ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸರಕಾರಿ ಶಾಲಾವರಣ ಸ್ವಚ್ಛತೆ: ಗ್ರಾ.ಪಂ ಸದಸ್ಯ ಮತ್ತು ಮಹಿಳಾ ಸಂಘದ ಅಧ್ಯಕ್ಷೆ ನಡುವೆ ಜಗಳ

ಸೋಮವಾರ ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಮಾಜಿ ಅಧ್ಯಕ್ಷ ಎಲ್‌ಜಿಎಂ ಮಂಜುನಾಥ್ ಮತ್ತು ವೈಷ್ಣವಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕೃಷ್ಣವೇಣಿ ನಡುವೆ ಶಾಲಾ ಆವರಣಕ್ಕೆ ಸೇರಿದ ಜಾಗದಲ್ಲಿ ಬೆಳೆದಿದ್ದ ಲಂಟಾನ, ಕಾಂಗ್ರೆಸ್‌ ಗಿಡಗಳನ್ನು ಸ್ವಚ್ಛಗೊಳಿಸುವ ಸಂಬಂಧ ನಡೆದ ವಿಚಾರ ಪ್ರತಿಷ್ಟೆಯಾಗಿ ಬದಲಾದ ಪರಿಣಾಮ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಪೊಲೀಸರ ಆಗಮನ ದವರೆಗೆ ಬೆಳೆದು ನಿಂತಿದೆ.

ಚಿಕ್ಕಬಳ್ಳಾಪುರ : ವರ್ಷಗಳಿಂದ ಬೆಳೆದುಕೊಂಡಿದ್ದ ಸರಕಾರಿ ಶಾಲಾವರಣದ ಕಸ, ಕಳೆ ಮತ್ತು ಕುರುಚಲುಗಿಡಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತುಕತೆ ವಿಕೋಪಕ್ಕೆ ತಿರುಗಿ ತಳ್ಳಾಟ ನೂಕಾಟದೊಂದಿಗೆ ಕೈಕೈ ಮಿಲಾಯಿಸಿಕೊಂಡು ದೂರು ಪ್ರತಿದೂರು ದಾಖಲಿಸಿಕೊಂಡ ಘಟನೆ ತಾಲೂಕಿನ ಲಿಂಗಶೆಟ್ಟಿಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಆವುಲಗುರ್ಕಿ ಪಂಚಾಯಿತಿಗೆ ಸೇರಿದ ಲಿಂಗಶೆಟ್ಟಿಪುರ ಗ್ರಾಮದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಮಾಜಿ ಅಧ್ಯಕ್ಷ ಎಲ್‌ಜಿಎಂ ಮಂಜುನಾಥ್ ಮತ್ತು ವೈಷ್ಣವಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕೃಷ್ಣವೇಣಿ ನಡುವೆ ಶಾಲಾ ಆವರಣಕ್ಕೆ ಸೇರಿದ ಜಾಗದಲ್ಲಿ ಬೆಳೆದಿದ್ದ ಲಂಟಾನ, ಕಾಂಗ್ರೆಸ್‌ ಗಿಡಗಳನ್ನು ಸ್ವಚ್ಛಗೊಳಿಸುವ ಸಂಬಂಧ ನಡೆದ ವಿಚಾರ ಪ್ರತಿಷ್ಟೆಯಾಗಿ ಬದಲಾದ ಪರಿಣಾಮ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಪೊಲೀಸರ ಆಗಮನ ದವರೆಗೆ ಬೆಳೆದು ನಿಂತಿದೆ.

ಇದನ್ನೂ ಓದಿ: Chikkaballapur News: ದ್ರಾವಿಡ ನೆಲದ ಸಾಹಿತ್ಯ ಓದಿ ತಿಳಿಯುವ ಅಗತ್ಯವಿದೆ : ಕಸಾಪ ತಾಲೂಕು ಅಧ್ಯಕ್ಷ ಜನಾರ್ಧನ್‌ಮೂರ್ತಿ

ಏನಿದು ಘಟನೆ??
ಈಶಾ ರಸ್ತೆಯಲ್ಲಿರುವ ಲಿಂಗಶೆಟ್ಟಿಪುರ ಗ್ರಾಮದಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಯಾದ ಕೃಷ್ಣವೇಣಿ ಎಂಬ ಗೃಹಿಣಿ ಈಶಾ ಸಂಸ್ಥೆಯು ನಡೆಸುವ ಕ್ರೀಡಾಕೂಟಕ್ಕೆ ಶಾಲಾ ಆವರಣ ವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.ಈ  ವಿಚಾರ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಮತ್ತು ಈಕೆಯ ನಡುವೆ ಬಿರುಸಿನ ಮಾತುಕತೆಗೆ ನಾಂದಿ ಹಾಡಿದೆ.

ಹಾಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಗ್ರಾಮದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದೇನೆ. ಈ ಗ್ರಾಮದಲ್ಲಿ ಏನೇ ಸಮಸ್ಯೆ ಆದರೂ ನಾನೇ ಮುಂದೆ ನಿಂತು ಪರಿಹಾರ ಕಲ್ಪಿಸಿದ್ದೇನೆ. ಹೀಗಿದ್ದರೂ ನನ್ನ ಗಮನಕ್ಕೆ ತಾರದೆ ಜೆಸಿಬಿ ತರಿಸಿ ನೀವೇ ಸ್ವಚ್ಛತೆಯ ಕೆಲಸಕ್ಕೆ ಇಳಿದಿದ್ದು ತಪ್ಪು, ಸದಸ್ಯರ ಗಮನಕ್ಕೆ ತರುವ ಸೌಜನ್ಯವಿರಬೇಕು ಅಲ್ಲವೆ ಎಂಬAತೆ  ಸದಸ್ಯ ಮತ್ತು ಕೃಷ್ಣವೇಣಿ ಗುಂಪಿನ ನಡುವೆ ಜಗಳ ಶುರುವಾಗಿ ಬಿಸಿಬಿಸಿ ಚರ್ಚೆ ನಡೆದಿದೆ ಎನ್ನಲಾಗಿದೆ.ಇದರಿಂದ ಮನನೊಂದ ಕೃಷ್ಣವೇಣಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.ದೂರು ದಾಖಲಿಸಲು ನಿರಾಕರಿಸಿದ ಮಹಿಳಾ ಠಾಣೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಸಣ್ಣ ವಿಚಾರಕ್ಕೆ ಹೀಗೆ ಪೊಲೀಸ್‌ ಠಾಣೆ ಮೆಟ್ಟಿಲೇರು ವುದು ತಪ್ಪು ಎಂದು ತಿಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಕುಪಿತರಾದ ಕೃಷ್ಣವೇಣಿ ಗ್ರಾಮಕ್ಕೆ ವಾಪಸ್ಸಾದವರೇ ನಡುರಸ್ತೆಯಲ್ಲಿ ನ್ಯಾಯಕೋರಿ ಅಂಬೇಡ್ಕರ್ ಪೋಟೋ ಹಿಡಿದು ಧರಣಿ ಕುಳಿತಿದ್ದಾರೆ.

14k

ಪ್ರತಿಯಾಗಿ ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ್ ತನ್ನ ಪತ್ನಿಜತೆ ಇವರಿಗೆ ಎದುರಾಗಿ ಆತನೂ ಧರಣಿ ಕುಳಿತಿದ್ದಾರೆ.ಈ ಸಂದರ್ಭದಲ್ಲಿ ಮತ್ತೆ ಮಾತುಕತೆ ನಡೆದು ಎರಡೂ ತಂಡಗಳ ನಡುವೆ ತಳ್ಳಾಟ ನೂಕಾಟ ಆಗಿದೆ.ಇಷ್ಟಕ್ಕೆ ಸುಮ್ಮನಾಗದೆ ಕೈಕೈಮಿಲಾಯಿಸಿಕೊಂಡಿದ್ದಾರೆ. ಈ ವೇಳೆ ಕೃಷ್ಣವೇಣಿ ಅವರಿಗೆ ಬಳೆಯ ಗಾಜು ಚುಚ್ಚಿ ರಕ್ತಬಂದಿದೆ.ನೊAದ ಈಕೆ ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ್ ಮತ್ತು ಆಕೆಯ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.

ಆದರೆ ಮಾಧ್ಯಮದವರು ಹೋಗುವ ವೇಳೆಗಾಗಲೇ ಸುರಿವ ಮಳೆಯ ನಡುವೆ ಕೃಷ್ಣವೇಣಿ ಧರಣಿ ಕುಳಿತಿದ್ದು ಕೆಲಹೊತ್ತಿನಲ್ಲಿ ಅಪ್ರಜ್ಞೆಗೆ ಜಾರಿದ್ದಾರೆ.ಈ ವೇಳೆ ಗ್ರಾಮಸ್ಥರು ಆಕೆಗೆ ಶೈತ್ಯೋಪಚಾರ ಮಾಡಿದರೂ ಎಚ್ಚರವಾಗಲಿಲ್ಲ.ಈ ನಡುವೆ ಪೊಲೀಸರು ಆಗಮಿಸಿ ತಮ್ಮ ವಾಹದಲ್ಲಿಯೇ ಆಕೆ ಯನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವ ಮೂಲಕ ಜಗಳ ನಿಂತಿದೆ.

ಈ ವಿಚಾರದಲ್ಲಿ ಇಬ್ಬರೂ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

ಶಾಲಾ ವಣರಣ ಸ್ವಚ್ಛಗೊಳಿಸಿರುವ ವಿಚಾರದಲ್ಲಿ ಪ್ರತಿಷ್ಟೆಗೆ ಬಿದ್ದವರಂತೆ ಕಚ್ಚಾಡಿಕೊಂಡಿರುವ ಮಹಿಳಾ ಸಂಘದ ಅಧ್ಯಕ್ಷೆ ಮತ್ತು ಗ್ರಾಮಪಂಚಾಯಿತಿ ಸದಸ್ಯ ಪೊಲೀಸ್‌ ಠಾಣೆ ಮೆಟ್ಟಿಲೇರಿರು ವುದು ನೋಡಿದರೆ ಹಳ್ಳಿಗಳು ಹಳ್ಳಿಗಳಾಗಿ ಉಳಿದಿಲ್ಲ, ರಾಜಕಾರಣದ  ಅಖಾಡಗಳಾಗಿ ಬದಲಾಗಿವೆ ಎಂಬ ಭಾವ ಮೂಡುತ್ತದೆ ಎನ್ನುವುದು ಹಿರಿಯ ಜೀವಗಳ ಮಾತಾಗಿದೆ.