ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಿಂದ ಈ ಮೊದಲು ಬ್ರೋಕರ್‌ಗಳು ವಿಧಾನಸೌಧಕ್ಕೆ ಹೋಗುತ್ತಿದ್ದರು. ಇದೀಗ ಜೋಕರ್‌ಗಳು ಹೋಗ್ತಿತ್ತಿದ್ದಾರೆ. ಬ್ರೋಕರ್‌ಗಿಂತ ಜೋಕರ್ ಆಗಿರುವುದು ಮೇಲು. ನಾನು ಜೋಕರ್ ಆಗಲು ಇಷ್ಟಪಡುತ್ತೇನೆ.ಜೋಕರ್ ನಾಲ್ಕು ಜನರನ್ನು ನಗಿಸುತ್ತಾರೆ. ಆದರೆ ಬ್ರೋಕರ್?? ಅವರು ಯಾರು ಎಂದು ಮತ್ತೆ ನನ್ನನ್ನು ಕೇಳಬೇಡಿ ಎಂದು ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar)ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ( Vijayapura MLA Basana Gowda Patil Yatnal) ರಿಗೆ ಟಾಂಗ್ ನೀಡಿದರು.
ವಿಧಾನಸಭೆಗೆ ಜೋಕರ್‌ಗಳು ಬಂದಿದ್ದಾರೆ ಎಂಬ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನನ್ನು ಜೋಕರ್ ಎಂದಿದ್ದು ಖುಷಿಯಾಯಿತು. ಆದರೆ ನಾಲ್ಕು ಜನರ ಸಂತೋಷಕ್ಕೆ ಕಾರಣ ರಾಗುವವರು ಜೋಕರ್‌ಗಳು, ಬ್ರೋಕರ್‌ಗಿಂತಲೂ ಜೋಕರ್ ಆಗಿರುವುದು ಮೇಲು ಎಂದು ನುಡಿದರು.
ಅವರು ವಿಧಾನಸಭೆ ಎದುರು ೧೧ ಜೆಸಿಬಿಗಳನ್ನು ನಿಲ್ಲಿಸುವ ಮೊದಲು ಅವರದ್ದೇ ಕ್ಷೇತ್ರದ ಕೆಲವು ವಾರ್ಡ್ಗಳ ರಸ್ತೆ ಸರಿಪಡಿಸಲು ಜೆಸಿಜಿಗಳನ್ನು ಕಳುಹಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು. ಇದನ್ನು ಬಿಟ್ಟು ಜೆಸಿಬಿ ತಂದು ಕಟ್ಟಡ ಹೇಗೆ ಕೆಡವಲಾಗುತ್ತದೆ. ಅವರಿಗೆ ಧೈರ್ಯವಿದ್ದಲ್ಲಿ ಕ್ಷೇತ್ರಗಳಿಗೆ ಜೆಸಿಬಿ ತಂದು ಕೆಲಸ ಮಾಡಿ ತೋರಿಸಲಿ ಎಂದು ಕಾಲೆಳೆದರು.
ಇದನ್ನೂ ಓದಿ: MLA Pradeep Eshwar: ಟೀಕೆಗಳಿಗೆ ಅಂಜದೆ ಕ್ಷೇತ್ರದ ಅಭಿವೃದ್ದಿಗೆ ಕಟಿಬದ್ಧನಾಗಿದ್ದೇನೆ : ಶಾಸಕ ಪ್ರದೀಪ್ ಈಶ್ವರ್
ಯತ್ನಾಳ್ ಅವರಿಗೆ ವಬಿಜೆಪಿಯಲ್ಲಿಯೇ ಸದಸ್ಯತ್ವ ಇಲ್ಲ. ಹೀಗಿರುವಾಗ ೨೦೨೮ಕ್ಕೆ ರಾಜ್ಯದ ಮುಖ್ಯಮಂತ್ರಿ ಹೇಗೆ ಆಗುತ್ತಾರೆ. ೨೦೨೮ಕ್ಕೆ ಬಿಜೆಪಿ ಪಕ್ಷವೇ ೭೦ ಸೀಟ್ ಪಡೆಯುವುದು ಡೌಟು. ಇದೆಲ್ಲವೂ ಹಗಲಗನಸು. ಇದನ್ನು ಅವರು ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕುಟುಕಿ ದರು.
ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಠೇವಣಿ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ಯತ್ನಾಳ್ ಅವರು ಹೇಳುವ ಅವಶ್ಯಕತೆ ಇಲ್ಲ. ಅಮ್ಮ ಆಂಬ್ಯುಲೆನ್ಸ್ ಸೇವೆ ಪಡೆದವರು ಮಾತ್ರ ಓಟು ಹಾಕಿದರೆ ೫೦ ಸಾವಿರ ಆಗಲಿದೆ. ಕೈ ಹಿಡಿದರೆ ಗೆಲುವು ಸಾಧಿಸುವೆ. ಹೈಕಮಾಂಡ್ ಸೂಚಿಸಿದರೆ ರಾಜ್ಯದ ಯಾವುದೇ ಕ್ಷೇತ್ರದಲ್ಲಾದರೂ ಸ್ಪರ್ಧಿಸಿ ಗೆಲುವು ಪಡೆಯಬಲ್ಲೆ, ಇದನ್ನು ಬಿಟ್ಟು ಯಾವುದೇ ಕೆಲಸವಿಲ್ಲದೆ ಬೆಂಗಳೂರಿಗೆ ಅಲೆಯುವ ಬ್ಲೂಬಾಯ್ಸ್ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ಕರ್ನಾಟಕಕ್ಕೆ ಕೃಷ್ಣ ನದಿಯ ನೀರಾವರಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿಕೆ ಸ್ವಾಗತಾರ್ಹ. ಈ ಭಾಗದಲ್ಲಿ ನಿರಂತರವಾಗಿ ಹೋರಾಟವನ್ನು ನಡೆಸಿಕೊಂಡು ಸೂಕ್ತ ಯೋಜನೆಗಳ ಜಾರಿಗೆಗೆ ಒತ್ತಾಯಿಸಲಾಗುತ್ತಿದೆ. ಇದಕ್ಕೆ ಪ್ರಾಮಾಣಿಕ ಸ್ಪಂದನೆ ಸಿಗಬೇಕು.ಅದನ್ನು ಯಾರೇ ಮಾಡಿದರೂ ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ನಕಲಿ ಪತ್ರ ರದ್ದು
ಹಿಂದೆ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಗೆಲ್ಲಬೇಕೆಂಬ ಉದ್ದೇಶದೊಂದಿಗೆ ಅವರು ನೀಡಿರುವ ೨೨ಸಾವಿರ ನಿವೇಶನದ ಹಕ್ಕು ಪತ್ರಗಳು ನಕಲಿಯಾಗಿದ್ದು, ಇದೆಲ್ಲವೂ ರದ್ದಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ರ ಹೆಸರು ಪ್ರಸ್ತಾಪಿಸದೇ ಶಾಸಕ ಪ್ರದೀಪ್ ಈಶ್ವರ್ ಟೀಕಿಸಿದರು.
ನಿವೇಶನದ ಜಾಗವನ್ನು ಗುರುತಿಸದೇ,ಅಭಿವೃದ್ದಿ ಮಾಡದೆ ಹೇಗೆ ದಾಖಲೆ ನೀಡಲಾಗುತ್ತದೆ. ಕೇವಲ ಚುನಾವಣೆಯಲ್ಲಿ ಜನರ ಮತ ಪಡೆಯಬೇಕೆಂಬ ಏಕೈಕ ದುರುದ್ದೇಶದಿಂದ ಹಕ್ಕುಪತ್ರ ವಿತರಿಸ ಲಾಗಿತ್ತು. ಇದು ಸರ್ಕಾರಿ ನಿಯಮಗಳಂತೆ ಇಲ್ಲ. ಇದರ ನಡುವೆ ಜನರನ್ನು ದಿಕ್ಕು ತಪ್ಪಿಸ ಲಾಗುತ್ತದೆ. ನಿವೇಶನ ರಹಿತರಿಗೆ ಸರ್ಕಾರದಿಂದ ಹೊಸದಾಗಿ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.