ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Infant death: ಕಿವಿ ಚುಚ್ಚಲು ಅನಸ್ತೇಶಿಯಾ ನೀಡಿದ ವೈದ್ಯರು, 5 ತಿಂಗಳ ಮಗು ಸಾವು

Chamarajanagar: ವೈದ್ಯರು ನೋವಾಗಬಾರದೆಂದು ಮಗುವಿನ 2 ಕಿವಿಗಳಿಗೆ ಅರಿವಳಿಕೆ ನೀಡಿದ್ದಾರೆ, ನಂತರ ಮಗುವಿನ ಬಾಯಲ್ಲಿ ನೊರೆ ಬಂದಿದ್ದು, ವೈದ್ಯರ ಸಲಹೆ ಮೇರೆಗೆ ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಧೃಡಪಡಿಸಿದ್ದರು.

ಮೃತ ಪ್ರಖ್ಯಾತ್

ಗುಂಡ್ಲುಪೇಟೆ: ಚಾಮರಾಜನಗರದಲ್ಲಿ (Chamarajanagar) 5 ತಿಂಗಳ ಮಗುವಿನ ಸಾವಿನ (Infant death) ಕಾರಣ 6 ತಿಂಗಳ ಬಳಿಕ ರಿವೀಲ್ ಆಗಿದೆ. ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ (anesthesia) ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ತಾಲೂಕಿನ ಬೊಮ್ಮಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಎಡವಟ್ಟಿಗೆ ಐದು ತಿಂಗಳ ಗಂಡು ಮಗುವೊಂದು ಸಾವನ್ನಪ್ಪಿದೆ. ಹಂಗಳ ಗ್ರಾಮದ ಆನಂದ್, ಮಾನಸ ದಂಪತಿ ಪುತ್ರ ಪ್ರಖ್ಯಾತ್ ಎಂಬ 5 ತಿಂಗಳ ಮಗು ಮೃತಪಟ್ಟಿದೆ.

ಕಳೆದ 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತನಿಖೆಯ ವರದಿಯಲ್ಲಿ ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ ಮಗು ಮೃತಪಟ್ಟಿದೆ ಎಂಬುದು ವರದಿಯಾಗಿದೆ. ಪೋಷಕರು ಕಿವಿ ಚುಚ್ಚಲು ತಮ್ಮ ಮಗುವನ್ನು ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆಗ ವೈದ್ಯರು ನೋವಾಗಬಾರದೆಂದು ಮಗುವಿನ 2 ಕಿವಿಗಳಿಗೆ ಅರಿವಳಿಕೆ ನೀಡಿದ್ದಾರೆ, ನಂತರ ಮಗುವಿನ ಬಾಯಲ್ಲಿ ನೊರೆ ಬಂದಿದ್ದು, ವೈದ್ಯರ ಸಲಹೆ ಮೇರೆಗೆ ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಧೃಡಪಡಿಸಿದ್ದರು.

6 ತಿಂಗಳ ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ಸಿಕ್ಕಿದ್ದು, ವರದಿಯಲ್ಲಿ ಮಗು ಅನಸ್ತೇಶಿಯಾದಿಂದ ಮೃತಪಟ್ಟಿರುವುದು ಧೃಡವಾಗಿದೆ. ಅನಸ್ತೇಶಿಯಾ ನೀಡಿದ್ದಕ್ಕೆ ಮಗುವಿನ ಶ್ವಾಸಕೋಶ ಹಾಗೂ ಮೆದುಳಿನಲ್ಲಿ ರಕ್ತ ಹೆಪ್ಪು ಗಟ್ಟಿದ್ದು, ಮಗು ಮೃತಪಟ್ಟಿದೆ ಎಂಬುದು ಧೃಡವಾಗಿದೆ.

ಪತಿ ಅಕ್ರಮ ಸಂಬಂಧಕ್ಕೆ ಪತ್ನಿ ಬಲಿ

ಮದುವೆಯಾದರೂ ಬೇರೆ ಯುವತಿಯೊಂದಿಗೆ ಪತಿ ಸಲುಗೆಯಿಂದ ಇದ್ದಿದ್ದಕ್ಕೆ ಮನನೊಂದು ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾದ (Sira) ಜ್ಯೋತಿನಗರದಲ್ಲಿ ನಡೆದಿದೆ. ಪೃಥ್ವಿರಾಣಿ (20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಶಿರಾ ತಾಲೂಕಿನ ಬುಕಾಪಟ್ಟದ ಪೃಥ್ವಿರಾಣಿ ಅದೇ ತಾಲೂಕಿನ ಪಕ್ಕದ ಊರಾದ ಕಿಲಾರ್ಧಹಳ್ಳಿಯ ಜೈಮಾರುತಿ ನಾಯಕ್ ಎಂಬಾತನನ್ನು ವಿವಾಹವಾಗಿದ್ದರು.

ಮದುವೆಯ ಬಳಿಕ ಶಿರಾ ಟೌನ್‌ನ ಜ್ಯೋತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ ನನ್ನ ಪ್ರೀತಿಸಿ ಬೇರೊಬ್ಬಳ ಮದುವೆಯಾಗಿದ್ದೀಯಾ ಎಂದು ಜೈಮಾರುತಿಗೆ ಬೇರೊಂದು ಯುವತಿ ಬೆದರಿಕೆ ಹಾಕುತ್ತಿದ್ದಳು. ಬೆದರಿಕೆ ಹಾಕಿದ ಯುವತಿ ಬಗ್ಗೆ ಪೃಥ್ವಿರಾಣಿ ಪತಿಯನ್ನು ಪ್ರಶ್ನಿಸಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ಏರ್ಪಟ್ಟಿತ್ತು. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Street Dog attack: ಬೀದಿ ನಾಯಿಗಳ ಅಟ್ಟಹಾಸ, 4 ವರ್ಷದ ಬಾಲಕಿ ಬಲಿ

ಹರೀಶ್‌ ಕೇರ

View all posts by this author