ಚಿಕ್ಕಬಳ್ಳಾಪುರ : ಟೀಕೆಗಳು ಸಾಯುತ್ತವೆ, ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಜೀವಂತ ವಾಗಿರಲಿವೆ ಎಂಬ ಸಂಕಲ್ಪವನ್ನು ಹೊಂದಿರುವ ನಾನು ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಕ್ಷೇತ್ರದ ಅಭಿವೃದ್ದಿಗೆ ಕಟಿಬದ್ಧನಾಗಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ನಗರದ ಪ್ರಶಾಂತ್ ನಗರದಲ್ಲಿನ ನಾಲ್ಕನೇ ವಾರ್ಡಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಿಸಿರಸ್ತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಾಲಿ ನಗರಸಭಾಧ್ಯಕ್ಷರು ಪ್ರತಿನಿಧಿಸುವ ೪ ವಾರ್ಡಿನಲ್ಲಿ ೩೫ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಯನ್ನು ಕೆಲವೇ ದಿನಗಳ ಹಿಂದೆ ಪ್ರಾರಂಭಿಸಲಾಗಿದ್ದು ಕೇವಲ ೧೫ ದಿನಗಳ ಅಂತರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನಬಳಕೆಗೆ ಮುಕ್ತಗೊಳಿಸಲಾಗಿದೆ.ನನಗೆ ಅಭಿವೃದ್ದಿ ಮುಖ್ಯ, ಜನರ ಕಷ್ಟಗಳ ಪರಿಹಾರ ಮುಖ್ಯ.ಇದನ್ನು ಹೊರತುಪಡಿಸಿ ಬೇರೆ ವಿಚಾರಗಳ ಕಡೆ ನಾನು ಗಮನ ಹರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: MLA Pradeep Eshwar: ಕಾಂಗ್ರೆಸ್ ಮುಖಂಡ ಕುಪೇಂದ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ ನಗರವನ್ನು ಸಂಚಾರ ದಟ್ಟಣೆಯಿಂದ ದೂರ ಮಾಡಲು ಏಕೈಕ ಮಾರ್ಗವೆಂದರೆ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ದಿಯೇ ಆಗಿದೆ.ಈ ನಿಟ್ಟಿನಲ್ಲಿ ನಮ್ಮ ಸರಕಾರದ ಎರಡೂವರೆ ವರ್ಷದಲ್ಲಿ ಗಮನಾರ್ಹ ಪ್ರಯತ್ನ ಸಾಗಿದೆ.ಜಡಲತಿಮ್ಮನಹಳ್ಳಿ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ.ದಿನ್ನೆ ಹೊಸಹಳ್ಳಿ ರಸ್ತೆ ಕಾಮಗಾರಿಯೂ ಈಗಾಗಲೇ ಪೂರ್ಣವಾಗಿದೆ. ಮುಷ್ಟುರು ರಸ್ತೆಯ ಕಾಮಗಾರಿ ಚಾಲನೆಯಲ್ಲಿದೆ.ಇದರಂತೆ ತಾಂತ್ರಿಕ ಸಮಸ್ಯೆಯಿಂದಾಗಿ ಕಂದವಾರ ರಸ್ತೆ ನೆನೆಗುದಿಗೆ ಬಿದ್ದಿದ್ದು ಶೀಘ್ರವೇ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ೮ ಕೋಟಿ ಅನುದಾನಲ್ಲಿ ಈ ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು.ಈ ವಿಚಾರ ಟೆಂಡರ್ ಪ್ರಕ್ರಿಯೆ ಯಲ್ಲಿದ್ದು ಬೇಗೆ ಪ್ರಾರಂಭಿಸಲಾಗುವುದು ಎಂದು ಜನತೆಗೆ ಭರವಸೆ ತುಂಬಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ರೆಡ್ಡಿ, ಮಂಡಿಕಲ್ ಬ್ಲಾಕ್ ಅಧ್ಯಕ್ಷ ನಾಗಭೂಷಣ್, ಮಂಗಳಾ ಪ್ರಕಾಶ್, ನಾರಾಯಣಮ್ಮ,ನಿವೃತ್ತ ಪಿಎಸ್‌ಐ ನಂಜುAಡಪ್ಪ, ಯುವ ಮುಖಂಡ ವಿನಯ್ ಬಂಗಾರಿ, ನಗರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಹಮೀಮ್,ಸಂದೀಪ್ ಚಕ್ರವರ್ತಿ, ಇಂಟಕ್ ಉಮೇಶ್ ಮತ್ತಿತರರು ಇದ್ದರು.