ವೃತ್ತಿಪರರಿಗೆ ತಮ್ಮ ನೆಟ್ ವರ್ಕ್ ವಿಸ್ತರಿಸಲು ಮತ್ತು ಹೊಸ ಅವಕಾಶಗಳನ್ನು ಪಡೆಯಲು ಸಹಾಯ ಮಾಡುವ ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್ ವರ್ಕಿಂಗ್ ಜಾಲವಾದ ಲಿಂಕ್ಡ್ ಇನ್ ತನ್ನ ಮೂರನೇ ವಾರ್ಷಿಕ ಟಾಪ್ ಎಂಬಿಎ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವೃತ್ತಿ ಬೆಳವಣಿಗೆಗೆ ನೆರವಾಗುವ 100 ಜಾಗತಿಕ ಬಿಸಿನೆಸ್ ಸ್ಕೂಲ್ ಗಳನ್ನು ಹೆಸರಿಸಲಾಗಿದೆ.
2010ರಿಂದ ಲಿಂಕ್ಡ್ ಇನ್‌ನಲ್ಲಿರುವ ಎಂಬಿಎ ಪದವಿ ಹೊಂದಿರುವ ಹಿರಿಯ ನಾಯಕರ ಸಂಖ್ಯೆ ಶೇ.32ರಷ್ಟು ಹೆಚ್ಚಾಗಿದೆ ಮತ್ತು ಉದ್ಯಮಿಗಳ ಸಂಖ್ಯೆ ಶೇ.87ಕ್ಕೆ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿರುವುದು ವಿಶೇಷವಾಗಿದೆ.
ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‌ಬಿ) ಕಳೆದ ವರ್ಷ #6ನೇ ಸ್ಥಾನ ಇದ್ದಿದ್ದು, ಈ ವರ್ಷ 5ನೇ ಸ್ಥಾನ ಪಡೆದಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಅಹಮದಾಬಾದ್ #19ರಿಂದ #17ನೇ ಸ್ಥಾನಕ್ಕೆ ಏರಿದೆ. ಹೊಸದಾಗಿ ಪಟ್ಟಿಗೆ ಸೇರಿರುವ ಐಐಎಂ-ಕೋಲ್ಕತ್ತಾ #16 ಮತ್ತು ಐಐಎಂ-ಬೆಂಗಳೂರು #20 ಸ್ಥಾನಗಳನ್ನು ಪಡೆದಿವೆ. ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಜಾಗತಿಕ ಪಟ್ಟಿಯಲ್ಲಿ ಸತತ ಎರಡನೇ ವರ್ಷವೂ #1ನೇ ಸ್ಥಾನವನ್ನು ಉಳಿಸಿಕೊಂಡಿದೆ.
ಇದನ್ನೂ ಓದಿ: Roopa Gururaj Column: ಭಾಗವತದ ಮಹತ್ವ ಸಾರಿದ ಶುಕಮುನಿ
ನಂತರ ಸ್ಥಾನಗಳ್ನು ಹಾರ್ವರ್ಡ್ ಯೂನಿವರ್ಸಿಟಿ (#2), ಇನ್‌ಸೀಡ್ (#3) ಮತ್ತು ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ (#4) ಪಡೆದುಕೊಂಡಿವೆ. ಈ ಪಟ್ಟಿಯನ್ನು ನೇಮಕಾತಿ ಮತ್ತು ಬೇಡಿಕೆ, ಅಭಿವೃದ್ಧಿಯ ಸಾಮರ್ಥ್ಯ, ನೆಟ್ ವರ್ಕಿಂಗ್ ಶಕ್ತಿ, ನಾಯಕತ್ವ ಸಾಮರ್ಥ್ಯ ಮತ್ತು ವೈವಿಧ್ಯತೆ ಎಂಬ ಐದು ಪ್ರಮುಖ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ:
ಈ ಕುರಿತು ಮಾತನಾಡಿರುವ ಲಿಂಕ್ಡ್ ಇನ್ ನ್ಯೂಸ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಸಂಪಾದಕಿ ಮತ್ತು ಕರಿಯರ್ ಎಕ್ಸ್ ಪರ್ಟ್ ನಿರಾಜಿತಾ ಬ್ಯಾನರ್ಜಿ ಅವರು , “ಎಂಬಿಎ ಆಯ್ಕೆ ಮಾಡುವುದು ನೀವು ನಿಮ್ಮ ಬದುಕಲ್ಲಿ ಮಾಡುವ ಅತ್ಯಂತ ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ಪಠ್ಯಕ್ರಮವು ಒಂದು ಭಾಗವಷ್ಟೇ, ಆದರೆ ಎಂಬಿಎ ಸಂದರ್ಭದಲ್ಲಿ ದೊರೆಯುವ ನೆಟ್ ವರ್ಕ್, ಹೆಚ್ಚು ಆತ್ಮವಿಶ್ವಾಸ ಮತ್ತು ಅನಂತ ಸಾಧ್ಯತೆಗಳು ನಿಮ್ಮ ವೃತ್ತಿಯನ್ನು ದಶಕಗಳವರೆಗೆ ರೂಪಿಸ ಬಹುದಾಗಿದೆ.
ನಮ್ಮ ಡೇಟಾ ಪ್ರಕಾರ, ಸರಿಯಾದ ಕೋರ್ಸ್ ವ್ಯಕ್ತಿಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ಪದವಿ ಪಡೆದ ಬಳಿಕವೂ ನಿಮಗೆ ಸಹಾಯ ಮಾಡುವ ಒಂದು ಉತ್ತಮ ಸಮುದಾಯವನ್ನು ನಿರ್ಮಿಸುತ್ತದೆ. ಈ ಪಟ್ಟಿಯ ಮೂಲಕ ಎಂಬಿಎ ಆಕಾಂಕ್ಷಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಅತ್ಯುತ್ತಮ ಕೌಶಲ್ಯ ಮತ್ತು ನೆರವನ್ನು ಎಲ್ಲಿ ಪಡೆಯಬಹುದು ಎಂಬುದರ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ನೀಡುತ್ತಿದ್ದೇವೆ ಮತ್ತು ಇದರಿಂದ ಅವರು ಬೆಳೆಯಲು, ನಾಯಕತ್ವ ವಹಿಸಲು ಮತ್ತು ಯಶಸ್ವಿಯಾಗಲು ಸಹಾಯಕವಾದ ನಿರ್ಧಾರ ಗಳನ್ನು ತೆಗೆದುಕೊಳ್ಳಬಹುದು” ಎಂದು ಹೇಳಿದರು.
ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ನ ಡೀನ್ ಮತ್ತು ಪ್ರೊಫೆಸರ್ ಮದನ್ ಪಿಲ್ಲುಟ್ಲಾ ಮಾತನಾ ಡಿ, “ಎಂಬಿಎ ಎನ್ನುವುದು ತಮ್ಮ ವೃತ್ತಿ ಬೆಳವಣಿಗೆಯನ್ನು ವೇಗಗೊಳಿಸಲು, ದೃಷ್ಟಿಕೋನವನ್ನು ವಿಸ್ತಾರಗೊಳಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವದ ಅವಕಾಶಗಳನ್ನು ಪಡೆಯಲು ಬಯಸುವವರಿಗೆ ಉತ್ತಮ ಪದವಿಯಾಗಿದೆ. ಐಎಸ್‌ಬಿಯಲ್ಲಿನ ನಮ್ಮ ಒಂದು ವರ್ಷದ ಪಿಜಿಪಿ ಕೋರ್ಸ್ ಕೌಶಲ್ಯಗಳನ್ನು ಕಲಿಸುವುದಷ್ಟೇ ಅಲ್ಲ, ಬದಲಾಗುತ್ತಿರುವ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಾದ ಕಲಿಕಾ ಸಾಮರ್ಥ್ಯವನ್ನು ಬೆಳೆಸುತ್ತದೆ. ನಾವು ನಮ್ಮ ವಿದ್ಯಾರ್ಥಿಗಳಿಗೆ ನಾಯಕತ್ವದ ಆತ್ಮವಿಶ್ವಾಸವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ವಿಶ್ವಾದ್ಯಂತ 20,000ಕ್ಕೂ ಹೆಚ್ಚು ಐಎಸ್‌ಬಿ ಹಳೆಯ ವಿದ್ಯಾರ್ಥಿಗಳ ಸಮುದಾಯವು ಪಿಜಿಪಿ ಕೋರ್ಸ್ ನ ತರಗತಿಯಾಚೆಗೂ ವಿದ್ಯಾರ್ಥಿಗಳ ಪಯಣವನ್ನು ಸಮೃದ್ಧಗೊಳಿಸುತ್ತಿದೆ” ಎಂದು ಹೇಳಿದರು.
ಲಿಂಕ್ಡ್ ಇನ್‌ನ 2025ರ ಟಾಪ್ ಎಂಬಿಎ ಜಾಗತಿಕ ಪಟ್ಟಿಯ ಟಾಪ್ 20 ಸಂಸ್ಥೆಗಳು:
1 ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ
2 ಹಾರ್ವರ್ಡ್ ಯೂನಿವರ್ಸಿಟಿ
3 ಇನ್‌ಸೀಡ್
4 ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ
5 ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್
6 ನಾರ್ಥ್‌ವೆಸ್ಟರ್ನ್ ಯೂನಿವರ್ಸಿಟಿ
7 ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
8 ಡಾರ್ಟ್‌ಮೌತ್ ಕಾಲೇಜ್
9 ಕೊಲಂಬಿಯಾ ಯೂನಿವರ್ಸಿಟಿ
10 ಯೂನಿವರ್ಸಿಟಿ ಆಫ್ ಲಂಡನ್
11 ಯೂನಿವರ್ಸಿಟಿ ಆಫ್ ಚಿಕಾಗೊ
12 ಯೂನಿವರ್ಸಿಟಿ ಆಫ್ ಆಕ್ಸ್‌ಫರ್ಡ್
13 ಡ್ಯೂಕ್ ಯೂನಿವರ್ಸಿಟಿ
14 ಯೇಲ್ ಯೂನಿವರ್ಸಿಟಿ
15 ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್‌ಲೇ
16 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ - ಕೋಲ್ಕತ್ತಾ
17 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ - ಅಹಮದಾಬಾದ್
18 ಯೂನಿವರ್ಸಿಟಿ ಆಫ್ ವರ್ಜೀನಿಯಾ
19 ಕಾರ್ನೆಲ್ ಯೂನಿವರ್ಸಿಟಿ
20 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ - ಬೆಂಗಳೂರು
ಎಂಬಿಎ ಕಲಿಯುವ ವೃತ್ತಿಪರರಿಗೆ ವೃತ್ತಿಯಲ್ಲಿ ಬೆಳೆಯಲು ನಿರಾಜಿತಾ ಅವರಿಂದ ಕೆಲವು ಸಲಹೆಗಳು:
- ಮನ್ನಣೆ ಗಳಿಸುವುದಷ್ಟೇ ಅಲ್ಲ ಸಂಪರ್ಕಗಳನ್ನು ಬೆಳೆಸಿ: ನೆಟ್ ವರ್ಕಿಂಗ್ ಅನ್ನು ಅಥವಾ ಸಂಪರ್ಕ ಬೆಳೆಸುವುದನ್ನು ನಿಮ್ಮ ಪಠ್ಯಕ್ರಮದ ಪ್ರಮುಖ ಭಾಗವನ್ನಾಗಿ ಪರಿಗಣಿಸಿ. ಕಾರ್ಯಕ್ರಮಗಳಿಗೆ ಹಾಜರಾಗಿ, ನೀವು ಭೇಟಿಯಾಗುವ ಜನರನ್ನು ಲಿಂಕ್ಡ್ ಇನ್‌ನಲ್ಲಿ ನಿಮ್ಮ ನೆಟ್ ವರ್ಕ್ ಗೆ ಸೇರಿಸುವ ಮೂಲಕ ನಿಮ್ಮ ನೆಟ್ ವರ್ಕ್ ಅನ್ನು ಸಕ್ರಿಯವಾಗಿ ಬೆಳೆಸಿ.
- ಸಹಯೋಗದ ಕಲೆಯನ್ನು ಕರಗತ ಮಾಡಿಕೊಳ್ಳಿ: ನಿಮ್ಮ ಕೋರ್ಸ್ ಗೆ ಟೀಮ್- ಆಧಾರಿತ ಸ್ವರೂಪವನ್ನು ಅಳವಡಿಸಿಕೊಳ್ಳಿ. ಪ್ರತಿಯೊಂದು ಗ್ರೂಪ್ ಪ್ರೊಜೆಕ್ಟ್ ಅನ್ನು ಕೂಡ ಸಂವಹನ, ನಾಯಕತ್ವ ಮತ್ತು ಸಹಯೋಗದಲ್ಲಿ ಸಮಸ್ಯೆ-ಪರಿಹಾರ ಮುಂತಾದ ಅಗತ್ಯ ಸಾಫ್ಟ್ ಸ್ಕಿಲ್ ಗಳನ್ನು ಬೆಳೆಸಿಕೊಳ್ಳಲು ಒಂದು ಉತ್ತಮ ಕಾರ್ಯಾಗಾರವಾಗಿ ಭಾವಿಸಿ.
- ನಿಮ್ಮ ಕೌಶಲ್ಯ ಅಭಿವೃದ್ಧಿ ಪಯಣವನ್ನು ದಾಖಲಿಸಿ: ನೀವು ಅಧ್ಯಯನ ಮಾಡುವಾಗ ಕಲಿತುಕೊಳ್ಳುವ ಪ್ರಾಯೋಗಿಕ ಮತ್ತು ಕಲಿಸಬಹುದಾದ ಕೌಶಲ್ಯಗಳ ಬಗ್ಗೆ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡುವ ಮೂಲಕ ನಿಮ್ಮ ಪ್ರೊಫೆಷನಲ್ ಬ್ರಾಂಡ್ ಅನ್ನು ನಿರ್ಮಿಸಲು ಪ್ರಾರಂಭಿಸಿ. ನೀವು ಆಸಕ್ತಿ ಹೊಂದಿರುವ ವಿಷಯವನ್ನು ಹಂಚಿಕೊಳ್ಳುವುದರಿಂದ ಆ ವಿಷಯಲ್ಲಿನ ನಿಮ್ಮ ತಜ್ಞತೆಯನ್ನು ಹೇಳಿದಂತಾಗುತ್ತದೆ ಮತ್ತು ಅದಕ್ಕೆ ಸಂಬಂಧಿತ ನೆಟ್ ವರ್ಕ್ ಅನ್ನು ಗಳಿಸಬಹುದು.
- ತರಗತಿಯ ಕಲಿಕೆಯಾಚೆಗೆ ದೃಷ್ಟಿಹಾಯಿಸಿ: ಸ್ಪರ್ಧೆಗಳು, ಸಾಂಸ್ಕೃತಿಕ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ್ತು ವಿದ್ಯಾರ್ಥಿ ಕ್ಲಬ್ ಗಳಿಗೆ ಸೇರಿ. ಇವು ಕೇವಲ ಪಠ್ಯೇತರ ಚಟುವಟಿಕೆಗಳಲ್ಲ, ಪ್ರೆಸೆಂಟೇಷನ್ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಗಮನಾರ್ಹ ಸಾಧನೆಯ ದಾಖಲೆಯನ್ನು ನಿರ್ಮಿಸಲು ಇವು ಪ್ರಮುಖ ತರಬೇತಿ ಕ್ಷೇತ್ರಗಳಾಗಿವೆ.
- ಕಲಿಕೆಯನ್ನು ವಾಸ್ತವ ಜಗತ್ತಲ್ಲಿ ಅನ್ವಯಿಸಿ: ಅಧ್ಯಯನದ ಜೊತೆಗೆ ಇಂಟರ್ನ್‌ಶಿಪ್, ನಾಯ ಕತ್ವದ ಹುದ್ದೆಗಳು ಮತ್ತು ಅರೆಕಾಲಿಕ ಅವಕಾಶಗಳನ್ನು ಹುಡುಕಿ, ಇದರಿಂದ ಪ್ರಾಯೋಗಿಕ ಪ್ರಯೋಜನವನ್ನು ಪಡೆಯಬಹುದು. ಈ ಪ್ರಾಯೋಗಿಕ ಅನುಭವವು ಪದವಿ ಪಡೆದ ಬಳಿಕ ನಿಮ್ಮನ್ನು ವಿಭಿನ್ನವಾಗಿ ಕಾಣಿಸಲು ಸಹಾಯ ಮಾಡುತ್ತದೆ.