ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಪದವಿ ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಶಿಕ್ಷಣದಲ್ಲಿ ತೊಡಗಿದರೆ ಗುರಿ ಮುಟ್ಟಲು ಸಾಧ್ಯ : ಕೋಡಿರಂಗಪ್ಪ ಅಭಿಮತ

ಸಾಹಿತ್ಯ ಮತ್ತು ಶಿಕ್ಷಣ ಎಲ್ಲ ಸಾಮಾಜಿಕ ಜಂಜಾಟಗಳಿಂದ ಬಿಡುಗಡೆ ಮಾಡಲಿದೆ. ಉನ್ನತ ಶಿಕ್ಷಣ ದಲ್ಲಿ ಮಹಿಳಾ ಬೆಳವಣಿಗೆ ಕಡಿಮೆಯಿದೆ. ಪದವಿಯನ್ನು ಯಶಸ್ವಿಯಾಗಿ ಮುಗಿಸಿದಾಗ ಮಾತ್ರವೇ ಅರ್ಥ ಬರಲಿದೆ.ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಿ.ಮಹಿಳೆಯರಲ್ಲಿ ಮಾತ್ರವೇ ಶ್ರೇಷ್ಠ ಚಿಂತನೆ, ಜ್ಞಾನ ಅಡಗಿದೆ ಎಂಬುದನ್ನು ಮನಗಾಣಬೇಕಿದೆ ಎಂದರು.

ಪದವಿ ಕಾಲೇಜು ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಂತೆ ಶಿಕ್ಷಣದಲ್ಲಿ ತೊಡಗಿದರೆ ಭವಿಷ್ಯ ಕಾಣಲು ಸಾಧ್ಯ ಎಂದು ಶಿಕ್ಷಣ ತಜ್ಞ ಕೋಡಿರಂಗಪ್ಪ ತಿಳಿಸಿದರು

ಚಿಕ್ಕಬಳ್ಳಾಪುರ : ಪದವಿ ಕಾಲೇಜು ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಗುರುಗಳ ಮಾರ್ಗ ದರ್ಶನದಂತೆ ಶಿಕ್ಷಣದಲ್ಲಿ ತೊಡಗಿದರೆ ಭವಿಷ್ಯ ಕಾಣಲು ಸಾಧ್ಯ ಎಂದು ಶಿಕ್ಷಣ ತಜ್ಞ ಕೋಡಿ ರಂಗಪ್ಪ ತಿಳಿಸಿದರು.

ನಗರ ಹೊರವಲಯ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ರಾಜ್ಯ,ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ವಿದ್ಯಾರ್ಥಿನಿಯರಲ್ಲಿ ಮನೋಸ್ಥೆöÊರ್ಯ ಮತ್ತು ಆತ್ಮವಿಶ್ವಾಸ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧಕರಾಗುವ ಮೂಲಕ ಪ್ರಾಂಶುಪಾಲರಿಗೆ ಕಾಲೇಜಿಗೆ ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು.ಮೊಬೈಲ್ ವ್ಯಾಮೋಹ ಬಿಟ್ಟು ಓದಿನ ಕಡೆಗೆ ಮಾತ್ರ ಗಮನ ಹರಿಸಿ ಎಂದರು.

ಅAಕಗಳಿಗೆ ಸೀಮಿತರಾಗಿ ಯಾರದೋ ಕೃಪಾಭಿಕ್ಷೆಯಲ್ಲಿ ಬದುಕಬೇಡಿ.ಮಹಿಳಾ ಸಬಲೀಕರಣ ಎಂದರೆ ಮೌನ ಸಂಸ್ಕೃತಿ ಬಿಟ್ಟು ಉದ್ಯೋಗದಾತರಾಗಿ ಆರ್ಥಿಕ ಶಕ್ತಿ ತುಂಬುವುದೇ ಆಗಿದೆ. ಆತಂಕದಿಂದ ಹೊರ ಬನ್ನಿ, ಗಟ್ಟಿ ಮನಸ್ಸಿನ ವಿದ್ಯಾರ್ಥಿಗಳಾಗಿ ಎಂದು ಕರೆ ನೀಡಿದರು.

ಇದನ್ನೂ ಓದಿ: Chikkaballapur News: ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರ ಯಕ್ಷಗಾನ, ಜಾನಪದ ರಂಗಕಲೆ ಕಲಿಯಲು ಅವಕಾಶ: ಸದ್ಗುರು ಶ್ರೀ ಮಧುಸೂದನ ಸಾಯಿ

ಸಾಹಿತ್ಯ ಮತ್ತು ಶಿಕ್ಷಣ ಎಲ್ಲ ಸಾಮಾಜಿಕ ಜಂಜಾಟಗಳಿಂದ ಬಿಡುಗಡೆ ಮಾಡಲಿದೆ. ಉನ್ನತ ಶಿಕ್ಷಣ ದಲ್ಲಿ ಮಹಿಳಾ ಬೆಳವಣಿಗೆ ಕಡಿಮೆಯಿದೆ. ಪದವಿಯನ್ನು ಯಶಸ್ವಿಯಾಗಿ ಮುಗಿಸಿದಾಗ ಮಾತ್ರವೇ ಅರ್ಥ ಬರಲಿದೆ.ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಿ.ಮಹಿಳೆಯರಲ್ಲಿ ಮಾತ್ರವೇ ಶ್ರೇಷ್ಠ ಚಿಂತನೆ, ಜ್ಞಾನ ಅಡಗಿದೆ ಎಂಬುದನ್ನು ಮನಗಾಣಬೇಕಿದೆ ಎಂದರು.

ವಿದ್ಯಾರ್ಥಿ ದಿಸೆಯಲ್ಲಿಯೇ ಉತ್ತಮ ಪುಸ್ತಕಗಳನ್ನು ಓದಲು ಸಾಧ್ಯ, ಓದಿನ ಸಂಗಾತಿಗಳಾದಗ ಮಾತ್ರ ಬದುಕು ಅಗಣಿತ ಅವಕಾಶಗಳನ್ನು ನೀಡಲಿದೆ.ಪ್ರೀತಿಯೇ ಬದುಕಲ್ಲ. ದೌರ್ಬಲ್ಯವೇ ಜೀವನವಲ್ಲ. ಸಮಯ ಪಾಲನೆ ಬಹಳ ಮುಖ್ಯ.ನಿತ್ಯವೂ ಪತ್ರಿಕೆ ಓದಿ.ನಿಮ್ಮ ಭವಿಷ್ಯಕ್ಕಾಗಿ ಓದಿ.ಹೊಗಳಿಕೆಯ ಬೆನ್ನೇರಬೇಡಿ.ಪ್ರತಿ ವರ್ಷ ನಿಮ್ಮ ಅಂಕಗಳಿಕೆ ಏರಿಕೆ ಕ್ರಮದಲ್ಲಿರಲಿ ಎಂದು ತಿಳಿ ಹೇಳಿದರು.

ಆದರ್ಶ ಪ್ರೌಢಶಾಲೆಯ ಶಿಕ್ಷಕಿ ಪರಿಮಳ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ರೈತರು ಹೇಗೆ ಬೆಳೆ ಕಾಪಾಡುತ್ತಾರೋ, ತಂದೆತಾಯಿಗಳ ಭರವಸೆಯ ಬೆಳೆಯೇ ಮಕ್ಕಳ ಬದುಕು, ಶಿಕ್ಷಣವಾಗಿದೆ.ಶಿಕ್ಷಣದ ಮೂಲಕ ನಾನು ನನ್ನ ಹಣೆಬರಹ ಬದಲಾಯಿಸುತ್ತೇನೆ ಎನ್ನುವ ಹಂಬಲ ನಿಮಗಿರಬೇಕು. ಆತ್ಮ ವಿಶ್ವಾಸವೇ ಬದುಕಿನ ಕೀಲಿಕೈ ಆಗಿದೆ.ನಮ್ಮ ಅಂತಃಸತ್ವವನ್ನು ಬಡಿದೆಬ್ಬಿಸುವುದೇ ಆತ್ಮವಿಶ್ವಾಸ. ಹೆಣ್ಣಿನ ಶಕ್ತಿಯನ್ನು ಕುಗ್ಗಿಸುವ ಸಮಾಜದಲ್ಲಿಯೇ ಮಹಿಳೆಯರು ಬೆಳೆಯಬೇಕು. ಕನಸು ಮತ್ತು ಗುರಿಯ ಬಗ್ಗೆ ಸ್ಪಷ್ಟತೆ ಇರಬೇಕು. ನೈತಿಕತೆ ಕಳೆದುಕೊಂಡರೆ ಎಲ್ಲವೂ ಕಳೆದಂತೆ. ವಚನಕಾರರು ಶರಣರು ಕೀರ್ತನಕಾರರ ಸಂದೇಶ ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ನಾರಾಯಣಸ್ವಾಮಿ ಮಾತನಾಡಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ದಂತಹ ಈ ಕಾರ್ಯಕ್ರಮ ಮಾದರಿ ಕಾರ್ಯಕ್ರಮವಾಗಿದೆ. ಒನಕೆ ಓಬವ್ವಳಲ್ಲಿ ಕೋಟೆ ರಕ್ಷಣೆ ಮಾಡಲು ಮೂಡಿದ ಆತ್ಮವಿಶ್ವಾಸ ನಿಮ್ಮಲ್ಲಿಯೂ ಬೆಳೆಸಿಕೊಳ್ಳಬೇಕು. ಮಹಿಳಾ ಸಬಲೀಕರಣಕ್ಕೆ ಶಿಕ್ಷಕರ ಸಂಘ ಮುಂದಾಗಿದ್ದು ಶೇ೬೦ರಷ್ಟು ಮೀಸಲಾತಿ ಕೊಡಲು ಸಿದ್ಧವಿರುವ ಬಗ್ಗೆ ತಿಳಿಸಿದರು.

ಇದೇ ವೇಳೆ, ತಮ್ಮ ಬಾಳು ಬೆಳಗಿದ ಗುರುಗಳಾದ ನಾರಾಯಣಸ್ವಾಮಿ ಅವರನ್ನು ಸ್ಮರಿಸಿದರು. ಹಂದಿಗಳನ್ನು ಸಾಕುವ ಕೆಲಸದಿಂದ ನನ್ನನ್ನು ಬಿಡಿಸಿ ಓದಿಸಿದ ಕಾರಣ ನಾನು ಉತ್ತಮ ಶಿಕ್ಷಕನಾಗಲು ಸಾಧ್ಯವಾಗಿದೆ. ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷನಾಗಲು ಕಾರಣವಾಯಿತು.ಆ ಗುರುಗಳ ಕುಟುಂಬಕ್ಕೆ ಸದಾ ಋಣಿಯಾಗಿರುತ್ತೇನೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಸೊಣ್ಣೇಗೌಡ ಮಾತನಾಡಿ ದೇಹ ಕೃಷಿ ರಂಗ ಮನಸ್ಸು ಕೃಷಿಕ,ಎರಡೂ ಒಂದಾದರೆ ಹುಲುಸಾಗಿ ಬೆಳೆ ಬೆಳೆಯಲು ಸಾಧ್ಯ. ವಿದ್ಯಾಭ್ಯಾಸವೂ ಹೀಗೆಯೇ ಸಾಗಲಿ ಎಂದು  ಷೇಕ್ಸ್ ಪಿಯರ್ ಮಾತನ್ನು ಉಲ್ಲೇಖಿಸಿದರು. ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಇಂದು ಉತ್ತಮ ಸೌಕರ್ಯಗಳು ದೊರೆಯುತ್ತದೆ. ಇದನ್ನು ಬಳಸಿಕೊಂಡು ಮುಂದೆ ಸಾಗಬೇಕು ಎಂದರು.

ಇದೇ ವೇಳೆ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರೇಮಾವತಿ,ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಜಿ.ಎಲ್.ಸುಜಾತ, ಲತಾ ರಾಮಮೋಹನ್, ಎಂ.ವಿ.ಶ್ರೀನಿವಾಸ್, ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ .ಜಿ ಡಿ ಚಂದ್ರಯ್ಯ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಟಿ.ವಿ.ಚಂದ್ರಶೇಖರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಡಿ ಎಂ ಶ್ರೀ ರಾಮ್ ಉಪಸ್ಥಿತರಿದ್ದು ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಟಿ ಶಶಿಧರ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಯ ಅಧ್ಯಾಪಕರಾದ ಟಿ ವಿ ರಾಜಣ್ಣ, ಬಿ ವಿ ಶ್ರೀರಾಮಯ್ಯ ಉಪನ್ಯಾಸಕರಾದ ಸತೀಶ್ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಸರಸಮ್ಮ, ಅಣ್ಣಮ್ಮ, ಶಶಿಕಲಾ ಮಹಾಂತೇಶ್.. ಸೌಭಾಗ್ಯ, ರವಿಕುಮಾರ್,  ಪಾರ್ವತಮ್ಮ  ಕಾಲೇಜಿನ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.