ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Street Dog attack: ಬೀದಿ ನಾಯಿಗಳ ಅಟ್ಟಹಾಸ, 4 ವರ್ಷದ ಬಾಲಕಿ ಬಲಿ

Davanagere: ದಾವಣಗೆರೆಯ ಶಾಸ್ತ್ರಿ ಬಡಾವಣೆಯಲ್ಲಿ ಆಟವಾಡುವಾಗ ಬೀದಿನಾಯಿ ದಾಳಿಗೆ ಒಳಗಾಗಿದ್ದ 4 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾಳೆ. ಖದೀರಾ ಬಾನು ಮೃತ ಬಾಲಕಿ. ಬೆಂಗಳೂರು ಮತ್ತಿತರ ಕಡೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಬಾಲಕಿಗೆ ರೇಬಿಸ್ ಕಾಯಿಲೆಗೆ ಚಿಕಿತ್ಸೆ ನೀಡಲಾಗಿತ್ತು.

ಬೀದಿ ನಾಯಿಗಳ ಅಟ್ಟಹಾಸ, 4 ವರ್ಷದ ಬಾಲಕಿ ಬಲಿ

ಮೃತ ಖದೀರಾ

ಹರೀಶ್‌ ಕೇರ ಹರೀಶ್‌ ಕೇರ Aug 19, 2025 8:56 AM

ದಾವಣಗೆರೆ: ಒಂದೆಡೆ ಸುಪ್ರೀಂ ಕೋರ್ಟ್‌ (Supreme court), ಬೀದಿ ನಾಯಿಗಳಿಗೆ ನೆಲೆ ಕಲ್ಪಿಸುವ ಕುರಿತು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದ್ದರೆ, ಇನ್ನೊಂದೆಡೆ ಮಕ್ಕಳ ಮೇಲೆ ಬೀದಿ ನಾಯಿಗಳ ಕ್ರೂರ ದಾಳಿಗಳು (Street Dog attack) ಮುಂದುವರಿದಿವೆ. ರಾಜ್ಯದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮುಂದುವರೆದಿದ್ದು, ದಾವಣಗೆರೆಯಲ್ಲಿ (Davanagere news) ಬೀದಿ ನಾಯಿ ದಾಳಿಗೆ ಒಳಗಾಗಿದ್ದ 4 ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ದಾವಣಗೆರೆಯ ಶಾಸ್ತ್ರಿ ಬಡಾವಣೆಯಲ್ಲಿ ಆಟವಾಡುವಾಗ ಬೀದಿನಾಯಿ ದಾಳಿಗೆ ಒಳಗಾಗಿದ್ದ 4 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾಳೆ. ಖದೀರಾ ಬಾನು ಮೃತ ಬಾಲಕಿ. ಬೆಂಗಳೂರು ಮತ್ತಿತರ ಕಡೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಬಾಲಕಿಗೆ ರೇಬಿಸ್ ಕಾಯಿಲೆಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಪ್ರಯೋಜನವಾಗದೇ ಬಾಲಕಿ ಮೃತಪಟ್ಟಿದ್ದಾಳೆ.

ದೆಹಲಿ-ಎನ್‌ಸಿಆರ್‌ನಾದ್ಯಂತ ಬೀದಿ ನಾಯಿಗಳನ್ನು ಆಶ್ರಯ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನಿರ್ದೇಶಿಸಿತ್ತು. ಈ ವಿಚಾರದಲ್ಲಿ ಎನ್‌ಜಿಒಗಳು ಸೇರಿದಂತೆ ಎಲ್ಲರೂ ಹೊಣೆ ನಿಭಾಯಿಸಬೇಕು ಎಂದಿತ್ತು. ಕೋರ್ಟ್‌ನ ಈ ಆದೇಶದಿಂದ ಬೀದಿ ನಾಯಿ ಪ್ರಿಯರು ಅಸಮಾಧಾನಗೊಂಡಿದ್ದರು.

ಇದನ್ನೂ ಓದಿ: Actor Kiccha Sudeep: ಬೀದಿ ನಾಯಿಗಳ ಕುರಿತು ಸುಪ್ರೀಂ ಆದೇಶ; ದತ್ತು ಪಡೆಯಲು ನಟ ಸುದೀಪ್‌ ಮನವಿ