ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ananya Bhat Case: ಅನನ್ಯ ಭಟ್ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರ

Ananya Bhat Case: ಕೆಎಂಸಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಎಂಬಾಕೆ ಧರ್ಮಸ್ಥಳಕ್ಕೆ ಬಂದವಳು ಮರಳಲಿಲ್ಲ ಎಂಬ ನಿಟ್ಟಿನಲ್ಲಿ ಸುದ್ದಿಯಾಗಿತ್ತು. ಈ ಬಗ್ಗೆ ಧರ್ಮಸ್ಥಳದಲ್ಲಿ ಸುಜಾತಾ ಭಟ್ ಎಂಬುವವರು ತಮ್ಮ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿದೆ.

ಅನನ್ಯ ಭಟ್ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರ

Prabhakara R Prabhakara R Aug 20, 2025 9:15 PM

ಬೆಂಗಳೂರು: ಅನನ್ಯ ಭಟ್ ನಾಪತ್ತೆ ಪ್ರಕರಣವನ್ನು ಎಸ್‌ಐಟಿಗೆ ಹಸ್ತಾಂತರಿಸಿ ಡಿಜಿ- ಐಜಿಪಿ ಆದೇಶ ಹೊರಡಿಸಿದ್ದಾರೆ. 2003ರಲ್ಲಿ ಧರ್ಮಸ್ಥಳದಲ್ಲಿ ಅನನ್ಯ ಭಟ್ ನಾಪತ್ತೆಯಾದ ಬಗ್ಗೆ ದೂರು ಸಲ್ಲಿಕೆಯಾಗಿತ್ತು. ಸದ್ಯ ಈ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿದೆ.

ಧರ್ಮಸ್ಥಳದಲ್ಲಿ ಸುಜಾತಾ ಭಟ್ ಎಂಬುವವರು ತಮ್ಮ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಅದರ ತನಿಖೆ ಪೊಲೀಸರು ಮಾಡಲಿಲ್ಲ ಎನ್ನುವ ಆರೋಪವನ್ನು ಸುಜಾತಾ ಮಾಡಿದ್ದರು. ಈ ನಡುವೆ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವ ಕುರಿತು ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಅಷ್ಟರಲ್ಲಿ ಸುಜಾತಾ ಭಟ್ ತನ್ನ ಮಗಳ ಮಿಸ್ಸಿಂಗ್ ಪ್ರಕರಣವನ್ನು ಮುನ್ನಲೆಗೆ ತಂದು ಎಸ್ಐಟಿಗೆ ಮತ್ತೆ ದೂರು ನೀಡಿ, ತನ್ನ ಮಗಳ ಅಸ್ಥಿಪಂಜರ ಸಿಕ್ಕರೆ ಅದನ್ನು ತನಗೆ ನೀಡುವಂತೆ ಮನವಿ ಮಾಡಿದ್ದರು.

ಕೆಎಂಸಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಎಂಬಾಕೆ ಧರ್ಮಸ್ಥಳಕ್ಕೆ ಬಂದವಳು ಮರಳಲಿಲ್ಲ ಎಂಬ ನಿಟ್ಟಿನಲ್ಲಿ ಸುದ್ದಿಯಾಗಿತ್ತು. ಈ ನಡುವೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸುಜಾತಾ ಭಟ್ ನೀಡಿರುವ ದೂರು ಮತ್ತು ಆಕೆಯ ಹಿನ್ನಲೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಯೂಟ್ಯೂಬರ್‌ ಸಮೀರ್‌ ವಿರುದ್ಧ ಡಿಜಿ-ಐಜಿಪಿಗೆ ದೂರು

MD Sameer (1)

ಬೆಂಗಳೂರು: ಧರ್ಮಸ್ಥಳದ ಕುರಿತು ಯೂಟ್ಯೂಬರ್ ಸಮೀರ್, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಅಪ್ರಾಮಾಣಿಕ ವಿಡಿಯೋಗಳನ್ನು ಪ್ರಸಾರ ಮಾಡುವ ಮೂಲಕ ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಹೋರಾಟಗಾರ ತೇಜಸ್ ಗೌಡ ಅವರು ಡಿಜಿ-ಐಜಿಪಿಗೆ ದೂರು ಸಲ್ಲಿಸಿದ್ದಾರೆ.

ಯೂಟ್ಯೂಬರ್ ಸಮೀರ್, ಧರ್ಮಸ್ಥಳದ ವಿರುದ್ಧ ಸುಳ್ಳು ಮಾಹಿತಿಯನ್ನು ಎಐ ವಿಡಿಯೋ ಮೂಲಕ ಹರಡಿ, ದ್ವೇಷವನ್ನು ಬಿತ್ತುವ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಿದ್ದಾನೆ. ಇದರಿಂದ ಕೇವಲ ಧಾರ್ಮಿಕ ಕೇಂದ್ರಕ್ಕೆ ಮಾತ್ರವಲ್ಲದೆ, ಅಲ್ಲಿನ ಲಕ್ಷಾಂತರ ಭಕ್ತರ ನಂಬಿಕೆಗೂ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ನಡೆಯುತ್ತಿರುವುದು ಹೆಚ್ಚಾಗಿದ್ದು, ಈ ರೀತಿಯ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮಗಳು ಅಗತ್ಯವೆಂದು ಕೋರಿದ್ದಾರೆ.

ಈ ಸುದ್ದಿಯನ್ನೂ ಓದಿ | Sasikanth Senthil: ಧರ್ಮಸ್ಥಳ ಪ್ರಕರಣ; ರೆಡ್ಡಿ ಆರೋಪಕ್ಕೆ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್ ಏನು?

ಭಾರತೀಯ ನ್ಯಾಯ ಸಂಹಿತೆ 2023, ಸುಳ್ಳು ಮಾಹಿತಿ ನೀಡುವುದು - ಸೆಕ್ಷನ್ 192, ಧರ್ಮ ಹಾಗೂ ಭಾಷೆಗಳ ನಡುವೆ ದ್ವೇಷ ಬಿತ್ತುವುದು - ಸೆಕ್ಷನ್ 194, ಮೋಸ ಮತ್ತಿ ತಪ್ಪು ವಿಷಯಗಳ ಪ್ರಸಾರ - ಸೆಕ್ಷನ್ 240, ಧಾರ್ಮಿಕ ಭಾವನೆಗಳಿಗೆ ಅವಮಾನ - ಸೆಕ್ಷನ್ 298, ದ್ವೇಷ ಹುಟ್ಟಿಸುವ ಸುಳ್ಳು ಪ್ರಕಟಣೆ - ಸೆಕ್ಷನ್ 353(1/ಬಿ), ಮಾನಹಾನಿ - ಸೆಕ್ಷನ್ 356, ಅಪರಾಧ ಮಾಡಲು ಷಡ್ಯಂತ್ರ - ಸೆಕ್ಷನ್ 61, ಮೋಸದಿಂದ ಮಾಹಿತಿ ಪ್ರಸಾರ - ಸೆಕ್ಷನ್ 66ಡಿ, ಸಾರ್ವಜನಿಕ ಶಾಂತಿಗೆ ಹಾನಿ ಮಾಡುವ ವಿಷಯ ತಡೆಯುವ ಅಧಿಕಾರ - ಸೆಕ್ಷನ್ 66ಎ ಅಡಿ ಸಮೀರ್ ಎಂ.ಡಿ. ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.