ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhiman studio: ಅಭಿಮಾನ್‌ ಸ್ಟುಡಿಯೋ ಜಾಗ ವಶಕ್ಕೆ ಪಡೆಯುವ ಹಕ್ಕು ಸರ್ಕಾರಕ್ಕಿಲ್ಲ: ನಟ ಬಾಲಕೃಷ್ಣ ಪುತ್ರಿ ಆಕ್ರೋಶ

Abhiman studio: ಸರ್ಕಾರವು ಅರಣ್ಯ ಇಲಾಖೆಗೆ 10 ಎಕರೆ ವಿಸ್ತೀರ್ಣದ ಅಭಿಮಾನ್‌ ಸ್ಟುಡಿಯೋ ಭೂಮಿಯನ್ನು ಮರಳಿ ಸ್ವಾಧೀನಪಡಿಸಿಕೊಳ್ಳಲು ನಿರ್ದೇಶಿಸಿದೆ ಎಂಬ ಸುದ್ದಿಯೂ ಪ್ರಚಾರದಲ್ಲಿದೆ. ಆದರೆ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ ಎಂದು ಟಿ.ಎನ್‌.ಬಾಲಕೃಷ್ಣ ಅವರ ಪುತ್ರಿ ಗೀತಾ ಬಾಲಿ ತಿಳಿಸಿದ್ದಾರೆ.

ಬೆಂಗಳೂರು: ಅಭಿಮಾನ್‌ ಸ್ಟುಡಿಯೋ (Abhiman studio) ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳುವ ಕ್ರಮವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಟಿ.ಎನ್‌.ಬಾಲಕೃಷ್ಣ ಅವರ ಪುತ್ರಿ ಗೀತಾ ಬಾಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಾನೂನು ಬದ್ಧವಾಗಿ ಸರ್ಕಾರಕ್ಕೆ ಈ ಕ್ರಮ ಜರುಗಿಸಲು ಯಾವುದೇ ರೀತಿಯ ಹಕ್ಕಿಲ್ಲ ಎಂದು ಹೇಳಿದ್ದಾರೆ.

ನಾನು ಖ್ಯಾತ ಕನ್ನಡ ಚಲನಚಿತ್ರ ನಟ ದಿವಂಗತ ಟಿ.ಎನ್‌.ಬಾಲಕೃಷ್ಣ ಅವರ ಮೂರನೇ ಪುತ್ರಿ. ಇತ್ತೀಚೆಗೆ ಡಾ.ವಿಷ್ಣುವರ್ಧನ್‌ ಅವರ ಸಾರಕವನ್ನು ಕೆಡವಿದ ನಂತರ ನನ್ನ ದಿವಂಗತ ತಂದೆಯವರ ಅಭಿಮಾನ್‌ ಫಿಲ್ಮ್‌ ಸ್ಟುಡಿಯೋ ಬಗ್ಗೆ ವಿವಿಧ ಮಾಹಿತಿಗಳು ಅಥವಾ ವದಂತಿಗಳು ಹರಡುತ್ತಿವೆ.

ಸರ್ಕಾರವು ಅರಣ್ಯ ಇಲಾಖೆಗೆ 10 ಎಕರೆ ವಿಸ್ತೀರ್ಣದ ಅಭಿಮಾನ್‌ ಸ್ಟುಡಿಯೋ ಭೂಮಿಯನ್ನು ಮರಳಿ ಸ್ವಾಧೀನಪಡಿಸಿಕೊಳ್ಳಲು ನಿರ್ದೇಶಿಸಿದೆ ಎಂಬ ಸುದ್ದಿಯೂ ಪ್ರಚಾರದಲ್ಲಿದೆ, ಇದು ನನಗೆ ಆಘಾತಕಾರಿ ಸುದ್ದಿಯಾಗಿದೆ ಎಂದರು.

ಸರ್ಕಾರ ಅಥವಾ ಅರಣ್ಯ ಇಲಾಖೆಯು ನನ್ನ ತಂದೆಯ ಸ್ಟುಡಿಯೋ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ ಎಂಬುದನ್ನು ದೃಢೀಕರಿಸುವ ದಾಖಲೆಗಳೊಂದಿಗೆ ಸರ್ಕಾರ ಮತ್ತು ಸಾರ್ವಜನಿಕರ ಗಮನಕ್ಕೆ ತರಲು ನಾನು ಉದ್ದೇಶಿಸಿದ್ದೇನೆ. 10 ಎಕರೆ ಮಾರಾಟದಲ್ಲಿ ಫಲಾನುಭವಿಗಳು ವಿಕಸನಗೊಳ್ಳುತ್ತಿದ್ದಾರೆ ಎಂಬ ಗುಪ್ತ ಸಂಗತಿಗಳ ಬಗ್ಗೆ ನಾನು ತಿಳಿಸುತ್ತಿದ್ದೇನೆ ಎಂದರು.‌

ಈ ಸುದ್ದಿಯನ್ನೂ ಓದಿ | Abhiman studio: ಷರತ್ತು ಉಲ್ಲಂಘನೆ; ಅಭಿಮಾನ್ ಸ್ಟುಡಿಯೋ ಭೂಮಿ ಮರು ವಶಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ನನ್ನ ತಂದೆಯವರ 10 ಎಕರೆ ಭೂಮಿಯನ್ನು ಸುರಕ್ಷಿತವಾಗಿ ಸಂರಕ್ಷಿಸಿ, ನನ್ನ ತಂದೆಯ ಗೌರವಾರ್ಥವಾಗಿ ಯಾವುದೇ ರಚನಾತಕ ಕಟ್ಟಡವನ್ನು ನಿರ್ಮಿಸಲು ಮತ್ತು 10 ಗುಂಟೆಗಳಲ್ಲಿ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕವನ್ನು ಪುನರ್‌ ನಿರ್ಮಿಸಲು ಇಲ್ಲಿಯವರೆಗೆ ಹೂತುಹೋಗಿರುವ ಸಂಗತಿಗಳು ಹೊರಬರಬೇಕು ಎಂದು ನಾನು ಬಯಸುತ್ತೇನೆ ಎಂದರು.