ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: ಧರ್ಮಸ್ಥಳ ಸಂಚುಕೋರರಿಗೆ ಸೋಲು ಸನಾತನ ಧರ್ಮಕ್ಕೆ ಗೆಲುವು : ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಆಶಯ

ಅಣ್ಣಪ್ಪ ಸ್ವಾಮಿ, ಮಂಜುನಾಥಸ್ವಾಮಿ ಸೇವೆ ಸಲ್ಲಿಸುತ್ತಾ ಸಮಾಜವನ್ನು ಸನ್ಮಾರ್ಗದ ಕಡೆ ಕೊಂಡೊ ಯ್ಯುತ್ತಿದ್ದಾರೆ. ಒಂದೆಡೆ ಭಕ್ತಿ ಮತ್ತೊಂದೆಡೆ ಸಮಾಜ ಸೇವೆ ಹೆಸರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯ ವಿಶ್ವಪ್ರೀತಿ ಪಡೆದಿತ್ತು.ಇಷ್ಟೇ ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿರುವ ಸ್ತ್ರೀಶಕ್ತಿ ಸಂಘಗಳನ್ನು ಒಗ್ಗೂಡಿಸಿ ಅವರಲ್ಲಿ ಆರ್ಥಿಕ ಚೇತನ್ಯವನ್ನು ತುಂಬುವ ಸಾರ್ಥಕ ಕಾರ್ಯ ನಿವಿಘ್ನವಾಗಿ ಸಾಗಿದೆ

ಚಿಕ್ಕಬಳ್ಳಾಪುರದಿಂದ ಧರ್ಮಸ್ಥಳಕ್ಕೆ ನೂರಾರು ಕಾರುಗಳಲ್ಲಿ ಹೊರಟ ಸಂದೀಪ್‌ರೆಡ್ಡಿ ಮತ್ತು ಬೆಂಬಲಿಗರ ಚಿತ್ರ.

ಚಿಕ್ಕಬಳ್ಳಾಪುರ: ಸನಾತನ ಧರ್ಮವನ್ನು ಕಾಪಾಡಿಕೊಂಡು ಬರುತ್ತಿರುವ ಶ್ರದ್ದಾ ಕೇಂದ್ರಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ದುಷ್ಟ ಕೂಟಕ್ಕೆ ಸೋಲಾಗಲಿದ್ದು ಧರ್ಮಕ್ಕೆ ಧರ್ಮಕಾರ್ಯಕ್ಕೆ ಸದಾ ಜಯವಾಗಲಿದೆ ಎಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ನಗರದಿಂದ ಧರ್ಮಸ್ಥಳದ ವರೆಗೆ ಧರ್ಮ ಸಂಸ್ಥಾಪನೆಗಾಗಿ ಕೈಗೊಂಡಿದ್ದ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: Dharmasthala case: ಮಟ್ಟಣ್ಣನವರ್‌ ಬಳಿ ಇರುವ ಸಾಕ್ಷ್ಯಗಳೆಲ್ಲಾ ಸುಜಾತಾ ಭಟ್‌ ರೀತಿಯದ್ದು: ಚಕ್ರವರ್ತಿ ಸೂಲಿಬೆಲೆ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಅಣ್ಣಪ್ಪ ಸ್ವಾಮಿ, ಮಂಜುನಾಥಸ್ವಾಮಿ ಸೇವೆ ಸಲ್ಲಿಸುತ್ತಾ ಸಮಾಜವನ್ನು ಸನ್ಮಾರ್ಗದ ಕಡೆ ಕೊಂಡೊಯ್ಯುತ್ತಿದ್ದಾರೆ. ಒಂದೆಡೆ ಭಕ್ತಿ ಮತ್ತೊಂದೆಡೆ ಸಮಾಜ ಸೇವೆ ಹೆಸರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯ ವಿಶ್ವಪ್ರೀತಿ ಪಡೆದಿತ್ತು.ಇಷ್ಟೇ ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿರುವ ಸ್ತ್ರೀಶಕ್ತಿ ಸಂಘಗಳನ್ನು ಒಗ್ಗೂಡಿಸಿ ಅವರಲ್ಲಿ ಆರ್ಥಿಕ ಚೇತನ್ಯವನ್ನು ತುಂಬುವ ಸಾರ್ಥಕ ಕಾರ್ಯ ನಿವಿಘ್ನವಾಗಿ ಸಾಗಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಶತಮಾನಗಳಿಂದ ಅನ್ನದಾನವನ್ನು ವಸತಿ ಸೌಕರ್ಯವನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಇಂತಹ ಸಚ್ಚಾರಿತ್ರ‍್ಯವುಳ್ಳ ಖಾವಂದರ ಬಗ್ಗೆ, ಧರ್ಮಸ್ಥಳದ ಚಾರಿತ್ರ್ಯದ ಬಗ್ಗೆ ತಪ್ಪು ತಪ್ಪು ಸಂದೇಶಗಳನ್ನು ನೀಡುತ್ತಾ ಯುವ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿರುವವರು ವಿರುದ್ಧ ಅಖಂಡ ಹಿಂದೂ ಸಮಾಜ ಎದ್ದು ನಿಂತಿದೆ.ಇಲ್ಲಿಗೆ ಮಸಿ ಬಳಿಯಲು ಮುಂದಾಗುವವರಿಗೆ ತಕ್ಕ ಶಾಸ್ತಿಯನ್ನು ಹಿಂದೂ ಸಮಾಜ ಮಾಡಲಿದೆ ಎಚ್ಚರ ಎಂದು ಘರ್ಜಿಸಿದರು.

ಈಗಾಗಲೇ ಧರ್ಮಸ್ಥಳ ಉಳಿಸಿ ಆಧರ್ಮಿಗಳನ್ನ ಅಳಿಸಿ ಕಾರ್ಯಕ್ರಮ ಚಾಲ್ತಿಯಲ್ಲಿದೆ. ನಮ್ಮ ನಾಯಕರ ಆದೇಶದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಿಂದ ನೂರಾರು ಕಾರುಗಳಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ.ಇಲ್ಲಿಗೆ ಬಂದು ಮಂಜುನಾಥಸ್ವಾಮಿಯ ದರ್ಶನ ಪಡೆದು, ಖಾವಂದರ ಭೇಟಿಯಾಗಿ ಅವರ ಆಶೀರ್ವಾದ ಪಡೆಯಲಾಗುವುದು. ಶ್ರೀ ಕ್ಷೇತ್ರದ ಬಗ್ಗೆ ಯಾರೇ ಅಪಪ್ರಚಾರ ಮಾಡಿದರೂ ಅವರಿಗೆ ತಕ್ಕ ಶಾಸ್ತಿ ಮಾಡುವ ಶಕ್ತಿ ಮಂಜುನಾಥ ಸ್ವಾಮಿಗೆ ಇದೆ ಎಂಬುದು ಎಸ್‌ಐಟಿ ತನಿಖೆಯಿಂದಾಗಿ ಸಾಬೀತಾಗಿದೆ. ಮುಸುಕು ದಾರಿಯ ಆಟ ನಿಂತಿದೆ, ಸುಳ್ಳು ಹೊರ ಬರುತ್ತಿದೆ. ಅವರ ಹಿಂದೆ ಇದ್ದ ದುಷ್ಟಕೂಟದ ಆಟಗಳು ಸಂಪೂರ್ಣ ಬಂದಾಗಿವೆ. ಅಧರ್ಮಿ ಗಳನ್ನು ಜೈಲಿಗಟ್ಟಲಾಗಿದೆ.ಇನ್ನೇನಿದ್ದರೂ ಧರ್ಮಕ್ಕೆ ಜಯ ಧರ್ಮಕ್ಕೆ ಜಯ ಎಂದು ಸಂತಸ ಹಂಚಿಕೊಂಡರು.