ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಕಲ್ಯಾಣ್ ಜ್ಯುವೆಲರ್ಸ್‌ ನ ಹೊಚ್ಚಹೊಸ ಶೋರೂಮ್ ಉದ್ಘಾಟಿಸಿದ ಬಾಲಿವುಡ್ ಸ್ಟಾರ್ ಅಜಯ್ ದೇವಗನ್

ಉದ್ಘಾಟನಾ ಕಾರ್ಯಕ್ರದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಉಲ್ಲಸಿತರಾಗಿ ಭಾಗವಹಿಸಿದರು. ಅಭಿಮಾನಿಗಳು ಮತ್ತು ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಬಂದು ಸೂಪರ್‌ ಸ್ಟಾರ್‌ ಅಜಯ್ ದೇವಗನ್ ಅವರನ್ನು ನೋಡುವ ಕುತೂಹಲ ವ್ಯಕ್ತಪಡಿಸಿದರು. ಈ ಶೋರೂಮ್ ಉದ್ಘಾಟನೆಯ ಸಂಭ್ರಮ ಮತ್ತು ನಿರೀಕ್ಷೆಯನ್ನು ಪ್ರತಿಬಿಂಬಿ ಸುವಂತೆ ವಾತಾವರಣ ಪೂರ್ತಿ ಉತ್ಸಾಹ ತುಂಬಿತ್ತು

ಬೆಂಗಳೂರು: ಭಾರತದ ಅತಿದೊಡ್ಡ ಮತ್ತು ವಿಶ್ವಾಸಾರ್ಹ ಆಭರಣ ಬ್ರಾಂಡ್‌ ಗಳಲ್ಲಿ ಒಂದಾ ಗಿರುವ ಕಲ್ಯಾಣ್ ಜ್ಯುವೆಲರ್ಸ್ ಇಂದು ಬೆಂಗಳೂರಿನ ವೈಟ್‌ ಫೀಲ್ಡ್‌ ನಲ್ಲಿ ತನ್ನ ಹೊಚ್ಚ ಹೊಸ ಶೋರೂಮ್ ಅನ್ನು ಉದ್ಘಾಟಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಸಮ್ಮುಖ ದಲ್ಲಿ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅವರು ಈ ಮಳಿಗೆಯನ್ನು ಉದ್ಘಾಟಿಸಿದರು.

ಈ ಹೊಸ ಮಳಿಗೆಯಲ್ಲಿ ಕಲ್ಯಾಣ್ ಜ್ಯುವೆಲರ್ಸ್‌ ನ ವಿವಿಧ ಸಂಗ್ರಹಗಳ ಆಯ್ದ ವಿನ್ಯಾಸಗಳ ವಿಶಾಲ ಶ್ರೇಣಿಯನ್ನು ಪ್ರದರ್ಶಿಸಲಾಗುತ್ತದೆ. ಉದ್ಘಾಟನಾ ಕಾರ್ಯಕ್ರದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಉಲ್ಲಸಿತರಾಗಿ ಭಾಗವಹಿಸಿದರು. ಅಭಿಮಾನಿಗಳು ಮತ್ತು ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಬಂದು ಸೂಪರ್‌ ಸ್ಟಾರ್‌ ಅಜಯ್ ದೇವಗನ್ ಅವರನ್ನು ನೋಡುವ ಕುತೂಹಲ ವ್ಯಕ್ತಪಡಿಸಿದರು. ಈ ಶೋರೂಮ್ ಉದ್ಘಾಟನೆಯ ಸಂಭ್ರಮ ಮತ್ತು ನಿರೀಕ್ಷೆಯನ್ನು ಪ್ರತಿಬಿಂಬಿ ಸುವಂತೆ ವಾತಾವರಣ ಪೂರ್ತಿ ಉತ್ಸಾಹ ತುಂಬಿತ್ತು.

ಈ ಹೊಸ ಮಳಿಗೆಯು ಕರ್ನಾಟಕದಲ್ಲಿ ಕಂಪನಿಯ 26ನೇ ಶೋರೂಮ್ ಆಗಿದ್ದು, ಗ್ರಾಹಕರಿಗೆ ವಿಶ್ವದರ್ಜೆಯ ವಿನ್ಯಾಸವುಳ್ಳ ವಾತಾವರಣದಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಲಿದೆ ಮತ್ತು ಒಂದು ಅನನ್ಯ ಶಾಪಿಂಗ್ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: Ajay Devgn: ʼಸು ಫ್ರಮ್‌ ಸೋʼ ವೀಕ್ಷಿಸಿದ ಬಾಲಿವುಡ್‌ ಸ್ಟಾರ್‌ ಅಜಯ್‌ ದೇವಗನ್‌; ಬಾಲಿವುಡ್‌ಗೆ ರಿಮೇಕ್‌ ಆಗುತ್ತಾ?

ಮಳಿಗೆ ಉದ್ಘಾಟಿಸಿ ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಬಾಲಿವುಡ್ ಸ್ಟಾರ್ ನಟ, ನಿರ್ದೇಶಕ ಅಜಯ್ ದೇವಗನ್ ಅವರು, “ಕಲ್ಯಾಣ್ ಜ್ಯುವೆಲರ್ಸ್‌ ನ ಹೊಸ ಶೋರೂಮ್ ಉದ್ಘಾಟನೆಗೆ ಇಲ್ಲಿ ಬಂದಿರುವುದು ನನಗೆ ಅತೀವ ಸಂತೋಷ ತಂದಿದೆ. ವಿಶ್ವಾಸ, ಪಾರದರ್ಶಕತೆ ಮತ್ತು ಗ್ರಾಹಕ ಪ್ರಧಾನ ತತ್ವಗಳನ್ನು ಪಾಲಿಸುವ ಕಲ್ಯಾಣ್ ಜ್ಯುವೆಲರ್ಸ್‌ ನಂತಹ ಬ್ರಾಂಡ್‌ ನ ಪ್ರತಿನಿಧಿಯಾಗಿ ಹೊಸ ಮಳಿಗೆ ಉದ್ಘಾಟಿಸಿರುವುದು ಗೌರವದ ಸಂಗತಿಯಾಗಿದೆ. ಗ್ರಾಹಕರು ಈ ಕಲ್ಯಾಣ್ ಜ್ಯುವೆಲರ್ಸ್‌ ಮಳಿಗೆಯನ್ನು ಸಂತೋಷದಿಂದ ಸ್ವಾಗತಿಸುತ್ತಾರೆ ಮತ್ತು ಕಂಪನಿಯು ನೀಡುವ ಅತ್ಯುತ್ತಮ ಸೇವೆ ಹಾಗೂ ವೈವಿಧ್ಯಮಯ ಆಭರಣ ಸಂಗ್ರಹಗಳನ್ನು ಅತ್ಯುತ್ತಮ ಶಾಪಿಂಗ್ ಅನುಭವದೊಂದಿಗೆ ಆನಂದಿಸುತ್ತಾರೆ ಎಂಬ ವಿಶ್ವಾಸ ನನಗಿದೆ,” ಎಂದು ಹೇಳಿದರು.

ಹೊಸ ಮಳಿಗೆ ಕುರಿತು ಮಾತನಾಡಿದ ಕಲ್ಯಾಣ್ ಜ್ಯುವೆಲರ್ಸ್‌ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಮೇಶ್ ಕಲ್ಯಾಣರಾಮನ್ ಅವರು, “ಬೆಂಗಳೂರಿನಲ್ಲಿ ನಮ್ಮ ಹೊಸ ಶೋರೂಮ್ ತೆರೆಯುವ ಮೂಲಕ, ಗ್ರಾಹಕರ ವಿಶಿಷ್ಟ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದೇವೆ. ಒಂದು ಸಮಗ್ರ ವ್ಯವಸ್ಥೆಯನ್ನು ರೂಪಿಸಿ, ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಒದಗಿಸುವ ಉದ್ದೇಶ ನಮಗಿದೆ. ಕಂಪನಿಯು ವಿಶ್ವಾಸಾರ್ಹತೆ ಮತ್ತು ಪಾರದರ್ಶ ಕತೆಯ ನೀತಿಗಳಿಗೆ ಬದ್ಧವಾಗಿದ್ದು, ಗ್ರಾಹಕರಿಗೆ ವಿಶ್ವದರ್ಜೆಯ ವಾತಾವರಣವನ್ನು ಒದಗಿಸುವ ಮೂಲಕ ನಾವು ನಮ್ಮನ್ನು ನಿರಂತರವಾಗಿ ಪುನರಾವಿಷ್ಕಾರ ಮಾಡಿಕೊಳ್ಳಲು ಬಯಸುತ್ತೇವೆ. ಕಲ್ಯಾಣ್ ಜ್ಯುವೆಲರ್ಸ್‌ ನಲ್ಲಿ ಗುಣಮಟ್ಟ ಮತ್ತು ಅತ್ಯುತ್ತಮ ಸೇವೆಗೆ ಒತ್ತು ನೀಡುವುದರ ಜೊತೆಗೆ ಅತ್ಯಂತ ಸೊಗಸಾದ ಮತ್ತು ವಿಶಿಷ್ಟ ಆಭರಣ ವಿನ್ಯಾಸಗಳ ವಿಶಾಲ ಶ್ರೇಣಿಯನ್ನು ಒದಗಿಸುವು ದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.

ಹೊಸ ಮಳಿಗೆಯ ಉದ್ಘಾಟನೆಯ ಖುಷಿಯನ್ನು ಆಚರಿಸಲು, ಕಲ್ಯಾಣ್ ಜ್ಯುವೆಲರ್ಸ್ ಮೇಕಿಂಗ್ ಚಾರ್ಜ್ ಗಳ ಮೇಲೆ ಶೇ.50 ವರೆಗಿನ ರಿಯಾಯಿತಿಯನ್ನು* ಘೋಷಿಸಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಮತ್ತು ಕಂಪನಿಯ ಎಲ್ಲಾ ಶೋರೂಮ್‌ ಗಳಲ್ಲಿ ಒಂದೇ ದರದಲ್ಲಿ ಬಂಗಾರ ಒದಗಿಸುವ ಕಲ್ಯಾಣ್ ಸ್ಪೆಷಲ್ ಗೋಲ್ಡ್ ಬೋರ್ಡ್ ರೇಟ್ ಸೌಲಭ್ಯ ಒದಗಿಸಲಾಗುತ್ತಿದ್ದು, ಈ ಸೌಲಭ್ಯವು ಈ ಹೊಸ ಶೋರೂಮ್‌ ನಲ್ಲಿ ಮಾಡುವ ಎಲ್ಲಾ ಆಭರಣ ಖರೀದಿಯ ಮೇಲೂ ಅನ್ವಯವಾಗಲಿದೆ. ಈ ಆಫರ್ ಗಳು ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತವೆ.

ಕಲ್ಯಾಣ್ ಜ್ಯುವೆಲರ್ಸ್‌ ನಲ್ಲಿ ಮಾರಾಟವಾಗುವ ಎಲ್ಲಾ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಗುರುತು ಹೊಂದಿದ್ದು, ಬಹು ಶುದ್ಧತೆ ಪರೀಕ್ಷೆಗಳಿಗೆ ಒಳಗಾಗಿವೆ. ಗ್ರಾಹಕರಿಗೆ ಕಲ್ಯಾಣ್ ಜ್ಯುವೆಲರ್ಸ್‌ ನ 4- ಲೆವೆಲ್ ಅಶ್ಯೂರೆನ್ಸ್ ಸರ್ಟಿಫಿಕೇಟ್ ಅನ್ನು ನೀಡಲಾಗುವುದು, ಈ ಸರ್ಟಿಫಿಕೇಟ್ ಶುದ್ಧತೆ, ಆಭರಣಗಳ ಉಚಿತ ಜೀವಮಾನ ನಿರ್ವಹಣೆ, ವಿವರವಾದ ಉತ್ಪನ್ನ ಮಾಹಿತಿ ಮತ್ತು ಪಾರದರ್ಶಕ ವಿನಿಮಯ ಮತ್ತು ಮರು-ಖರೀದಿ ನೀತಿಗಳ ಗ್ಯಾರಂಟಿ ನೀಡುತ್ತದೆ. ಈ ಪ್ರಮಾಣೀಕರಣವು ತನ್ನ ನಿಷ್ಠಾವಂತ ಗ್ರಾಹಕರಿಗೆ ಅತ್ಯುತ್ತಮವಾದದನ್ನು ನೀಡುವ ಬ್ರಾಂಡ್‌ ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಈ ಶೋರೂಮ್‌ ನಲ್ಲಿ ಕಲ್ಯಾಣ್‌ ನ ಜನಪ್ರಿಯ ಹೋಮ್ ಬ್ರಾಂಡ್‌ ಗಳಾದ ಮುಹೂರತ್ (ಮದುವೆಯ ಆಭರಣ ಸಂಗ್ರಹ), ಮುದ್ರಾ (ಕೈಯಿಂದ ಕೆತ್ತಿದ ಪುರಾತನ ಆಭರಣ), ನಿಮಾಹ್ (ಟೆಂಪಲ್ ಜ್ಯುವೆಲ್ಲರಿ), ಗ್ಲೋ (ಡ್ಯಾನ್ಸಿಂಗ್ ಡೈಮಂಡ್ ಗಳು), ಜಿಯಾಹ್ (ಸಾಲಿಟೇರ್‌ ನಂತಹ ವಜ್ರ ಆಭರಣ), ಅನೋಖಿ (ಅನ್ ಕಟ್ ಡೈಮಂಡ್), ಅಪೂರ್ವ (ವಿಶೇಷ ಸಂದರ್ಭಗಳಿಗೆ ವಜ್ರಾಭರಣ), ಅಂತರಾ (ಮದುವೆಯ ವಜ್ರಾಭರಣ), ಹೀರಾ (ದೈನಂದಿನ ಬಳಕೆಯ ವಜ್ರಾಭರಣ), ರಂಗ್ (ಅಮೂಲ್ಯ ಕಲ್ಲಿನ ಆಭರಣ) ಮತ್ತು ಇತ್ತೀಚೆಗೆ ಬಿಡುಗಡೆ ಆದ ಲೀಲಾ (ಬಣ್ಣದ ಕಲ್ಲುಗಳು ಮತ್ತು ವಜ್ರ ಆಭರಣ) ಸಂಗ್ರಹಗಳನ್ನು ಒದಗಿಸಲಾಗುತ್ತದೆ.