ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ : ಜಿ.ಕೆ.ಹೊನ್ನಯ್ಯ,

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಹಾಗೂ ಹಿಂದುಳಿದ ವರ್ಗಗಳ ಬಾಳಿಗೆ ಬೆಳಕಾಗಿದ್ದರು. ಸಮಾಜದ ಎಲ್ಲಾ ಸಮುದಾಯಗಳು ಯಾವ ರೀತಿಯಾಗಿ ಬದುಕುತ್ತಿದ್ದಾರೆ ಎಂದು ಗುರುತಿಸಿ,  ಅವರಿಗೆ ಹೊಸ ಯೋಜನೆಗಳನ್ನು ರೂಪಿಸಿದ್ದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರರಾಗಿ, ಹಿಂದುಳಿದ ವರ್ಗಗಳ ಬಾಳಿಗೆ ಬೆಳಕಾಗಿದ್ದರು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ ಅಭಿಪ್ರಾಯಪಟ್ಟರು.

ಗೌರಿಬಿದನೂರು : ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರರಾಗಿ, ಹಿಂದುಳಿದ ವರ್ಗಗಳ ಬಾಳಿಗೆ ಬೆಳಕಾಗಿದ್ದರು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ ಅಭಿಪ್ರಾಯಪಟ್ಟರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೇವರಾಜು ಅರಸು ರವರ ೧೧೦ ನೇ ಜನ್ಮ ದಿನಾಚರಣೆ ಹಿಂದುಳಿದ ವರ್ಗಗಳ ಕಚೇರಿಯಲ್ಲಿ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು.

ದೇವರಾಜು ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ.ಹೊನ್ನಯ್ಯ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಹಾಗೂ ಹಿಂದುಳಿದ ವರ್ಗಗಳ ಬಾಳಿಗೆ ಬೆಳಕಾಗಿದ್ದರು. ಸಮಾಜದ ಎಲ್ಲಾ ಸಮುದಾಯಗಳು ಯಾವ ರೀತಿಯಾಗಿ ಬದುಕುತ್ತಿದ್ದಾರೆ ಎಂದು ಗುರುತಿಸಿ,  ಅವರಿಗೆ ಹೊಸ ಯೋಜನೆಗಳನ್ನು ರೂಪಿಸಿದ್ದರು. ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯವಾಗಿ ಬೆಳೆದರೆ ಮಾತ್ರ ಸಮುದಾಯಗಳು ಎಲ್ಲಾ ರಂಗಗಳಲ್ಲೂ ಬೆಳೆಯಲು ಸಾಧ್ಯ, ಎಂದು ನಂಬಿದ್ದರು, ಇಂತಹ ಮಹಾನ್ ನಾಯಕರ ಆದರ್ಶ ಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಇದನ್ನೂ ಓದಿ: Chinthamani News: ಎಲ್ಲಿಯೂ ಕಾಣದ ರ‍್ಯಾಂಪ್ ವ್ಯವಸ್ಥೆ ; ಅಸಡ್ಡೆ ಪ್ರಶ್ನಿಸಿ ಮುಖಂಡ ಕಿರಣ್ ನಾಯಕ್ ಆಕ್ರೋಶ

ನಿಲಯಪಾಲಕ ನಾಗರಾಜ್ ಮಾತನಾಡಿ, ದೇವರಾಜ್ ಅರಸು ಮುಖ್ಯ ಮಂತ್ರಿಯಾಗಿದ್ದಾಗ ಮಲ ಹೊರುವ ಅಂತಹ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಿದರು, ಕೆಲವೇ ಜನರನ್ನು ಬಳಿ ಇದ್ದ ಭೂಮಿಯನ್ನು, ಉಳುವವನೆ ಭೂಮಿಯ ಒಡೆಯ ಎಂದು ಘೋಷಣೆ ಮಾಡಿದರು, ಕ್ರಾಂತಿಕಾರಕ ಬದಲಾವಣೆ ತಂದರು, ಹಾಗೂ ವಿದ್ಯಾರ್ಥಿಗಳಿಗೋಸ್ಕರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸ್ಥಾಪನೆ ಮಾಡಿ, ಹಿಂದುಳಿದ ವರ್ಗಗಳ ಏಳ್ಗೆಗೋಸ್ಕರ ಅನೇಕ ಯೋಜನೆ ಗಳನ್ನು ಜಾರಿಗೆ ತಂದರು ಎಂದು ತಿಳಿಸಿದರು.

ಎಸ್ ಎಸ್ ಎಲ್. ಸಿ ಮತ್ತು ಪಿ ಯು ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸ ಲಾಯಿತು.

ಇದೇ ಸಂದರ್ಭದಲ್ಲಿ ಪ್ರಭಾರ ಬಿಇಒ ಗಂಗರೆಡ್ಡಿ, ಗ್ರೇಡ್ ೨ ತಹಶೀಲ್ದಾರ್ ಆಶಾ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ವನಜಾಕ್ಷಿ, ಪಂಚಾಯಿತಿ ಸಿಬ್ಬಂದಿ ಕರಿಯಪ್ಪ, ನಿಲಯಪಾಲಕರಾದ ವಸಂತ ಕುಮಾರಿ, ಅರುಣಾ, ಹಾಗೂ ಮುಖಂಡ ಪ್ರಮೀಳಾ ರಾಧಾಕೃಷ್ಣ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.