ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಬಜಾರ್ ರಸ್ತೆ , ಗಂಗಮ್ಮಗುಡಿ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಆಯುಕ್ತರಿಂದ ಜೀವಂತಿಕೆ

ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬಜಾರ್ ರಸ್ತೆ ಹಾಗೂ ಗಂಗಮ್ಮನಗುಡಿ ರಸ್ತೆ ಅಗಲೀ ಕರಣದ ಕೂಗು ಶತಮಾನದಷ್ಟು ಹಳೆಯದು.ಇವುಗಳ ಅಗಲೀಕರಣ ಸಂಬಂಧ ಮತ್ತೆ ಮತ್ತೆ ಸರ್ವೇ ಕಾರ್ಯ ವನ್ನು ಮಾಡುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂಬ ನಗರವಾಸಿಗಳ ಬೇಸರದ ನಡುವೆ ಮತ್ತೆ ನಗರಸಭೆ ಆಯುಕ್ತರು ಅಗಲೀಕರಣ ಸಂಬಂಧ ಕಟ್ಟಡಗಳಿಗೆ ಗುರುತು ಹಾಕುವ ಕೆಲಸ ಮಾಡಲು ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರದ ಗಂಗಮ್ಮನಗುಡಿ ರಸ್ತೆಯಲ್ಲಿ ಸರ್ವೇ ಕಾರ್ಯ ಕೈಗೊಳ್ಳುತ್ತಿರುವ ನಗರಸಭೆ ಸಿಬ್ಬಂದಿ.

ಚಿಕ್ಕಬಳ್ಳಾಪುರ: ನಗರದ ಬಜಾರ್ ರಸ್ತೆ, ಗಂಗಮ್ಮಗುಡಿ ರಸ್ತೆಗಳ ಪ್ರಮುಖ ಸಮಸ್ಯೆಯಾದ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಮುಂದಾಗಿರುವ ನಗರಸಭೆ ಆಡಳಿತ ಈ ಮಾರ್ಗಗಳಲ್ಲಿ ರಸ್ತೆ ಅಗಲೀಕರಣ ಮಾಡಲು ಮುಮದಾಗಿರುವುದು ನಾಗರೀಕರಲ್ಲಿ ಹರ್ಷವನ್ನುಮಟು ಮಾಡಿದ್ದರೆ ವರ್ತಕರಲ್ಲಿ ಆತಂಕ ಮನೆ ಮಾಡಿದೆ.

ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬಜಾರ್ ರಸ್ತೆ ಹಾಗೂ ಗಂಗಮ್ಮನಗುಡಿ ರಸ್ತೆ ಅಗಲೀ ಕರಣದ ಕೂಗು ಶತಮಾನದಷ್ಟು ಹಳೆಯದು.ಇವುಗಳ ಅಗಲೀಕರಣ ಸಂಬಂಧ ಮತ್ತೆ ಮತ್ತೆ ಸರ್ವೇ ಕಾರ್ಯವನ್ನು ಮಾಡುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂಬ ನಗರವಾಸಿಗಳ ಬೇಸರದ ನಡುವೆ ಮತ್ತೆ ನಗರಸಭೆ ಆಯುಕ್ತರು ಅಗಲೀಕರಣ ಸಂಬಂಧ ಕಟ್ಟಡಗಳಿಗೆ ಗುರುತು ಹಾಕುವ ಕೆಲಸ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: Chikkaballapur News: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳಗಳ ಪರಿಶೀಲನೆ

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ ಕನಿಷ್ಠ 6 ತಿಂಗಳಲ್ಲಿ ಈ ಎರಡೂ ರಸ್ತೆಗಳ ವಿಸ್ತರಣೆ ಕಾಮಗಾರಿ ಮುಗಿಸುವ ಗುರಿಯನ್ನು ನಗರಸಭೆ ಹೊಂದಿದೆ ಎಂದು ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಕಾರ್ಯ ಸಾಧುವಾಗ ಲಿದೆ. ಇಲ್ಲವಾದಲ್ಲಿ ಮತ್ತೊಮ್ಮೆ ನಾಗರೀಕರ ಪ್ರಹಸನಕ್ಕೆ ಗುರಿಯಾಗುವುದು ಖಚಿತ ಎನ್ನಲಾಗಿದೆ.

ಇಲ್ಲಿನ ಎರಡು ರಸ್ತೆಗಳ ಸರ್ವೇ ಕಾರ್ಯವು ಹಲವು ವರ್ಷಗಳಿಂದಲೂ ನಡೆಸುತ್ತಿದ್ದರೂ ಅಗಲೀ ಕರಣ ಭಾಗ್ಯ ಕಾಣದೆ ನೆನೆಗುದಿಗೆ ಬಿದ್ದಿದೆ. ಒಂದೆಡೆ ವ್ಯಾಪಾರಸ್ಥರ ಹಿತ ಮತ್ತೊಂದೆಡೆ ವಾಣಿಜ್ಯೋ ದ್ಯಮದ ಲೆಕ್ಕಾಚಾರ ಮಗದೊಂದೆಡೆ ಸುಗಮ ಸಂಚಾರದ ಸೂತ್ರದಲ್ಲಿ, ಇಷ್ಟು ಸಾಲದು ಎಂಬAತೆ ರಾಜಕೀಯದ ಕೆಸರೆರಚಾಟ ಎಲ್ಲೂ ಸೇರಿಕೊಂಡಿರುವುದರಿಂದಲೇ ಈ ಕಾರ್ಯ ಸುಸೂತ್ರವಾಗಿ ಆಗುತ್ತಿಲ್ಲ ಎಂಬ ಬೇಸರ ನಗರದ ಜನತೆಯಲ್ಲಿದೆ.ಈಗಲಾದರೂ ಇದು ಕೊನೆಮುಟ್ಟುವುದೇ ಎಂಬುದನ್ನು ಕಾದು ನೋಡಬೇಕಿದೆ.

bajar raste

ಗಲೀಕರಣ ವಿಚಾರದಲ್ಲಿ ಈ ಬಾರಿ ಖುದ್ದು ಪೌರಾಯುಕ್ತ ಮನ್ಸೂರು ಅಲಿಯವರೇ ಮುಂದೆನತು ವಿಸ್ತರಣೆಯ ಅಗತ್ಯತೆ ಬಗ್ಗೆ ವರ್ತಕರು,ಕಟ್ಟಡ ಮಾಲಿಕರಿಗೆ ಮನವರಿಕೆ ಮಾಡಿಕೊಡುತ್ತಿರುವು ದರಿಂದ ತ್ವರಿತ ಸರ್ವೇ ಕಾರ್ಯ ಮುಗಿದು ರಸ್ತೆ ಅಭಿವೃದ್ಧಿ ಕಾಣುವ ಲಕ್ಷಣಗಳು ಗೋಚರವಾಗುತ್ತಿವೆ.  

ರಸ್ತೆಯಲ್ಲಿ ಸರ್ವೇ ಕಾರ್ಯ

ಇಲ್ಲಿನ ಬಜಾರ್ ರಸ್ತೆಯಲ್ಲಿನ ಸರ್.ಎಂ.ವಿ.ವೃತ್ತದಿAದ ಭುವನೇಶ್ವರಿ ವೃತ್ತದವರೆಗೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರದಿಂದ ಸರ್ವೇ ಕಾರ್ಯ ಕೈಗೊಂಡಿದ್ದಾರೆ.

ವಾಸ್ತವವಾಗಿ ಇರುವ ರಸ್ತೆ, ಎರಡು ಬದಿಯೂ ಅಕ್ರಮ ಒತ್ತುವರಿಯಿಂದಾಗಿ ನಿರ್ಮಾಣಗೊಂಡಿ ರುವ ಕಟ್ಟಡಗಳ ಜಾಗ ಸೇರಿದಂತೆ ಅಗತ್ಯ ಮಾಹಿತಿ ಸಂಗ್ರಹಿಸಿದರು. ಹಾಗೆಯೇ ದಾಖಲೆಯಂತೆ ಇರುವ ರಸ್ತೆಯ ಅಸಲೀ ಜಾಗದವರೆಗೆ ಮಾರ್ಕ್ ಮಾಡಿದರು.

ವ್ಯಾಪಾರಸ್ಥರಲ್ಲಿ ಆತಂಕ

ನಗರದ ಈವರಗೆ ಎರಡು ರಸ್ತೆಗಳ ಅಗಲೀಕರಣದ ಪುಕಾರು ಮಾತ್ರ ಕೇಳುತ್ತಿದ್ದ ವ್ಯಾಪಾರಸ್ಥರು ಪೌರಾಯುಕ್ತರ ನೇತೃತ್ವದ ಅಕ್ರಮ ಒತ್ತುವರಿ ಗುರುತಿಸುವ ಪ್ರಕ್ರಿಯೆಗೆ ಚಾಲನ ನೀಡಿದ್ದು ಕೇಳಿ ಆತಂಕಗೊಂಡರು.ಈ ರಸ್ತೆಗಳಲ್ಲಿ ಮಾತ್ರ  ಎಷ್ಟು ಬಾರಿ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತದೆ?. ಇಲ್ಲಿನಂತೆ ನಗರದ ಉಳಿದೆಡೆ  ಒತ್ತುವರಿ ತೆರವುಗೊಳಿಸಲಾಗಿದೆಯೇ?. ರಸ್ತೆ ವಿಸ್ತರಣೆಯ ಬದಲಿಗೆ ಬೇರೆ ಪರ್ಯಾಯ ವ್ಯವಸ್ಥೆ ಇಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಸರ್ವೆಗೆ ನಿಂತಿದ್ದ ಸಿಬ್ಬಂದಿಗೆ ಜನತೆ ಕೇಳುತ್ತಿದ್ದ ದೃಶ್ಯ÷ಗಳು ಸಾಮಾನ್ಯವಾಗಿದ್ದವು. ಆದರೆ, ಇದು ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದೇ ಸಿಬ್ಬಂದಿ ತಮ್ಮ ಪಾಡಿಗೆ ತಾವು ಸರ್ವೇ ಕಾರ್ಯವನ್ನು ಮುಂದುವರೆಸಿದ್ದರು.

ಗಂಗಮ್ಮನ ಗುಡಿ ರಸ್ತೆ ಸರ್ವೇ

ಭುವನೇಶ್ವರಿ ವೃತ್ತದಿಂದ ಹಿಡಿದು ಎಂ.ಜಿ.ರಸ್ತೆಯಲ್ಲಿನ ಪಂಚಾಯತ್ ರಾಜ್ ಇಂಜಿನಿಯರಿAಗ್ ವರೆಗಿನ ಗಂಗಮ್ಮನಗುಡಿ ರಸ್ತೆ ಸರ್ವೇ ಕಾರ್ಯವನ್ನು ಸಹ ಶುಕ್ರವಾರದಿಂದ ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಇದರಿಂದ ಬಜಾರ್ ರಸ್ತೆ ಹಾಗೂ ಗಂಗಮ್ಮನಗುಡಿ ರಸ್ತೆಯ ಬದಿಯಲ್ಲಿನ ಚಿನ್ನಾಭರಣ ಅಂಗಡಿ ಮಾಲೀಕರು, ಚಿಲ್ಲರೆ ಅಂಗಡಿಗಳ ಕಟ್ಟಡ ಮಾಲೀಕರು ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದು ರಾಜಕೀಯ ನಾಯಕರನ್ನು ಸಂಪರ್ಕಿಸಿ, ಒತ್ತಡ ಹೇರುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಎಂಬ ಸುದ್ದಿಗೆ ಜೀವಬಂದಿದೆ.

ಸ್ವತಃ ಸಂಸದ ಡಾ ಕೆ.ಸುಧಾಕರ್, ನಗರಸಭಾ ಅಧ್ಯಕ್ಷ ಎ.ಗಜೇಂದ್ರ ರಸ್ತೆಗಳ ವಿಸ್ತರಣೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂಗಡಿ ಮಾಲೀಕರಿಗೆ ಬೆಂಬಲವಾಗಿ ನಿಲ್ಲುವ ಮಾತನ್ನು ಹೇಳಿದ್ದರು. ಇದರ ನಡುವೆ ಶತಾಯ ಗತಾಯ ನಗರದಲ್ಲಿನ ಎರಡು ಇಕ್ಕಟ್ಟಿನ ರಸ್ತೆಗಳ ಅಕ್ರಮ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತದೆ. ಇದಕ್ಕೆ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಕ್ಯಾರೆ ಎನ್ನುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಗುಡುಗಿದ್ದಾರೆ.

ರಸ್ತೆ ವಿಸ್ತರಣೆ ಸುಗಮ

ಗಂಗಮ್ಮನಗುಡಿ ರಸ್ತೆ ಹಾಗೂ ಬಜಾರ್ ರಸ್ತೆ ಅಗಲೀಕರಣ ವಿರೋಧಿಸಿ, ಅಂಗಡಿ ಮಾಲೀಕರು ಹೂಡಿದ್ದ ದಾವೆಯು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ. ನಿಯಮಾನುಸಾರ ಪ್ರಕ್ರಿಯೆ ಕೈಗೊಳ್ಳಲು ನಗರಸಭೆಗೆ ಆದೇಶಿಸಲಾಗಿದೆ. ಇದರಿಂದ ಯಾವುದೇ ತಡೆಯಾಜ್ಞೆಗಳ ಆತಂಕ ಇಲ್ಲ. ಆದರೆ, ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಮಾತ್ರ ಹಿನ್ನಡೆ ಕಂಡು ಬರುತ್ತಿದೆ. ಪ್ರಸ್ತುತ ಆಡಳಿತ ಪಕ್ಷದ ನಾಯಕರು ರಸ್ತೆ ಅಗಲೀಕರಣಕ್ಕೆ ಹೆಚ್ಚಿನ ಒಲವು ಹೊಂದಿರುವುದರಿAದ ಸರ್ವೇ, ತೆರವು ಕಾರ್ಯಾಚರಣೆ ಚುರುಕು ಪಡೆದುಕೊಳ್ಳುತ್ತಿದೆ.

ಗಂಗಮ್ಮನುಗುಡಿ ರಸ್ತೆಯಲ್ಲಿ ೧೦೦ ಅಡಿ ಹಾಗೂ ಬಜಾರ್ ರಸ್ತೆಯಲ್ಲಿ ೬೦ ಅಡಿ ರಸ್ತೆ ವಿಸ್ತರಣೆಯ ಯೋಜನೆ ಹೊಂದಲಾಗಿದೆ. ಬಜಾರ್ ರಸ್ತೆಯಲ್ಲಿ ಗುರುವಾರ ಎರಡೂ ಬದಿ ೩೦ ಮೀಟರ್ ರಸ್ತೆ ಅಗಲೀಕರಣದ ಸರ್ವೇ ಮಾರ್ಕ್ ಗುರುತಿಸಲಾಗಿದೆ.

ಎಲ್ಲರ ಸಹಕಾರ ಅಗತ್ಯ

ಗಂಗಮ್ಮನಗುಡಿ ರಸ್ತೆ ಹಾಗೂ ಬಜಾರ್ ರಸ್ತೆ ವಿಸ್ತರಣೆಗೆ ಜನರು ಅಗತ್ಯ ಸಹಕಾರ ನೀಡಬೇಕು. ಇದರಿಂದ ತ್ವರಿತವಾಗಿ ರಸ್ತೆ ಅಭಿವೃದ್ಧಿ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕೈಗೊಳ್ಳಲು ಸಾಧ್ಯ ವಾಗುತ್ತದೆ ಎಂದು ಪೌರಾಯುಕ್ತ ಮನ್ಸೂರು ಅಲಿ ಮನವಿ ಮಾಡಿದ್ದಾರೆ.

ಕನಿಷ್ಠ ೬ ತಿಂಗಳಲ್ಲಿ ರಸ್ತೆಗಳ ವಿಸ್ತರಣೆ ಪ್ರಕ್ರಿಯೆ ಮುಗಿಯಬೇಕು. ಇನ್ನು ನಿಯಮಾನುಸಾರ ಕಟ್ಟಡ ನಿರ್ಮಿಸಿಕೊಂಡಿದ್ದಲ್ಲಿ ತೆರವು ಖಾಸಗಿ ಜಾಗಕ್ಕೆ ನಿಯಮಾನುಸಾರ ಪರಿಹಾರವನ್ನು ಒದಗಿಸಲಾಗು ತ್ತದೆ. ರಸ್ತೆ ವಿಸ್ತರಣೆಯ ಮಾಹಿತಿ ಇದ್ದರೂ ಈಗಲೂ ಕಟ್ಟಡ ನಿರ್ಮಿಸುತ್ತಿರುವವರಿಗೆ ನೋಟಿಸ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಈ ಎಲ್ಲಾ ಬೆಳವಣಿಗೆಗಳು ಸಾರ್ವಜನಿಕರಿಗೆ ಪುಷ್ಕಳ ಭೋಜನ ಸವಿದಂತೆ ಆಗಿದ್ದು ಎಲ್ಲವೂ ಅಂದುಕೊಂಡಂತೆ ಆಗಿದ್ದೇ ಆದಲ್ಲಿ ನಗರದ ಅಂದ ಹೆಚ್ಚುವ ಜತೆಗೆ ಸಂಚಾರ ದಟ್ಟಣೆಗೆ ಮುಕ್ತಿ ದೊರೆಯಲಿದೆ.