ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಆಕರ್ಷಕ ಹೂವಿನ ವಿನ್ಯಾಸ ಮತ್ತು ದೀರ್ಘಕಾಲೀನ ಕಾರ್ಯಕ್ಷಮತೆ ಒದಗಿಸುವ ಹೊಸ ಸಿಂಗಲ್ ಡೋರ್ ರೆಫ್ರಿಜರೇಟರ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಎಂಟು ಹೊಸ ಮಾಡೆಲ್ ಗಳೊಂದಿಗೆ ತನ್ನ ರೆಫ್ರಿಜರೇಟರ್ ಶ್ರೇಣಿಯನ್ನು ಸ್ಯಾಮ್‌ಸಂಗ್ ವಿಸ್ತರಿಸು ತ್ತಿದ್ದು, 183 ಲೀಟರ್ ಸಿಂಗಲ್ ಡೋರ್ ಶ್ರೇಣಿಯನ್ನು 19,999 ರೂಪಾಯಿ ಆರಂಭಿಕ ಬೆಲೆಯಲ್ಲಿ ಒದಗಿಸುತ್ತಿದೆ ಮತ್ತು ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಎರಡು ವಿನ್ಯಾಸಗಳಲ್ಲಿ ಲಭ್ಯವಿದೆ.

* ಸೌಂದರ್ಯ ಮತ್ತು ಸುಧಾರಿತ ತಂತ್ರಜ್ಞಾನ ಎರಡನ್ನೂ ಹೊಂದಿರುವ ಈ ಹೊಸ ಶ್ರೇಣಿಯು 20 ವರ್ಷಗಳ ವಾರಂಟಿ ಹೊಂದಿದೆ. ವಿಶೇಷವಾಗಿ ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್, ಸ್ಟೆಬಿಲೈಜರ್ ಮುಕ್ತ ಬಳಕೆ, ಆಕರ್ಷಕ ಎಲ್‌ಇಡಿ ಲೈಟಿಂಗ್, ಗಟ್ಟಿಮುಟ್ಟಾದ ಗಾಜಿನ ಶೆಲ್ಫ್‌ ಗಳು ಮತ್ತು ಪ್ರಾಯೋಗಿಕವಾದ ಬೇಸ್ ಸ್ಟ್ಯಾಂಡ್ ಡ್ರಾಯರ್ ಅನ್ನು ಒಳಗೊಂಡಿದೆ.

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಭಾರತೀಯ ಕುಟುಂಬಗಳ ಕೈಗೆಟುಕುವ ದರದ ಮತ್ತು ಸೊಗಸಾದ ರೆಫ್ರಿಜರೇಟರ್‌ ಗಳ ಅಗತ್ಯವನ್ನು ಪೂರೈಸಲು 183 ಲೀಟರ್ ಸಾಮರ್ಥ್ಯದ ತನ್ನ ಹೊಚ್ಚ ಹೊಸ ಸಿಂಗಲ್ ಡೋರ್ ರೆಫ್ರಿಜರೇಟರ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ.

ಬಿಗೋನಿಯಾ ಮತ್ತು ವೈಲ್ಡ್ ಲಿಲಿ ಎಂಬ ಎರಡು ಹೂವಿನ ವಿನ್ಯಾಸಗಳನ್ನು ಒಳಗೊಂಡ ಎಂಟು ಹೊಸ ಮಾಡೆಲ್ ಗಳು ಬಿಡುಗಡೆಯಾಗಿದ್ದು, ಇವು ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದೆ. 3 ಸ್ಟಾರ್ ಮತ್ತು 5 ಸ್ಟಾರ್ ಎನರ್ಜಿ ರೇಟಿಂಗ್‌ ಗಳನ್ನು ಹೊಂದಿರುವ ಈ ಹೊಸ ಶ್ರೇಣಿಯು ಅದ್ಭುತ ವಿನ್ಯಾಸ, ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದ್ದು ಮತ್ತು ಉತ್ತಮ ಗುಣಮಟ್ಟದ ಬಾಳಿಕೆ ಬರುವಂತೆ ರೂಪುಗೊಂಡಿವೆ. ದೈನಂದಿನ ಜೀವನದಲ್ಲಿ ಸ್ಟೈಲ್ ಮತ್ತು ವಿಶ್ವಾಸಾರ್ಹತೆಯನ್ನು ಬಯಸುವ ಕುಟುಂಬಗಳಿಗೆ ಇದು ಸೂಕ್ತ ಆಯ್ಕೆಯಾಗಿದೆ.

ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುವ ಈ ಹೊಸ ಸಿಂಗಲ್ ಡೋರ್ ರೆಫ್ರಿಜರೇಟರ್ ಶ್ರೇಣಿಯು ಆಧುನಿಕ ಭಾರತೀಯ ಮನೆಗಳಿಗೆ ಸೂಕ್ತವಾಗಿದೆ. ಬಿಗೋನಿಯಾ ಮತ್ತು ವೈಲ್ಡ್ ಲಿಲಿ ಹೂವಿನ ವಿನ್ಯಾಸಗಳು ಅಡುಗೆ ಮನೆಯ ಲುಕ್ ಅನ್ನು ಮತ್ತಷ್ಟು ಆಕರ್ಷಕ ಗೊಳಿಸಲು ರಚಿಸಲಾಗಿದ್ದು, ಬಾರ್ ಹ್ಯಾಂಡಲ್‌ ಜೊತೆಗೆ ಸೊಗಸಾದ ಗ್ರಾಂಡೆ ಡೋರ್ ವಿನ್ಯಾಸ ಹೊಂದಿದೆ. ಪ್ರೀಮಿಯಂ ಭಾವನೆ ಒದಗಿಸುವುದರ ಜೊತೆ ಅನುಕೂಲಕರ ಬಳಕೆಗೆ ನೆರವಾಗುವಂತೆ ಮೂಡಿ ಬಂದಿದೆ. ಆಕರ್ಷಕ ಬಣ್ಣಗಳು ಮತ್ತು ಸೊಗಸಾದ ವಿನ್ಯಾಸಗಳನ್ನು ಹೊಂದಿರುವ ಈ ರೆಫ್ರಿಜರೇಟರ್‌ಗಳು ಕೇವಲ ಉಪಕರಣಗಳು ಮಾತ್ರವೇ ಆಗಿಲ್ಲ, ಬದಲಿಗೆ ಸೌಂದರ್ಯ ಮತ್ತು ಕಾರ್ಯಕ್ಷಮತೆ ಎರಡನ್ನೂ ಒದಗಿಸುವ ಒಂದು ಸ್ಟೈಲ್ ಸ್ಟೇಟ್ ಮೆಂಟ್ ಆಗಿದೆ.

ಇದನ್ನೂ ಓದಿ: Vishweshwar Bhat Column: ಹೆಡ್‌ ವಿಂಡ್‌ ಮತ್ತು ಟೇಲ್‌ ವಿಂಡ್

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಡಿಜಿಟಲ್ ಅಪ್ಲೈಯನ್ಸಸ್ ವಿಭಾಗದ ಉಪಾಧ್ಯಕ್ಷ ಘುಫ್ರಾನ್ ಆಲಂ ಅವರು , “ಸ್ಯಾಮ್‌ಸಂಗ್‌ನ ವಿನ್ಯಾಸ ಪರಿಣತಿ ಮತ್ತು ತಾಂತ್ರಿಕ ಆವಿಷ್ಕಾರವನ್ನು ಒಟ್ಟಿಗೆ ಸೇರಿಸಿ ಈ ಹೊಸ ಸಿಂಗಲ್ ಡೋರ್ ರೆಫ್ರಿಜರೇಟರ್ ಶ್ರೇಣಿಯನ್ನು ರಚಿಸಿ ದ್ದೇವೆ. ಈ ಉತ್ಪನ್ನಗಳು ಸೌಂದರ್ಯ ಮತ್ತು ದಕ್ಷತೆ ಎರಡನ್ನೂ ಹೊಂದಿರುವ ಉತ್ಪನ್ನ ಗಳಾಗಿವೆ. ಭಾರತೀಯ ಗ್ರಾಹಕರಲ್ಲಿ ಹೂವಿನ ವಿನ್ಯಾಸದ ಸಿಂಗಲ್ ಡೋರ್ ರೆಫ್ರಿಜರೇಟರ್‌ ಗಳು ಅತ್ಯಂತ ಜನಪ್ರಿಯವಾಗಿದ್ದು, ನಮ್ಮ ಒಟ್ಟು ಸಿಂಗಲ್ ಡೋರ್ ರೆಫ್ರಿಜರೇಟರ್ ಮಾರಾಟಕ್ಕೆ 70% ಕೊಡುಗೆ ನೀಡುತ್ತವೆ. ಭಾರತೀಯ ಗ್ರಾಹಕರು ತಮ್ಮ ಮನೆಯ ಒಳಾಂಗಣಕ್ಕೆ ಸೂಕ್ತವಾಗಿರುವ ಮತ್ತು ಉತ್ತಮ ಕಾರ್ಯಕ್ಷಮತೆ ಹೊಂದಿರುವ ಉಪಕರಣಗಳನ್ನು ಹೆಚ್ಚಾಗಿ ಬಯಸುತ್ತಾರೆ ಮತ್ತು ಈ ಹೊಸ ಶ್ರೇಣಿಯು ಸ್ಟೈಲ್, ಅನುಕೂಲತೆ ಮತ್ತು ದೀರ್ಘಕಾಲೀನ ವಿಶ್ವಾಸಾರ್ಹತೆಯನ್ನು ಒದಗಿಸಲಿದೆ” ಎಂದು ಹೇಳಿದ್ದಾರೆ.

ಈ ಹೊಸ ಶ್ರೇಣಿಯು ದೈನಂದಿನ ಬಳಕೆಯನ್ನು ಉತ್ತಮಗೊಳಿಸುವಂತಹ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. 20 ವರ್ಷಗಳ ವಾರಂಟಿ ಲಭ್ಯವಿದೆ, ಜೊತೆಗೆ ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ಶಾಂತವಾಗಿ ಕಾರ್ಯಾಚರಿಸಲು ಅನುವು ಮಾಡಿಕೊಡುತ್ತದೆ. ಇಂಧನ ದಕ್ಷತೆ ಮತ್ತು ದೀರ್ಘಕಾಲೀನ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಈ ಉತ್ಪನ್ನ ಒದಗಿಸುತ್ತದೆ. ಸ್ಟೆಬಿಲೈಜರ್ ಮುಕ್ತ ಕಾರ್ಯಾಚರಣಾ ಸಾಮರ್ಥ್ಯ ಹೊಂದಿರುವ ಈ ರೆಫ್ರಿಜರೇಟರ್ ವಿದ್ಯುತ್ ಏರಿಳಿತದ ಸಮಯದಲ್ಲಿ ಸ್ಥಿರವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ವಿದ್ಯುತ್ ಹಾನಿ ಉಂಟಾಗದಂತೆ ರಕ್ಷಣೆ ನೀಡುತ್ತದೆ.

ಒಳಗಡೆ, ಪ್ರಕಾಶಮಾನವಾದ ಎಲ್‌ಇಡಿ ದೀಪವು ಕಡಿಮೆ ವಿದ್ಯುತ್ ಅನ್ನು ಬಳಸಿಕೊಂಡು ದೀರ್ಘಕಾಲ ಬಾಳಿಕೆ ಬರುವಂತೆ ರೆಫ್ರಿಜರೇಟರ್ ನ ಪ್ರತೀ ಮೂಲೆಯನ್ನೂ ಬೆಳಗಿಸುತ್ತದೆ. ಗಟ್ಟಿಮುಟ್ಟಾದ ಗಾಜಿನ ಶೆಲ್ಫ್‌ ಗಳು 175 ಕೆಜಿ ತೂಕವನ್ನು ತಡೆದುಕೊಳ್ಳಬಹುದಾಗಿದ್ದು, ಭಾರವಾದ ಪಾತ್ರೆಗಳಿಗೂ ಸೂಕ್ತವಾಗಿದೆ. ಕೆಲವು ಮಾಡೆಲ್ ಗಳು 11.8 ಲೀಟರ್ ಹೆಚ್ಚುವರಿ ಸ್ಟೋರೇಜ್ ಅನ್ನು ಒದಗಿಸುವ ಬೇಸ್ ಸ್ಟ್ಯಾಂಡ್ ಡ್ರಾಯರ್‌ ಹೊಂದಿದ್ದು, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಡ್ರೈ ವಸ್ತುಗಳನ್ನು ಕೂಲಿಂಗ್ ಸ್ಥಳದಿಂದ ಪ್ರತ್ಯೇಕವಾಗಿ ಇರಿಸಲು ಅನುವು ಮಾಡಿಕೊಡುತ್ತದೆ.

ಈ ಹೊಸ ಸಿಂಗಲ್ ಡೋರ್ ರೆಫ್ರಿಜರೇಟರ್ ಶ್ರೇಣಿಯ 3 ಸ್ಟಾರ್ ಮಾಡೆಲ್ ಗಳಿಗೆ 19,999 ರೂಪಾಯಿ ಆರಂಭಿಕ ಬೆಲೆ ನಿಗದಿಪಡಿಸಲಾಗಿದೆ ಮತ್ತು 5 ಸ್ಟಾರ್ ಮಾಡೆಲ್ ಗಳ ಆರಂಭಿಕ ಬೆಲೆ ರೂ.21,999 ರೂಪಾಯಿ ಆಗಿದೆ.

ಈ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ಸ್ಯಾಮ್‌ಸಂಗ್ ಆಧುನಿಕ ವಿನ್ಯಾಸ, ಉತ್ತಮ ಕಾರ್ಯ ಕ್ಷಮತೆ ಮತ್ತು ಉತ್ಕೃಷ್ಟ ಬಾಳಿಕೆ ಒದಗಿಸುವ ಉಪಕರಣಗಳನ್ನು ಭಾರತೀಯ ಕುಟುಂಬಗಳಿಗೆ ಒದಗಿಸುವ ತನ್ನ ಬದ್ಧತೆಯನ್ನು ಪಾಲಿಸುತ್ತದೆ ಮತ್ತು ದೈನಂದಿನ ಜೀವನವನ್ನು ಸೊಗಸಾದ ಅನುಭವವನ್ನಾಗಿ ಬದಲಾಯಿಸುತ್ತದೆ.