ಸಾಮಾನ್ಯವಾದ ಮತ್ತು ಪುನರಾವರ್ತಿತ ಕೆಲಸಗಳನ್ನು ಎಐ ಮಾಡುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ವೃತ್ತಿಪರರು ಮಾನವೀಯ ಹಸ್ತಕ್ಷೇಪ ಅಗತ್ಯವಿರುವ ಸೃಜನಶೀಲ ಮತ್ತು ಸಂವಹನ ಅಗತ್ಯವಿರುವ ಹುದ್ದೆಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಲಿಂಕ್ಡ್ ಇನ್ ನ ಹೊಸ ಮಾಹಿತಿ ಪ್ರಕಾರ ಹೆಚ್ಆರ್ ಉದ್ಯೋಗಿಗಳು ಗ್ರಾಹಕ ಸೇವೆ ಮತ್ತು ಆಡಳಿತ ಸಂಬಂಧಿಸಿದ ಹುದ್ದೆಗಳ ಕಡೆಗೆ, ಫಿನಾನ್ಸ್ ವಿಭಾಗದವರು ಗ್ರಾಹಕ ಸೇವೆ ಮತ್ತು ಅಕೌಂಟಿಂಗ್ ಹುದ್ದೆಗಳ ಕಡೆಗೆ ಮತ್ತು ಎಂಜಿನಿ ಯರ್ ಗಳು ಶಿಕ್ಷಣ ಕ್ಷೇತ್ರದ ಉದ್ಯೋಗಗಳ ಕಡೆಗೆ ಸಾಗುತ್ತಿದ್ದಾರೆ.
ಜೊತೆಗೆ ಲಿಂಕ್ಡ್ ಇನ್ ಡೇಟಾ ಪ್ರಕಾರ ಹೆಚ್ಚಿನ ಉದ್ಯೋಗಿಗಳು ಕೌಶಲ್ಯಪೂರ್ಣ ಒಳನೋಟಗಳು ಅವಶ್ಯವಿರುವ ಪ್ರಮುಖ ಕ್ಷೇತ್ರಗಳಾದ ಕನ್ಸಲ್ಟಿಂಗ್, ಬಿಸಿನೆಸ್ ಡೆವಲಪ್ ಮೆಂಟ್, ರಿಯಲ್ ಎಸ್ಟೇಟ್ ಮತ್ತು ಪ್ರೊಡಕ್ಟ್ ಮ್ಯಾನೇಜ್ ಮೆಂಟ್ ಕ್ಷೇತ್ರಗಳಿಗೆ ಪ್ರವೇಶಿಸುತ್ತಿದ್ದಾರೆ. ಉದ್ಯೋಗಿಗಳು ಮಾನವೀಯ ಹಸ್ತಕ್ಷೇಪ ಅಗತ್ಯವಿರುವ ವೃತ್ತಿಗಳ ಕಡೆಗೆ ಸಾಗುತ್ತಿರುವ ಟ್ರೆಂಡ್ ಅನ್ನು ಈ ಮಾಹಿತಿ ಪ್ರತಿಬಿಂಬಿ ಸುತ್ತಿದೆ. ಹೆಚ್ಚಿನ ಸಂಸ್ಥೆಗಳು ಎಐ ಮೇಲೆ ವಿಶ್ವಾಸ ಇಡುತ್ತಿವೆ.
ಲಿಂಕ್ಡ್ ಇನ್ ಇಂಡಿಯಾದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಸಮೀಕ್ಷೆಯ ಪ್ರಕಾರ, ಶೇ.62ರಷ್ಟು ಭಾರತೀಯ ವೃತ್ತಿಪರರು ಎಐ ತಮ್ಮ ಕೆಲಸಗಳನ್ನು ವೇಗಗೊಳಿಸುವ ಮೂಲಕ ಉತ್ಪಾದಕತೆ ಯನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಶೇ.59ರಷ್ಟು ಜನರು ತಮ್ಮ ವೃತ್ತಿಜೀವನಕ್ಕೆ ಎಐ ಒದಗಿಸುತ್ತಿರುವ ಹೆಚ್ಚಿನ ಶಕ್ತಿ ಕುರಿತು ಉತ್ಸಾಹಿತರಾಗಿದ್ದಾರೆ. ಮಾಧ್ಯಮ, ಹೆಚ್ಆರ್, ಎಂಜಿನಿಯ ರಿಂಗ್ ಮತ್ತು ಮಾರ್ಕೆಟಿಂಗ್ ನಂತಹ ಕ್ಷೇತ್ರಗಳಾದ್ಯಂತ ಎಐಯನ್ನು ಜನರು ಕೌಶಲ್ಯಪೂರ್ಣವಾಗಿ ಮತ್ತು ಮಹತ್ವದ ಕೆಲಸಗಳ ಮೇಲೆ ಗಮನ ಕೇಂದ್ರೀ ಕರಿಸಲು ಸಹಾಯ ಮಾಡುವ ಸಾಧನ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bangalore News: ಹಬ್ಬಗಳ ಸಂದರ್ಭದ ಸೊನಾಟಾ ಸಂಗ್ರಹ ತಂದಿದೆ ಹೊಳಪು, ಸೂಕ್ತ ವಿನ್ಯಾಸ
ಲಿಂಕ್ಡ್ ಇನ್ ಕರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಜಿತಾ ಬ್ಯಾನರ್ಜಿ ಅವರು, “ಎಐ ಯಾರ ವೃತ್ತಿ ಜೀವನವನ್ನೂ ಬದಲಿಸುತ್ತಿಲ್ಲ. ಬದಲಿಗೆ ಅದು ವೇಗವಾಗಿ ಸಾಗಲು ಸಹಾಯ ಮಾಡುತ್ತಿದೆ. ಇವತ್ತು ಗೆಲ್ಲುತ್ತಿರುವ ಮಂದಿ ಮೂರು ಸರಳ ವಿಷಯ ಗಳನ್ನು ಅನುಸರಿಸುತ್ತಾರೆ: ಕೌಶಲ್ಯಗಳನ್ನು ಹೊಂದುವುದು, ಅದಕ್ಕೆ ತಕ್ಕ ಪುರಾವೆ ತೋರಿಸುವುದು ಮತ್ತು ಎಐ ಅನ್ನು ಹೊಸ ಅವಕಾಶಗಳ ಗಳಿಸಲು ಬಳಸಿಕೊಳ್ಳುವುದು.
ಹಾಗಾಗಿ ಈಗ ಹುದ್ದೆ ಆಧಾರಿತ ಉದ್ಯೋಗಗಳಿಗೆ ಹೋಗುವ ಬದಲಿಗೆ ಕೌಶಲ್ಯ ಆಧಾರಿತ ಉದ್ಯೋಗಾವಕಾಶಗಳನ್ನು ಆಯ್ಕೆಮಾಡಬೇಕು. ಲಿಂಕ್ಡ್ ಇನ್ ನಲ್ಲಿ ಪ್ರತಿ ವಾರ ಅಥವಾ ಎರಡು ವಾರಗಳಿಗೊಮ್ಮೆ ನಿಮ್ಮ ಮಾಡುತ್ತಿರುವ ಕೆಲಸಗಳ ಕುರಿತು ಸಣ್ಣ ಪುರಾವೆಗಳನ್ನು ಪ್ರಕಟಿಸಬೇಕು. ಆದ್ದರಿಂದ ನೇಮಕಾತಿ ಮಾಡುವವರು ನೀವು ಹೇಗೆ ಯೋಚಿಸುತ್ತೀರಿ ಎಂಬುದನ್ನು ತಿಳಿಯಬಹು ದಾಗಿದೆ. ಮತ್ತು ಕೊನೆಯದಾಗಿ, ಎಐ ಅನ್ನು ಹುದ್ದೆಗಳ ಸಂಶೋಧನೆ ಮಾಡಲು, ಅರ್ಜಿಗಳನ್ನು ಕಸ್ಟಮೈಸ್ ಮಾಡಲು ಮತ್ತು ಸಂದರ್ಶನಗಳಿಗೆ ತಯಾರಿ ಮಾಡಲು ಬಳಸಬೇಕು. ಮಾನವರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮತ್ತು ಎಐ ಶಕ್ತಿಯ ಪ್ರಯೋಜನದ ಮಿಶ್ರಣವು ಭಾರತದ ಯುವ ಉದ್ಯೋಗಿಗಳು ವಿಶ್ವಾಸಾರ್ಹತೆಯೊಂದಿಗೆ ವೇಗವಾಗಿ ಮುನ್ನಡೆಯಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ವೃತ್ತಿಪರರು ಬೆಳೆಯಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವಾಗ, ಲಿಂಕ್ಡ್ ಇನ್ ನ ಎಐ ಚಾಲಿತ ಜಾಬ್ ಸರ್ಚ್ ಫೀಚರ್ ಅವರು ಉದ್ಯೋಗಗಳನ್ನು ಹುಡುಕುವ ರೀತಿಯನ್ನು ಬದಲಿಸು ತ್ತಿದೆ. ವೃತ್ತಿಪರರು ತಾವು ಬಯಸುವ ಹುದ್ದೆಗಳನ್ನು ತಮ್ಮದೇ ಆದ ಮಾತುಗಳಲ್ಲಿ ಸರಳವಾಗಿ ವಿವರಿಸಬಹುದು ಮತ್ತು ಅವರ ಆಸಕ್ತಿಗಳು, ಕೌಶಲ್ಯಗಳು ಮತ್ತು ಗುರಿಗಳಿಗೆ ಸರಿ ಹೊಂದುವ ಉದ್ಯೋಗಗಳನ್ನು ಹೊಂದಬಹುದು.
ಉದ್ಯೋಗಗಳನ್ನು ಹುಡುಕಲು ಮತ್ತು ಎಐ-ಚಾಲಿತ ಬದಲಾವಣೆಗೆ ಹೊಂದಿಕೊಳ್ಳಲು ಲಿಂಕ್ಡ್ ಇನ್ ಒದಗಿಸುವ ಕೆಲವು ಸಲಹೆಗಳು ಇಲ್ಲಿವೆ:
- ಜಾಬ್ ಸರ್ಚ್ ಮಾಡುವಾಗ ಬುದ್ಧಿವಂತಿಕೆ ಬಳಸಿ
ಬಹಳ ಸಲ ನೀವು ನಿಮಗೆ ಸರಿಹೊಂದದ ಉದ್ಯೋಗಗಳ ವಿವರಣೆಗಳನ್ನು ಓದಲು ಮತ್ತು ಕಂಪನಿಗಳನ್ನು ತಿಳಿದುಕೊಳ್ಳಲು ಬಹಳ ಸಮಯವನ್ನು ಕಳೆಯುತ್ತೀರಿ. ಲಿಂಕ್ಡ್ ಇನ್ ನ ಜಾಬ್ ಮ್ಯಾಚ್ ಫೀಚರ್ ಮೂಲಕ ನೀವು ನಿಮ್ಮ ಪ್ರೊಫೈಲ್ ನಲ್ಲಿರುವ ಕೌಶಲ್ಯಗಳು ಮತ್ತು ಅರ್ಹತೆಗಳ ಆಧಾರದ ಮೇಲೆ ಕೆಲವೇ ಸೆಕೆಂಡುಗಳಲ್ಲಿ ನಿಮಗೆ ಹೊಂದುವ ಉದ್ಯೋಗ ಹೌದೇ ಅಲ್ಲವೇ ಎಂದು ಕಂಡುಕೊಳ್ಳಬಹುದು.
- ಹೊಸ ಉದ್ಯೋಗ ಕಂಡುಕೊಳ್ಳಲು ಕೀವರ್ಡ್ ಗಳಿಗಿಂತ ಜಾಸ್ತಿ ಕೌಶಲ್ಯಗಳು ಮುಖ್ಯ
ಹೊಸ ಎಐ ಉಪಕರಣಗಳ ಮೂಲಕ ಸರಳ ವಾಕ್ಯಗಳು ಮತ್ತು ಮುಖ್ಯವಾದ ವಿವರಗಳನ್ನು ಮಾತ್ರವೇ ಬಳಸಿಕೊಂಡು ಉದ್ಯೋಗಗಳನ್ನು ಶೋಧಿಸಬಹುದು. ಲಿಂಕ್ಡ್ ಇನ್ ನ ಎಐ-ಚಾಲಿತ ಜಾಬ್ ಸರ್ಚ್ ಸಹಜ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ. ಆದ್ದರಿಂದ ನೀವು ಸ್ನೇಹಿತನಿಗೆ ವಿವರಿಸುವಂತೆ ನೀವು ಬಯಸುವ ಹುದ್ದೆಯನ್ನು ವಿವರಿಸಬಹುದು ಮತ್ತು ಅದು ನೀವು ಬಯಸುವ ಉದ್ಯೋಗ ಮಾಹಿತಿಗಳನ್ನು ಒದಗಿಸುತ್ತದೆ.
- ನಿಮ್ಮ ಆಕಾಂಕ್ಷೆ ಸ್ಪಷ್ಟವಾಗಿರಲಿ, ಆದರೆ ಕೇವಲ ಅದಕ್ಕೆ ಸೀಮಿತವಾಗಿರಬೇಡಿ
ಎಐ-ಚಾಲಿತ ಜಾಬ್ ಸರ್ಚ್ ನಿಮ್ಮ ಅನುಭವ, ಸಾಮರ್ಥ್ಯ ಮತ್ತು ಗುರಿಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುವ ಹುದ್ದೆಗಳನ್ನು ತೋರಿಸುತ್ತದೆ. ಇವುಗಳಲ್ಲಿ ಕೆಲವು ನೀವು ಈ ಹಿಂದೆ ಯೋಚಿಸಿರದೇ ಇದ್ದ ಹುದ್ದೆಯೂ ಇರಬಹುದು. ನೀವು ಯೋಚಿಸದಿರುವ ಅವಕಾಶಗಳಿಗೂ ಮನಸ್ಸು ತೆರೆದಿಟ್ಟುಕೊಂಡಿರಬೇಕು ಮತ್ತು ಇಂದಿನ ಬೆಳೆಯುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಹೊಂದಿಕೊಳ್ಳುವುದನ್ನೂ ಕಲಿಯಿರಿ.
- ಶಾರ್ಟ್ ಕಟ್ ಗಳು ಯಾವತ್ತೂ ಸರಿಯಾದ ಕಡೆಗೆ ಕೊಂಡೊಯ್ಯುವುದಿಲ್ಲ
ನಿಮ್ಮ ವಿಶಿಷ್ಟ ಪ್ರತಿಭೆಗಳಂತೆ, ಪ್ರತಿ ಹುದ್ದೆಯೂ ಅನನ್ಯವಾಗಿರುತ್ತದೆ. ಹಾಗೆಯೇ ನಿಮ್ಮ ವಿಶಿಷ್ಟ ಕೌಶಲ್ಯಗಳು ಮತ್ತು ನಿಮ್ಮ ಅನುಭವಗಳನ್ನು ಹೈಲೈಟ್ ಮಾಡಿ ಮತ್ತು ನೀವು ಆ ಹುದ್ದೆಗೆ ಏಕೆ ಸೂಕ್ತ ಎಂಬುದನ್ನು ತೋರಿಸಲು ಪ್ರತೀ ಉದ್ಯೋಗ ಅರ್ಜಿಯನ್ನು ಕಸ್ಟಮೈಸ್ ಮಾಡಿ.
- ಘೋಸ್ಟ್ ಜಾಬ್ ಗಳ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ
ಕಾಣಿಸಿಕೊಳ್ಳುವ ಬಹುಪಾಲು ಉದ್ಯೋಗಗಳು ನಿಜವಲ್ಲ ಎಂಬ ಗ್ರಹಿಕೆ ಇಟ್ಟುಕೊಳ್ಳಬಾರದು. ನಿಜವಾದ ಉದ್ಯೋಗಗಳನ್ನು ಗುರುತಿಸಲು ವೆರಿಫಿಕೇಷನ್ ಬ್ಯಾಡ್ಜ್ ಗಳನ್ನು ಹುಡುಕಿ. ಲಿಂಕ್ಡ್ ಇನ್ ನ ಸುರಕ್ಷತಾ ಫೀಚರ್ ಗಳನ್ನು ನಿಮ್ಮ ರಿಸರ್ಚ್ ಜೊತೆ ಸೇರಿಸಿ ಸುರಕ್ಷಿತವಾಗಿ ಮತ್ತು ಉತ್ತಮವಾಗಿ ಉದ್ಯೋಗ ಶೋಧ ಮಾಡಿ.
ಎಲ್ಲರೂ ಮುಂದುವರೆಯಲು ಸಹಾಯ ಮಾಡಲು, ಲಿಂಕ್ಡ್‌ಇನ್ ತನ್ನ ವೇದಿಕೆಯಲ್ಲಿ ನೀವು ಅನುಸರಿಸಬಹುದಾದ ಪ್ರಮುಖ ಎಐ ಧ್ವನಿಗಳನ್ನು ಹೈಲೈಟ್ ಮಾಡಿದೆ, ಅದು ಎಐ ಉಪಕರಣ ಗಳನ್ನು ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಲು ಸ್ಮಾರ್ಟ್, ಪ್ರಾಯೋಗಿಕ ಸಲಹೆಗಳನ್ನು ನೀಡುತ್ತದೆ.