ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಆಹಾರ ಉದ್ದಿಮೆದಾರರೆಲ್ಲರೂ  ಸುರಕ್ಷತೆ ಸಲುವಾಗಿ ಪರವಾನಗಿ ಕಡ್ಡಾಯ : ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ಜಿಲ್ಲೆಯ ಎಲ್ಲಾ ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಬೇಕರಿಗಳು, ಕೇಟರರ್ಸ್ ಹಾಗೂ ಬೀದಿಬದಿ ಆಹಾರ ಉದ್ದಿಮೆದಾರರು ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ವತಿಯಿಂದ ನೋಂದಣಿ, ವ್ಯಾಪಾರ ಪರವಾನಗಿ ಹಾಗೂ ಟ್ರೇಡ್ ಪಡೆಯುವುದು ಕಡ್ಡಾಯ ವಾಗಿರುತ್ತದೆ ಹಾಗೂ ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕು.

ಆಹಾರ ಉದ್ದಿಮೆದಾರರೆಲ್ಲರೂ "ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆಯ ವತಿಯಿಂದ ನೋಂದಣಿ ಅಥವಾ ವ್ಯಾಪಾರ ಪರವಾನಗಿಯನ್ನು ಕಡ್ಡಾಯವಾಗಿ ಪಡೆದು ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಚಿಕ್ಕಬಳ್ಳಾಪುರ: ಆಹಾರ ಉದ್ದಿಮೆದಾರರೆಲ್ಲರೂ "ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆಯ ವತಿಯಿಂದ ನೋಂದಣಿ ಅಥವಾ ವ್ಯಾಪಾರ ಪರವಾನಗಿಯನ್ನು ಕಡ್ಡಾಯವಾಗಿ ಪಡೆದು ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ನಗರಹೊರವಲಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಆಯೋಜಿಸ ಲಾಗಿದ್ದ "ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ" ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಬೇಕರಿಗಳು, ಕೇಟರರ್ಸ್ ಹಾಗೂ ಬೀದಿಬದಿ ಆಹಾರ ಉದ್ದಿಮೆದಾರರು ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ವತಿಯಿಂದ ನೋಂದಣಿ, ವ್ಯಾಪಾರ ಪರವಾನಗಿ ಹಾಗೂ ಟ್ರೇಡ್ ಪಡೆಯುವುದು ಕಡ್ಡಾಯ ವಾಗಿರುತ್ತದೆ ಹಾಗೂ ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕು.

ಇದನ್ನೂ ಓದಿ: Chikkaballapur News: ಬಾಗೇಪಲ್ಲಿಯಲ್ಲಿ: "ಸ್ಟಾಪ್ ವೋಟ್ ಚೊರಿ" ಸ್ಟಿಕರ್ ಅಭಿಯಾನಕ್ಕೆ ಚಾಲನೆ

ತಪ್ಪಿದಲ್ಲಿ ಈSSಂI ಕಾಯ್ದೆ ೨೦೦೬ ಪ್ರಕಾರ ದಂಡ ವಿಧಿಸಲಾಗುವುದು. ಹೋಟೆಲ್ ಉದ್ದಿಮೆದಾರರು ಹೋಟೆಲ್‌ನ ಒಳಗೆ, ಹೊರಗೆ ಮತ್ತು ಶೌಚಾಲಯಗಳಲ್ಲಿ ಶುಚಿತ್ವವನ್ನು ಕಾಪಾಡುವ ವ್ಯವಸ್ಥೆಯ ಕುರಿತು ನಿರಂತರವಾಗಿ ನಿಗಾ ವಹಿಸಬೇಕು. ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರು, ಆಹಾರ ತಯಾರಕರು ಕಡ್ಡಾಯವಾಗಿ ತಲೆಗೆ ಕ್ಯಾಪ್,  ಕೈಗೆ  ಗ್ಲೌಸ್,  ಮಾಸ್ಕ್ ಧರಿಸಬೇಕು. ಆಹಾರದಲ್ಲಿ ಯಾವುದೇ ಕೃತಕ ಬಣ್ಣಗಳು ಹಾಗೂ ಟೇಸ್ಟಿಂಗ್ ಪೌಡರ್ (ಅಜಿನೋಮೊಟೋ) ಬಳಸದಂತೆ ಎಚ್ಚರಿಸಿದರು. ಆಹಾರ ತಯಾರು ಮಾಡಲು ಉಪಯೋಗಿಸುವಂತಹ ತರಕಾರಿ ಹಾಗೂ ಆಹಾರ ಸಾಮಾಗ್ರಿಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತಾ ಧಿಕಾರಿ ಡಾ.ಕೆ.ಎಸ್. ಪ್ರಕಾಶ್, ಆಹಾರ ಸುರಕ್ಷತಾಧಿಕಾರಿಗಳಾದ  ಡಾ. ಕೆ. ಮಂಜುಳ, ಡಾ.ರಾಮ ಚಂದ್ರರೆಡ್ಡಿ, ಡಾ. ವೆಂಕಟೇಶ್ ಮೂರ್ತಿ, ಡಾ.ಹೇಮಾ, ಡಾ.ಅಕ್ಷಯ್ ಶ್ರೀನಿವಾಸ್, ಡಾ.ಸತ್ಯ ನಾರಾಯಣರೆಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಉದ್ದಿಮೆದಾರರು, ವ್ಯಾಪಾರಸ್ಥರು, ಉಪಸ್ಥಿತರಿದ್ದರು.