ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಜೂ.29, 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ 66/11 ಕೆವಿ ನೆಲಗೆದರನಹಳ್ಳಿ, 66/11 ಕೆವಿ ಕಟ್ಟಿಗೆಹಳ್ಳಿ, 220/66/11 ಕೆವಿ ಎಸ್.ಆರ್.ಎಸ್. ಪೀಣ್ಯ ಉಪಕೇಂದ್ರ ಮತ್ತು 66/11 ಕೆ.ವಿ ‘ಎʼ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಜೂ.29 ರಂದು ಭಾನುವಾರ ಬೆಳಗ್ಗೆ10 ಗಂಟೆಯಿಂದ ಸಂಜೆ 5.30ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ.29 ಮತ್ತು 30ರಂದುನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಪೀಣ್ಯ ವಿಭಾಗದ 66/11 ಕೆವಿ ನೆಲಗೆದರನಹಳ್ಳಿ, 66/11 ಕೆವಿ ಕಟ್ಟಿಗೆಹಳ್ಳಿ, 220/66/11 ಕೆವಿ ಎಸ್.ಆರ್.ಎಸ್. ಪೀಣ್ಯ ಉಪಕೇಂದ್ರ ಮತ್ತು 66/11 ಕೆ.ವಿ ‘ಎʼ ಸ್ಟೇಷನ್ ವ್ಯಾಪ್ತಿಯ ಹಲವೆಡೆ ಜೂ.29 ರಂದು ಭಾನುವಾರ ಬೆಳಗ್ಗೆ10 ಗಂಟೆಯಿಂದ ಸಂಜೆ 5.30ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ಭಾನುವಾರ ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ?

ನಗರದ ಪೀಣ್ಯ ವಿಭಾಗದ ಕೆಂಪಯ್ಯ ಗಾರ್ಡೆನ್, ಏ ಟೈಪ್ ಶೆಡ್ ತಿಗಳರಪಾಳ್ಯ ಮೆನ್ ರೋಡ್, ಪರ್ಲ್ ರೋಡ್, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನೆಲಗೆದರನಹಳ್ಳಿ, ಎಚ್.ಎಂ.ಟಿ. ಲೇಔಟ್, ಶಿವಪುರ, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಲಮಾರ್ ಲೇಔಟ್, ವಿನಾಯಕ ನಗರ, 8ನೇ ಮಿಲಿ ರೋಡ್, ಜಾಲಹಳ್ಳಿ ಕ್ರಾಸ್, ಶೋಭಾ ಅಪಾರ್ಟ್‌ಮೆಂಟ್, ಅಮರಾವತಿ ಲೇಔಟ್, ಕೆಎಪಿಎಲ್, ಕರ್ನಾಟಕ ಪ್ರೈ ಲಿಮಿಟೆಡ್, ರುಕ್ಮಿಣಿ ನಗರ, ಪೀಣ್ಯ 10ನೇ ಮುಖ್ಯ ರಸ್ತೆ, 11ನೇ ಮುಖ್ಯರಸ್ತೆ, ಉಡುಪಿ ಹೋಟೆಲ್, ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮಿದೇವಿ ನಗರ, ಲಗ್ಗೆರೆ ಹಳೆ ಗ್ರಾಮ, ಲವ ಕುಶಾ ನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ 7ನೇ 8ನೇ 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟೆವಿಎಸ್ ಕ್ರಾಸ್ ರಸ್ತೆ ಬಳಿ, ಇಸ್ರೋ 1ನೇ ಹಂತದ ಪಿಐಎ ಏರಿಯಾ, ಯಶವಂತಪುರ, ಉತ್ತರಗೇಟ್ 1 2 3 ರಾಯಭಾರ ಕಛೇರಿ, ಫಿಲಿಪ್ಸ್ ಕಂಪನಿ, ದ್ವಾರಕಾ ನಗರ, ಬಾಬಾನಗರ, ಕಟ್ಟಿಗೇನಹಳ್ಳಿ, ಬಾಗಲೂರು ಕ್ರಾಸ್, ಬಾಗಲೂರು ಮುಖ್ಯ ರಸ್ತೆ, ಮಣಿಪಾಲ್ ಕಾಲೇಜು, BSF, PDMS, ಬಾಗಲೂರು ಕ್ರಾಸ್ ವಿನಾಯಕ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ʼಎʼ ಸ್ಟೇಷನ್- ಟಿಸಿಎಸ್, ಹಾಲಿಡೇ ಇನ್, ಶೇಷಾದ್ರಿ ರಸ್ತೆ, ಕುರುಬರ ಸಂಘ ವೃತ್ತ, 1ನೇ ಮುಖ್ಯ ರಸ್ತೆ ಗಾಂಧಿ ನಗರ ಮತ್ತು 1ನೇ ಕ್ರಾಸ್, ಮತ್ತು 2ನೇ ಕ್ರಾಸ್‌ನ ಒಂದು ಭಾಗ. ಕ್ರೆಸೆಂಟ್ ರಸ್ತೆ, ಕರ್ನಾಟಕ ನ್ಯಾಯಾಂಗ ಅಕಾಡೆಮಿ, 2 ಸಚಿವರ ವಸತಿ ನಿಲಯಗಳು, ವೆಸ್ಟ್ ಎಂಡ್ ಹೋಟೆಲ್, ಕರ್ನಾಟಕ ವಿದ್ಯುತ್ ನಿಗಮ, ಫೇರ್ ಫೀಲ್ಡ್ ಲೇಔಟ್, ಎಲ್ಎಲ್ಆರ್ ಬಿಡಬ್ಲ್ಯೂಎಸ್ಎಸ್ಬಿ. ಶಿವಾನಂದ ಪಾರ್ಕ್‌, ಶೇಷಾದ್ರಿಪುರಂ, ವಿನಾಯಕ ವೃತ್ತ ಇಂಧನ ಸಚಿವರು ಮತ್ತು ಗೃಹ ಮಂತ್ರಿಗಳ ವಸತಿ ನಿಲಯಗಳು, ಕುಮಾರ ಪಾರ್ಕ್‌, ಕಾವೇರಿ ಭವನ, ಕೆಎಚ್‌ಬಿ, ಬಿಡಬ್ಲ್ಯೂಎಸ್ಎಸ್ಬಿ, ಕಾಂಡಾಯ ಭವನ, ಗಾಂಧಿ ನಗರದಲ್ಲಿನ ಸಿನಿಮಾ ಥಿಯೇಟರ್‌ಗಳು, ಟ್ಯಾಂಕ್ ಬಂಡ್ ರಸ್ತೆ, ಎಸ್ಸಿ ರಸ್ತೆ, ಕೆಜಿ ರಸ್ತೆಯ ಒಂದು ಭಾಗ, ಆಸ್ಪತ್ರೆ ರಸ್ತೆ ಮತ್ತು ಲಕ್ಷ್ಮಣ್ ಪುರಿ ಪ್ರದೇಶ (ಸ್ಲಮ್) 6ನೇ ಅಡ್ಡರಸ್ತೆ, ಮತ್ತು 10ನೇ ಅಡ್ಡ ರಸ್ತೆ, ಲೋಡ್ ಡಿಸ್ಪ್ಯಾಚ್ ಕೇಂದ್ರ, ಆನಂದ ರಾವ್ ವೃತ್ತದಲ್ಲಿ ಕೆಪಿಟಿಸಿಎಲ್ ಕಚೇರಿಗಳು, ರೇಸ್ ಕೋರ್ಸ್, ವಸಂತನಗರದ ಮುಖ್ಯ ಕಾರ್ಯದರ್ಶಿ ನಿವಾಸ ಮತ್ತು ಅವಿನಾಶ್ ಪೆಟ್ರೋಲ್ ಬಂಕ್ ಪ್ರದೇಶ ಮತ್ತು ಪಿಡಬ್ಲ್ಯೂಡಿ ಕಚೇರಿ ಮತ್ತು ಪೊಲೀಸ್ ಕ್ವಾಟ್ರರ್ಸ್‌ ಪ್ರದೇಶ, ಬ್ರಿಗೇಡ್ ಪ್ಲಾಜಾ, ಶೇಷಾದ್ರಿ ರಸ್ತೆ, ಆನಂದ ರಾವ್ ವೃತ್ತ ಪ್ರದೇಶಗಳು, ಖನಿಜ ಭವನ, ಚಾಲುಕ್ಯ ವೃತ್ತ, ಬಿಡಬ್ಲ್ಯೂಎಸ್ಎಸ್ಬಿ ವಾಟರ್ ಪಂಪ್, ಹೈ ಗ್ರೌಂಡ್ಸ್, ವಿಠ್ಠಲ್ ಮಲ್ಯ ರಸ್ತೆ, ಮಂತ್ರಿ ಮಾಲ್, ಮಂತ್ರಿ ಗ್ರೀನ್ಸ್ ಅಪಾರ್ಟ್‌ಮೆಂಟ್, ಅಪೋಲೋ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Phoenix Movie: ಓಂ ಪ್ರಕಾಶ್ ರಾವ್ ನಿರ್ದೇಶನದ ‘ಫೀನಿಕ್ಸ್’ ಸಿನಿಮಾ ಚಿತ್ರೀಕರಣ ಪೂರ್ಣ

ಜೂ.30ರಂದು ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು

66/11 ಕೆ.ವಿ ಪ್ರೆಸ್ಟೀಜ್ ಫಾಲ್ಕನ್ ಸಿಟಿ, ಜಯನಗರ ವಿಭಾಗ ವ್ಯಾಪ್ತಿಯಲ್ಲಿ ಜೂ.30 ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಫೋರಮ್ ಮಾಲ್, ಪ್ರೇಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮೇನ್ ರೋಡ್, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜ್ಯೋತಿ ಲೇಔಟ್, ಗಂಗಪತಿಪುರ, ಸುಪ್ರಜಾ ನಗರ, ಜೆಎಸ್‌ಎಸ್‌ ಶಾಲೆ, ಜರಗನಹಳ್ಳಿ ಪಾರ್ಕ್, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ಶಾಂತಿ ಸಾ ಮಿಲ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗಾರ್ಜುನ ಪ್ರೀಮಿಯರ್ ಅಪಾರ್ಟ್‌ಮೇಂಟ್, ಚೊಂಚನಗಟ್ಟ ವಿಲೇಜ್, ಶ್ರೀನಿಧಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.