ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ಪತ್ನಿಯ ವಿರುದ್ಧವೇ ಪತಿಯ ಸಂಚು; ಮನೆಯಿಂದ ಹೊರಹಾಕಿ ಮಕ್ಕಳನ್ನು ದೂರ ಮಾಡಿದ ಪಾಪಿ

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಪತಿಯೇ ಪತ್ನಿಯನ್ನು ಮನೆಯಿಂದ ಹೊರ ಹಶಾಕಿದ್ದಾನೆ. ಅಲ್ಲದೆ ಪತ್ನಿಯನ್ನು ಮಕ್ಕಳಿಂದ ದೂರ ಮಾಡಿದ್ದಾನೆ. ಸಂತ್ರಸ್ತೆಯನ್ನು ಸುಗುಣ ಮತ್ತು ಆಕೆಯ ಪತಿಯನ್ನು ಗೋಪಾಲಕೃಷ್ಣ ಎಂದು ಗುರುತಿಸಲಾಗಿದೆ.

ಪತ್ನಿಯನ್ನು ಮನೆಯಿಂದ ಹೊರಹಾಕಿದ ಪಾಪಿ ಪತಿ

ಎಐ ಚಿತ್ರ.

Ramesh B Ramesh B Jul 27, 2025 5:00 PM

ಬೆಂಗಳೂರು: ಅವರಿಬ್ಬರು ಪ್ರೀತಿಸಿ ಮದುವೆಯಾದವರು. ಈ ದಂಪತಿಗೆ ಮುದ್ದಾದ ಅವಳಿ ಗಂಡು ಮಕ್ಕಳಿದ್ದಾರೆ. ಅದೇನಾಯ್ತೋ ಇದೀಗ ಪತಿಯೇ ಪತ್ನಿಗೆ ಹುಚ್ಚಿಯ ಪಟ್ಟ ಕಟ್ಟಿ ಮನೆಯಿಂದ ಹೊರಹಾಕಿದ್ದಾನೆ (Bengaluru News). ಇದೀಗ ಸಂತ್ರಸ್ತೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪತಿಯ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಈ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಸುಗುಣ ಮತ್ತು ಆಕೆಯ ಪತಿಯನ್ನು ಗೋಪಾಲಕೃಷ್ಣ ಎಂದು ಗುರುತಿಸಲಾಗಿದೆ. ಇವರು ಮೂಲತಃ ಆಂಧ್ರ ಪ್ರದೇಶದವರು. ಕೆಲವು ಸಮಯಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಪರಸ್ಪರ ಪ್ರೀತಿಸುತ್ತಿದ್ದ ಸುಗುಣ ಮತ್ತು ಗೋಪಾಲಕೃಷ್ಣ 2007ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಅವಳಿ ಗಂಡು ಮಕ್ಕಳಿದ್ದಾರೆ.

ಈ ಸುದ್ದಿಯನ್ನೂ ಓದಿ: Ex Soldier Hunger strike: ಕಾರ್ಗಿಲ್ ವಿಜಯೋತ್ಸವದ ದಿವಸಾ ಜಮೀನಿಗಾಗಿ ಉಪವಾಸ ಸತ್ಯಾಗ್ರಹ ಕುಳಿತ ಮಾಜಿ ಸೈನಿಕ

ಘಟನೆಯ ವಿವರ

ಇಷ್ಟರ ತನಕ ಎಲ್ಲವೂ ಚೆನ್ನಾಗೇ ಇತ್ತು. ಆದರೆ ಇತ್ತೀಚೆಗೆ ತಗಾದೆ ತೆಗೆದಿದ್ದ ಗೋಪಾಲಕೃಷ್ಣ ವಿಚ್ಛೇದನ ನೀಡುವಂತೆ ಪಟ್ಟು ಹಿಡಿದಿದ್ದ. ಆದರೆ ತಮಗೆ ವಿಚ್ಛೇದನ ಬೇಡೆವೆಂದು ಸುಗುಣ ಹೇಳಿದ್ದರು. ಇದನ್ನು ಗಣನೆಗೆ ತೆಗೆದುಕೊಳ್ಳದ ಗೋಪಾಲಕೃಷ್ಣ ನ್ಯಾಯಾಲಯದ ಅಂತಿಮ ತೀರ್ಪು ಪ್ರಕಟವಾಗುವ ಮುನ್ನವೇ ಸುಗುಣ ಅವರನ್ನು ಮನೆಯಿಂದ ಹೊರಹಾಕಿ ಮಕ್ಕಳನ್ನೂ ಅವರಿಂದ ದೂರ ಮಾಡಿದ್ದ. ಅಲ್ಲದೆ ಮಕ್ಕಳ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದು ಸುಗುಣ ದೂರಿದ್ದಾರೆ.

ನ್ಯಾಯಾಲವೇ ಮಕ್ಕಳ ಭೇಟಿಗೆ ಅನುಮತಿ ನೀಡಿದರೂ ಗೋಪಾಲಕೃಷ್ಣ ಅವಕಾಶ ನೀಡುತ್ತಿಲ್ಲವಂತೆ. ಮಕ್ಕಳ ಹತ್ತಿರ ಹೋದರೆ ಹುಚ್ಚನಂತೆ ವರ್ತಿಸುತ್ತಾನೆ ಎಂದು ಸುಗುಣ ಆರೋಪಿಸಿದ್ದಾರೆ. ಮಕ್ಕಳು ತಮ್ಮ ಬಳಿ ಬರದಂತೆ ಅವರ ತಲೆಯಲ್ಲಿ ಇಲ್ಲ ಸಲ್ಲದ ವಿಚಾರ ತುರುಕಿದ್ದಾನೆ ಎಂದೂ ಹೇಳಿದ್ದಾರೆ. ಇನ್ನು ಆತನ ಮನೆಯ ಮುಂದೆ ಧರಣಿ ಕುಳಿತ ತನ್ನ ಮೇಲೆ ಪೊಲೀಸರೇ ದೌರ್ಜನ್ಯ ತೋರಿದ್ದಾರೆ ಎಂದು ಹೇಳಿದ್ದಾರೆ. ಮಹಿಳಾ ಪೊಲೀಸ್‌ ಒಬ್ಬರು ಕೆನ್ನೆಗೆ ಬಾರಿಸಿದ್ದಾರೆ ಎಂದು ತಿಳಿಸಿದ್ದಾರೆ.