ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಂದಿಗಿರಿ ಪ್ರದಕ್ಷಿಣೆಗೆ ಹರಿದು ಬಂತು ಜನಸಾಗರ: ತಂಪಾದ ಹೊತ್ತಲ್ಲಿ ಸಾಗಿದ ಜನಜಾತ್ರೆ

ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರದಂದು ಹಮ್ಮಿಕೊಳ್ಳುವ ನಂದಿಗಿರಿ ಪ್ರದಕ್ಷಿಣೆಯಲ್ಲಿ ನೂರಾರು ಭಕ್ತರು ಇಂದು ಸೋಮವಾರ ಬೆಳಗ್ಗೆ ದೇವರ ನಾಮ ಸ್ಮರಣೆಯೊಂದಿಗೆ ಪ್ರಾಕೃತಿಕ ರಮ್ಯ ತಾಣ ನಂದಿ ಪ್ರದಕ್ಷಿಣೆ ಹಾಕಿ ಸಹಸ್ರರು ಭಕ್ತರು ತಮ್ಮ ಭಕ್ತಿ ಸಮರ್ಪಣೆ ಮಾಡಿದರು.

ನಂದಿಗಿರಿ ಪ್ರದಕ್ಷಿಣೆಗೆ ಹರಿದು ಬಂತು ಜನಸಾಗರ

ನಂದಿಗಿರಿ ಪ್ರದಕ್ಷಿಣೆಯಲ್ಲಿ ಭಾಗಿಯಾಗಿರುವ ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಡಿಗೆ ಪ್ರಾರಂಭ ಮಾಡಿದ ದೃಶ್ಯ..

Ashok Nayak Ashok Nayak Jul 21, 2025 9:59 PM

ಚಿಕ್ಕಬಳ್ಳಾಪುರ: ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರದಂದು ಹಮ್ಮಿಕೊಳ್ಳುವ ನಂದಿಗಿರಿ ಪ್ರದಕ್ಷಿಣೆಯಲ್ಲಿ ನೂರಾರು ಭಕ್ತರು ಇಂದು ಸೋಮವಾರ ಬೆಳಗ್ಗೆ ದೇವರ ನಾಮ ಸ್ಮರಣೆಯೊಂದಿಗೆ ಪ್ರಾಕೃತಿಕ ರಮ್ಯತಾಣ ನಂದಿ ಪ್ರದಕ್ಷಿಣೆ ಹಾಕಿ ಸಹಸ್ರರು ಭಕ್ತರು ತಮ್ಮ ಭಕ್ತಿ ಸಮರ್ಪಣೆ ಮಾಡಿದರು.

ನಂದಿಗಿರಿ ಪ್ರದಕ್ಷಿಣೆಯಲ್ಲಿ ಚಿಕ್ಕಬಳ್ಳಾಪುರ ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ದೇವನಹಳ್ಳಿ ಸೇರಿದಂತೆ  ಕೋಲಾರ ಜಿಲ್ಲೆಗಳ   ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.  ಇಂದು ಬೆಳಿಗ್ಗೆ ತಾಲ್ಲೂಕಿನ ನಂದಿ ಗ್ರಾಮದ ಐತಿಹಾಸಿಕ ಭೋಗನಂದೀಶ್ವರ ದೇವಾಲಯದಲ್ಲಿ  ಶ್ರೀ ಭೋಗ ನಂದೀಶ್ವರನಿಗೆ ಮೊದಲಿಗೆ ಭಕ್ತರು ಪೂಜೆ ಸಲ್ಲಿಸಿ ಪ್ರದಕ್ಷಿಣೆಯನ್ನು ಆರಂಭಿಸಿದರು. ದೇವರ ನಾಮ ಸ್ಮರಣೆ, ಭಜನೆಯೊಂದಿಗೆ ನಡಿಗೆ ಆರಂಭಿಸಿದರು. ನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆದ 85ನೇ ವರ್ಷದ ಗಿರಿ ಪ್ರದಕ್ಷಿಣೆ ಕಾರ್ಯಕ್ರಮವಾಗಿ ಗಿರಿ ಪ್ರದರ್ಶನ ಮಾಡುತ್ತ . ಹೆಜ್ಜೆ ಹೆಜ್ಜೆಗೂ ಶಿವನಾಮ ಭಜಿಸುತ್ತ ಸುಮಾರು 15ಕ್ಕೂ ಹೆಚ್ಚು ಕಿ.ಮೀ ದೂರದ ಪ್ರದಕ್ಷಿಣೆ ಪೂರೈಸಿದರು.

ಇದನ್ನೂ ಓದಿ: Chikkaballapur News: ಕಸಾಪದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ಈ ಭಾಗದಲ್ಲಿನ ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚೆನ್ನಗಿರಿ, ಕಳವಾರ ಬೆಟ್ಟ ಸೇರಿದಂತೆ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೆ?ಲಾಸ ಪರ್ವತವನ್ನು ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದಾಗಿದ್ದು  ಬೆಂಗಳೂರು, ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಮಾಗಡಿ ತುಮಕೂರು, ಕೋಲಾರ ಸೇರಿದಂತೆ ವಿವಿದೆಡೆಯಿಂದ ಭಕ್ತರು ವಿವಿಧ ಭಜನಾ ತಂಡಗಳೊಂದಿಗೆ ದೇವರ ಹಾಡುಗಳನ್ನು ಹಾಡುತ್ತ ಚುಮು ಚುಮು ಚಳಿಯಲ್ಲಿಯೇ ಹೆಜ್ಜೆ ಹಾಕಿದರು.

ಪ್ರದಕ್ಷಿಣೆಯು ನಂದಿ ದೇವಾಲಯ ಆವರಣದಿಂದ ಅಂಗಟ್ಟ, ಕುಡುವತಿ, ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ಪುನಃ ದೇವಾಲಯ ಆವರಣಕ್ಕೆ ಬಂದು ಅಂತ್ಯಗೊಂಡಿತ್ತು. ಗಿರಿ ಪ್ರದಕ್ಷಿಣೆ ಮಾಡಿದರೆ ಮೋಕ್ಷ ಪ್ರಾಪ್ತಿ ಜೊತೆಗೆ   ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಬೆರೂರಿದೆ. ಈ ಕಾರಣದಿಂದ ಪ್ರತಿ ವರ್ಷವೂ ಗಿರಿಪ್ರದಕ್ಷಿಣೆ ನಡೆಯುತ್ತಿದೆ.

ಪ್ರತಿವರ್ಷದಂತೆ ಈ ವರ್ಷವೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಸದಸ್ಯರು, ಪಾದಯಾತ್ರಿಗಳಿಗೆ ಕಲ್ಲಂಗಡಿ ಹಣ್ಣು ವಿತರಿಸಿದರು. ದಾರಿಯಲ್ಲಿ  ನಡೆದು ಬಂದ ಪಾದಯಾತ್ರಿಗಳಿಗೆ ಭಕ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳು, ಉಪಾಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ದರು.

ಸೋಮವಾರ ಬೆಳಗ್ಗೆ ಭೋಗನಂದೀಶ್ವರ ದೇವರಿಗೆ ಪೂಜೆ ಮಾಡಿದ ನಂತರ ಪ್ರದಕ್ಷಿಣೆ ಆರಂಭ ವಾಗುತ್ತಿದ್ದಂತೆ, ಕಾಲ್ನಡಿಗೆಯಲ್ಲಿ ಸಾಗುವ ಹಾದಿಯ ಉದ್ದಕ್ಕೂ ಕುಡಿಯುವ ನೀರು, ಹಣ್ಣು, ಮಜ್ಜಿಗೆ, ಖರ್ಜೂರ, ತಿಂಡಿ ವ್ಯವಸ್ಥೆ ಹೀಗೆ ಕೊರತೆ ಅನ್ನಿಸಿದ ಹಾಗೆ ಪ್ರದಕ್ಷಿಣೆ ಪೂರ್ಣಗೊಳ್ಳಲು ಬೇಕಾದ ಅನುಕೂಲಗಳನ್ನು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾಡಿದ್ದವು.

ಇನ್ನು ದೊಡ್ಡಬಳ್ಳಾಪುರದ ನಂದಿ ಗಿರಿಪ್ರದಕ್ಷಿಣ ಸೇವಾ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ  ಸಹಸ್ರಾರು ಮಂದಿ ಭಕ್ತರಿಗೆ ವ್ಯವಸ್ಥಿತವಾಗಿ   ಉಪಹಾರದ ವ್ಯವಸ್ಥೆ ಮಾಡಿದ್ದರು.
‘ಬೆಳಿಗ್ಗೆ ೬ಕ್ಕೆ ಗಿರಿಪ್ರದಕ್ಷಿಣೆ ಆರಂಭವಾಗಿ. ೧೦ ಗಂಟೆ ವೇಳೆಗೆ ಪ್ರದಕ್ಷಿಣೆ ಪೂರ್ಣಗೊಂಡಿತು’ ಕೊನೆಯಲ್ಲಿ ದೇವರಿಗೆ ಪೂಜೆ ಮುಗಿಸಿ ತಮ್ಮ ತಮ್ಮ ಊರುಗಳಿಗೆ ತೆರಳಿದರು.

*

‘ಗಿರಿಪ್ರದಕ್ಷಿಣೆ ಮಾಡಿದರೆ  ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಈ ಕಾರಣದಿಂದ  ದಕ್ಷಿಣ ಭಾರತದ ಅನೇಕ ಕಡೆಗಳಿಂದ ಗಿರಿ ಪ್ರದರ್ಶಣೆ ಮಾಡಲು ಪ್ರತಿ ವರ್ಷವೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನಂದಿಗೆ ಬಂದು ಪಾಲ್ಗೊಳ್ಳುತ್ತಾರೆ. ಚಪ್ಪಲಿಯಿಲ್ಲದೆ ನಡೆದುಕೊಂಡು ಬರುವ ಭಕ್ತರು ದಣಿವಾರಿಸಿಕೊಳ್ಳಲು ಪ್ರತಿವರ್ಷವೂ ಸೇವಾಕರ್ತರು ನಾನಾ ಸೇವೆ ಮಾಡುತ್ತಿರುವುದು ಸಂತೋಷ ತಂದಿದೆ.ಜನರೊAದಿಗೆ ನಡೆಯುವುದು ಆಯಾಸ ದೂರ ಮಾಡಲಿದೆ.
- ಆಂಜಿನಮ್ಮ ಗೃಹಿಣಿ.

*
ಗಿರಿವಲಂ ಅಂದರೆ  ಪವಿತ್ರ ಗುಡ್ಡದ ಸುತ್ತ ಪ್ರದಕ್ಷಿಣೆ ಹಾಕುವುದು. ಇದಕ್ಕಾಗಿ ರಸ್ತೆಯ ಮಾರ್ಗವಿದ್ದು ಭಕ್ತಾದಿಗಳು ಈ ನಂದಿ ಗಿರಿಧಾಮ ಸುತ್ತ ಸುಮಾರು ೧೪ ಕಿ.ಮೀ ಕಾಲ್ನಡಿಗೆಯಲ್ಲಿ ಚಲಿಸಿ ಪ್ರದಕ್ಷಿಣೆ ಹಾಕಬಹುದು. ಕಲಿಯುಗದ ಈ ಒಂದು ಪ್ರದಕ್ಷಿಣೆಯು ಸಾವಿರ ಕುದುರೆ ತ್ಯಾಗಕ್ಕೆ ಸಮ ಎಂದು ಹೇಳಲಾಗಿದೆ ಹಾಗೂ ನಿರಂತರ ಭೇಟಿ ಹಾಗೂ ಪ್ರದಕ್ಷಿಣೆಯಿಂದ ಜೀವನ್ಮರಣಗಳ ಕಾಲ ಚಕ್ರದಿಂದ ಮುಕ್ತಿ ಪಡೆಯಬಹುದು ಎಂದೂ ಸಹ ಹೇಳಲಾಗಿದ್ದು ನಾನು ಪ್ರತಿವರ್ಷ ಇದರಲ್ಲಿ ತಪ್ಪದೆ ಭಾಗಿಯಾಗುತ್ತೇನೆ.
 -ಮಲ್ಲಿಕಾರ್ಜುನ (ಪ್ರೂಟ್ಸ್ ಮಲ್ಲಿ) ಚಿಕ್ಕಬಳ್ಳಾಪುರ