ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೊಬಗಿನ ಕೈಗಡಿಯಾರಗಳ ಪ್ರಚಾರ ರಾಯಭಾರಿ ಬಾಲಿವುಡ್ ನಟಿ ಅಲಿಯಾ ಭಟ್

ಸಮಕಾಲೀನ ಮಹಿಳೆಯರಿಗೆಂದೇ ವಿನ್ಯಾಸಗೊಳಿಸಲಾಗಿರುವ ವಿಶಿಷ್ಟ ಸೊಬಗಿನ ಕೈಗಡಿಯಾರ ಗಳನ್ನು ಪರಿಚಯಿಸುತ್ತ ಬಂದಿರುವ ರಾಗಾ ಪರಂಪರೆಯಲ್ಲಿ ಹೊಸ ಅಧ್ಯಾಯವಾಗಿರುವ ʼಕಾಕ್‌ ಟೈಲ್ಸ್ʼ ಕೈ ಗಡಿಯಾರಗಳು ಹಲವು ವೈಶಿಷ್ಟತೆಗಳ ಕಾರಣಕ್ಕೆ ಗಮನ ಸೆಳೆಯಲಿವೆ. ಈ ಕೈಗಡಿಯಾರಗಳ ಪ್ರತಿ ಯೊಂದು ಕೋನ ಮಿನುಗುತ್ತದೆ. ಮಹಿಳೆಯರ ಪ್ರತ್ಯೇಕ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡಲಿವೆ.

ಸಮಕಾಲೀನ ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಟೈಟನ್ ರಾಗಾ-ದ ಕಾಕ್ಟೇಲ್ಸ್ (Cocktails) ಹೊಸ ಸಂಗ್ರಹದ ಕೈಗಡಿಯಾರಗಳನ್ನು ಇಲ್ಲಿ ನಡೆದ ವರ್ಣರಂಜಿತ ಫ್ಯಾಷನ್ ಷೋನಲ್ಲಿ ಅನಾವರಣಗೊಳಿಸಲಾಯಿತು.

ಬಾಲಿವುಡ್ ನಟಿ ಅಲಿಯಾ ಭಟ್ ಅವರು ಈ ಹೊಸ ರಾಗಾ ʼಕಾಕ್ಟೇಲ್ಸ್ʼ ಸಂಗ್ರಹದ ಪ್ರಚಾರ ರಾಯಭಾರಿಯಾಗಿದ್ದಾರೆ. ಡಿಸೈನರ್ ಅನೈತಾ ಶ್ರಾಫ್ ಅಡಜನೈಯಾ ಅವರು ಏರ್ಪಡಿಸಿದ್ದ ‘ದಿ ಸ್ಟೈಲ್ ಮಿಕ್ಸರ್’ ವರ್ಣರಂಜಿತ ಫ್ಯಾಷನ್ ಷೋದಲ್ಲಿ ಹೊಸ ಸಂಗ್ರಹವನ್ನು ವಿಶಿಷ್ಟ ಬಗೆಯಲ್ಲಿ ಪರಿಚಯಿಸಲಾಯಿತು.

ರಾಗಾ ಪರಂಪರೆಯಲ್ಲಿ ಈ ಕಾಕ್ಟೇಲ್ಸ್ ಸಂಗ್ರಹವು ಹೊಸ ಅಧ್ಯಾಯ ಆರಂಭಿಸಿದೆ. ಐದು ಬೆರಗು ಗೊಳಿಸುವ ಹಾಗೂ ವಿಶಿಷ್ಟ ಕೈಗಡಿಯಾರಗಳಲ್ಲಿ ಪ್ರತಿಯೊಂದು ಸ್ಫೂರ್ತಿದಾಯಕವಾಗಿವೆ. ಮಿನುಗುವ ಚಿನ್ನ, ಆಕರ್ಷಕ ನೀಲಿ ಮತ್ತು ಸುಂದರ ಗುಲಾಬಿ ಬಣ್ಣಗಳಲ್ಲಿ ಹೊಳೆಯುತ್ತವೆ. ಪ್ರಕಾಶಮಾನ ಸೂರ್ಯ ಕಿರಣ ವಿನ್ಯಾಸದ ಡಯಲ್ಗಳು ಗಮನ ಸೆಳೆಯುತ್ತವೆ. ಮಹಿಳೆಯರ ವ್ಯಕ್ತಿತ್ವದ ಸ್ಪಷ್ಟ ಪರಿಚಯ ನೀಡಲು ನೆರವಾಗಲಿವೆ.

ಇದನ್ನೂ ಓದಿ: Titan: ಟೈಟಾನ್ ತನ್ನ 40ನೇ ವಾರ್ಷಿಕೋತ್ಸವ: ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರಿಗೆ ‘ಯೂನಿಟಿ ವಾಚ್’ ಮೂಲಕ ಗೌರವ

ಸಮಕಾಲೀನ ಮಹಿಳೆಯರಿಗೆಂದೇ ವಿನ್ಯಾಸಗೊಳಿಸಲಾಗಿರುವ ವಿಶಿಷ್ಟ ಸೊಬಗಿನ ಕೈಗಡಿಯಾರ ಗಳನ್ನು ಪರಿಚಯಿಸುತ್ತ ಬಂದಿರುವ ರಾಗಾ ಪರಂಪರೆಯಲ್ಲಿ ಹೊಸ ಅಧ್ಯಾಯವಾಗಿರುವ ʼಕಾಕ್‌ ಟೈಲ್ಸ್ʼ ಕೈ ಗಡಿಯಾರಗಳು ಹಲವು ವೈಶಿಷ್ಟತೆಗಳ ಕಾರಣಕ್ಕೆ ಗಮನ ಸೆಳೆಯಲಿವೆ. ಈ ಕೈಗಡಿಯಾರ ಗಳ ಪ್ರತಿಯೊಂದು ಕೋನ ಮಿನುಗುತ್ತದೆ. ಮಹಿಳೆಯರ ಪ್ರತ್ಯೇಕ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡಲಿವೆ.

"ಕಾಕ್ಟೇಲ್ಸ್ ಸಂಗ್ರಹದ ಮೂಲಕ ನಾವು ಸೊಗಸಾದ ಕೈಗಡಿಯಾರಗಳ ಜೊತೆಗೆ ಭಾವನೆಗಳನ್ನು ಉದ್ದೀಪನಗೊಳಿಸುವಂತೆ ಮಾಡಿದ್ದೇವೆ" ಎಂದು ಟೈಟನ್ ವಾಚಸ್‌ನ ಸಿಎಂಒ ರಂಜನಿ ಕೃಷ್ಣಸ್ವಾಮಿ ಹೇಳಿದ್ದಾರೆ.

titan 22

"ಈ ಸಂಗ್ರಹವು ಆಧುನಿಕ ಭಾರತೀಯ ಮಹಿಳೆಯ ವಿಶಿಷ್ಟ ವ್ಯಕ್ತಿತ್ವದ ಸಂಭ್ರಮಾಚರಿಸುತ್ತದೆ. ಕಾಕ್ಟೇಲ್ಸ್ ಕೈಗಡಿಯಾರಗಳ ಪ್ರಚಾರ ರಾಯಭಾರಿಯಾಗಿರುವ ಆಲಿಯಾ ಭಟ್ ಅವರು ಒಬ್ಬ ವ್ಯಕ್ತಿಯಾಗಿ ಮತ್ತು ನಟಿಯಾಗಿ ಮೃದು ಮತ್ತು ದೃಢತೆಯ ಪ್ರತೀಕವಾಗಿದ್ದಾರೆ. ಈ ಕೈಗಡಿಯಾರ ಗಳೂ ಇದೇ ಬಗೆಯಲ್ಲಿ ಇರುವುದರಿಂದ ಅವರು ಈ ಉತ್ಪನ್ನಗಳ ಪ್ರಚಾರಕ್ಕೆ ಸೂಕ್ತ ರಾಯಭಾರಿ ಯಾಗಿದ್ದಾರೆʼ ಎಂದು ಹೇಳಿದ್ದಾರೆ.

ಈ ಸಂಗ್ರಹ ಅನಾವರಣ ಮಾಡಲು ರಾಗಾ, ಮುಂಬೈನ ಮಿರೇಸ್ನಲ್ಲಿ ವಿಶಿಷ್ಟ ವರ್ಣರಂಜಿತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸ್ನೇಹಿತೆ, ಸೋದರಿ ಅಥವಾ ಮಾರ್ಗದರ್ಶಕಿ ರೂಪದಲ್ಲಿ ತಮ್ಮ ಸಾಮರ್ಥ್ಯವನ್ನು ವ್ಯಾಖ್ಯಾನಿಸುವ ಮಹಿಳೆಯರನ್ನು ಸಮಾರಂಭಕ್ಕೆ ಕರೆತರಲು ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು. ʼದಿ ಸ್ಟೈಲ್ ಮಿಕ್ಸರ್ʼ ಫ್ಯಾಷನ್ ಷೋ ಸಂಜೆಯ ಸೊಬಗನ್ನು ಹೆಚ್ಚಿಸಿತ್ತು, ಫ್ಯಾಷನ್ ತಜ್ಞೆ ಅನೈತಾ ಶ್ರಾಫ್ ಅಡಜನೈಯಾ ಅವರು ಈ ಫ್ಯಾಷನ್ ಷೋದ ವಿನ್ಯಾಸ ರೂಪಿಸಿದ್ದರು.

ಫ್ಯಾಷನ್ ತಜ್ಞೆ ಮತ್ತು ಸೃಜನಶೀಲ ನಿರ್ದೇಶಕತಿ ಅನೈತಾ ಶ್ರಾಫ್ ಅಡಜನೈಯಾ ಅವರು ಮಾತನಾಡಿ, ʼಸಮಕಾಲೀನ ಮಹಿಳೆಯರು ಪ್ರಕಾಶಮಾನವಾಗಿ ಹೊಳೆಯಲು ಮತ್ತು ಮುಕ್ತವಾಗಿ ತಮ್ಮ ವ್ಯಕ್ತಿತ್ವವನ್ನು ಅಭಿವ್ಯಕ್ತಪಡಿಸಲು ಹೆದರುವುದಿಲ್ಲ. ರಾಗಾ ಕಾಕ್‌ಟೇಲ್ಸ್ ಸಂಗ್ರಹವು ಮಹಿಳೆಯರ ಇಂತಹ ವೈವಿಧ್ಯಮಯ ಮತ್ತು ಬಹುಮುಖ ವ್ಯಕ್ತಿತ್ವಕ್ಕೆ ಪೂರಕವಾಗಿವೆʼ ಎಂದು ಪ್ರತಿಕ್ರಿಯಿಸಿದ್ದಾರೆ.

₹42,495 ರಿಂದ ₹49,995 ರವರೆಗೆ ಬೆಲೆಯ ಈ ಕಾಕ್‌ಟೇಲ್ಸ್ ಸಂಗ್ರಹವು ಈಗ ಟೈಟನ್ ಮಳಿಗೆಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ www.titan.co.in ನಲ್ಲಿ ಲಭ್ಯವಿದೆ.