ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಮೆಜಾನ್‌ನಲ್ಲಿಯೂ ಈಗ ಜಾವಾ ಯೆಜ್ಡಿ ಬೈಕ್‌ ಖರೀದಿ ಅತಿ ಸುಲಭ

ಎಂಡ್-ಟು-ಎಂಡ್ ಡಿಜಿಟಲ್ ಪ್ರಯಾಣವು ಕಂಪನಿಯ ನಿಖರವಾದ ಆಫ್‌ಲೈನ್ ಸಿದ್ಧತೆಯನ್ನು ಪ್ರತಿ ಬಿಂಬಿಸುತ್ತದೆ. ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಈಗಾಗಲೇ ತನ್ನ ಡೀಲರ್ ನೆಟ್‌ವರ್ಕ್ ಅನ್ನು ಭಾರತದಾದ್ಯಂತ 450 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳಿಗೆ ವಿಸ್ತರಿಸಿದೆ ಮತ್ತು ಖರೀದಿದಾರ ರಿಗೆ 100 ಪ್ರತಿಶತ ಜಿಎಸ್‌ಟಿ 2.0 ಸುಧಾರಣಾ ಪ್ರಯೋಜನಗಳನ್ನು ರವಾನಿಸಿದೆ.

ಬೆಂಗಳೂರು: ಇ-ಕಾಮರ್ಸ್‌ಗಳಾದ ಅಮೆಜಾನ್‌ನಲ್ಲಿ ಇದೇ ಮೊದಲ ಬಾರಿಗೆ ಜಾವಾ ಯೆಜ್ಡಿ ಅವರ ಎಲ್ಲಾ ಮಾಡೆಲ್‌ನ ಬೈಕ್‌ಗಳು ಆನ್‌ಲೈನ್‌ನಲ್ಲಿಯೇ ಲಭ್ಯವಿದ್ದು, ಜನರು ಬೈಕ್‌ನನ್ನೂ ಸಹ ಆನ್‌ಲೈನ್‌ನಲ್ಲಿಯೇ ಖರೀದಿಸಹುದು.

ಈ ಕುರಿತು ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶರದ್ ಅಗರ್ವಾಲ್, ಕಳೆದ ವರ್ಷ ಫ್ಲಿಪ್‌ಕಾರ್ಟ್‌ನಲ್ಲಿ ಬೈಕ್‌ಗಳ ಖರೀದಿಗೆ ಲಭ್ಯತೆ ಕಲ್ಪಿಸಿ ಕೊಡಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಅಮೆಜಾನ್‌ನಲ್ಲಿಯೂ ಲಭ್ಯವಾಗುವಂತೆ ವ್ಯವಸ್ಥೆ ನಿರ್ಮಿಸಲಾಗಿದ್ದು, ಜಾವಾ ಬೈಕ್‌ ಕುಳಿತಲ್ಲೇ ಖರೀದಿಸಬಹುದಾಗಿದೆ. ಸುಮಾರು 40 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದ್ದು, ಈ ಹಬ್ಬದ ಋತುವಿನಲ್ಲಿ 100 ಕ್ಕೂ ಹೆಚ್ಚು ನಗರಗಳನ್ನು ತಲುಪುವ ಯೋಜನೆ ಹೊಂದಿದೆ.

ಇದನ್ನೂ ಓದಿ: Bangalore News: ಹಬ್ಬಗಳ ಸಂದರ್ಭದ ಸೊನಾಟಾ ಸಂಗ್ರಹ ತಂದಿದೆ ಹೊಳಪು, ಸೂಕ್ತ ವಿನ್ಯಾಸ

ನಮ್ಮ ಯುವ ಗ್ರಾಹಕರು ರಜಾದಿನಗಳನ್ನು ಬುಕ್ ಮಾಡಲು ಅಥವಾ ಆನ್‌ಲೈನ್‌ನಲ್ಲಿ ಕಾರು ಖರೀದಿಸಲು ಹಿಂಜರಿಯುತ್ತಿದ್ದರು, ಆನ್‌ಲೈನ್‌ನಲ್ಲಿ ತಮ್ಮ ಇಷ್ಟದ ಬೈಕ್‌ ಖರೀದಿ ಅಸಾಧ್ಯವೆಂದು ಭಾವಿಸಿದ್ದರು, ಆದರೆ, ಈಗ ಅವರ ಕನಸು ನನಸಾಗಿದೆ. ಒಂದು ವರ್ಷದ ಹಿಂದೆ ಇ-ಕಾಮರ್ಸ್‌ಗೆ ಹೋದೆವು. ಫ್ಲಿಪ್‌ಕಾರ್ಟ್‌ನಿಂದ ಪ್ರಾರಂಭಿಸಿ ಈಗ ಅಮೆಜಾನ್‌ಗೆ ವಿಸ್ತರಿಸುತ್ತಿರುವ ನಾವು, ಮೋಟಾರ್‌ ಸೈಕ್ಲಿಂಗ್‌ನ ಆತ್ಮವನ್ನು ಹಾಗೆಯೇ ಉಳಿಸಿಕೊಂಡು ಮಾಲೀಕತ್ವದ ಪ್ರಯಾಣವನ್ನು ಸುಲಭ ಮತ್ತು ಹೆಚ್ಚು ಪಾರದರ್ಶಕವಾಗಿಸುತ್ತಿದ್ದೇವೆ."

ಎಂಡ್-ಟು-ಎಂಡ್ ಡಿಜಿಟಲ್ ಪ್ರಯಾಣವು ಕಂಪನಿಯ ನಿಖರವಾದ ಆಫ್‌ಲೈನ್ ಸಿದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಈಗಾಗಲೇ ತನ್ನ ಡೀಲರ್ ನೆಟ್‌ವರ್ಕ್ ಅನ್ನು ಭಾರತದಾದ್ಯಂತ 450 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳಿಗೆ ವಿಸ್ತರಿಸಿದೆ ಮತ್ತು ಖರೀದಿದಾರ ರಿಗೆ 100 ಪ್ರತಿಶತ ಜಿಎಸ್‌ಟಿ 2.0 ಸುಧಾರಣಾ ಪ್ರಯೋಜನಗಳನ್ನು ರವಾನಿಸಿದೆ.

ಮಧ್ಯಂತರ ಮಳೆಯ ನಡುವೆಯೂ ಹಬ್ಬದ ಸಂಭ್ರಮ ನಿರಂತರವಾಗಿ ಮುಂದುವರಿದಂತೆ, ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಬ್ರ್ಯಾಂಡ್‌ಗಳನ್ನು ಗ್ರಾಹಕರಿಗೆ ಒಂದು ಹೆಜ್ಜೆ ಹತ್ತಿರ ತರುತ್ತದೆ. ಖರೀದಿದಾರರು ತಮ್ಮ ಮನೆಗಳಿಂದ ಹೊರಬರದೆ, ಮಾದರಿ ಆಯ್ಕೆಯಿಂದ ಬುಕಿಂಗ್‌ವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎಂದು ಹೇಳಿದರು.