ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸತ್ಯಸಾಯಿ ಗ್ರಾಮದ ನೂತನ 600 ಹಾಸಿಗೆಗಳ ಆಸ್ಪತ್ರೆಯಲ್ಲಿ ಉಚಿತ ರೋಬೊಟಿಕ್ ಶಸ್ತ್ರಚಿಕಿತ್ಸೆ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ

ರೊಬೊಟಿಕ್ ಶಸ್ತ್ರಚಿಕಿತ್ಸೆಯು ಉತ್ತರ ಅಮೆರಿಕದಂಥ ದೇಶಗಳಲ್ಲಿ ನೀವು ಪಡೆಯ ಬಹುದಾದ ಸೌಲಭ್ಯ ಕ್ಕಿಂತಲೂ ಉತ್ತಮವಾಗಿದೆ. ಇದೀಗ ಗ್ರಾಮೀಣ ವೈದ್ಯಕೀಯ ಕಾಲೇಜಿಗೆ ಈ ಸೇವೆ ಬರುತ್ತಿದೆ. ಅದು ಕೂಡ ಎಲ್ಲರಿಗೂ ಉಚಿತವಾಗಿ ನೀಡುವ ಶಸ್ತ್ರಚಿಕಿತ್ಸೆಯಾಗಿದೆ. ನೀವು ಯಾವ ರಾಜ್ಯದವರು, ಯಾವ ಭಾಷೆ ಮಾತನಾಡುತ್ತೀರಿ, ಎಷ್ಟು ಪಾವತಿಸುತ್ತೀರಿ ಎನ್ನುವುದೂ ಸೇರಿದಂತೆ ಯಾವುದೇ ಪ್ರಶ್ನೆಗಳನ್ನು ಕೇಳದೆ ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ರೋಬೊಟಿಕ್ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುತ್ತದೆ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಆರಂಭವಾಗುತ್ತಿರುವ ೬೦೦ ಹಾಸಿಗೆಗಳ ಆಸ್ಪತ್ರೆಯಲ್ಲಿ ಉಚಿತ ರೋಬೊಟಿಕ್ ಶಸ್ತ್ರಚಿಕಿತ್ಸೆಯನ್ನು ನೀಡುವ ಸೌಲಭ್ಯ ವನ್ನು ಆರಂಭಿಸುತ್ತಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶನಿವಾರ  ಎಸ್‌ಎಸ್ ಇನ್ನೊವೇಶನ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಡಾ ಸುಧೀರ್ ಶ್ರೀವಾತ್ಸವ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಮಾತನಾಡಿದರು.

'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ ೨೯ನೇ ದಿನವಾದ ಶನಿವಾರ ಮಾತನಾಡಿದ ಅವರು, ನಮ್ಮ ಆಸ್ಪತ್ರೆಯಲ್ಲಿ ಅತ್ಯುನ್ನತ ಗುಣಮಟ್ಟದ ರೋಬೊಟಿಕ್ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Chikkaballapur News: ನಾಯಕತ್ವದ ಗುಣಗಳು ಶಾಲಾ ಹಂತದಲ್ಲೇ ಮಕ್ಕಳಿಗೆ ಪರಿಚಯವಾಗಬೇಕಿದೆ: ಕಾರ್ಯದರ್ಶಿ ಶೈಲಜಾ ವೆಂಕಟೇಶ್ ಅಭಿಮತ

ಇಲ್ಲಿನ ರೊಬೊಟಿಕ್ ಶಸ್ತ್ರಚಿಕಿತ್ಸೆಯು ಉತ್ತರ ಅಮೆರಿಕದಂಥ ದೇಶಗಳಲ್ಲಿ ನೀವು ಪಡೆಯ ಬಹುದಾದ ಸೌಲಭ್ಯಕ್ಕಿಂತಲೂ ಉತ್ತಮವಾಗಿದೆ. ಇದೀಗ ಗ್ರಾಮೀಣ ವೈದ್ಯಕೀಯ ಕಾಲೇಜಿಗೆ ಈ ಸೇವೆ ಬರುತ್ತಿದೆ. ಅದು ಕೂಡ ಎಲ್ಲರಿಗೂ ಉಚಿತವಾಗಿ ನೀಡುವ ಶಸ್ತ್ರಚಿಕಿತ್ಸೆಯಾಗಿದೆ. ನೀವು ಯಾವ ರಾಜ್ಯದವರು, ಯಾವ ಭಾಷೆ ಮಾತನಾಡುತ್ತೀರಿ, ಎಷ್ಟು ಪಾವತಿಸುತ್ತೀರಿ ಎನ್ನುವುದೂ ಸೇರಿದಂತೆ ಯಾವುದೇ ಪ್ರಶ್ನೆಗಳನ್ನು ಕೇಳದೆ ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ರೋಬೊಟಿಕ್ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ವಿವರಿಸಿದರು.

ನಮ್ಮ ಸ್ಥಳೀಯ ತಂಡಗಳೇ ಬಹುತೇಕ ಎಲ್ಲವನ್ನು ನಿರ್ವಹಿಸುತ್ತವೆ. ನಮ್ಮ ಸ್ಥಳೀಯ ತಂಡಗಳಿಗೆ ಕೌಶಲ್ಯ ಸುಧಾರಣೆಗಾಗಿ ಕೆಲವೊಂದು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.  ಇಲ್ಲಿನ ತಂಡಕ್ಕೆ ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳನ್ನು ಕೇಳಲು ನನಗೆ ತುಂಬಾ ಸಂತೋಷವಾಗುತ್ತದೆ.

ಸೆ.೧೪ರಿಂದ ೫ ದಿನಗಳ ರೋಬೊಟಿಕ್ ತರಬೇತಿ ಕಾರ್ಯಕ್ರಮ ಆರಂಭವಾಗಲಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸುಮಾರು 600 ಶಸ್ತ್ರ ಚಿಕಿತ್ಸಕರು ಪ್ರಯತ್ನಿಸಲಿದ್ದಾರೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ರೋಬೊಟಿಕ್ ತರಬೇತಿ ಕಾರ್ಯಕ್ರಮದ ಪಾಲುದಾರಿಕೆ ಕುರಿತು ಎಸ್ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ರೋಬೊಟಿಕ್ ಸರ್ಜರಿ ಮತ್ತು ಶ್ರೀ ಮಧುಸೂದನ ಸಾಯಿ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡವು.

ದೂರದೃಷ್ಟಿಯ ನಾಯಕ, ಉದ್ಯಮಿ ಮತ್ತು ಮಾನವೀಯ ಮುಖದ ಹಲವು ಸೇವೆಗಳಲ್ಲಿ ಪಾಲ್ಗೊಂ ಡಿರುವ ಬೊಂಡಾಡ ಎಂಜಿನಿಯರಿAಗ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ರಾವ್ ಮತ್ತು ಎಸ್‌ಎಸ್ ಇನ್ನೊವೇಶನ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಡಾ ಸುಧೀರ್ ಶ್ರೀವಾತ್ಸವ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿರುವ ಸೂರಿನಾಮ್ ದೇಶದ ಗ್ಲೋರಿಯಾ ಬೋತ್ಸೆ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಸೂರಿನಾಮ್ ದೇಶದ ರಾಮ್ ರಾಮ್ ಸಹೈ , ಟ್ರಿನಿಡಾಡ್‌ನ ರೀಸ್ ಹಾಸ್ಪೆಡೇಲ್ಸ್ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.