ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಂಜಾಬ್‌ ನಲ್ಲಿ ನೆರೆಯಿಂದ ತೊಂದರೆಗೊಳಗಾದ ಗ್ರಾಹಕರಿಗೆ ನೆರವಾಗಲು ವಿಪತ್ತು ಪರಿಹಾರ ಕಾರ್ಯ ಪ್ರಾರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ

ಹಲವಾರು ವರ್ಷಗಳಿಂದ ಸ್ಯಾಮ್‌ ಸಂಗ್ ಸಂಸ್ಥೆಯು ಕಷ್ಟಕರ ಸಂದರ್ಭಗಳಲ್ಲಿ ಜನರಿಗೆ ನೆರವು ಒದಗಿಸಲು ವಿವಿಧ ಯೋಜನೆಯಗಳನ್ನು ಹಾಕಿಕೊಂಡು ಬರುತ್ತಿದೆ. ಶ್ರೀನಗರದ ವ್ಯಾಲಿ ಆಫ್ ಹೋಪ್ (2014), ಕೇರ್ ಫಾರ್ ಕೇರಳ (2018) ಮತ್ತು ಕೇರ್ ಫಾರ್ ಮಹಾರಾಷ್ಟ್ರ (2019) ಯೋಜನೆ ಗಳು ಅದಕ್ಕೆ ಉತ್ತಮ ಉದಾಹರಣೆಗಳಾಗಿವೆ.

ದೇಶದ ಯಾವುದೇ ಭಾಗದಲ್ಲಿ ತ್ವರಿತವಾಗಿ ತೊಂದರೆಗೊಳಗಾದ ಜನರಿಗೆ ಸೇವೆ ಸಲ್ಲಿಸಲು ಕೇರ್ ಕ್ಯಾಂಪ್ ವ್ಯವಸ್ಥೆ ಸಿದ್ಧವಾಗಿದೆ ಮತ್ತು ಪ್ರಮುಖ ನಗರಗಳಲ್ಲಿ ಸ್ಥಾಪಿತಗೊಂಡಿದೆ. ನೀರಿನಲ್ಲಿ ಮುಳುಗಿರುವ ಸ್ಮಾರ್ಟ್‌ ಫೋನ್‌ ಗಳು, ವಾಷಿಂಗ್ ಮೆಷಿನ್‌ ಗಳು ಟಿವಿಗಳು ಮತ್ತು ರೆಫ್ರಿಜರೇಟರ್‌ ಗಳಿಗೆ ಸಂಬಂಧಿಸಿದಂತೆ ಸೇವಾ ವಿನಂತಿ ಸಲ್ಲಿಸಬಹುದು. ಹಾನಿಗೊಳಗಾದ ಉಪಕರಣಗಳಿಂದ ಸ್ಯಾಮ್‌ ಸಂಗ್ ಗ್ರಾಹಕ ಸೇವೆ ವಿಭಾಗಕ್ಕೆ ಬರುವ ಸೇವಾ ಕರೆಗಳಲ್ಲಿ ಶೇ.30ರಷ್ಟು ಏರಿಕೆಯಾಗಿದೆ.

ಬೆಂಗಳೂರು: ಸ್ಯಾಮ್‌ ಸಂಗ್ ಇಂಡಿಯಾ ಸಂಸ್ಥೆಯು ಪಂಜಾಬ್ ನಲ್ಲಿ ಉಂಟಾದ ಅಕಾಲಿಕ ಪ್ರವಾಹದಿಂದ ಬಾಧಿತರಾದ ಗ್ರಾಹಕರಿಗೆ ಮತ್ತು ಜನರಿಗೆ ಸಕಾಲಿಕ ಬೆಂಬಲ ಒದಗಿಸಲು ಪಂಜಾಬ್‌ ನಲ್ಲಿ ತನ್ನ ವಿಶೇಷ ವಿಪತ್ತು ಪರಿಹಾರ ಕಾರ್ಯವನ್ನು ಪ್ರಾರಂಭಿಸಿದೆ.

ಈ ಕಾರ್ಯಕ್ರಮವನ್ನು ನೆರೆ ಪೀಡಿತ ಪ್ರದೇಶಗಳಲ್ಲಿ ಮೂಲಭೂತ ಗೃಹೋಪಯೋಗಿ ನೆರವು ಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದ್ದು, ಕೇರ್ ಕ್ಯಾಂಪ್ ಗಳ ಮೂಲಕ ಮೂಲಭೂತ ಉಪಕರಣಗಳು ಮತ್ತು ತುರ್ತು ಕಿಟ್‌ ಗಳನ್ನು ಒದಗಿಸಲಾಗುತ್ತಿದೆ.

ಹಲವಾರು ವರ್ಷಗಳಿಂದ ಸ್ಯಾಮ್‌ ಸಂಗ್ ಸಂಸ್ಥೆಯು ಕಷ್ಟಕರ ಸಂದರ್ಭಗಳಲ್ಲಿ ಜನರಿಗೆ ನೆರವು ಒದಗಿಸಲು ವಿವಿಧ ಯೋಜನೆಯಗಳನ್ನು ಹಾಕಿಕೊಂಡು ಬರುತ್ತಿದೆ. ಶ್ರೀನಗರದ ವ್ಯಾಲಿ ಆಫ್ ಹೋಪ್ (2014), ಕೇರ್ ಫಾರ್ ಕೇರಳ (2018) ಮತ್ತು ಕೇರ್ ಫಾರ್ ಮಹಾರಾಷ್ಟ್ರ (2019) ಯೋಜನೆ ಗಳು ಅದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಈ ಯೋಜನೆಗಳು ಸಾವಿರಾರು ಜನರಿಗೆ ಮೂಲಭೂತ ಸೌಕರ್ಯಗಳನ್ನು ಹೊಂದಲು, ತಮ್ಮ ಜೀವನವನ್ನು ಮರುರೂಪಿಸಿಕೊಳ್ಳಲು ಮತ್ತು ಕಷ್ಟದ ಸಂದರ್ಭದಲ್ಲಿ ಭರವಸೆ ಕಾಣಲು ಸಹಾಯ ಮಾಡಿವೆ.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪ್ರತೀ ಅಗತ್ಯ ಸಂದರ್ಭಕ್ಕೆ ಕೇರ್ ಕ್ಯಾಂಪ್

ಪಂಜಾಬ್‌ ನ ಗುರದಾಸ್‌ ಪುರದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದ ಸಾಕಷ್ಟು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಲ್ಲಿ ಸ್ಯಾಮ್‌ ಸಂಗ್ ಸಂಸ್ಥೆಯು ತನ್ನ ಸಂಪರ್ಕ ಕೇಂದ್ರಗಳು ಮತ್ತು ಸೇವಾ ಕೇಂದ್ರಗಳ ಮೂಲಕ ಸಹಾಯ ಅವಶ್ಯವಿರುವವರಿಂದ ವಿನಂತಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಜನರು ನಿರಂತರವಾಗಿ ನೆರವು ಪಡೆಯಲು ಕ್ಯಾಂಪ್ ಅನ್ನು ಸಂಪರ್ಕಿಸುತ್ತಿದ್ದಾರೆ. ಈ ಕುರಿತು ಹೆಚ್ಚು ಗ್ರಾಮಗಳಿಗೆ ಮಾಹಿತಿ ಹರಡುತ್ತಿದ್ದಂತೆ ನೆರವು ಕೋರುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ನೀರಿನಲ್ಲಿ ಮುಳುಗಿರುವ ಸ್ಮಾರ್ಟ್‌ ಫೋನ್‌ ಗಳು, ವಾಷಿಂಗ್ ಮೆಷಿನ್‌ ಗಳು ಮತ್ತು ರೆಫ್ರಿಜರೇಟರ್‌ ಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿನಂತಿಗಳು ಬರುತ್ತಿವೆ. ಇವು ಕುಟುಂಬಗಳು ದೈನಂದಿನ ಜೀವನ ದಲ್ಲಿ ಅವಲಂಬಿಸಿರುವ ಅತ್ಯಗತ್ಯ ಉಪಕರಣಗಳಾಗಿದ್ದು, ಅವುಗಳನ್ನು ಸರಿ ಮಾಡುವುದು ಅವಶ್ಯ ವಾಗಿದೆ. ತ್ವರಿತ ಪರಿಹಾರವನ್ನು ಒದಗಿಸಲು ಸ್ಯಾಮ್‌ ಸಂಗ್ ಸಂಸ್ಥೆಯು ತನ್ನ ಗ್ರಾಹಕ ಸೇವಾ ತಂಡಗಳನ್ನು ಸಹಾಯ ಮಾಡಲು ಸ್ಥಳದಲ್ಲಿ ನಿಯೋಜಿಸಿದೆ.

ಈ ಕ್ಯಾಂಪ್‌ ಗಳ ಬಗ್ಗೆ ಜನರಿಗೆ ತಿಳಿಯಪಡಿಸಲು, ಅಧಿಕೃತ ಸರ್ವೀಸ್ ಸೆಂಟರ್ ಗಳಲ್ಲಿ ಮತ್ತು ಶಾಖಾ ಕಚೇರಿಗಳಲ್ಲಿ ಪೋಸ್ಟರ್‌ ಗಳನ್ನು ಅಂಟಿಸಲಾಗಿದೆ. ಜೊತೆಗೆ ಸ್ಯಾಮ್‌ ಸಂಗ್ ಮೆಂಬರ್ಸ್‌ ಗ್ರೂಪ್ ನಲ್ಲಿ ಮಾಹಿತಿ ತಿಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಗಳನ್ನು ಹಾಕಲಾ ಗಿದೆ ಮತ್ತು ಪಂಜಾಬ್‌ ನ ನೆರೆಪೀಡಿತ ಗ್ರಾಮಗಳಲ್ಲಿ ಈ ಕುರಿತು ವಾಹನಗಳಲ್ಲಿ ಘೋಷಣೆ ಕೂಗ ಲಾಗುತ್ತಿದೆ.

ಪಂಜಾಬ್‌ ನ ಹೊರತಾಗಿ ಸ್ಯಾಮ್ ಸಂಗ್ ಸಂಸ್ಥೆಯು ತುರ್ತು ಪರಿಸ್ಥಿತಿಗಳಲ್ಲಿ ನೆರವನ್ನು ಒದಗಿಸಲು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ದೊಡ್ಡ ಟೆಂಟ್‌ ಗಳನ್ನು ಮತ್ತು ಅಗತ್ಯ ಪರಿಹಾರ ಕಿಟ್‌ ಗಳುಳ್ಳ ಕ್ಯಾಂಪ್ ಗಳನ್ನು ಸ್ಥಾಪಿಸಿದೆ.

ಈ ಮೊಬೈಲ್ ಕೇರ್ ಸೆಂಟರ್ ಗಳು ನೆರೆ ಪೀಡಿತ ಪ್ರದೇಶಗಳಲ್ಲಿ ಈ ಕೆಳಗಿನ ನೆರವುಗಳನ್ನು ಒದಗಿಸುತ್ತವೆ:

  • ಸ್ಯಾಮ್‌ ಸಂಗ್ ವಾಷಿಂಗ್ ಮೆಷಿನ್‌ ಮೂಲಕ ಬಟ್ಟೆ ತೊಳೆಯುವ ಸೌಕರ್ಯ
  • ಸ್ಯಾಮ್‌ ಸಂಗ್ ರೆಫ್ರಿಜರೇಟರ್‌ ಗಳನ್ನು ಬಳಸಿಕೊಂಡು ಆಹಾರ ಸಂಗ್ರಹಣೆ ಮತ್ತು ಔಷಧಿ ಸಂಗ್ರಹ
  • ಸ್ಯಾಮ್‌ ಸಂಗ್ ಮೈಕ್ರೋವೇವ್ ಓವನ್‌ ಗಳೊಂದಿಗೆ ಬಿಸಿ ಊಟ ಒದಗಿಸುವಿಕೆ
  • ನಿರಂತರವಾಗಿ ನೀರಿನ ಪೂರೈಕೆಗಾಗಿ ಟ್ಯಾಂಕ್‌ ಗಳು, ಪಂಪ್‌ ಗಳು ಮತ್ತು ಜನರೇಟರ್‌ ಸೌಲಭ್ಯ, ಕುಡಿಯುವ ನೀರಿನ ಲಭ್ಯತೆ

ಪ್ರತೀ ಕ್ಯಾಂಪ್‌ ನಲ್ಲಿ ಟೇಬಲ್‌ ಗಳು, ಕುರ್ಚಿಗಳು, ಒಣಗಿಸುವ ರಾಕ್‌ ಗಳು, ಸಾಬೂನು, ಡಿಟರ್ಜೆಂಟ್‌ ಗಳು ಮತ್ತು ರಿಫ್ಲೆಕ್ಟರ್ ವೆಸ್ಟ್‌ ಗಳು, ಗ್ಲೌಸ್‌ ಗಳು ಮತ್ತು ಕ್ಯಾಪ್‌ ಗಳನ್ನು ಒಳಗೊಂಡ ಸುರಕ್ಷತಾ ಕಿಟ್‌ ಗಳು ಲಭ್ಯವಿದ್ದು, ಗ್ರಾಹಕರಿಗೆ ಮತ್ತು ಸಿಬ್ಬಂದಿಗೆ ಸುರಕ್ಷಿತ ಮತ್ತು ಶುಚಿಯಾದ ವಾತಾವರಣವನ್ನು ಒದಗಿಸಲಾಗುತ್ತದೆ.

ಕರ್ತವ್ಯ ಮೀರಿದ ಕಾಳಜಿ

ವಿಪತ್ತುಗಳು ಸಂಭವಿಸಿದ ಬಳಿಕ ಸಾಮಾನ್ಯವಾಗಿ ಸ್ಯಾಮ್‌ ಸಂಗ್ ಗ್ರಾಹಕ ಸೇವೆ ವಿಭಾಗಕ್ಕೆ ಬರುವ ಕರೆಗಳಲ್ಲಿ ಉಪಕರಣ ಹಾನಿಗಳಿಂದಾಗಿ ಶೇ.30ರಷ್ಟು ಕರೆಗಳು ಏರಿಕೆಯಾಗುತ್ತವೆ. ಕ್ಷೇತ್ರ ಮಟ್ಟದ ಗ್ರಾಹಕರ ಧ್ವನಿ ಪ್ರತಿಕ್ರಿಯೆಯ ಮಾರ್ಗದರ್ಶನದ ಮೂಲಕ ಸ್ಯಾಮ್‌ಸಂಗ್‌ ನ ಸೇವಾ ತಂಡಗಳು ಸನ್ನಿವೇಶವನ್ನು ತಕ್ಷಣವೇ ಮೌಲ್ಯಮಾಪನ ಮಾಡಿ, ನೆರೆಪೀಡಿತ ಗ್ರಾಹಕರಿಗೆ ನೆರವು ಒದಗಿಸಲು ವಿಪತ್ತು ಪರಿಹಾರ ಯೋಜನೆಯನ್ನು ಕಾರ್ಯಗತಗೊಳಿಸುತ್ತವೆ.

ಸ್ಯಾಮ್‌ ಸಂಗ್‌ ನ ನೆರವು ಯೋಜನೆಗಳ ಪರಂಪರೆ

ಭಾರತದಿಂದ ನೇಪಾಳದವರೆಗೆ, ಶ್ರೀಲಂಕಾದಿಂದ ಕಾಶ್ಮೀರದವರೆಗೆ ಸ್ಯಾಮ್‌ ಸಂಗ್‌ ಬಹಳಷ್ಟು ಕಡೆಗಳಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿದ್ದು, ವಿನೂತನ ಆವಿಷ್ಕಾರವು ಯಾವಾಗಲೂ ಮಾನವರ ನೆರವಿಗೆ ಧಾವಿಸಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಈ ಪರಂಪರೆಯ ಭಾಗವಾಗಿರುವ ವಿಪತ್ತು ಪರಿಹಾರ ಯೋಜನೆಯು ಸ್ಯಾಮ್‌ ಸಂಗ್‌ ನ ಬದ್ಧತೆ ಯನ್ನು ಬಲಪಡಿಸುತ್ತದೆ ಮತ್ತು ಸ್ಯಾಮ್ ಸಂಗ್ ಕೇವಲ ತಂತ್ರಜ್ಞಾನ ಕ್ಷೇತ್ರದ ನಾಯಕ ನಾಗಿರದೆ ಅಗತ್ಯ ಸಮಯದಲ್ಲಿ ಸಮಾಜಕ್ಕೆ ನೆರವು ಒದಗಿಸುತ್ತದೆ ಎಂಬುದನ್ನು ತೋರಿಸುತ್ತದೆ.