Laxmi hebbalkar: ವಿದ್ಯಾಭ್ಯಾಸಕ್ಕೆ ನೆರವಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಬಾಲಕಿ
Laxmi hebbalkar: ಕೆಲವು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ಬಾಲಕಿಯೊಬ್ಬಳು ಮನೆಯಲ್ಲಿನ ಸಮಸ್ಯೆಯಿಂದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಬಂದು ಸಹಾಯ ಕೇಳಿದ್ದಳು. ತಕ್ಷಣ ಸ್ಪಂದಿಸಿದ ಸಚಿವರು, ಬಾಲಕಿಗೆ ಸವದತ್ತಿಯ ವಸತಿಗೃಹದಲ್ಲಿ ಆಶ್ರಯ ಒದಗಿಸಿ, ಆಕೆಗೆ ವಿದ್ಯಾಭ್ಯಾಸ ಮುಂದುವರಿಸಲು ಸಹಾಯ ಮಾಡಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಆ ಬಾಲಕಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.


ಬೆಳಗಾವಿ: ಕೆಲವು ತಿಂಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹಾಯದೊಂದಿಗೆ ಸವದತ್ತಿಯ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದ ಬಾಲಕಿಯೊಬ್ಬಳು, ಶುಕ್ರವಾರ ಬೆಳಗಾವಿಯ ಆಸ್ಪತ್ರೆಗೆ ಓಡೋಡಿ ಬಂದು, ಚಿಕಿತ್ಸೆ ಪಡೆಯುತ್ತಿರುವ ಸಚಿವರ ಆರೋಗ್ಯ ವಿಚಾರಿಸಿದಳು. ಈ ಮೂಲಕ ಮಾನವೀಯ ಸಂಬಂಧ ಎಂದರೆ ಏನು ಎನ್ನುವುದಕ್ಕೆ ಉದಾಹರಣೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು.
ಕೆಲವು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ಬಾಲಕಿಯೊಬ್ಬಳು ಮನೆಯಲ್ಲಿನ ಸಮಸ್ಯೆಯಿಂದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಬಂದು ಸಹಾಯ ಕೇಳಿದ್ದಳು. ತಕ್ಷಣ ಸ್ಪಂದಿಸಿದ ಸಚಿವರು, ಬಾಲಕಿಗೆ ಸವದತ್ತಿಯ ವಸತಿಗೃಹದಲ್ಲಿ ಆಶ್ರಯ ಒದಗಿಸಿ, ಆಕೆಗೆ ವಿದ್ಯಾಭ್ಯಾಸ ಮುಂದುವರಿಸಲು ಸಹಾಯ ಮಾಡಿದ್ದರು.
ಇದೀಗ ಸಚಿವರು ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ವಿಷಯ ತಿಳಿದ ಬಾಲಕಿ, ತಾನು ಸಚಿವರನ್ನು ನೋಡಲೇಬೇಕೆಂದು ಹಠ ಹಿಡಿದು, ತನ್ನ ಅಜ್ಜಿಯ ಜೊತೆಗೆ ಆಸ್ಪತ್ರೆಗೆ ಬಂದು ಸಚಿವರ ಆರೋಗ್ಯ ವಿಚಾರಿಸಿದಳು. ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದಳು.
ಬಾಲಕಿ ತಮ್ಮ ಆರೋಗ್ಯ ವಿಚಾರಿಸಲು ಇಲ್ಲಿಯವರೆಗೂ ಬಂದಿರುವುದನ್ನು ಕಂಡು ಭಾವುಕರಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆಕೆಯ ಕೈ ಹಿಡಿದುಕೊಂಡು, ವಿದ್ಯಾಭ್ಯಾಸ, ಊಟೋಪಚಾರ ಮತ್ತಿತರ ವಿಷಯಗಳ ಮಾಹಿತಿ ಪಡೆದರು. ಉತ್ತಮವಾಗಿ ಓದಿ ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆಯುವಂತೆ ಅವರು ಬಾಲಕಿಗೆ ಸೂಚಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಶ್ರೀರಾಮುಲುಗೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿಲ್ಲ ಎಂದ ಡಿ.ಕೆ.ಶಿವಕುಮಾರ್
ಜತೆಗೆ ಹಾಸ್ಟೆಲ್‌ನಲ್ಲಿರುವ ಇತರ ಮಕ್ಕಳೊಂದಿಗೂ ವಿಡಿಯೋ ಕಾಲ್ ಮೂಲಕ ಸಚಿವರ ಜತೆ ಬಾಲಕಿ ಮಾತನಾಡಿಸಿದಳು. ಹಾಸ್ಟೆಲ್ ವ್ಯವಸ್ಥೆ, ಶಿಕ್ಷಣಗಳ ಕುರಿತು ಆ ಮಕ್ಕಳಿಂದಲೂ ಸಚಿವರು ಮಾಹಿತಿ ಪಡೆದು, ಉತ್ತಮ ಭವಿಷ್ಯಕ್ಕೆ ಹಾರೈಸಿದರು.