ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇನ್‌ಫ್ಲೂಯೆಂಜಾ ಲಸಿಕೆ: ಜಾಗತಿಕ ಮಾರ್ಗಸೂಚಿಗಳಲ್ಲಿನ ಬದಲಾವಣೆಗೆ ಭಾರತದ ಸಹಮತ; ತುರ್ತು ಗಮನ ಹರಿಸಲು ಒಲವು

ವಿಶ್ವದಾದ್ಯಂತ ಕಂಡುಬರುವ ಇನ್‌ಫ್ಲೂಯೆಂಜಾ, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಸ್ವರೂಪದ ಆತಂಕವಾಗಿದೆ.  ವೈರಸ್‌ಗಳಿಂದ ಬರುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆ ಯಾಗಿರುವ ಇನ್‌ಫ್ಲೂಯೆಂಜಾ- ಜ್ವರ, ಗಂಟಲು ನೋವು, ತೀವ್ರ ತಲೆನೋವು, ಕೆಮ್ಮು ಮತ್ತು ಅಸ್ವಸ್ಥತೆ ಉಂಟು ಮಾಡುತ್ತದೆ. ಇದು ಪ್ರತಿ ವರ್ಷ ವಿಶ್ವದಾದ್ಯಂತ ಅಂದಾಜು 4,00,000 ಉಸಿರಾಟದ ಸೋಂಕು ಮತ್ತು 3,00,000 ಸಾವುಗಳಿಗೆ ಕಾರಣವಾಗುತ್ತಿದೆ.

ಜ್ವರದ ಲಸಿಕೆ ಬಳಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)  ಶಿಫಾರಸಿಗೆ ಅನುಗುಣವಾಗಿ ಸೂಕ್ತ ಬದಲಾವಣೆ ಅಳವಡಿಸಿಕೊಳ್ಳಲು ಚಿಂತನೆ

ಬೆಂಗಳೂರು: ಇನ್‌ಫ್ಲೂಯೆಂಜಾ (ಜ್ವರ) ತಡೆಯುವ ಲಸಿಕೆಯ ಹೊಸ ಮಾರ್ಗಸೂಚಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಾಡಿರುವ ಶಿಫಾರಸುಗಳ ಕುರಿತು ಜೈಡಸ್ ಲೈಫ್ ಸೈನ್ಸಸ್ ಲಿಮಿಟೆಡ್ ಇಂದು ಇಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣವು,  ವೈರಸ್‌ ಗಳಿಂದ ಉಂಟಾಗುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿರುವ ಇನ್‌ಫ್ಲೂಯೆಂಜಾ ತಡೆಗಟ್ಟುವ ಕ್ರಮಗಳಿಗೆ ತುರ್ತಾಗಿ ಗಮನ ಹರಿಸಬೇಕಾಗಿರುವ ಅಗತ್ಯದ ಬಗ್ಗೆ ಬೆಳಕು ಚೆಲ್ಲಿತು.

ನಾವೀನ್ಯತೆಯು ಮುಂಚೂಣಿಯಲ್ಲಿ ಇರುವ ಜಾಗತಿಕ ಜೀವ ವಿಜ್ಞಾನ ಕಂಪನಿಯಾಗಿರುವ ಜೈಡಸ್ ಲೈಫ್ ಸೈನ್ಸಸ್ ಲಿಮಿಟೆಡ್ (ಇನ್ನು ಮುಂದೆ ಅದರ ಅಂಗಸಂಸ್ಥೆಗಳು ಸೇರಿದಂತೆ ʼ ಜೈಡಸ್ ʼ ಎಂದು ಉಲ್ಲೇಖ) ಆಯೋಜಿಸಿದ್ದ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ವೈದ್ಯಕೀಯ ವೃತ್ತಿಪರರು,  ಹೊಸ ಇನ್‌ಫ್ಲೂಯೆಂಜಾ ಲಸಿಕೆಯ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಬದಲಾವಣೆ ಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ.

ಉತ್ತರ ಗೋಳಾರ್ಧಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು  2025-26ರ ಈ ಹೊಸ ಮಾರ್ಗಸೂಚಿಗಳನ್ನು ಶಿಫಾರಸು ಮಾಡಿದೆ.

ಇದನ್ನೂ ಓದಿ: Vishweshwar Bhat Column: ರಾಜನೇ ಅರಸೊತ್ತಿಗೆ ಕಿತ್ತೊಗೆದು ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ !

ವಿಶ್ವದಾದ್ಯಂತ ಕಂಡುಬರುವ ಇನ್‌ಫ್ಲೂಯೆಂಜಾ,   ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಸ್ವರೂಪದ ಆತಂಕವಾಗಿದೆ.  ವೈರಸ್‌ಗಳಿಂದ ಬರುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿರುವ ಇನ್‌ಫ್ಲೂಯೆಂಜಾ- ಜ್ವರ, ಗಂಟಲು ನೋವು, ತೀವ್ರ ತಲೆನೋವು, ಕೆಮ್ಮು ಮತ್ತು ಅಸ್ವಸ್ಥತೆ ಉಂಟು ಮಾಡುತ್ತದೆ. ಇದು ಪ್ರತಿ ವರ್ಷ ವಿಶ್ವದಾದ್ಯಂತ ಅಂದಾಜು 4,00,000 ಉಸಿರಾಟದ ಸೋಂಕು ಮತ್ತು 3,00,000 ಸಾವುಗಳಿಗೆ ಕಾರಣವಾಗುತ್ತಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಋತುಮಾನಕ್ಕೆ ಅನುಗುಣವಾಗಿ ಕಂಡುಬರುವ ಸಾಂಕ್ರಾಮಿಕ ಜ್ವರಕ್ಕೆ ಪ್ರತಿಯಾಗಿ ಪ್ರತಿವರ್ಷ ಸರಿಸುಮಾರು ಅರ್ಧದಷ್ಟು (ಶೇ 50) ಜನಸಂಖ್ಯೆಗೆ ಲಸಿಕೆ ನೀಡಲಾಗುತ್ತದೆ. ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವನ್ನು (ಯುಐಪಿ) ಯಶಸ್ವಿಯಾಗಿ ಕಾರ್ಯಗತ ಗೊಳಿಸುತ್ತಿರುವ ಭಾರತವು ತಡೆಗಟ್ಟಬಹುದಾದ ಇಂತಹ ರೋಗಗಳನ್ನು ಎದುರಿಸಲು ಸಮರ್ಥವಾಗಿದೆ.  ಭಾರತದಲ್ಲಿ ಜ್ವರ ಲಸಿಕೆಯ ಅಗತ್ಯವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಗಿಲ್ಲ. ಜನಸಂಖ್ಯೆಯ ಶೇಕಡ 1.5ಕ್ಕಿಂತ ಕಡಿಮೆ ಜನರು ಮಾತ್ರ ಈ ಲಸಿಕೆ ಪಡೆಯು ತ್ತಿದ್ದಾರೆ.

ಜೈಡಸ್ ಲೈಫ್ ಸೈನ್ಸಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಡಾ. ಶರ್ವಿಲ್ ಪಟೇಲ್ ಅವರು ಮಾತನಾಡಿ, "ಉತ್ತಮ ಆರೋಗ್ಯದ ಚಿಂತನೆಯು ಕಾಯಿಲೆ ತಡೆಗಟ್ಟುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಲಸಿಕೆಗಳು ಜನರ ಜೀವ ರಕ್ಷಿಸುವಲ್ಲಿ ಮತ್ತು ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇನ್‌ಫ್ಲೂಯೆಂಜಾ ವು ಪುನರಾವರ್ತಿತ ಸವಾಲನ್ನು ಒಡ್ಡುತ್ತಲೇ ಇದೆ. ಇದು ಋತುಮಾನಕ್ಕೆ ಅನುಗುಣವಾಗಿ ಏಕಾಏಕಿ ಜ್ವರ ಹರಡುವಿಕೆಗೆ ಕಾರಣವಾಗುತ್ತದೆ ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಗಣನೀಯ ಹೊರೆ ಬೀಳುವಂತೆ ಮಾಡುತ್ತದೆ.

ಜ್ವರದ ಸೋಂಕಿನ ಹರಡುವಿಕೆ, ರೋಗದ ತೀವ್ರತೆ ಕಡಿಮೆ ಮಾಡುವಲ್ಲಿ ಮತ್ತು ವಿಶೇಷವಾಗಿ ಹೆಚ್ಚಿನ ಅಪಾಯದ ಮತ್ತು ದುರ್ಬಲ ಗುಂಪುಗಳಲ್ಲಿ ಕಾಯಿಲೆಯ ಸಂಕೀರ್ಣತೆ ತಡೆಗಟ್ಟುವಲ್ಲಿ ಲಸಿಕೆಯು ಪ್ರಮುಖ ಪಾತ್ರ ವಹಿಸುತ್ತದೆ. ಸಕಾಲಿಕವಾಗಿ ಲಸಿಕೆ ನೀಡುವುದನ್ನು ಉತ್ತೇಜಿಸುವ, ಇನ್‌ಫ್ಲೂಯೆಂಜಾಕ್ಕೆ ಕಡಿವಾಣ ಹಾಕುವ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕಾಯಿಲೆ ತಡೆಗಟ್ಟುವ ಆರೋಗ್ಯ ರಕ್ಷಣೆಯ ನೀತಿಯನ್ನು ಮುಂದುವರಿಸಲು ನಾವು ಜೈಡಸ್ ನಲ್ಲಿ ಬದ್ಧರಾಗಿದ್ದೇವೆʼ ಎಂದು ಹೇಳಿದ್ದಾರೆ.

ಉತ್ತರ ಗೋಳಾರ್ಧದ ಇನ್‌ಫ್ಲೂಯೆಂಜಾ ತಳಿಗಳಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) 2025-26ರ ಶಿಫಾರಸುಗಳ ಅನ್ವಯ, 2020ರ ಮಾರ್ಚ್ನಿಂದ ನೈಸರ್ಗಿಕವಾಗಿ ಸಂಭವಿಸುವ ಬಿ/ಯಮಗಾಟಾ ವಂಶಾವಳಿಯ ವೈರಸ್‌ಗಳ ನಿರಂತರ ಅನುಪಸ್ಥಿತಿಯು ಸೋಂಕಿನ ಕಡಿಮೆ ಅಪಾಯವನ್ನು ಸೂಚಿಸುತ್ತದೆ. ಇದರ ಪರಿಣಾಮವಾಗಿ, ಕ್ವಾಡ್ರಿವೇಲೆಂಟ್ ಇನ್‌ ಫ್ಲೂಯೆಂಜಾ ಲಸಿಕೆಗಳಲ್ಲಿ ದೇಹದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆ ಉಂಟುಮಾಡುವ ಬಿ/ಯಮಗಾಟಾ ಪ್ರತಿಜನಕ (ಆ್ಯಂಟಿಜೆನ್) ಸೇರಿಸುವುದು ಇನ್ನು ಮುಂದೆ ಅಗತ್ಯವೆಂದು ಪರಿಗಣಿಸಲಾಗುವು ದಿಲ್ಲ. ಇದಕ್ಕೆ ಪೂರಕವಾಗಿ, ಸಿಡಿಸಿ 2024–25 ಋತು 3 ರಿಂದ ಪ್ರಾರಂಭವಾಗುವ ಇನ್‌ಫ್ಲೂಯೆಂಜಾ ಲಸಿಕೆಗಳಿಂದ ಬಿ/ಯಮಗಾಟಾ ಘಟಕವನ್ನು ಹೊರಗಿಡಲಾಗಿದೆ. ಈ ನಿರ್ಧಾರವು ಜಾಗತಿಕ ಕಣ್ಗಾವಲು ದತ್ತಾಂಶವನ್ನು ಪ್ರತಿಬಿಂಬಿಸುತ್ತದೆ.  ಸುಧಾರಿತ ಪರಿಣಾಮಕಾರಿತ್ವ ಮತ್ತು ಉತ್ಪಾದನಾ ದಕ್ಷತೆಗಾಗಿ ಲಸಿಕೆಯ ಸಂಯೋಜನೆಯನ್ನು ಸುಗಮಗೊಳಿಸುವ ಗುರಿ ಹೊಂದಿದೆ.

ಭಾರತದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಕೂಡ, ಇನ್‌ಫ್ಲೂಯೆಂಜಾ ಮತ್ತು ಇನ್‌ಫ್ಲೂಯೆಂಜಾ ತರಹದ ಕಾಯಿಲೆಗಳನ್ನು ತಡೆಗಟ್ಟಲು, ಲಸಿಕೆಯ ಇತ್ತೀಚಿನ ತಳಿಯನ್ನು ಅಳವಡಿಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಯ  (ಡಬ್ಲ್ಯುಎಚ್ಒ) ಮಾರ್ಗಸೂಚಿಗಳನ್ನು ಅನು ಸರಿಸಲು ಶಿಫಾರಸು ಮಾಡಿದೆ. ಶಿಶುಗಳು, ವೃದ್ಧರು ಮತ್ತು ದೀರ್ಘಕಾಲದ ಪರಿಸ್ಥಿತಿಗಳನ್ನು ಹೊಂದಿ ರುವವರ ಮೇಲೆ ಈ ರೋಗವು ಅಸಮಾನ ರೀತಿಯಲ್ಲಿ ಪರಿಣಾಮ ಬೀರುತ್ತಿದೆ.

ಭಾರತದಲ್ಲಿ ವರ್ಷವಿಡೀ ವಿಭಿನ್ನ ಋತುಮಾನಕ್ಕೆ ಅನುಗುಣವಾಗಿ ಇನ್‌ಫ್ಲೂಯೆಂಜಾ ಸೋಂಕು ಗಳು ಸಂಭವಿಸುತ್ತವೆ. ಮಳೆಗಾಲ ಮತ್ತು ಚಳಿಗಾಲದ ಋತುಗಳಲ್ಲಿ ಸೋಂಕಿನ ಪ್ರಕರಣಗಳು ಗರಿಷ್ಠ ಪ್ರಮಾಣದಲ್ಲಿ ವರದಿಯಾಗುತ್ತವೆ. ಪ್ರತಿ ವರ್ಷ ಇನ್‌ಫ್ಲೂಯೆಂಜಾ, ಗಣನೀಯ ಪ್ರಮಾಣದಲ್ಲಿ ಕಾಯಿಲೆ ಹರಡಲು ಮತ್ತು ಸಾವುಗಳಿಗೆ ಕಾರಣವಾಗುತ್ತದೆ. ಆದರೆ, ಇನ್‌ಫ್ಲೂಯೆಂಜಾ ಕ್ಕೆ ನಿಯಮಿತ ಪರೀಕ್ಷೆ ಮತ್ತು ದೃಢವಾದ ಕಣ್ಗಾವಲು ನಡೆಸದ ಕಾರಣ ಇನ್‌ಫ್ಲೂಯೆಂಜಾ ದಿಂದ ಸಂಭವಿಸುವ ಸಾವುಗಳ ಸಂಖ್ಯೆಯನ್ನು ಅಂದಾಜು ಮಾಡುವುದು ಸವಾಲಿನ ಕೆಲಸವಾಗಿದೆ.   ಸಾವಿಗೆ ಇನ್‌ಫ್ಲೂಯೆಂಜಾ ಕಾರಣವಾಗಿದೆ ಎಂಬುದನ್ನು ವಿರಳವಾಗಿ ಪ್ರಮಾಣೀಕರಿಸಲ್ಪಡುತ್ತದೆ.

ವರ್ಷಕ್ಕೆ ಇನ್‌ಫ್ಲೂಯೆಂಜಾ ದ ಕಾರಣಕ್ಕೆ ಸಂಭವಿಸುವ 1.27 ಲಕ್ಷ ಸಾವುಗಳಲ್ಲಿ, ಸರಿ ಸುಮಾರು ಶೇಕಡ 65ರಷ್ಟು ಸಾವುಗಳು 65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸಂಭವಿಸಿವೆ ಮತ್ತು ಶೇ 15 ರಿಂದ ಶೇ 20ರಷ್ಟು ಸಾವುಗಳು ಐದು ವರ್ಷದೊಳಗಿನ ಮಕ್ಕಳಲ್ಲಿ ಸಂಭವಿಸಿವೆ. ಸದ್ಯಕ್ಕೆ ಜ್ವರ ಹರಡುವ ತಳಿಗಳನ್ನು ಅವಲಂಬಿಸಿ ಅಗತ್ಯವಾದ ಲಸಿಕೆ ಸಂಯೋಜನೆಯೊಂದಿಗೆ ರಾಷ್ಟ್ರೀಯವಾಗಿ ಗುರುತಿಸ ಲಾಗಿರುವ ಸಮೂಹಗಳಿಗೆ ವಾರ್ಷಿಕ ಲಸಿಕೆಗಳನ್ನು ಕಡ್ಡಾಯಗೊಳಿಸಲಾಗಿದೆ.

ಭಾರತದಲ್ಲಿ ಜ್ವರ (ಫ್ಲೂ) ತಡೆಗಟ್ಟುವ ಲಸಿಕೆಗಳ ಅತಿದೊಡ್ಡ ತಯಾರಕರಲ್ಲಿ ಒಂದಾಗಿರುವ ಜೈಡಸ್ - ಇನ್‌ಫ್ಲೂಯೆಂಜಾ , ಇನ್‌ಫ್ಲೂಯೆಂಜಾ ತರಹದ ಕಾಯಿಲೆಗಳು ಮತ್ತು ಸುಲಭವಾಗಿ ಕಾಯಿಲೆಗೆ ಗುರಿಯಾಗುವ ಅಪಾಯದ ಗುಂಪಿನಲ್ಲಿ ಕಾಯಿಲೆಗೆ ಸಂಬಂಧಿತ ಇತರ ಅಡೆತಡೆ ಗಳನ್ನು ತಡೆಗಟ್ಟುವ ಆರೋಗ್ಯ ಉಪಕ್ರಮಗಳು ಮತ್ತು ಸಕಾಲಿಕವಾಗಿ ಲಸಿಕೆ ನೀಡುವುದನ್ನು ಬಲವಾಗಿ ಪ್ರತಿಪಾದಿಸುತ್ತಿದೆ.