ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shootout Case: ಆಸ್ತಿ ವಿಚಾರ ಜಗಳ; ಮಗನ ತಲೆಗೆ ಗುಂಡಿಟ್ಟ ತಂದೆ!

Doddaballapur News: ಮಗ ಹಾಗೂ ತಂದೆಯ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆದಿದ್ದು, ಈ ವೇಳೆ ಮಗನ ಮೇಲೆ ತಂದೆ ಗನ್‌ನಿಂದ ಶೂಟ್ ಮಾಡಿದ್ದಾನೆ. ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೆನಹಳ್ಳಿಯಲ್ಲಿ ನಡೆದಿದ್ದು, ಈ ಸಂಬಂಧ ಕೇಸ್‌ ದಾಖಲಾಗಿದೆ.

ಬೆಂಗಳೂರು: ಆಸ್ತಿ ವಿಚಾರವಾಗಿ ನಡೆದ ಗಲಾಟೆ ವೇಳೆ ಮಗನ ಮೇಲೆಯೇ ತಂದೆ ಗನ್‌ನಿಂದ ಶೂಟ್‌ ಮಾಡಿರುವ ಘಟನೆ (Shootout Case) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ ನಡೆದಿದೆ. ಹರೀಶ್ (30) ಎಂಬುವವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗ ಹಾಗೂ ತಂದೆಯ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆದು, ಮಗನ ಮೇಲೆ ತಂದೆ ಗನ್‌ನಿಂದ ಶೂಟ್ ಮಾಡಿದ್ದಾನೆ. ಮಗ ಹರೀಶ್‌ ಮೇಲೆ ತಂದೆ ಸುರೇಶ್ ಫೈರಿಂಗ್ ಮಾಡಿದ್ದಾನೆ. ಹಳೆ ಲೋಡ್ ಗನ್‌ನಿಂದ ಶೂಟ್ ಮಾಡಿದ್ದು, ಗಾಯಾಳುವನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಂದೆ ಸುರೇಶ್ ಮದ್ಯ ಸೇವಿಸಿ ಜಮೀನು ಮಾರಾಟ ಮಾಡಿದ್ದ. ಇದ್ದ ಜಮೀನು ಮಾರಾಟ ಮಾಡಲು ಹರೀಶ್‌ಗೆ ಕಿರುಕುಳ ನೀಡಿದ್ದಾನೆ. ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Car Accident: ಕಾರು ಡಿಕ್ಕಿ ಹೊಡೆಸಿದ್ದಲ್ಲದೇ ಜೀವ ಬೆದರಿಕೆ... ಶಾಸಕನ ಪುತ್ರನ ಅಟ್ಟಹಾಸಕ್ಕೆ ಜನ ಫುಲ್‌ ಶಾಕ್‌!

ಗುಂಡು ಹಾರಿಸಿದ ಘಟನೆಯ ನಂತರ ತಂದೆ ಸುರೇಶ್ ಮನೆಯಿಂದ ಪರಾರಿಯಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇನ್‌ಸ್ಪೆಕ್ಟರ್ ಮಾಹಿತಿ ನೀಡಿ, ಸುರೇಶ್ ಮೇಲೆ ಕೊಲೆಯತ್ನದ ಪ್ರಕರಣ ದಾಖಲಿಸಲಾಗಿದೆ. ನಾಡ ಬಂದೂಕು ಲೈಸೆನ್ಸ್‌ ಇದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.