ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

APMC: ಎಪಿಎಂಸಿಯಲ್ಲಿ ರೈತರಿಗೆ ಮುಂಜಾನೆಯ ಸಮಯವನ್ನೇ ನಿಗದಿಪಡಿಸಿ : ಜಿಲ್ಲಾಧ್ಯಕ್ಷ ಎಚ್.ಎನ್ ಗೋವಿಂದರೆಡ್ಡಿ

ಸುಮಾರು ನಾಲ್ಕೈದು ವರ್ಷಗಳಿಂದ ರೈತರು ತಮ್ಮ ತರಕಾರಿ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆ ಯಲ್ಲಿ ಮಾರಾಟ ಮಾಡಲು ಮಧ್ಯಾಹ್ನದ ವೇಳೆ ನಿಗದಿ ಮಾಡಲಾಗಿದೆ. ಇದರಿಂದಾಗಿ ರೈತರು ಸಮರ್ಪಕ ರೀತಿಯಲ್ಲಿ ಮಾರಾಟ ಮಾಡಲು ಸಾಧ್ಯ ವಾಗುತ್ತಿಲ್ಲ. ಆದರೆ ಈ ಹಿಂದೆ ಮುಂಜಾನೆ ೬ಗಂಟೆ ಸಮಯ ದಲ್ಲಿ ಬೆಳೆಗಳನ್ನು ಮಾರಾಟ ಮಾಡಿಕೊಂಡು, ನಂತರ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹಿಂತಿರುಗಲು ಸಹಕಾರಿ ಯಾಗುತ್ತಿತ್ತು.

ಎಪಿಎಂಸಿಯಲ್ಲಿ ರೈತರಿಗೆ ಮುಂಜಾನೆಯ ಸಮಯವನ್ನೇ ನಿಗದಿಪಡಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಎನ್ ಗೋವಿಂದರೆಡ್ಡಿ ಆಗ್ರಹಿಸಿದರು.

ಬಾಗೇಪಲ್ಲಿ: ಎಪಿಎಂಸಿಯಲ್ಲಿ ರೈತರಿಗೆ ಮುಂಜಾನೆಯ ಸಮಯವನ್ನೇ ನಿಗದಿಪಡಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಎನ್ ಗೋವಿಂದರೆಡ್ಡಿ ಆಗ್ರಹಿಸಿದರು.

ಪಟ್ಟಣದ ಹೊರವಲಯದಲ್ಲಿನ ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದ ಸಮೀಪ ಭಾನುವಾರ ರೈತ ಸಂಘಟನೆಯ ನೇತೃತ್ವದಲ್ಲಿ ರೈತ ಮುಖಂಡರು ಸಭೆಯನ್ನು ನಡೆಸಲಾಯಿತು.

ಈ ವೇಳೆ ಮಾತನಾಡಿದ ಅವರು, ಸುಮಾರು ನಾಲ್ಕೈದು ವರ್ಷಗಳಿಂದ ರೈತರು ತಮ್ಮ ತರಕಾರಿ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮಧ್ಯಾಹ್ನದ ವೇಳೆ ನಿಗದಿ ಮಾಡಲಾಗಿದೆ. ಇದರಿಂದಾಗಿ ರೈತರು ಸಮರ್ಪಕ ರೀತಿಯಲ್ಲಿ ಮಾರಾಟ ಮಾಡಲು ಸಾಧ್ಯ ವಾಗುತ್ತಿಲ್ಲ. ಆದರೆ ಈ ಹಿಂದೆ ಮುಂಜಾನೆ ೬ಗಂಟೆ ಸಮಯದಲ್ಲಿ ಬೆಳೆಗಳನ್ನು ಮಾರಾಟ ಮಾಡಿಕೊಂಡು, ನಂತರ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹಿಂತಿರುಗಲು ಸಹಕಾರಿ ಯಾಗುತ್ತಿತ್ತು. ಆದರೆ ಈಗಿನ ನಿಯಮಗಳಂತೆ ಬೆಳೆಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ತರಲಾಗುತ್ತಿಲ್ಲ. ಹಾಗೂ ದಿನ ಪೂರ್ತಿ ಮಾರುಕಟ್ಟೆಯಲ್ಲೆ ಕಳೆಯುವಂತಾಗುತ್ತದೆ ಎಂದರು.

ಇದನ್ನೂ ಓದಿ: Chikkaballapur News: ಚಿತ್ರಾವತಿ ಅಣೆಕಟ್ಟ ನಿರ್ಮಾಣ ಆಗಲು ಮೂಲಕ ಕಾರಣ ಜಿ.ವಿ.ಶ್ರೀರಾಮರೆಡ್ಡಿ: ಜಯರಾಮರೆಡ್ಡಿ

ಕಮಿಷನ್ ದಂಧೆ ನಿಲ್ಲಿಸಿ, ನಿಯಮಗಳನ್ನು ಪಾಲಿಸಿ

ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲವು ದಲ್ಲಾಳಿಗಳು ರೈತರಿಂದ ನಿಯಮಬಾಹಿರವಾಗಿ ಹೆಚ್ಚಿನ ಕಮಿಷನ್ ಪಡೆಯಲಾಗುತ್ತಿದೆ ಎಂದು ಕೇಳಲ್ಪಡುತ್ತಿದೆ. ಆದರೆ ಇಂತಹ ಕಮಿಷನ್ ದಂಧೆಗೆ ಕಡಿ ವಾಣ ಹಾಕಬೇಕು. ಮತ್ತು ಮಾರುಕಟ್ಟೆಯಲ್ಲಿ ರೈತರಿಂದ  ಕಮಿಷನ್ ಪಡೆಯಬಾರದೆಂದು ಆದೇಶವಿದ್ದರೂ, ಕಮಿಷನ್ ಪಡೆಯಲಾಗುತ್ತಿದೆ. ಹಾಗಾಗಿ ಈ ಬಗ್ಗೆ ರೈತರಿಗೆ ನಮ್ಮ ಸಂಘಟನೆಯ ವತಿಯಿಂದ ಅರಿವು ಮೂಡಿಸಲಾಗುತ್ತಿದೆ ಎಂದು ಗೋವಿಂದರೆಡ್ಡಿ ತಿಳಿಸಿದರು.

ರೈತಭವನ, ಮೂಲಸೌಲಭ್ಯ ಕಲ್ಪಿಸಿ ಮಾರುಕಟ್ಟೆಗೆ ರಾತ್ರಿಯ ವೇಳೆ ಬರುವ ರೈತರು ವಿಶ್ರಮಿಸಲು ರೈತಭವನವಿಲ್ಲ. ಹಾಗೇಯೆ ಶೌಚಾಲಯ,ಕುಡಿಯುವ ನೀರು ಮತ್ತಿತರ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಅವುಗಳನ್ನು ತುರ್ತಾಗಿ ಕಲ್ಪಿಸಬೇಕು ಎಂದು ಗೋವಿಂದರೆಡ್ಡಿ ಒತ್ತಾಯಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಗೌರಿವಾಧ್ಯಕ್ಷ ಲಕ್ಷ್ಮೀ ನರಸಪ್ಪ, ತಾಲೂಕು ಅಧ್ಯಕ್ಷ ವೆಂಕಟಶಿವಾರೆಡ್ಡಿ, ಚೌಡರೆಡ್ಡಿ,ಕೃಷ್ಣಪ್ಪ, ರಾಜಪ್ಪ, ನಾರಾಯಣ ಸ್ವಾಮಿ, ಶಿವಾರೆಡ್ಡಿ, ರವಿನಾಯಕ್, ಚಂದ್ರಪ್ಪ, ಕೃಷ್ಣಾರೆಡ್ಡಿ ಹಾಗೂ ರೈತರು ಮತ್ತು ಇತರೆ ರೈತ ಮುಖಂಡರು ಹಾಜರಿದ್ದರು.