ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ವಾವಲಂಬಿ ಭಾರತಕ್ಕಾಗಿ ತನಿಷ್ಕ್ ಮತ್ತು ಸಚಿನ್ ತೆಂಡೂಲ್ಕರ್ ಚಾಂಪಿಯನ್ 'ಚಿನ್ನ ವಿನಿಮಯ ಉಪಕ್ರಮ'

ಕಳೆದ ಹಲವು ವರ್ಷಗಳಲ್ಲಿ, 30 ಲಕ್ಷಕ್ಕೂ ಹೆಚ್ಚು ಭಾರತೀಯರು ತನಿಷ್ಕ್‍ನ ಚಿನ್ನದ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಸುಮಾರು 1.7 ಲಕ್ಷ ಕಿಲೋ ಚಿನ್ನವನ್ನು ಮರುಬಳಕೆ ಮಾಡು ತ್ತಿದ್ದಾರೆ, ಬ್ರ್ಯಾಂಡ್‍ನ ವ್ಯವಹಾರದ 40% ರಷ್ಟು ವ್ಯವಹಾರ ಈಗ ಈ ಪ್ರಬಲ ವಿನಿಮಯ ಆಂದೋಲನ ದಿಂದ ನಡೆಸಲ್ಪಡುತ್ತಿದೆ.

ಬೆಂಗಳೂರು: ಟಾಟಾ ಉದ್ಯಮಸಮೂಹಕ್ಕೆ ಸೇರಿದ ಭಾರತದ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಆಗಿರುವ ತನಿಷ್ಕ್, ದೇಶದ ಅತಿದೊಡ್ಡ ಚಿನ್ನದ ವಿನಿಮಯ ಅಭಿಯಾನ ನಡೆಸುವ ಮೂಲಕ ಸ್ವಾವಲಂಬನೆಯತ್ತ ಭಾರತದ ಪಯಣವನ್ನು ಮುನ್ನಡೆಸುತ್ತಿದೆ. ಭಾರತದ ನಿಜವಾದ ಚಿನ್ನದ ನಿಕ್ಷೇಪಗಳು ಗಣಿಗಳಲ್ಲಿಲ್ಲ; ಅವು ಮನೆಗಳಲ್ಲಿವೆ. ಭಾರತೀಯ ಕುಟುಂಬಗಳು ಅಂದಾಜು 25,000 ಟನ್ ಚಿನ್ನವನ್ನು ಹೊಂದಿದ್ದು, ಸಾಮಾನ್ಯವಾಗಿ ಈ ಅಪಾರ ಸಂಪತ್ತು ಹೆಚ್ಚಾಗಿ ಬೀಗಮುದ್ರೆಯಲ್ಲಿದೆ. ಇದೇ ವೇಳೆ ಪ್ರತಿ ವರ್ಷ, ಭಾರತದ ಚಿನ್ನದ ಬೇಡಿಕೆಯ ಸುಮಾರು 99% ರಷ್ಟನ್ನು ಪ್ರತಿ ವರ್ಷ ಆಮದು ಮಾಡಿಕೊಳ್ಳಲಾಗುತ್ತದೆ. ಇದು ದೇಶದ ಸ್ವಾವಲಂಬನೆಯ ದೃಷ್ಟಿ ಕೋನವನ್ನು ನಿಧಾನಗೊಳಿಸುವ ಅವಲಂಬನೆಯಾಗಿದೆ. ಕುಟುಂಬಗಳು ತಮ್ಮ ಅಸ್ತಿತ್ವದಲ್ಲಿರುವ ಚಿನ್ನದ ಮೌಲ್ಯವನ್ನು ಅನಾವರಣಗೊಳಿಸಲು ಪ್ರೋತ್ಸಾಹಿಸುವ ಮೂಲಕ, ಅದನ್ನು ಹೊಸ ವಿನ್ಯಾಸಗಳಾಗಿ ಪರಿವರ್ತಿಸುವ ಮತ್ತು ಆಮದುಗಳ ಅಗತ್ಯತೆಯನ್ನು ಸಾಮೂಹಿಕವಾಗಿ ಕಡಿಮೆ ಮಾಡುವ ಮೂಲಕ ತನಿಷ್ಕ್ ಈ ವಿರೋಧಾಭಾಸಕ್ಕೆ ಪರಿಹಾರ ಕಂಡುಕೊಂಡಿದೆ.

ಈ ದೃಷ್ಟಿಕೋನವನ್ನು ಬಲಪಡಿಸಲು, ಈ ಆಂದೋಲನದ ಮೂಲ ಮೌಲ್ಯಗಳನ್ನು ಎತ್ತಿ ತೋರಿಸಲು, ತನಿಷ್ಕ್ ನಂಬಿಕೆ ಮತ್ತು ಸಮಗ್ರತೆಗೆ ಸಮಾನಾರ್ಥಕ ವ್ಯಕ್ತಿ ಎನಿಸಿದ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ, ತನಿಷ್ಕ್ 2025ರ ಅಕ್ಟೋಬರ್ 21ರ ವರೆಗೆ ಎಲ್ಲ ಕ್ಯಾರಟೇಜ್‍ಗಳಲ್ಲಿ (9 ಕ್ಯಾರೆಟ್‍ನಷ್ಟು ಕಡಿಮೆ) ಚಿನ್ನದ ವಿನಿಮಯದ ಮೇಲೆ ಗ್ರಾಹಕರಿಗೆ ಶೂನ್ಯ ಕಡಿತದ ಆಫರ್ ನೀಡುತ್ತಿದೆ. ಇದು ಪ್ರತಿಯೊಬ್ಬ ಭಾರತೀಯರಿಗೂ ಈ ರಾಷ್ಟ್ರ ನಿರ್ಮಾಣ ಪ್ರಯತ್ನದಲ್ಲಿ ಪಾಲ್ಗೊಳ್ಳುವ ಸುಲಭ ಅವಕಾಶ ಕಲ್ಪಿಸುತ್ತದೆ.

ಕಳೆದ ಹಲವು ವರ್ಷಗಳಲ್ಲಿ, 30 ಲಕ್ಷಕ್ಕೂ ಹೆಚ್ಚು ಭಾರತೀಯರು ತನಿಷ್ಕ್‍ನ ಚಿನ್ನದ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಸುಮಾರು 1.7 ಲಕ್ಷ ಕಿಲೋ ಚಿನ್ನವನ್ನು ಮರುಬಳಕೆ ಮಾಡುತ್ತಿದ್ದಾರೆ, ಬ್ರ್ಯಾಂಡ್‍ನ ವ್ಯವಹಾರದ 40% ರಷ್ಟು ವ್ಯವಹಾರ ಈಗ ಈ ಪ್ರಬಲ ವಿನಿಮಯ ಆಂದೋಲನದಿಂದ ನಡೆಸಲ್ಪಡುತ್ತಿದೆ.

ಟೈಟಾನ್ ಕಂಪನಿ ಲಿಮಿಟೆಡ್‍ನ ಆಭರಣ ವಿಭಾಗದ ಸಿಇಒ ಅಜಯ್ ಚಾವ್ಲಾ ಈ ಬಗ್ಗೆ ಪ್ರತಿಕ್ರಿಯಿಸಿ, "ಪ್ರತಿ ಬಾರಿ ಕುಟುಂಬವು ಒಂದು ಗ್ರಾಂ ಹಳೆಯ ಲಾಕರ್ ಚಿನ್ನವನ್ನು ವಿನಿಮಯ ಮಾಡಿಕೊಂಡಾಗ, ಅವರು ತಮಗಾಗಿ ಮೌಲ್ಯವನ್ನು ಅನಾವರಣ ಮಾಡುವುದು ಮಾತ್ರವಲ್ಲದೇ, ಆಮದನ್ನು ಕಡಿಮೆ ಮಾಡುವ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡುತ್ತಾರೆ. ಅದು ರಾಷ್ಟ್ರೀಯ ಪ್ರಭಾವದೊಂದಿಗೆ ವೈಯಕ್ತಿಕ ಸಂತೋಷವನ್ನು ನೀಡುವ ಚಿನ್ನದ ವಿನಿಮಯದ ಶಕ್ತಿ ಎನಿಸಿದೆ. ಈ ಹಬ್ಬದ ಋತುವಿನಲ್ಲಿ ಕ್ಯಾರಟೇಜ್‍ಗಳಲ್ಲಿ (9 ಕ್ಯಾರೆಟ್‍ನಷ್ಟು ಕಡಿಮೆ) ನಮ್ಮ ಮೊದಲ ಶೂನ್ಯ ಕಡಿತದ ಕೊಡುಗೆಯೊಂದಿಗೆ, ನಮ್ಮ ರಾಷ್ಟ್ರವನ್ನು ಸ್ವಾವಲಂಬಿಯನ್ನಾಗಿ ಮಾಡುವ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ಭಾರತೀಯನು ಭಾಗವಹಿಸುವುದನ್ನು ನಾವು ಸುಲಭ ಗೊಳಿಸುತ್ತಿದ್ದೇವೆ" ಎಂದು ನುಡಿದರು.

"ಉಡುಗೊರೆಯಾಗಿ, ಬೆಳವಣಿಗೆಯಾಗಿ ಮತ್ತು ಅವಲಂಬನಾರ್ಹವಾಗಿ ಹೀಗೆ ಚಿನ್ನವನ್ನು ಪ್ರತಿ ಭಾರತೀಯ ಕುಟುಂಬದ ಜೀವನದಲ್ಲಿ ಚಿನ್ನ ಬೆಸುಗೆಯನ್ನು ಹೊಂದಿದೆ ಮತ್ತು ಅದನ್ನು ಪ್ರೀತಿಯಿಂದ ಮುಂದಿನ ಪೀಳಿಗೆಗೆ ರವಾನಿಸಲಾಗುತ್ತದೆ. ತನಿಷ್ಕ್‍ನ ಚಿನ್ನದ ವಿನಿಮಯ ಕೇಂದ್ರವು ಕುಟುಂಬಗಳಿಗೆ ಈ ಪರಂಪರೆಯನ್ನು ನವೀಕರಿಸಲು ಪಾರದರ್ಶಕ ಮತ್ತು ವಿಶ್ವಾಸಾರ್ಹ ಮಾರ್ಗ ವನ್ನು ನೀಡುತ್ತದೆ. ಪ್ರತಿಯೊಂದು ವಿನಿಮಯ ಕೇಂದ್ರವು ನಿನ್ನೆಯ ಆಭರಣಗಳನ್ನು ಇಂದಿನ ಸಮಕಾಲೀನ ವಿನ್ಯಾಸಗಳಾಗಿ ಪರಿವರ್ತಿಸುವುದಲ್ಲದೆ, ಭಾರತದ ಚಿನ್ನದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು ನನಗೆ ಪ್ರತಿಯೊಬ್ಬ ಭಾರತೀಯನ ಗೆಲುವು" ಎಂದು ಸಚಿನ್ ತೆಂಡೂಲ್ಕರ್ ಹೇಳಿದರು.