ಚಿಕ್ಕಬಳ್ಳಾಪುರ: ಎಸ್‌ಜೆಸಿಐಟಿ ಕ್ಯಾಂಪಸ್ ಶ್ರೀಬಾಲಗಂಗಾಧರನಾಥಸ್ವಾಮೀಜಿ ಸಭಾಂಗಣದಲ್ಲಿ "ಇಂಜಿನಿರ‍್ಸ್ ಡೇ" ಮತ್ತು ೨೦೨೫ನೇ ಸಾಲಿನ ಶಿಕ್ಷಕರ ದಿನಾಚರಣೆಯನ್ನು ಒಟ್ಟೊಟ್ಟಿಗೆ ಆಚರಿಸ ಲಾಯಿತು.
ನಗರ ಹೊರವಲಯ ಎಸ್‌ಜೆಸಿಐಟಿ ಕ್ಯಾಂಪಸ್ಸಿನಲ್ಲಿ ಆಯೋಜಿಸಿದ್ದ ಅವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ|| ಎಸ್.ಎನ್ ಶ್ರೀಧರ ಅವರು ಮಾತನಾಡಿ ಸಮಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ.ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲಗುರು ಎಂದು ಹೇಳಿದರೂ ಕೂಡ ವ್ಯಕ್ತಿಯೊಬ್ಬ ಪರಿಪೂರ್ಣನಾಗಲು ಶಾಲೆಯ ಪಾಠ ಗುರುಗಳ ಮಾರ್ಗದರ್ಶನ ಮುಖ್ಯ. ಮಂಕುತಿಮ್ಮನ ಕಗ್ಗವು ನಮಗೆ ಗುರುಗಳ ಮಹತ್ವನ್ನು ಸಾರುವ ಮಹತ್ವದ ಗ್ರಂಥವಾಗಿದೆ. ಶಿಕ್ಷಕರ ದಿನಾಚರಣೆ ನೆಪದಲ್ಲಿಯಾದರೂ ಉತ್ತಮ ಕೃತಿಗಳನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.
ಒಬ್ಬ ಆದರ್ಶ ಶಿಕ್ಷಕ ಸದಾ ವಿದ್ಯಾರ್ಥಿಯಂತೆ ಕುತೂಹಲಿಯಾಗಿರುತ್ತಾನೆ.ಶಿಕ್ಷಣವೆನ್ನುವುದು ಹರಿಯುವ ನದಿಯಂತೆ ಸ್ವಚ್ಛ ಸುಂದರ.ಹರಿವನ್ನು ನಿಲ್ಲಿಸಿದರೆ ನದಿಯ ಬದುಕು ಹಾಳಾಗುವಂತೆ, ಓದನ್ನು ನಿಲ್ಲಿಸಿದರೆ ವಿದ್ಯಾರ್ಥಿ ಶಿಕ್ಷಕರ ಜೀವನ ವ್ಯರ್ಥ ಎನ್ನುವುದನ್ನು ತಿಳಿಸಿದರು.
ಇದನ್ನೂ ಓದಿ: Chikkaballapur News: ಲಯನ್ಸ್ ಸಂಸ್ಥೆಯಿಂದ ಡಿ.ಟಿ ಶ್ರೀನಿವಾಸ್‌ಮೂರ್ತಿಗೆ ಆಚಾರ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ
ಕೆ.ಎಸ್ ಸಿದ್ದಪ್ಪ ಮಾತನಾಡಿ ಸಮಾಜವನ್ನು ಬೆಳೆಸುವಲ್ಲಿ ಉತ್ತಮ ಶಿಕ್ಷಕರ ಪಾತ್ರ ಬಹು ಮುಖ್ಯ ಎಂದರೆ ಡಾ ಎಂ. ಶಿವಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಮಾಡುವ ಪಾಠ ಪ್ರವಚನಗಳು ತಲುಪುತ್ತಿವೆ ಎಂಬುದನ್ನು ಅರಿತು ಬೋಧನೆ ಮುಂದುವರೆಸಬೇಕು ಎಂದರು.
ಪ್ರಾAಶುಪಾಲ ಡಾ|| ಜಿ.ಟಿ ರಾಜು ಮಾತನಾಡಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಬದುಕು ಬರಹ ಸಾಧನೆಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಹೀಗಾಗಿಯೇ ಅವರ ಜನ್ಮದಿನವನ್ನು ಇಂಜಿನಿರ‍್ಸ್ಗಳ ದಿನವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸರ್‌ಎಂವಿ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಗೌರವಿಸುವ ಅಮೂಲ್ಯವಾದ ದಿನ ಸೆ.೧೫ ಆಗಿದೆ. ಸಣ್ಣ ಕೆಲಸವೇ ಆಗಲಿ ಶ್ರದ್ದೆಯಿಂದ ಮಾಡಿದ್ದಲ್ಲಿ ಪರಿಪೂರ್ಣತೆಯನ್ನು ಕಾಣುತ್ತದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರೊಂದಿಗೆ ಅವರ ವ್ಯಕ್ತಿತ್ವವನ್ನೂ ರೂಪಿಸು ತ್ತಾರೆ. ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು ನೆನೆಯುತ್ತಾ ಅವರ ಆದರ್ಶಗಳನ್ನು ಶಿಕ್ಷಕರಾದ ನಾವು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ, ಭೋದಕ ಮತ್ತು ಭೋದಕೇತರ ಸಿಬ್ಬಂದಿಯವರಿಗೆ ಸನ್ಮಾನಿಸಲಾಯಿತು. ಹಾಗೂ ವಿವಿಧ ವಿಭಾಗಗಳಲ್ಲಿ ಅತ್ಯತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಯವರಿಗೆ ಪ್ರಶಶ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ|| ಎಸ್.ಎನ್ ಶ್ರೀಧರ, ಕುಲಪತಿಗಳು, ಶ್ರೀ ಆದಿಚಂಗನಗಿರಿ ವಿಶ್ವವಿದ್ಯಾ ಲಯರವರು, ಶ್ರೀ ಕೆ.ಎಸ್ ಸಿದ್ದಪ್ಪ, ನಿವೃತ್ತ ಪ್ರಾಧ್ಯಾಪಕರು, ನ್ಯಾಷನಲ್ ಪದವಿ ಪೂರ್ವ ಕಾಲೇಜ್, ಬಾಗೇಪಲ್ಲಿ ಮತ್ತು ಡಾ|| ಎಂ. ಶಿವಕುಮಾರ್, ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೀಮಂಗಲ, ಶಿಡ್ಲಘಟ್ಟ ತಾಲ್ಲೂಕು ರವರು ಭಾಗವಹಿಸಿದ್ದರು. ಹಾಗೂ ಪ್ರಾಂಶುಪಾಲರಾದ ಡಾ|| ಜಿ.ಟಿ ರಾಜು, ಮತ್ತು ಶ್ರೀ ರಂಗಸ್ವಾಮಿ ಜಿ.ಆರ್, ಆಡಳಿತಾಧಿಕಾರಿಗಳು, ಡಾ|| ಮಂಜುನಾಥ್ ಕುಮಾರ್ ಬಿ.ಹೆಚ್, ಮುಖ್ಯಸ್ಥರು, ಗಣಕಯಂತ್ರ ವಿಭಾಗ, ಡೀನ್ ಅಕಾಡೆ ಮಿಕ್ಸ್, ವಿವಿಧ ವಿಭಾಗದ ಮುಖ್ಯಸ್ಥರು, ಬೋದಕ, ಬೋದಕೇತರ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.