Dharmasthala Case: ಇಲ್ಲಿವರೆಗೂ ಬರೀ ಗುಂಡಿ ತೋಡಿದ್ದಾರೆ, ಆಟ ಈಗ ಶುರು: ಕಿರಿಕ್ ಕೀರ್ತಿ
Kirik Keerthi : ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ವಿಚಾರಗೋಷ್ಠಿಯಲ್ಲಿ ಪತ್ರಕರ್ತ ಕಿರಿಕ್ ಕೀರ್ತಿ ಮಾತನಾಡಿದರು. ಈ ಪ್ರೊಟೆಸ್ಟ್‌ಗಳಿಗೆ ಸುಳ್ಳು ಪ್ರಚಾರ, ಹಾದಿ ತಪ್ಪಿಸಿದ ಹೋರಾಟಗಾರರೇ ಕಾರಣ ಎಂದು ಆರೋಪಿಸಿದರು.


ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ (Dharmasthala Case) ಇಲ್ಲಿತನಕ ಎಸ್‌ಐಟಿ ತನಿಖೆ ಆರಂಭವಾಗಿಲ್ಲ, ಇನ್ನಷ್ಟೇ ತನಿಖೆ ಶುರುವಾಗಲಿದೆ. ಆ ಅನಾಮಿಕ ವ್ಯಕ್ತಿಯನ್ನು ತಮಿಳುನಾಡಿನಿಂದ ಕರೆದುಕೊಂಡು ದೂರು ಕೊಡಿಸಲಾಗಿದೆ ಎಂಬ ಮಾಹಿತಿ ಇದೆ. ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿದ್ದಕ್ಕೆ ತಿಮರೋಡಿ ವಿರುದ್ಧ ಕ್ರಮಕ್ಕೆ ಗೃಹ ಸಚಿವರು ಸೂಚನೆ ನೀಡಿದ್ದಾರೆ. ಜನರಿಗೆ ಮಂಕು ಬೂದಿ ಎಸಗಿದವರಿಂದ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಪತ್ರಕರ್ತ ಕಿರಿಕ್ ಕೀರ್ತಿ ಹೇಳಿದರು.
ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಕಲಿ ಹೋರಾಟಗಾರರು ಎಂದು ಕರೆಸಿಕೊಳ್ಳುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮುಂಬೈನಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಯಾಕೆ ಗಡಿಪಾರು ಮಾಡುತ್ತಾರೆ. ಇನ್ನು ಸೌಜನ್ಯಾ ಹೋರಾಟದ ದಿಕ್ಕು ತಪ್ಪಿಸಿದ್ದೇ ಗಿರೀಶ್ ಮಟ್ಟಣ್ಣನವರ್. ಶಾಸಕರ ಭವನದಲ್ಲಿ ಹುಸಿ ಬಾಂಬ್ ಕೇಸ್‌ನಲ್ಲಿ ಬಂಧನವಾಗಿದ್ದ ಈತ ಸುಳ್ಳುಗಳನ್ನೇ ಪ್ರಚಾರ ಮಾಡುತ್ತಿದ್ದಾನೆ. ಎಂ.ಡಿ. ಸಮೀರ್ ಯೂಟ್ಯೂಬ್‌ನಲ್ಲಿ ದೆವ್ವದ ಸ್ಟೋರಿಗಳನ್ನು ಮಾಡುತ್ತಿದ್ದ. ಮೊದಲು ಬೆಟ್ಟಿಂಗ್ ಪ್ರಮೋಷನ್ ಮಾಡುತ್ತಿದ್ದ ವ್ಯಕ್ತಿ ಸೌಜನ್ಯಾ ಪರ ಹೋರಾಟಕ್ಕೆ ಬಂದಿದ್ದೇನೆ.
ಈ ಸುದ್ದಿಯನ್ನೂ ಓದಿ | D Veerendra Heggade: ಧರ್ಮಸ್ಥಳ ವಿರುದ್ಧದ ಆರೋಪಗಳ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಫಸ್ಟ್ ರಿಯಾಕ್ಷನ್
ಸಮೀರನ ಎಐ ವಿಡಿಯೋದ ಮೊದಲಲ್ಲಿ ಡಿಸ್‌ಕ್ಲೈಮರ್ ಹಾಕಿದ್ದ. ಇದರಲ್ಲಿ ಯಾವ ಸಾಕ್ಷಿಯನ್ನೂ ಮಾತನಾಡಿಸಿಲ್ಲ, ಕಾನೂನು ಸಲಹೆ ಪಡೆದಿಲ್ಲ ಎಂದು ಹೇಳಿದ್ದ. ಅವತ್ತು ಜನ ಯೋಚನೆ ಮಾಡಬೇಕಿತ್ತು. ಈ ಪ್ರೊಟೆಸ್ಟ್‌ಗಳಿಗೆ ಹಾದಿ ತಪ್ಪಿಸಿದ ಹೋರಾಟಗಾರರೇ ಕಾರಣ ಎಂದು ಆರೋಪಿಸಿದರು.