ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಹೊಸ ಮಳಿಗೆ ಉದ್ಘಾಟಿಸುವ ಮೂಲಕ 17ನೇ ವರ್ಷ ಆಚರಿಸಿದ ಕ್ಯಾರಟ್‌ಲೇನ್‌

ಕ್ಯಾರಟ್‌ಲೇನ್‌ ಬ್ರ್ಯಾಂಡ್‌ ತನ್ನ 17 ವರ್ಷಗಳ ಪಯಣದಲ್ಲಿ ಗ್ರಾಹಕ ಕೇಂದ್ರಿತ ಮಾರಾಟ ವ್ಯವಸ್ಥೆಯ ಮೂಲಕ ಭಾರತದಲ್ಲಿನ ಆಭರಣ ಖರೀದಿ ಅನುಭವಕ್ಕೆ ಹೊಸ ವ್ಯಾಖ್ಯಾನ ನೀಡಿದೆ. ಎಂ.ಜಿ. ರಸ್ತೆಯಲ್ಲಿನ ಮಳಿಗೆಯು ಹೊಸ ಕಾಲದ ವಿನ್ಯಾಸವನ್ನು ಸ್ಥಳೀಯ ಬಯಕೆಗಳೊಂದಿಗೆ ಬೆರೆಸುವ ಕೆಲಸ ಮಾಡಿದೆ.

ಬೆಂಗಳೂರು: ದೇಶದ ಮುಂಚೂಣಿ ಜುವೆಲ್ಲರಿ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವ ಕ್ಯಾರಟ್‌ಲೇನ್‌ ಇಂದು ತನ್ನ 17ನೇ ವರ್ಷವನ್ನು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಹೊಸ ಮಳಿಗೆಯೊಂದನ್ನು ಭವ್ಯವಾಗಿ ಉದ್ಘಾಟಿಸುವ ಮೂಲಕ ಆಚರಿಸಿತು. ಈ ಸಂದರ್ಭವು ಈ ಬ್ರ್ಯಾಂಡ್‌ನ ಪಯಣದಲ್ಲಿ ಹಾಗೂ ಈ ಪ್ರದೇಶದಲ್ಲಿ ಇದು ಗ್ರಾಹಕರ ಜೊತೆ ಹೊಂದಿರುವ ಸಂಬಂಧದ ವಿಚಾರವಾಗಿ ಬಹಳ ಗಮನಾರ್ಹವಾಗಿದೆ.

1,400 ಚದರ ಅಡಿಗಳಷ್ಟು ವಿಸ್ತೀರ್ಣ ಹೊಂದಿರುವ ಈ ಮಳಿಗೆಯು ಗ್ರಾಹಕರನ್ನು ಸ್ವಾಗತಿಸುವ ಬಗೆಯಲ್ಲಿ ಹಾಗೂ ಸಮಕಾಲೀನ ಶೈಲಿಯಲ್ಲಿ ಇದ್ದು, ತನ್ನಲ್ಲಿನ ವಿಸ್ತಾರವಾದ ಸಂಗ್ರಹವನ್ನು ಗಮನಿಸಲು ಗ್ರಾಹಕರಿಗೆ ಅನುವು ಮಾಡಿಕೊಡುವಂತೆ ಇದೆ. ಸುಂದರವಾದ ಆಭರಣಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ, ಸುಲಲಿತವಾದ ಖರೀದಿ ಅನುಭವ ಅವರಿಗೆ ದಕ್ಕುವಂತೆ ಮಾಡುವ ಬ್ರ್ಯಾಂಡ್‌ನ ಬದ್ಧತೆಯನ್ನು ಮೂರ್ತರೂಪದಲ್ಲಿ ಪ್ರತಿನಿಧಿಸುವಂತೆ ಈ ಮಳಿಗೆಯನ್ನು ವಿನ್ಯಾಸ ಮಾಡಲಾಗಿದೆ.

ಕ್ಯಾರಟ್‌ಲೇನ್‌ ಬ್ರ್ಯಾಂಡ್‌ ತನ್ನ 17 ವರ್ಷಗಳ ಪಯಣದಲ್ಲಿ ಗ್ರಾಹಕ ಕೇಂದ್ರಿತ ಮಾರಾಟ ವ್ಯವಸ್ಥೆ ಯ ಮೂಲಕ ಭಾರತದಲ್ಲಿನ ಆಭರಣ ಖರೀದಿ ಅನುಭವಕ್ಕೆ ಹೊಸ ವ್ಯಾಖ್ಯಾನ ನೀಡಿದೆ. ಎಂ.ಜಿ. ರಸ್ತೆಯಲ್ಲಿನ ಮಳಿಗೆಯು ಹೊಸ ಕಾಲದ ವಿನ್ಯಾಸವನ್ನು ಸ್ಥಳೀಯ ಬಯಕೆಗಳೊಂದಿಗೆ ಬೆರೆಸುವ ಕೆಲಸ ಮಾಡಿದೆ. ಇದು ಗ್ರಾಹಕರಿಗೆ ಬಹಳ ವಿಶಿಷ್ಟವಾದ ಅನುಭವವನ್ನು ಒದಗಿಸುವ ಮೂಲಕ ಕರ್ನಾಕಟದಲ್ಲಿನ ತನ್ನ ರಿಟೇಲ್‌ ಮಾರಾಟ ಜಾಲವನ್ನು ಬಲಪಡಿಸುವ ಕೆಲಸ ಮಾಡುತ್ತದೆ.

ಇದನ್ನೂ ಓದಿ: Bangalore News: ಹಬ್ಬಗಳ ಸಂದರ್ಭದ ಸೊನಾಟಾ ಸಂಗ್ರಹ ತಂದಿದೆ ಹೊಳಪು, ಸೂಕ್ತ ವಿನ್ಯಾಸ

ಕರ್ನಾಟಕವು ಬ್ರ್ಯಾಂಡ್‌ನ ಬೆಳವಣಿಗೆಯ ದೃಷ್ಟಿಯಿಂದ ಪ್ರಮುಖವಾಗಿದೆ. ಪ್ರತಿನಿತ್ಯದ ಬಳಕೆಗೆ, ಹಬ್ಬಗಳ ಸಂದರ್ಭದಲ್ಲಿನ ಬಳಕೆಗೆ, ವಿಶೇಷವಾದ ಸಂದರ್ಭಗಳಲ್ಲಿ ಬಳಕೆಗೆ ಇರುವ ವಿಶಿಷ್ಟವಾದ ಸಂಗ್ರಹಗಳನ್ನು ಈ ಮಳಿಗೆಯು ಹೊಂದಿದೆ. ಈ ವಿನ್ಯಾಸಗಳು ದಕ್ಷಿಣ ಭಾರತದ ಗ್ರಾಹಕರಿಗೆ ಆಪ್ತ ವಾಗುವಂತೆ ರೂಪುಗೊಂಡಿದೆ.

ಈ ವಿಶೇಷ ಸಂದರ್ಭದ ಬಗ್ಗೆ ಪ್ರತಿಕ್ರಿಯೆ ಹಂಚಿಕೊಂಡಿರುವ ಕ್ಯಾರಟ್‌ಲೇನ್‌ನ ವ್ಯವಸ್ಥಾಪಕ ನಿರ್ದೇಶಕ ಸೌಮೆನ್‌ ಭೌಮಿಕ್‌ ಅವರು “ಈ ಮಳಿಗೆಯ ಆರಂಭವು ನಮ್ಮ 17 ವರ್ಷಗಳ ಪಯಣಕ್ಕೆ ಗೌರವವೊಂದನ್ನು ಸಮರ್ಪಿಸಿದಂತೆ ಇದೆ. ಆಧುನಿಕತೆಯ ಸೊಗಸು ಹಾಗೂ ಶ್ರೀಮಂತ ಪರಂಪರೆ ಯ ಬೆಸುಗೆ ನಮ್ಮ ಬ್ರ್ಯಾಂಡ್‌ನ ವೈಶಿಷ್ಟ್ಯ. ಇದನ್ನು ಪ್ರತಿನಿಧಿಸುವಂತೆ ಇರುವ ಬೆಂಗಳೂರನ್ನು ಸಂಭ್ರಮದಿಂದ ಕಾಣುವಂತೆಯೂ ಈ ಮಳಿಗೆ ಇದೆ.

ಈ ನಗರದ ಚೈತನ್ಯ ಮತ್ತು ಭವಿಷ್ಯದ ಮೇಲೆ ಗಮನ ಇರಿಸಿರುವ ಇಲ್ಲಿನ ಗ್ರಾಹಕರು ನಮಗೆ ಯಾವಾಗಲೂ ಹೊಸದನ್ನು ಅರಸುವಂತೆ ಸ್ಫೂರ್ತಿ ನೀಡಿದ್ದಾರೆ. ಬೆಂಗಳೂರಿನ ಹೃದಯದಂತೆ ಇರುವ ಎಂ.ಜಿ. ರಸ್ತೆಗೆ ನಮ್ಮ ವಿಶಿಷ್ಟವಾದ ಅನುಭವವನ್ನು ತರುತ್ತಿರುವುದಕ್ಕೆ ಖುಷಿಯಾಗುತ್ತಿದೆ” ಎಂದು ಹೇಳಿದ್ದಾರೆ.

ಕೆಲವು ಅಂಕಿ-ಅಂಶಗಳು ಬಹಳ ಗಟ್ಟಿಯಾದ ಸಂದೇಶವೊಂದನ್ನು ನೀಡುತ್ತಿವೆ: 2025-26ನೇ ಹಣಕಾಸು ವರ್ಷದಲ್ಲಿ (ಆಗಸ್ಟ್‌ವರೆಗಿನ ವಿವರ) ಕರ್ನಾಟಕವು ಹಿಂದಿನ ವರ್ಷಕ್ಕೆ ಹೋಲಿಸಿದರೆ 30% ಬೆಳವಣಿಗೆ ದಾಖಲಿಸಿದೆ. ಬೆಂಗಳೂರಿನಲ್ಲೇ ಸರಿಸುಮಾರು 38% ಬೆಳವಣಿಗೆ ಆಗಿದೆ. ಇದು ಈ ನಗರವು ಕ್ಯಾರಟ್‌ಲೇನ್‌ ಬಗೆಗಿನ ಪ್ರೀತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬುದನ್ನು ಹಾಗೂ ಇಲ್ಲಿನ ವಹಿವಾಟುಗಳು ದಕ್ಷಿಣ ಭಾರತದಲ್ಲಿನ ನಮ್ಮ ಬೆಳವಣಿಗೆಗೆ ಪ್ರಮುಖವಾಗಿವೆ ಎಂಬುದನ್ನು ಹೇಳುತ್ತಿದೆ.

ದೇಶದಾದ್ಯಂತ ಬಲಿಷ್ಠವಾದ ಹಾಗೂ ವಿಸ್ತಾರ ಕಾಣುತ್ತಿರುವ ಅಸ್ತಿತ್ವವನ್ನು ಹೊಂದಿರುವ ಕ್ಯಾರಟ್‌ ಲೇನ್‌, ಅತ್ಯುತ್ತಮ ಗುಣಮಟ್ಟದ, ಸಮಕಾಲೀನ ವಿನ್ಯಾಸದ ಆಭರಣಗಳು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಹೊಂದಿದೆ.

2ನೆಯ ಹಾಗೂ 3ನೆಯ ಹಂತಗಳ ನಗರಗಳಿಗೆ ವಿಸ್ತರಿಸುವ ಯೋಜನೆಯು ಕಂಪನಿಗೆ ಇದೆ. ಅಲ್ಲದೆ, ಸ್ಥಳೀಯವಾಗಿ ಸ್ಫೂರ್ತಿ ಪಡೆದ ವಿನ್ಯಾಸಗಳನ್ನು ಗ್ರಾಹಕರಿಗೆ ಪರಿಚಯಿಸುವ ಇರಾದೆಯೂ ಕಂಪನಿಗೆ ಇದೆ. ಆನ್‌ಲೈನ್‌ ಹಾಗೂ ಆಫ್‌ಲೈನ್‌ ಮಳಿಗೆಗಳಲ್ಲಿ ಗ್ರಾಹಕರ ಅನುಭವ ಹೆಚ್ಚಿಸಲು ತಂತ್ರಜ್ಞಾನದ ಮೇಲೆ ಹೆಚ್ಚಿನ ಹೂಡಿಕೆಯನ್ನು ಕಂಪನಿಯು ಮಾಡಲಿದೆ.