ಏರ್‌ಪೋರ್ಟ್‌ನಲ್ಲೇ ಅಂತಹ ಕೀಟ ಇಲ್ಲ ಎಂದು ಏರ್‌ಪೋರ್ಟ್ ಎಫ್‌ಐಸಿಸಿ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ: ದಿವ್ಯಾ ರಾಘವೇಂದ್ರ
ಬೆಂಗಳೂರು: ದಕ್ಷಿಣ ಭಾರತ ಪಾಕಪದ್ಧತಿಗೆ ಹೆಸರುವಾಸಿಯಾಗಿರುವ ದಿ ರಾಮೇಶ್ವರಂ ಕೆಫೆ ಇದೀಗ ಉತ್ತರ ಭಾರತದ ಶೈಲಿ ಆಹಾರಪದ್ಧತಿ ಪರಿಚಯಿಸುತ್ತಿದ್ದು, ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ನೂತನವಾಗಿ “ತೀರ್ಥ” ಶೀರ್ಷಿಕೆಯ ಶಾಖೆ ತೆರೆದಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮೇಶ್ವರಂ ಕೆಫೆ”ಯ ಸಹ-ಸಂಸ್ಥಾಪಕ, ಸಿಇಒ ರಾಘವೇಂದ್ರ ರಾವ್, ದಕ್ಷಿಣ ಭಾರತದ ಸಾಂಪ್ರದಾಯಿಕ ಭೋಜನವನ್ನು ಜನಸಾಮಾನ್ಯರಿಗೆ ಉಣ ಬಡಿಸಿದ ಬಳಿಕ ಉತ್ತರ ಭಾರತದ ಆಹಾರಪದ್ಧತಿಯನ್ನೂ ಸಹ ಜನರಿಗೆ ಪರಿಚಯಿಸಬೇಕೆಂಬ ಆಶಯದಡಿ ನೂತನವಾಗಿ ಮೊದಲ “ತೀರ್ಥ” ಶೀರ್ಷಿಕೆಯಡಿ ಶಾಖೆ ತೆರೆಯಲಾಗಿದ್ದು, ಆಗಸ್ಟ್ ೧ ರಿಂದ ಜನಸಾಮಾನ್ಯರಿಗೆ ಲಭ್ಯವಿರಲಿದೆ. ಈ ಶಾಖೆಯನ್ನು ನಟ ಶಿವರಾಜ್‌ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜು.31ರಂದು ಚಾಲನೆ ನೀಡಲಿದ್ದಾರೆ ಎಂದರು.
ದಿ ರಾಮೇಶ್ವರಂ ಕೆಫೆ ಸಹ-ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ರಾಘವೇಂದ್ರ ರಾವ್ ಮಾತನಾಡಿ, “ರಾಮೇಶ್ವರಂ ಕೆಫೆ ಪ್ರಾರಂಭದ ಸಂದರ್ಭದಲ್ಲಿ ಇದ್ದ ಉತ್ಸಾಹದಿಂದಲೇ ತೀರ್ಥ ವನ್ನು ಪ್ರಾರಂಭಿಸಿದ್ದೇವೆ. ಆಧುನಿಕ ವಿನ್ಯಾಸದೊಂದಿಗೆ ನಮ್ಮ ಸಂಪ್ರದಾಯ ಗೌರವಿಸುವ ನಿಟ್ಟಿನಲ್ಲಿ ದೇವಸ್ಥಾನದ ಅನುಭವ ನೀಡುವ ವಿನ್ಯಾಸಕ್ಕೆ ಆದ್ಯತೆ ನೀಡಲಾಗಿದೆ. ಸುಮಾರು 150 ಜನರು ಕೂರಬಹುದಾದ ವಿಶಾಲ ಸ್ಥಳವನ್ನು ಹೊಂದಿದೆ, ಮುಂದಿನ ದಿನಗಳಲ್ಲಿ ತೀರ್ಥ ವನ್ನು ನಗರಾದ್ಯಂತ ತೆರೆಯಲು ತಯಾರಿ ನಡೆಸುತ್ತಿದ್ದು, ಹಿಂದೂಸ್ತಾನಿ ಪಾಕಶಾಲೆಯ ತತ್ವಶಾಸ್ತ್ರವನ್ನು ದಕ್ಷಿಣ ಭಾರತದ ಪೂರ್ವವರ್ತಿಯಂತೆ ವಿಸ್ತರಿಸಲಾಗುತ್ತದೆ ಎಂದರು.
ಇದನ್ನೂ ಓದಿ: Greater Bengaluru: ಆ. 3ರಿಂದ ಗ್ರೇಟರ್ ಬೆಂಗಳೂರು ವಾರ್ಡ್‌ಗಳ ಮರುವಿಂಗಡಣಾ ಕಾರ್ಯಾರಂಭ; ಚುನಾವಣೆ ಯಾವಾಗ?
ಏರ್‌ಪೋರ್ಟ್‌ನಲ್ಲೇ ಅಂತಹ ಕೀಟ ಇಲ್ಲ ಎಂದು ಏರ್‌ಪೋರ್ಟ್ ಎಫ್‌ಐಸಿಸಿ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ: ದಿವ್ಯಾ ರಾಘವೇಂದ್ರ:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಕೀಟ ಸಿಕ್ಕಿರುವ ಕುರಿತು ಪ್ರತಿಕ್ರಿಯಿಸಿದ ದಿವ್ಯಾ, ಈಗಾಗಲೇ ಈ ವಿಚಾರದ ಬಗ್ಗೆ ದೂರು ದಾಖಲಿಸಿದ್ದೇವೆ. ಈ ಘಟನೆ ನಡೆದ ಕೂಡಲೇ ಏರ್‌ಪೋರ್ಟ್‌ನಲ್ಲಿರುವ ಎಫ್‌ಎಸ್‌ಎಸ್‌ಐ ತಂಡ ಆಗಮಿಸಿ, ಸಂಪೂರ್ಣ ತಪಾಸಣೆ ನಡೆಸಿದರು, ಆ ಕೀಟವನ್ನು ಪರಿಶೀಲಿಸಿದದಾರೆ, ಅವರು ಸ್ಪಷ್ಟನೆ ನೀಡು ತ್ತಿರುವ ಪ್ರಕಾರ, ಆ ರೀತಿಯ ಕೀಟ ಏರ್‌ಪೋರ್ಟ್‌ನಲ್ಲಿಯೇ ಇಲ್ಲ ಎಂದು ಹೇಳುತ್ತಿದ್ದಾರೆ.
ಹಾಗಿದ್ದರೆ, ನಮ್ಮ ಕೆಫೆಯಲ್ಲಿ ಹೇಗೆ ಸಿಗಲು ಸಾಧ್ಯ? ಹೀಗಾಗಿ ಇದರ ಬಗ್ಗೆ ಸೂಕ್ತ ತನಿಖೆಯಾಗು ವಂತೆಯೂ ಒತ್ತಾಯಿಸಿದ್ದೇವೆ ಎಂದು ಹೇಳಿದರು. ನಮ್ಮ ತಪ್ಪಿದ್ದರೆ ಖಂಡಿತ ತಲೆ ಬಾಗುತ್ತೇವೆ, ಗ್ರಾಹಕರು ನಮಗೆ ದೇವರಿದ್ದಂತೆ, ಅವರಿಗೆ ಯಾವುದೇ ಅನಾನುಕೂಲತೆ ಆಗದಂತೆ ನೋಡಿಕೊಳ್ಳು ವುದು ನಮ್ಮ ಜವಾಬ್ದಾರಿ, ಆದರೆ ನಮ್ಮ ತಪ್ಪಿಲ್ಲವೆಂದಾಗ ಸುಮ್ಮನಿರಲಾಗುವುದಿಲ್ಲ, ಸೂಕ್ತ ತನಿಖೆ ಬಳಿಕ ಸತ್ಯ ಹೊರಬರಲಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.