಿದ್ದು, ಇದು ಯಾವುದೇ ತಂತಿಗಳಿಲ್ಲದೆ ಸಹಜ ರೀತಿಯಲ್ಲಿ ಮತ್ತು ಜೊತೆ-ಜೊತೆಯಾಗಿ ಹೃದಯ ಬಡಿದುಕೊಳ್ಳಲು ಸಹಾಯ ಮಾಡುತ್ತದೆ.
ಸಂಶೋಧನೆಯ ಪ್ರಕಾರ ಭಾರತದಲ್ಲಿ ಪೇಸ್‌ಮೇಕರ್ ಹಾಕಿಸುವ ಪ್ರತಿ 3 ರಲ್ಲಿ 1 ವ್ಯಕ್ತಿಗೆ ಹೃದಯದ ಎರಡೂ ಕೋಣೆಗಳಲ್ಲಿ ಸರಾಗವಾಗಿ ಕಾರ್ಯನಿರ್ವಹಿಸಲು ಉಭಯ ಆಯ್ಕೆಯ ಅಗತ್ಯವಿರುತ್ತದೆ. ಭಾರತ, ಆಗ್ನೇಯ ಏಷ್ಯಾ, ಹಾಂಗ್ ಕಾಂಗ್, ತೈವಾನ್ ಮತ್ತು ಕೊರಿಯಾದಲ್ಲಿ ಅಬಾಟ್‌ನ ಹೃದಯ ಲಯ ನಿರ್ವಹಣಾ ವ್ಯವಹಾರದ ಜನರಲ್ ಮ್ಯಾನೇಜರ್ ಆಗಿರುವ ಅಜಯ್ ಸಿಂಗ್ ಚೌಹಾಣ್ ಅವರು ಮಾತನಾಡಿ, “ಲೀಡ್-ರಹಿತ ಪೇಸಿಂಗ್ ತಂತ್ರಜ್ಞಾನ ಉಗಮಗೊಂಡಿರುವ ಕಾರಣ, ನಾವು ನಮ್ಮ ಅವೀರ್ ವಿಆರ್ ಏಕ-ಕೋಣೆಯ ಮೇಲೆ ಮತ್ತಷ್ಟು ಕಾರ್ಯನಿರ್ವಹಿಸಿ, ಲೀಡ್-ರಹಿತ ಕಾರ್ಯಾಚರಣೆಯ ಲಾಭಗಳನ್ನು ಇನ್ನಷ್ಟು ಜನರಿಗೆ ತಲುಪಿಸಲು ಮತ್ತು ರೋಗಿಗಳಿಗೆ ಹೆಚ್ಚುವರಿ ಚಿಕಿತ್ಸಾ ಆಯ್ಕೆಗಳನ್ನು ಒದಗಿಸಲು ಶ್ರಮವಹಿಸಿದ್ದೇವೆ. ಈ ಸಣ್ಣ ಸಾಧನವು ಶಕ್ತಿಯುತ ತಂತ್ರ ಜ್ಞಾನದಿಂದ ಕೂಡಿದ್ದು, ಇದನ್ನು ಅಸಹಜ ಹೃದಯ ಲಯಗಳನ್ನು ಹೆಚ್ಚು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ವಿನ್ಯಾಸಗೊಳಿಸಲಾಗಿದೆ.” ಎಂದರು.
ಅವೀರ್ ಡಿಆರ್ ಲೀಡ್-ರಹಿತ ಪೇಸ್‌ಮೇಕರ್ ವ್ಯವಸ್ಥೆ ಎರಡು ಸಣ್ಣ ಸಾಧನಗಳನ್ನು ಒಳಗೊಂಡಿದೆ- ಅವೀರ್ ವಿಆರ್, ಹೃದಯದ ಬಲ ಕುಹರದಲ್ಲಿನ(ಕೆಳ ಕೋಣೆಗಳು) ಹೃದಯಬಡಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಮತ್ತು ಅವೀರ್ ಎಆರ್, ಹೃದಯದ ಬಲ ಹೃತ್ಕರ್ಣವನ್ನು (ಮೇಲಿನ ಕೋಣೆ) ಬೆಂಬಲ ನೀಡುತ್ತದೆ. ಎರಡು ಲೀಡ್ ರಹಿತ ಪೇಸ್‌ಮೇಕರ್ ಗಳಲ್ಲಿ ಪ್ರತಿಯೊಂದೂ ಸಹ ಸಾಂಪ್ರದಾಯಿಕ ಪೇಸ್‌ಮೇಕರ್ ನ ಅಳತೆಯಲ್ಲಿ ಒಂದನೆಯ ಹತ್ತರಷ್ಟು ಅಳತೆಯನ್ನು ಹೊಂದಿದೆ.
ಒಮ್ಮೆ ಇದನ್ನು ಅಳವಡಿಸಿ, ಜೋಡಿಸಿದ ಮೇಲೆ, ಈ ಸಾಧನಗಳು i2i ತಂತ್ರಜ್ಞಾನದೊಂದಿಗೆ ಪ್ರತಿಯೊಂದು ಹೃದಯಬಡಿತದ ಸಮಯದಲ್ಲಿ ಪರಸ್ಪರ ಸಂವಹನ ನಡೆಸುತ್ತವೆ. ಈ ತಂತ್ರಜ್ಞಾನ ವು ಪ್ರತಿ ಲೀಡ್ ರಹಿತ ಪೇಸ್‌ಮೇಕರ್‌ನ ನಡುವೆ ದೇಹದ ರಕ್ತದ ನೈಸರ್ಗಿಕ ವಾಹಕ ಗುಣಲಕ್ಷಣಗಳ ಮೂಲಕ ಸಂದೇಶಗಳನ್ನು ಪ್ರಸಾರ ಮಾಡಲು ಹೆಚ್ಚಿನ ಆವರ್ತನದ ಪಲ್ಸ್‌ಗಳನ್ನು ಬಳಸುತ್ತದೆ. ಈ ವಿಧಾನವು ಇಂಡಕ್ಟಿವ್, ರೇಡಿಯೋ ಫ್ರೀಕ್ವೆನ್ಸಿ ಅಥವಾ ಬ್ಲೂಟೂತ್®️ ಸಂವಹನಕ್ಕಿಂತ ಕಡಿಮೆ ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ, ಇವು ಅಳವಡಿಸಬಲ್ಲ ವೈದ್ಯಕೀಯ ಸಾಧನಗಳು ಅಥವಾ ಸಾಂಪ್ರದಾಯಿಕ ಪೇಸ್‌ಮೇಕರ್‌ಗಳಲ್ಲಿ ಬಳಸುವ ಇತರ ಪರ್ಯಾಯಗಳಾಗಿವೆ.
AAA ಬ್ಯಾಟರಿಗಿಂತಲೂ ಸಣ್ಣ, ಚಿಕ್ಕ ಮತ್ತು ತೆಳುವಾಗಿರುವ ಪ್ರತಿ ಅವೀರ್ ಪೇಸ್‌ಮೇಕರ್ ಅನ್ನು ಸಣ್ಣದಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ(ಕನಿಷ್ಠ ಇನ್ವೇಸಿವ್ ವಿಧಾನ) ಅಳವಡಿಸಲಾಗುತ್ತದೆ. ಈ ಸಾಧನವು ಫಿಕ್ಸೆಷನ್ ಹೆಲಿಕ್ಸ್ ಎಂದೂ ಕರೆಯಲಾಗುವ- ಒಂದು ಸ್ಕ್ರೂ-ಇನ್ ವಿಧಾನದ ಮೂಲಕ ಹೃದಯದ ಒಳಗಿನ ಭಾಗಕ್ಕೆ ಅಂಟಿಕೊಳ್ಳುತ್ತದೆ.
ಇದರ ಸಹಾಯದಿಂದ ಭವಿಷ್ಯದಲ್ಲಿ ಒಂದುವೇಳೆ ಸಾಧನವನ್ನು ಬದಲಿಸಬೇಕಾದಲ್ಲಿ ಅಥವಾ ಹೊಸ ಚಿಕಿತ್ಸೆ ಅಗತ್ಯವಿರುವಲ್ಲಿ ಅದನ್ನು ಹೊರತೆಗೆಯುವ ಅವಕಾಶ ನೀಡುತ್ತದೆ. ಈ ಅವೀರ್ ಡಿಆರ್ ವ್ಯವಸ್ಥೆಯು ನೈಜ-ಸಮಯದ ಪೇಸಿಂಗ್ ವಿಶ್ಲೇಷಣೆಯನ್ನು ಒದಗಿಸಲು ಸಹ ವಿನ್ಯಾಸ ಗೊಳಿಸಲಾಗಿದೆ, ಹಾಗಾಗಿ ವೈದ್ಯರು ಇದನ್ನು ಅಳವಡಿಸುವಾಗ ಮತ್ತು ಬಹಳ ಮುಖ್ಯವಾಗಿ ಇದನ್ನು ಇಡುವ ಮೊದಲು ಸರಿಯಾದ ಸ್ಥಳವನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.
ಹಕ್ಕುತ್ಯಾಗ ಈ ದಾಖಲೆಯಲ್ಲಿರುವ ಮಾಹಿತಿಯು ಕೇವಲ ರೋಗಿ ಶಿಕ್ಷಣಕ್ಕಾಗಿ ಮಾತ್ರ ಮತ್ತು ಇದನ್ನು ವೈದ್ಯರ ಸಲಹೆಯಾಗಲೀ ಅಥವಾ ಅಬಾಟ್ ಅವರಿಂದ ಶಿಫಾರಸ್ಸುಗಳೆಂದು ಅರ್ಥೈಸಿ ಕೊಳ್ಳಬಾರದು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿ ಮಾಡಿ