ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಬಳ್ಳಾಪುರ

CHIMUL: ನಷ್ಟದಲ್ಲಿದ್ದರೂ ರೈತರ ಸೌಲಭ್ಯ ಕಡಿತವಿಲ್ಲ; ಸ್ವಂತ ಪ್ಯಾಕಿಂಗ್ ಘಟಕ ಸ್ಥಾಪನೆಗೆ ಕ್ರಮ: ಚಿಮುಲ್ ಒಕ್ಕೂಟ ಎಂದಿಗೂ ರೈತರ ಪರ: ಕೃಷ್ಣಾರೆಡ್ಡಿ

ಚಿಮುಲ್ ಒಕ್ಕೂಟ ಎಂದಿಗೂ ರೈತರ ಪರ: ಕೃಷ್ಣಾರೆಡ್ಡಿ

ಒಕ್ಕೂಟದ ಆಡಳಿತ ಮಂಡಳಿಯಲ್ಲಿರುವ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶ ಕರು ರೈತರ ಕುಟುಂಬದಿಂದ ಬಂದವರಾಗಿರುವುದರಿಂದ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪಶು ಆಹಾರದ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡದಿಂದ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ

Praja Seva Andolan: ಅಹವಾಲುಗಳಿಗೆ ಕಾಲಮಿತಿಯಲ್ಲಿ ಪರಿಹಾರ; ಸರ್ಕಾರಿ ಯೋಜನೆಗಳ ಸದುಪಯೋಗಕ್ಕೆ ಕರೆ: ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್

ನಂದಿಯಲ್ಲಿ ‘ಪ್ರಜಾ ಸೇವೆ’: ಜನರ ಸಮಸ್ಯೆಗೆ ಅಧಿಕಾರಿಗಳ ಸ್ಪಂದನೆ

ಸರ್ಕಾರದ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಮಾಹಿತಿ ಕೊರತೆಯಿಂದ ಯಾವುದೇ ಅರ್ಹರು ಸೌಲಭ್ಯದಿಂದ ವಂಚಿತರಾಗಬಾರದು. ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದರು.

Ganeshotsava: ಗಣೇಶೋತ್ಸವ: ಮಾರ್ಗಸೂಚಿ ಪಾಲನೆಗೆ ಫ್ಲೆಕ್ಸ್, ಡಿಜೆ ಮಾಲೀಕರಿಗೆ ಎಸ್ಪಿ ಸೂಚನೆ

ಗಣೇಶೋತ್ಸವ: ಮಾರ್ಗಸೂಚಿ ಪಾಲನೆಗೆ ಫ್ಲೆಕ್ಸ್, ಎಸ್ಪಿ ಸೂಚನೆ

ಫ್ಲೆಕ್ಸ್ ಮುದ್ರಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ನಿಯಮಗಳನ್ನು ಪಾಲಿಸಬೇಕು. ಡಿಜೆ ಸೌಂಡ್ ಸಿಸ್ಟಮ್ ಬಳಕೆಯಲ್ಲಿಯೂ ಸರ್ಕಾರ ನಿಗದಿಪಡಿಸಿರುವ ನಿಯಮ, ಸಮಯ ಹಾಗೂ ಧ್ವನಿಮಿತಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆಯಾಗದಂತೆ ಮಾಲೀಕರು ಹಾಗೂ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

Adichunchanagiri Seer: ಯಲುವಹಳ್ಳಿ ರಮೇಶ್ ಸಂಸ್ಥೆಯಿಂದ 500 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ; ಉಚಿತ ಆರೋಗ್ಯ ತಪಾಸಣೆ

ದುರ್ಬಲರ ಸೇವೆಗೆ ಮುಂದಾಗುವುದೇ ನಿಜವಾದ ಸಮಾಜ ಸೇವೆ

ಯಾವುದೇ ಸಮಾಜದ ಗರ್ಭಿಣಿಯರಿಗೆ ಸೀಮಂತ ಎನ್ನುವುದು ತಾಯ್ತನದ ಬದುಕಿಗೆ ನೆಮ್ಮದಿಯ ದಾರಿ ತೋರುವ ಮಾರ್ಗವಾಗಿದೆ. ಮನಸ್ಸಿನ ನೆಮ್ಮದಿ, ಸಂತೋಷ ಹಾಗೂ ತಾಯಿಯ ಆರೋಗ್ಯವು ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯರು ಎಂತಹುದೇ ಸಂದರ್ಭ ವಿರಲಿ ಭಯ, ಉದ್ವೇಗಕ್ಕೆ ಒಳಗಾಗದೆ ಸಂತೋಷದಿಂದ ಗರ್ಭಾವಸ್ಥೆಯನ್ನು ಕಳೆಯಬೇಕು ಎಂದರು

Chikkaballapur Accident: ಚಿಕ್ಕಬಳ್ಳಾಪುರದ ಬಳಿ ಭೀಕರ ಅಪಘಾತ; ಓಮ್ನಿ- ಗೂಡ್ಸ್ ವಾಹನ ಡಿಕ್ಕಿಯಾಗಿ ಮೂವರು ಮಹಿಳಾ ಕಾರ್ಮಿಕರ ದುರ್ಮರಣ

ಚಿಕ್ಕಬಳ್ಳಾಪುರದ ಬಳಿ ಓಮ್ನಿ- ಗೂಡ್ಸ್ ವಾಹನ ಡಿಕ್ಕಿಯಾಗಿ ಮೂವರ ಸಾವು

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಕೊತ್ತನೂರು ಗೇಟ್ ಸಮೀಪ ದುರ್ಘಟನೆ ನಡೆದಿದೆ. ಓಮ್ನಿ ಕಾರು ಹಾಗೂ ಮಿನಿ ಗೂಡ್ಸ್ ವಾಹನದ ನಡುವೆ ಅಪಘಾತ ನಡೆದಿದ್ದು, ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Teacher Award: ನೇತಾಜಿ ಯುವಕ ಸಂಘದಿಂದ ಶಿಕ್ಷಕ ಪ್ರಶಸ್ತಿ ಪ್ರದಾನ

ನೇತಾಜಿ ಯುವಕ ಸಂಘದಿಂದ ಶಿಕ್ಷಕ ಪ್ರಶಸ್ತಿ ಪ್ರದಾನ

ಈ ಬಾರಿ ಅಲಕಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಗೋಪಾಲ ಆರ್.ಬಿ. ಅವರಿಗೆ ‘ನೇತಾಜಿ ಶಿಕ್ಷಕ ಪ್ರಶಸ್ತಿ’ ಹಾಗೂ ಗೌರಿಬಿದನೂರು ಕೋಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶಬ್ರೀನ್ ತಾಜ್ ಅವರಿಗೆ ‘ನೇತಾಜಿ ಶಿಕ್ಷಕಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

Chikkaballapur News: ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ: ವೇದಮೂರ್ತಿ ವಿರುದ್ಧ ಕ್ರಮಕ್ಕೆ ದೂರು

ಅವಹೇಳನಕಾರಿ ಹೇಳಿಕೆ: ವೇದಮೂರ್ತಿ ವಿರುದ್ಧ ಕ್ರಮಕ್ಕೆ ದೂರು

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ದೊಡ್ಡಯಾಚೆನಹಳ್ಳಿ ಗ್ರಾಮದ ವೇದಮೂರ್ತಿ ಎಂಬುವವರು ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವ, ಜಾತಿ ಹಾಗೂ ದಲಿತ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ವಿಡಿಯೋ ತುಣುಕು ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Chikkaballapur News: ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ದೇಶದ ಅಮೂಲ್ಯ ಆಸ್ತಿಯನ್ನಾಗಿ ರೂಪಿಸಿ

ಶಿಕ್ಷಕರೇ ಸದೃಢ ಮಾನವ ಸಂಪನ್ಮೂಲ ನಿರ್ಮಾಣದ ಮೂಲಶಿಲ್ಪಿಗಳು

ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರನ್ನು ರೂಪಿಸುವಲ್ಲಿ ಶಿಕ್ಷಣ ವ್ಯವಸ್ಥೆಯ ಕೊಡುಗೆ ಅಪಾರ. ಪ್ರತಿಭಾವಂತ ಮಾನವ ಸಂಪನ್ಮೂಲದ ನಿರ್ಮಾಣದ ಹಿಂದೆ ಶಿಕ್ಷಕರ ಪರಿಶ್ರಮ, ಬದ್ಧತೆ ಮತ್ತು ಮಾರ್ಗದರ್ಶನವಿದೆ. ಭಾರತ ಜ್ಞಾನ, ತಂತ್ರಜ್ಞಾನ ಹಾಗೂ ಶಾಂತಿಯ ಸಂದೇಶವನ್ನು ವಿಶ್ವಕ್ಕೆ ನೀಡಿದ್ದು, ದೇಶವನ್ನು ಮತ್ತಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು

Teachers Day: ಜೀವನವೇ ಪಠ್ಯ; ಘಟನೆಗಳೇ ಪಾಠ; ಜೀವಿತವೇ ಗುರು: ಸತ್ಯಸಾಯಿ ಲೋಕಸೇವಾ ಗುರುಕುಲದಲ್ಲಿ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ

ಜೀವನವೇ ಪಠ್ಯ; ಘಟನೆಗಳೇ ಪಾಠ; ಜೀವಿತವೇ ಗುರು

ತರಗತಿಯ ನಾಲ್ಕು ಗೋಡೆಗಳಾಚೆಗೂ ಶಿಕ್ಷಣ ವಿಸ್ತರಿಸುತ್ತದೆ. ಬದುಕಿನ ಪ್ರತಿಯೊಂದು ಘಟನೆಯೂ ಒಂದು ಪಾಠ, ಪ್ರತಿಯೊಂದು ಅನುಭವವೂ ಒಬ್ಬ ಗುರು ಎಂಬ ಸಂದೇಶದೊಂದಿಗೆ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲದಲ್ಲಿ ಶಿಕ್ಷಕರ ದಿನಾಚರಣೆ(Teachers Day)ಯನ್ನು ಭಕ್ತಿ, ಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

Bagepally Crime: ಹಾಡಹಗಲೇ ವ್ಯಕ್ತಿಯ ಕತ್ತು ಕೊಯ್ದು ಕೊಲೆ: ಬಾಗೇಪಲ್ಲಿಯಲ್ಲಿ ಬೆಚ್ಚಿಬೀಳಿಸಿದ ಘಟನೆ; ಆರೋಪಿಗಳ ಪತ್ತೆಗೆ ಪೊಲೀಸರ ಶೋಧ

ಹಾಡಹಗಲೇ ವ್ಯಕ್ತಿಯ ಕತ್ತು ಕೊಯ್ದು ಕೊಲೆ

ಪಟ್ಟಣದ ಗೂಳೂರು ರಸ್ತೆಯ ರಾಯಲ್ ಫಂಕ್ಷನ್ ಹಾಲ್ ಸಮೀಪದ ನಿವಾಸಿ ನಾಗರಾಜ್ (45) ಮೃತ ವ್ಯಕ್ತಿ. ಮೂಲತಃ ಗುಗ್ಯಂಪಲ್ಲಿ ಗ್ರಾಮದವರಾದ ನಾಗರಾಜ್ ಅವರು ಕೊಂಡರೆಡ್ಡಿಪಲ್ಲಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಬಾರ್‌ವೊಂದರ ಸಮೀಪ ಇದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ವಿದ್ಯುತ್ ದೀಪಗಳ ಅಲಂಕಾರ ವೇಳೆ ದುರಂತ: ದೇವಸ್ಥಾನದ ಗೋಪುರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು

ದೇವಸ್ಥಾನದ ಗೋಪುರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು

ಮೃತರನ್ನು ಪಟ್ಟಣದ ಮೂರನೇ ವಾರ್ಡ್‌ನ ಬೆಟ್ಟದ ಕೆಳಗಿನ ಪೇಟೆ ನಿವಾಸಿ ರಹಮತ್ (30) ಎಂದು ಗುರುತಿಸಲಾಗಿದೆ. ಸಂತೆ ಬೀದಿಯ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶನಿವಾರದ ವಿಶೇಷ ಪೂಜೆ ಯ ಹಿನ್ನೆಲೆಯಲ್ಲಿ ದೀಪಾಲಂಕಾರ ಕಾರ್ಯವನ್ನು ರಹಮತ್ ನಿರ್ವಹಿಸುತ್ತಿದ್ದರು. ಶುಕ್ರವಾರ ರಾತ್ರಿ ಸುಮಾರು 7.50ರ ವೇಳೆಗೆ ಗೋಪುರದ ಮೇಲೆ ದೀಪಗಳನ್ನು ಅಳವಡಿಸುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.

Prajaseve: ಸಾರ್ವಜನಿಕರಿಂದ ಅಹವಾಲು, ಅರ್ಜಿ ಸ್ವೀಕಾರ; ಸ್ಥಳದಲ್ಲೇ ಹಲವು ಸಮಸ್ಯೆಗಳಿಗೆ ಪರಿಹಾರ

ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister DK Shivakumar) ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಸಭೆಗಳನ್ನು ಆಯೋಜಿಸಲಾಗಿತ್ತು.

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಜೈ ಫೌಂಡೇಶನ್‌ನಿಂದ ಸೇವಾ ಕಾರ್ಯ: ಆಸ್ಪತ್ರೆ ಸಿಬ್ಬಂದಿ, ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಹಣ್ಣು–ಹಂಪಲು, ಬ್ರೆಡ್ ವಿತರಣೆ

ಜನ್ಮಾಷ್ಟಮಿಯಂದು ಜೈ ಫೌಂಡೇಶನ್‌ನಿಂದ ಸೇವಾ ಕಾರ್ಯ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಂಚೇನಹಳ್ಳಿ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಜೈ ಫೌಂಡೇಶನ್ ವತಿಯಿಂದ ಆಸ್ಪತ್ರೆಯ ಕರ್ತವ್ಯನಿರತ ಸಿಬ್ಬಂದಿ, ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಹಣ್ಣು–ಹಂಪಲು ಮತ್ತು ಬ್ರೆಡ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಲಾಯಿತು.

Sri Krishna Janmashtami in Gudibande: ಶ್ರೀ ಕೃಷ್ಣನ ಜೀವನಾದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಲಿ

ಭಗವದ್ಗೀತೆಯ ತತ್ವಗಳು ಜೀವನಕ್ಕೆ ದಾರಿದೀಪ: ಪರಿಮಳ

ಶ್ರೀ ಕೃಷ್ಣನ ಜೀವನಾದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ಭಗವದ್ಗೀತೆಯಲ್ಲಿ ಅವರು ಬೋಧಿಸಿರುವ ಜೀವನ ಮೌಲ್ಯಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಮಹಾಭಾರತದ ಮೂಲಕವೂ ಸಮಾಜಕ್ಕೆ ಮಹತ್ವದ ಸಂದೇಶಗಳನ್ನು ನೀಡಿದ್ದಾರೆ ಎಂದು ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಪರಿಮಳ ಹೇಳಿದರು.

SriKrishna Janmashtami: ಕೃಷ್ಣ–ರಾಧೆ ವೇಷದಲ್ಲಿ ಕಂಗೊಳಿಸಿದ ಪುಟಾಣಿಗಳು; ಬಾಲಲೀಲೆ ಕಿರು ನಾಟಕ ಪ್ರದರ್ಶನ

ಶಾಂತ ವಿದ್ಯಾನಿಕೇತನದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ವಿದ್ಯಾರ್ಥಿಗಳು ಶ್ರೀಕೃಷ್ಣನ ಜೀವನ ಹಾಗೂ ಬಾಲಲೀಲೆಯನ್ನು ಆಧರಿಸಿದ ಕಿರು ನಾಟಕವನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ಶ್ರೀಕೃಷ್ಣನ ಬಾಲ್ಯ, ತುಂಟತನ ಹಾಗೂ ಜೀವನ ಸಂದೇಶಗಳನ್ನು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಿದರು. ಇದೇ ವೇಳೆ ಕೃಷ್ಣನಿಗೆ ಸಂಬಂಧಿಸಿದ ಭಕ್ತಿಗೀತೆಗಳು ಹಾಗೂ ಭಜನೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಯ ಸೊಬಗು ತುಂಬಿದರು.

H1N1 ಬಗ್ಗೆ ಅರಿವು ಮೂಡಿಸಲು ಮನವಿ

H1N1 ಬಗ್ಗೆ ಅರಿವು ಮೂಡಿಸಲು ಮನವಿ

ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಕೆಮ್ಮು-ಸೀನುವಾಗ ಬಾಯಿ ಮುಚ್ಚಿಕೊಳ್ಳುವುದು ಹಾಗೂ ಅನಾರೋಗ್ಯದ ವೇಳೆ ಜನಸಂದಣಿಯಿಂದ ದೂರವಿರುವಂತೆ ಅವರು ಸಲಹೆ ನೀಡಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಎದೆನೋವು ಸೇರಿದಂತೆ ಗಂಭೀರ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡಬಹುದು.

Chikkaballapur News: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹10 ಕೋಟಿ ಬರ ಪರಿಹಾರ ಅನುದಾನ ನೀಡಿ: ಕೃಷಿಕ ಸಮಾಜ ಒತ್ತಾಯ

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹10 ಕೋಟಿ ಬರ ಪರಿಹಾರ ಅನುದಾನ ನೀಡಿ

ಬರ ಘೋಷಣೆ ಮಾಡಿರುವ ಸರ್ಕಾರವು ರೈತರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ₹10 ಕೋಟಿ ಬರ ಪರಿಹಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ತಾಲ್ಲೂಕು ಪ್ರದೇಶ ಕೃಷಿಕ ಸಮಾಜದ ವತಿಯಿಂದ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

K H Muniyappa: ಎಸ್.ಸಿ.ಪಿ – ಎಸ್.ಟಿ.ಪಿ ಹಣ ವಾಪಸ್, ರಾಜಕೀಯದಲ್ಲೂ ಒಳಮೀಸಲಾತಿಗೆ ಡಿಎಸ್ಎಸ್ ಒತ್ತಾಯ: ಸಚಿವ ಮುನಿಯಪ್ಪಗೆ ಮನವಿ

ರಾಜಕೀಯದಲ್ಲೂ ಒಳಮೀಸಲಾತಿಗೆ ಡಿಎಸ್ಎಸ್ ಒತ್ತಾಯ

ಗ್ಯಾರಂಟಿ ಸೇರಿದಂತೆ ವಿವಿಧ ಯೋಜನೆಗಳಿಗೆ ವರ್ಗಾಯಿಸಿರುವ ಎಸ್.ಸಿ.ಪಿ – ಎಸ್.ಟಿ.ಪಿ  ಹಣವನ್ನು ಹಿಂಪಡೆದು ಶೋಷಿತರ ಶಾಸನಬದ್ಧ ಅನುದಾನವನ್ನು ಸಮುದಾಯದ ಶ್ರೇಯೋಭಿವೃದ್ಧಿಗೆ ಬಳಕೆ ಮಾಡಬೇಕು. ಎಬಿಸಿಡಿ ವರ್ಗೀಕರಣದಂತೆ ರಾಜಕೀಯ ಕ್ಷೇತ್ರದಲ್ಲೂ ಒಳಮೀಸಲಾತಿ ಜಾರಿಗೊಳಿಸ ಬೇಕು ಮತ್ತು ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದ ಜಮೀನುಗಳ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳ ಬೇಕು.

ಸೆ.6ರಂದು ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಲಿಖಿತ ಪರೀಕ್ಷೆ

ಸೆ.6ರಂದು ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಲಿಖಿತ ಪರೀಕ್ಷೆ

ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ನಿಯಮಾನುಸಾರ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಭ್ಯರ್ಥಿಗಳು ಪ್ರವೇಶಪತ್ರದಲ್ಲಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರ ಗಳಿಗೆ ಆಗಮಿಸುವಂತೆ ಮನವಿ ಮಾಡಿದ್ದಾರೆ.

Health Camp: ಹಳೇ ಉಪ್ಪಾರಹಳ್ಳಿಯಲ್ಲಿ ‘ವತ್ಸಲಾ’ ಪಶು ಆರೋಗ್ಯ ಶಿಬಿರ ಯಶಸ್ವಿ

ಹಳೇ ಉಪ್ಪಾರಹಳ್ಳಿಯಲ್ಲಿ ‘ವತ್ಸಲಾ’ ಪಶು ಆರೋಗ್ಯ ಶಿಬಿರ ಯಶಸ್ವಿ

ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನು ಭವ  ಕಾರ್ಯಕ್ರಮದ ಅಂಗವಾಗಿ ‘ವತ್ಸಲಾ–ಪಶುಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಮಮತೆಯ ಹೆಜ್ಜೆ’ ಎಂಬ ಶೀರ್ಷಿಕೆ ಯಡಿ ಪಶು ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನವನ್ನು ಹಳೇ ಉಪ್ಪಾರ ಹಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಂದಾಯ ಭೂಮಿಗೆ ನಗರಸಭೆ ‘ಇ-ಖಾತೆ’!: 24 ಎಕರೆ ಭೂಮಿಗೆ ಖಾಸಗಿ ಖಾತೆ ಆರೋಪ; 24 ಗಂಟೆಯಲ್ಲಿ ವರದಿ ಕೇಳಿದ ಜಿಲ್ಲಾಧಿಕಾರಿ

24 ಎಕರೆ ಭೂಮಿಗೆ ಖಾಸಗಿ ಖಾತೆ ಆರೋಪ; ವರದಿ ಕೇಳಿದ ಜಿಲ್ಲಾಧಿಕಾರಿ

ಮಾಜಿ ನಗರಸಭಾ ಸದಸ್ಯ ಮಹಮದ್ ಸಾದಿಕ್ ನೀಡಿರುವ ದೂರಿನ ಪ್ರಕಾರ, ಅಣಕನೂರು ಗ್ರಾಮದ ಸರ್ವೆ ನಂಬರ್ 109ರಲ್ಲಿ ಸುಮಾರು 97,130.30 ಚದರ ಮೀಟರ್, ಅಂದರೆ 24 ಎಕರೆ ಸರ್ಕಾರಿ ಜಮೀನಿಗೆ ನಗರಸಭೆಯಿಂದ ಇ-ಖಾತೆ ನೀಡಲಾಗಿದೆ. ಈ ಜಮೀನು ನಗರಸಭೆ ವ್ಯಾಪ್ತಿಗೆ ಒಳಪಡದಿ ದ್ದರೂ 29ನೇ ವಾರ್ಡ್ ವ್ಯಾಪ್ತಿಗೆ ಸೇರಿದ ಆಸ್ತಿ ಎಂದು ನಮೂದಿಸಿ ಖಾತೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Accident: ಬೊಲೆರೋ ಪಲ್ಟಿ: 10 ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ

ಬೊಲೆರೋ ಪಲ್ಟಿ: 10 ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ

ಪಶ್ಚಿಮ ಬಂಗಾಳ ಮೂಲದ 10 ಮಂದಿ ಕಾರ್ಮಿಕರು ಹಳೆ ಉಪ್ಪಾರಹಳ್ಳಿಯಿಂದ ದೊಡ್ಡಬಳ್ಳಾ ಪುರದ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ವಾಹನದ ಮುಂಭಾಗದ ಟೈರ್ ಏಕಾಏಕಿ ಒಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ರಸ್ತೆ ಬದಿಗೆ ಉರುಳಿ 3–4 ಬಾರಿ ಪಲ್ಟಿಯಾಗಿದೆ ಎನ್ನಲಾಗಿದೆ.

Chikkaballapur News: ತರಗತಿ ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯಿಂದ ಭೂಮಿಪೂಜೆ

ತರಗತಿ ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯಿಂದ ಭೂಮಿಪೂಜೆ

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿರುವ ‘ಒನ್ ಸ್ಕೂಲ್ ಅಟ್ ಎ ಟೈಮ್’, ಬನಾರ್ಸ್ ಹಾಗೂ ಮೆಕ್‌ಡೊನಾಲ್ಡ್ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಸಂಸ್ಥೆಯು ತನ್ನ 147ನೇ ಶಾಲಾ ಯೋಜನೆ ಯಡಿ ಸುಮಾರು 90 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂರು ತರಗತಿ ಕೊಠಡಿಗಳು, ಅಡುಗೆ ಮನೆ ಹಾಗೂ ಊಟದ ಕೋಣೆ ನಿರ್ಮಾಣಕ್ಕೆ ಮುಂದಾಗಿದೆ. ಕಾಮಗಾರಿಯನ್ನು ಮುಂದಿನ 10 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ

ಪಟ್ರೇನಹಳ್ಳಿ ಜಮೀನಿಗೆ ನಗರಸಭೆಯಿಂದ ಇ-ಖಾತೆ: ಸಮಗ್ರ ತನಿಖೆಗೆ ತ್ರಿಸದಸ್ಯರ ತಂಡ ರಚನೆ

ನಗರಸಭೆಯಿಂದ ಇ-ಖಾತೆ: ಸಮಗ್ರ ತನಿಖೆಗೆ ತ್ರಿಸದಸ್ಯರ ತಂಡ ರಚನೆ

ಪ್ರಸ್ತಾವಿತ ಜಮೀನಿನ ಪಹಣಿ ಪರಿಶೀಲಿಸಿದಾಗ 1983–84ರಿಂದ 2003ರವರೆಗೆ ‘ರೈಲ್ವೆ ಡಿಪೋ’ ಎಂದು ನಮೂದಾಗಿರುವುದು ಕಂಡುಬಂದಿದೆ. ಪ್ರಸ್ತುತ ಪಹಣಿಯಲ್ಲಿ ಜಮೀನು ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಗರಸಭೆ ವ್ಯಾಪ್ತಿಗೆ ಒಳಪಡದ ಜಮೀನಿಗೆ ನಗರಸಭೆಯ ವಾರ್ಡ್ ಸಂಖ್ಯೆ ಸೃಷ್ಟಿಸಿ ಇ-ಖಾತೆ ಮಾಡಿರುವುದು ಕರ್ತವ್ಯಲೋಪ ಹಾಗೂ ಅಧಿಕಾರ ದುರುಪಯೋಗವಾಗಿರುವ ಸಾಧ್ಯತೆ ಕುರಿತು ತನಿಖೆ ನಡೆಯಲಿದೆ.

Loading...