ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸರ್ಕಾರಿ ಆಸ್ಪತ್ರೆಗಳಲ್ಲಿ ನೂರಕ್ಕೆ ನೂರು ಗುಣಮಟ್ಟದ ಚಿಕಿತ್ಸೆಗಳನ್ನು ನೀಡಿದರೂ ನ್ಯೂನತೆ ಹುಡುಕುವುದೇ ಹೆಚ್ಚು : ಡೀನ್ ಡಾ.ಎಂ.ಎಲ್.ಮಂಜುನಾಥ್ ಬೇಸರ

ಉತ್ತಮ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವುದಕ್ಕೆ ಬೆಂಗಳೂರು ಸೇರಿದಂತೆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಮಾಡುವ ನಾಳೀಯ( ವಸ್ಕಲರ್) ಕಾಯಿಲೆಗಳ ಶಸ್ತ್ರ ಚಿಕಿತ್ಸೆಗಳನ್ನು ಸಾಕಷ್ಟು ರೋಗಿಗಳಿಗೆ ನಮ್ಮ ಜಿಲ್ಲಾಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸ ಡಾ.ಸುನೀಲ್ ಜೋಷಿ ನೇತೃತ್ವದ ಶಸ್ತ್ರ ಚಿಕಿತ್ಸಕರ ತಂಡ ಯಶಸ್ವಿಯಾಗಿ ಪೋರೈಸಿರುವುದೇ ಉದಾಹರಣೆಯಾಗಿದೆ

ಚಿಕ್ಕಬಳ್ಳಾಪುರ: ಸರ್ಕಾರಿ ಒಡೆತನದ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಶೇ 100ರಷ್ಟು ಉತ್ತಮ ಗುಣಮಟ್ಟದ ಸೇವೆ , ಚಿಕಿತ್ಸೆ ನೀಡಿದರೂ  ಒಂದಿಲ್ಲೊಂದು ಲೋಪಗಳನ್ನು ಹುಡುಕಿ ತೆಗಳುವುದೇ ಹೆಚ್ಚು ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಡೀನ್ ಡಾ.ಎಂ.ಎಲ್.ಮಂಜುನಾಥ್ ಹೇಳಿದರು.

ನಗರದ ಜಿಲ್ಲಾಸ್ಪತೆಯಲ್ಲಿ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಶಸ್ತ್ರಚಿಕಿತ್ಸಾ ವಿಭಾಗವು ಮತ್ತು ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಚಿಕ್ಕಬಳ್ಳಾಪುರ ಘಟಕ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ

ನಾಳೀಯ ರೋಗ ಜಾಗೃತಿ ವಾರದ ಭಾಗವಾಗಿ ನಾಳೀಯ( ವಸ್ಕಲರ್) ಕಾಯಿಲೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ:Chikkaballapur News: ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸಭೆ

ಉತ್ತಮ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವುದಕ್ಕೆ ಬೆಂಗಳೂರು ಸೇರಿದಂತೆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಮಾಡುವ ನಾಳೀಯ( ವಸ್ಕಲರ್) ಕಾಯಿಲೆಗಳ ಶಸ್ತ್ರ ಚಿಕಿತ್ಸೆಗಳನ್ನು ಸಾಕಷ್ಟು ರೋಗಿಗಳಿಗೆ ನಮ್ಮ ಜಿಲ್ಲಾಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸ ಡಾ.ಸುನೀಲ್ ಜೋಷಿ ನೇತೃತ್ವದ ಶಸ್ತ್ರ ಚಿಕಿತ್ಸಕರ ತಂಡ ಯಶಸ್ವಿಯಾಗಿ ಪೋರೈಸಿರುವುದೇ ಉದಾಹರಣೆಯಾಗಿದೆ ಎಂದರು.      

ನಾಳೀಯ( ವಸ್ಕಲರ್) ಕಾಯಿಲೆಯಿಂದ ಹೃದಯ ಕಾಯಿಲೆಯ ಬಗ್ಗೆ ಮತ್ತು ಹೃದಯಕ್ಕೆ ಮತ್ತು ಹೃದಯದಿಂದ ರಕ್ತವನ್ನು ಸಾಗಿಸುವ ನಾಳಗಳಲ್ಲಿನ ಅಡಚಣೆಗಳ ಪರಿಣಾಮಗಳ ಬಗ್ಗೆ ತಿಳಿಸುತ್ತದೆ. ಆದರೆ ಪ್ಲೇಕ್ ಮತ್ತು ಕೊಲೆಸ್ಟ್ರಾಲ್ ಶೇಖರಣೆಯಿಂದ ಉಂಟಾಗುವ ಅಡಚಣೆಗಳು ಪರಿಧಮನಿಯ ಅಪಧಮನಿಗಳಿಗಿಂತ ಹೆಚ್ಚಿನದನ್ನು ಪರಿಣಾಮ ಬೀರುತ್ತವೆ ಎಂದು ಕೆಲವೇ ಜನರಿಗೆ ತಿಳಿದಿದೆ. ದೇಹದಾದ್ಯಂತದ ಅಪಧಮನಿಗಳು ಆಮ್ಲಜನಕ-ಸಮೃದ್ಧ ರಕ್ತವನ್ನು ಹೃದಯದಿಂದ ದೂರ ಸಾಗಿಸುತ್ತವೆ, ಆದ್ದರಿಂದ ಗಂಭೀರ ಪರಿಣಾಮಗಳೊಂದಿಗೆ ಎಲ್ಲಾ ಅಪಧಮನಿಗಳಲ್ಲಿ ಅಡಚಣೆಗಳು ಸಂಭವಿಸಬಹುದು. ಇದು ಹೆಚ್ಚಿಗೆ ರಕ್ತದೊತ್ತಡ, ಮಧು ಮೇಹಿಗಳಲ್ಲಿ ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.ಜಗತ್ತಿನಲ್ಲಿ ಹೆಚ್ಚು ಗುರುತಿಸಲ್ಪಟ್ಟ ಮೂರು ನಾಳೀಯ ಕಾಯಿಲೆಗಳು ಸೇರಿವೆ. ಮೊದಲನೆಯದು ಹೊಟ್ಟೆಯ ಮಹಾಪಧಮನಿಯ ರಕ್ತನಾಳ,ಎರಡನೆಯದು ಶೀರ್ಷ ಧಮನಿ ಅಪಧಮನಿ ಕಾಯಿಲೆ - ಪಾರ್ಶ್ವವಾಯು ಮತ್ತು ಮೂರನೆಯದು ಬಾಹ್ಯ ಅಪಧಮನಿ ಕಾಯಿಲೆ, ಮೂತ್ರಪಿಂಡ ಅಪಧಮನಿ ಸ್ಟೆನೋಸಿಸ್ಯ ಕಾಯಿಲೆಗಳಾಗಿವೆ. ಇವುಗಳನ್ನು ತಜ್ಞ ವೈದ್ಯರು ಸಾಕಷ್ಟು ಪರೀಕ್ಷೆಗಳ ಮೂಲಕ ಪತ್ತೆ ಮಾಡಿ, ಸೂಕ್ತ ಶಸ್ತ್ರ ಚಿಕಿತ್ಸೆ ನೀಡಿದಲ್ಲಿ ರೋಗಿಯು ಅಪಾಯದಿಂದ ಪಾರಾಗುತ್ತಾರೆ ಎಂದು ತಿಳಿಸಿದರು.

ಬದಲಾಗುತ್ತಿರುವ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಮಧುಮೇಹ, ಅನಿಯಮಿತ ರಕ್ತದೊತ್ತಡ ದೊಂದಿಗೆ ನಾಳೀಯ ಕಾಯಿಲೆಗಳು ಈಗ ಆಗಾಗ್ಗೆ ಕಂಡುಬರುತ್ತವೆ. ಇವುಗಳು ಗಮನಾರ್ಹವಾದ ಅನಾರೋಗ್ಯ, ಮರಣ, ಆರೋಗ್ಯ ರಕ್ಷಣೆಯ ಹೊರೆಗೆ ಕಾರಣವಾಗುವ ತೊಡಕುಗಳನ್ನು ಹೊಂದಿರ ಬಹುದು. ವಿನಾಶಕಾರಿ ತೊಡಕುಗಳನ್ನು ತಡೆಗಟ್ಟಲು ಅರಿವು, ತಡೆಗಟ್ಟುವ ಕ್ರಮಗಳನ್ನು ತಿಳಿದು ಕೊಳ್ಳುವುದು ಮತ್ತು ಆರಂಭಿಕ ಪತ್ತೆಹಚ್ಚುವಿಕೆ ಅತ್ಯಗತ್ಯಇದೆ.ಈ ಕಾಯಿಲೆಗಳಿಂದ ದೂರವಿರಲು ಹೆಚ್ಚು ಕೊಬ್ಬಿನಾಂಶದ ಆಹಾರ, ದೂಮಪಾನ, ಮದ್ಯಪಾನಗಳಿಂದ ದೂರವಿದ್ದು, ಉತ್ತಮ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ,ಮಾಡುವುದು ಒಳಿತು ಎಂದು ತಿಳಿಸಿದರು.

ಇದೇ ವೇಳೆ ನಾಳೀಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಆರೋಗ್ಯಕರ ಜೀವನ ನಡೆಸುತ್ತಿರುವ ಹಲವಾರು ಮಂದಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ರಕ್ತನಾಳ ಶಸ್ತ್ರ ಚಿಕಿತ್ಸೆಕ ಡಾ.ಎಂ.ವಿಷ್ಣು,ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾ ದೇವಿ,ನಿವಾಸಿ ವೈದ್ಯಾಧಿಕಾರಿ ಡಾ.ಪಿ.ವಿ.ರಮೇಶ್, ಅಭಯ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ. ಪ್ರಶಾಂತ ಎಸ್ ಮೂರ್ತಿ, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸುನಿಲ್ ಸುಭಾಷ್ ಜೋಶಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಸ್.ಎಲ್.ಅರುಣ್ ಕುಮಾರ್, ಡಾ.ಸಿ.ಎಂ.ಅರುಣ, ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.