D Veerendra Heggade: ಧರ್ಮಸ್ಥಳ ವಿರುದ್ಧದ ಆರೋಪಗಳ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಫಸ್ಟ್ ರಿಯಾಕ್ಷನ್
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಬಗ್ಗೆ ಗೊಂದಲ ಸೃಷ್ಟಿಸಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಅವರು ಹೊರಹಾಕಿದ್ದು,ರ ಎಸ್ಐಟಿ ತನಿಖೆಗೆ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. ಅಲ್ಲದೇ ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಅಪರಾಧಿ ಸಿಕ್ಕಿ ಈ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ ಎಂದಿದ್ದಾರೆ.

ಡಾ. ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ (Dharamsthala) ನೂರಾರು ಶವಗಳನ್ನು ಹೂತಿಟ್ಟ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯ (Member of Rajya Sabha) ಡಿ. ವೀರೇಂದ್ರ ಹೆಗ್ಗಡೆಯವರು (D. Veerendra Heggade) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಧರ್ಮಸ್ಥಳದ ಬಗ್ಗೆ ಗೊಂದಲ ಮೂಡಿಸಲಾಗುತ್ತಿದೆ. ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಸತ್ಯ ಹೊರಬರಲಿದೆ ಎಂಬ ವಿಶ್ವಾಸವಿದೆ” ಎಂದು ಅವರು ತಿಳಿಸಿದ್ದಾರೆ.
ಪಿಟಿಐ(PTI)ಗೆ ನೀಡಿದ ಸಂದರ್ಶನದಲ್ಲಿ, 2012ರ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿದ ಹೆಗ್ಗಡೆಯವರು, “ನಾನು ಸರ್ಕಾರಕ್ಕೆ ಮಾಹಿತಿ ನೀಡಿ, ತಕ್ಷಣವೇ ಅಪರಾಧಿಯನ್ನು ಪತ್ತೆಹಚ್ಚಲು ಸಹಕರಿಸಿದೆ. ಪೊಲೀಸರಿಗೆ ಮಾಹಿತಿ ನೀಡುವುದನ್ನು ಬಿಟ್ಟರೆ, ಈ ಪ್ರಕರಣಕ್ಕೆ ನಮಗೆ ಯಾವುದೇ ಸಂಬಂಧವಿಲ್ಲ. ಘಟನೆ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರು ದೇಶದಲ್ಲಿಯೇ ಇರಲಿಲ್ಲ, ಶಿಕ್ಷಣಕ್ಕಾಗಿ ವಿದೇಶದಲ್ಲಿದ್ದರು. ಆದರೂ, ಸುಳ್ಳು ಆರೋಪಗಳ ಮೂಲಕ ನಮ್ಮನ್ನು ಎಳೆದು ತರಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
VIDEO | Dharmasthala Dharmadhikari Veerendra Heggade denies allegations in the Soujanya case, calling them baseless and part of a vicious campaign.
— Press Trust of India (@PTI_News) August 19, 2025
(Full video available on PTI Videos- https://t.co/dv5TRAShcC) pic.twitter.com/6PEfjbTkJM
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಕೆಲವರು ಯುವಕರನ್ನು ದೇವಸ್ಥಾನ ಮತ್ತು ಧಾರ್ಮಿಕ ನಂಬಿಕೆಗಳಿಂದ ದೂರವಿಡಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಈ ಸುಳ್ಳು ಸಂದೇಶಗಳಿಂದ ಯುವಕರ ಮನಸ್ಸನ್ನು ಕಲುಷಿತಗೊಳಿಸಲಾಗುತ್ತಿದೆ” ಎಂದು ಖೇದ ವ್ಯಕ್ತಪಡಿಸಿದರು. ಎಸ್‌ಐಟಿ ತನಿಖೆಯನ್ನು ಸ್ವಾಗತಿಸುವುದಾಗಿ, ಯಾವುದೇ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಒತ್ತಿಹೇಳಿದರು.
VIDEO | Dharmadhikari Veerendra Heggade says, “Dharmasthala has fully cooperated with the CBI probe; vested interests are misleading the youth through social media.”
— Press Trust of India (@PTI_News) August 19, 2025
(Full video available on PTI Videos- https://t.co/dv5TRAShcC) pic.twitter.com/FBO9L12GJW
ಹೆಗ್ಗಡೆಯವರು, “ಕ್ಷೇತ್ರದ ಕೀರ್ತಿ ಮತ್ತು ಒಳ್ಳೆ ಕೆಲಸಗಳ ಬಗ್ಗೆ ಅಸೂಯೆಯಿಂದ ಈ ಆರೋಪಗಳನ್ನು ಮಾಡಲಾಗುತ್ತಿದೆ. ಭಕ್ತರಿಗೆ ಎಲ್ಲ ವ್ಯವಸ್ಥೆ, ಅನ್ನದಾನ, ಮತ್ತು ಕ್ಷೇತ್ರದ ಖ್ಯಾತಿಯನ್ನು ಉಳಿಸಲು ಟ್ರಸ್ಟ್‌ಗಳನ್ನು ಸ್ಥಾಪಿಸಿದ್ದೇವೆ. ವಿದ್ಯೆ, ಆರೋಗ್ಯ, ಮತ್ತು ಕನ್ನಡ ಶಾಲೆಗಳಿಗೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಈ ಆರೋಪಗಳ ಹಿಂದೆ ರಾಜಕೀಯ ಷಡ್ಯಂತ್ರವಿಲ್ಲ ಎಂದು ತಿಳಿಸಿದ ಅವರು, “ಕ್ಷೇತ್ರದ ಮೇಲೆ ಅಪವಾದ ಹಾಕಿದರೆ ಹಿಂದೂ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂಬುದು ಈ ಪಿತೂರಿಯ ಹಿಂದಿರುವವರಿಗೆ ಗೊತ್ತಿದೆ. ಸರ್ಕಾರವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
VIDEO | Dharmasthala Dharmadhikari Veerendra Heggade hints at a conspiracy behind mass burial allegations; says the SIT will reveal the truth.
— Press Trust of India (@PTI_News) August 19, 2025
(Full video available on PTI Videos- https://t.co/dv5TRARJn4) pic.twitter.com/YkTG6nKz9x
ಈ ಸುದ್ದಿಯನ್ನೂ ಓದಿ: Dharmasthala: ಧರ್ಮಸ್ಥಳ ಪ್ರಕರಣಕ್ಕೆ ಸ್ಫೋಟಕ ತಿರುವು;- ಒತ್ತಡದಿಂದ ಸುಳ್ಳು ಹೇಳಿದೆ ಎಂದು ಎಸ್‌ಐಟಿ ಮುಂದೆ ಒಪ್ಪಿಕೊಂಡ ಅನಾಮಿಕ ವ್ಯಕ್ತಿ
ಧರ್ಮಸ್ಥಳದ ಸಾಮಾಜಿಕ ಸೇವೆಯ ದೀರ್ಘಕಾಲದ ಪರಂಪರೆಯ ಮೇಲಿನ ಈ ಆರೋಪಗಳು ಗಂಭೀರವಾದವು. ಎಸ್‌ಐಟಿ ತನಿಖೆಯ ಫಲಿತಾಂಶವು ಸತ್ಯವನ್ನು ಬಹಿರಂಗಪಡಿಸಲಿದ್ದು, ಈ ವಿವಾದವು ಧರ್ಮಸ್ಥಳದ ಖ್ಯಾತಿಗೆ ಕಳಂಕವನ್ನುಂಟುಮಾಡುವ ಯೋಜಿತ ಷಡ್ಯಂತ್ರವೇ ಎಂಬ ಪ್ರಶ್ನೆಗೆ ಉತ್ತರ ನೀಡಲಿದೆ.