ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಆಗಸ್ಟ್‌ 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಬನಶಂಕರಿ ಮತ್ತು ಆರ್.ಆರ್. ನಗರ ಉಪಕೇಂದ್ರದ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆಗಸ್ಟ್‌ 30ರಂದು ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಬನಶಂಕರಿ ಮತ್ತು ಆರ್.ಆರ್. ನಗರ ಉಪಕೇಂದ್ರದ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆ. 30ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು

ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜ್, ವೀರಭದ್ರ ನಗರ, ಬ್ಯಾಂಕ್ ಕಾಲೋನಿ, ಹನುಮಂತ ನಗರ, ಗಿರಿನಗರ, ಸೀತಾ ಸರ್ಕಲ್, ವಿದ್ಯಾಪೀಠ ಸರ್ಕಲ್, ಪ್ರಮೋದ್ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರೋಡ್, ಕತ್ತರಿಗುಪ್ಪೆ, ಆವಲಹಳ್ಳಿ, ಸ್ಟೆರ್ಲಿಂಗ್ ಅಪಾರ್ಟ್‌ಮೆಂಟ್, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬಿ.ಎಸ್.ಕೆ 3ನೇ ಹಂತ, ಕತ್ತರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್,100 ಫೀಟ್ ರಿಂಗ್ ರಸ್ತೆ, ಕಾಮಾಕ್ಯ ಮತ್ತು ಭರತ್ ಲೇಔಟ್, ಪಟಾಲಮ್ಮ ದೇವಸ್ಥಾನ ಹಿಂಭಾಗ, ಹ್ಯಾಪಿ ವ್ಯಾಲಿ ಲೇಔಟ್, ವಿನಾಯಕ ಲೇಔಟ್, ಉತ್ತರಹಳ್ಳಿ, ಅಪ್ಪಯ್ಯ ಸ್ವಾಮಿ ಲೇಔಟ್, ವಡ್ಡರಪಾಳ್ಯ ಏರಿಯಾ, ಬನಶಂಕರಿ 5ನೇ ಹಂತ, ಪೂರ್ಣ ಪ್ರಜ್ಞಾ ಲೇಔಟ್, ಮಂತ್ರಿ ಆಲ್ಫೈನ್ಸ್, ದ್ವಾರಕ ನಗರ, ಬನಶಂಕರಿ 6ನೇಹಂತ, 80 ಫೀಟ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

66 ಕೆವಿ ಡಿಜಿ-3 ಮತ್ತು 66 ಕೆವಿ ಡಿಜಿ-4 ಮಾರ್ಗಗಳಲ್ಲಿ 66/11 ಕೆವಿ ಮಾನ್ಯತಾ S/s ನಿಂದ ಹೆಣ್ಣೂರು ನಗರದ S/s ಬಳಿಯ CTT ವರೆಗೆ DG-4 ಲೈನ್‌ನ ಟವರ್ ಸಂಖ್ಯೆ 18ರಿಂದ ಟವರ್ ಸಂಖ್ಯೆ 23ರವರೆಗೆ 1088 ಮೀಟರ್ ಎಚ್‌ಟಿಎಲ್‌ಎಸ್‌ ಕಂಡಕ್ಟರನ್ನು ಎಳೆಯಲು, ಕೆಪಿಟಿಸಿಎಲ್‌ನಿಂದ ಲೈನ್ ಕ್ಲಿಯರ್ ಅನ್ನು ಪಡೆದುಕೊಂಡಿರುವುದರಿಂದ ಬೆಂಗಳೂರು ನಗರದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ಇರುವುದಿಲ್ಲ.

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು

ಶೋಭಾ ನಗರ, ಚೊಕ್ಕನಹಳ್ಳಿ, ಡೊಮಿನೊ ಪಿಜ್ಜಾ, ದೇವ್ ಐಎನ್‌ಎನ್ ಪ್ಯಾರಡೈಸ್, ನೂರ್ ನಗರ, ಮಾಜಿ ಸೈನಿಕ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಎಸ್ತರ್ ಹಾರ್ಮೋನಿಕ್ ಲೇಔಟ್, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ಕರ್ನಾಟಕ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ