ಚಿಕ್ಕಬಳ್ಳಾಪುರ : ಕಂದವಾರ ಗ್ರಾಮದ ನಿವಾಸಿ ನಿವೃತ್ತ ಅಭಿಯಂತರ ಡಿ.ಟಿ.ಶ್ರೀನಿವಾಸಮೂರ್ತಿ ಇಂಜನಿರ‍್ಸ್ ಡೇ ಅಂಗವಾಗಿ ಮುದ್ದೇನಹಳ್ಳಿ ಗ್ರಾಮದಲ್ಲಿ ಲಯನ್ಸ್ ಸಂಸ್ಥೆ ಚಿಕ್ಕಬಳ್ಳಾಪುರ ಘಟಕವು ನೀಡುತ್ತಿರುವ ಆಚಾರ್ಯಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಲೂಕಿನ ಮುದ್ದೇನಹಳ್ಳಿಯಲ್ಲಿ ಸೋಮವಾರ ಇಂಜನಿಯರ‍್ಸ್ ಡೇ ಅಂಗವಾಗಿ ಕಳೆದ 20 ವರ್ಷ ಗಳಿಂದ ಲಯನ್ಸ್ ಸಂಸ್ಥೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ನೀಡುತ್ತಿರುವ ಆಚಾರ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂಜನಿಯರ್ ಆಗಿ ಅನುಪಮ ಸೇವೆ ಸಲ್ಲಿಸಿರುವ ಡಿ.ಟಿ.ಶ್ರೀನಿವಾಸ್, 2025ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ನಂದಿ ಕ್ಲಸ್ಟರ್ ಈರೇನಹಳ್ಳಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರೇಮಾವತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಇದನ್ನೂ ಓದಿ: Chikkaballapura: ಬರೋಬ್ಬರಿ 4 ಲಕ್ಷ ರೂ.ಗೆ ಮಾರಾಟವಾದ ಸಾರ್ವಜನಿಕ ಗಣೇಶೋತ್ಸವದ ಲಡ್ಡು!
ಈ ವೇಳೆ ಮಾತನಾಡಿರುವ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಭಿಯಂತರ ಡಿ.ಟಿ.ಶ್ರೀನಿವಾಸಮೂರ್ತಿ ಮಾತನಾಡಿ, ಯಾವುದೇ ಇಂಜನಿಯರ್ ವೃತ್ತಿಯಲ್ಲಿರುವವರು ಮಾಧ್ಯಮದ ಕಣ್ಣಿಗೆ ಸಮಾಜ ಕಣ್ಣಿಗೆ ಭೌತಿಕವಾಗಿ ಕಾಣುವುದಿಲ್ಲ.ಆದರೆ ನಾವು ನಿರ್ಮಾಣ ಮಾಡಿರುವ ಕೆಲಸಗಳ ಮೂಲಕ ನಮ್ಮ ಹೆಸರು ಚಿರಸ್ಥಾಯಿಯಾಗಿರಲಿದೆ.ಮೂಲತಃ ಇಂಜಿನಿಯರ್ ಆದ ನಾನು ರಾಷ್ಟ್ರೀಯ ಹೆದ್ದಾರಿ ಅಭಿಯಂತರ, ಕೆ.ಎನ್.ಆರ್ ಕನ್ ಸ್ಟ್ರಕ್ಷನ್, ಕೆ.ವಿ ಕ್ಯಾಂಪಸ್ ಸ್ಟ್ರಕ್ಷರ್ ಇಂಜನಿಯರ್ ಆಗಿ ಹತ್ತಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ನನ್ನ ವೃತ್ತಿಯಲ್ಲಿ ಹತ್ತು ಜನಕ್ಕೆ ಉಪಯೋಗವಾಗುವ ಕೆಲಸ ಮಾಡಿರುವ ತೃಪ್ತಿ ನನಗಿದೆ. ನನ್ನ ಸೇವೆಯನ್ನು ಗುರುತಿಸಿ ಚಿಕ್ಕಬಳ್ಳಾ ಪುರ ಲಯನ್ಸ್ ಸಂಸ್ಥೆ ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಆಚಾರ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿ ನನ್ನ ಜವಾಬ್ದಾರಿಯನ್ನು ಹೆಚ್ಚುವಂತೆ ಮಾಡಿದೆ. ಇದಕ್ಕಾಗಿ ಲಯನ್ಸ್ನ ಎಲ್ಲಾ ಪದಾಧಿಕಾರಿ ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಲಯನ್ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ್ ಮಾತನಾಡಿ, ಲಯನ್ಸ್ ಸಂಸ್ಥೆ ಸೇವಾ ಕಾರ್ಯಗಳಿಗೆ ಹೆಸರಾದ ಸಂಸ್ಥೆಯಾಗಿದೆ. ವಿಶ್ವದಾದ್ಯಂತ ಲಯನ್ಸ್ನ ಶಾಖೆಗಳಿದ್ದು ಕಾಲಕಾಲಕ್ಕೆ ಸಮಾಜಕ್ಕೆ ಬೇಕಾದ ಸೇವಾಕಾರ್ಯಗಳನ್ನು ಮಾಡುತ್ತಾ ಜವಾಬ್ದಾರಿಯುತ ನಾಗರೀಕರನ್ನು ಕಟ್ಟುವಲ್ಲಿ ಮುನ್ನಡೆದಿದ್ದೇವೆ. ಕಳೆದ 20 ವರ್ಷಗಳಿಂದ ಚಿಕ್ಕಬಳ್ಳಾಪುರ ಘಟಕವು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಪ್ರತಿವರ್ಷ ಇಂಜನಿಯರ‍್ಸ್ ಡೇ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರನ್ನು ಆರಿಸಿ ಅವರಿಗೆ ಆಚಾರ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡುತ್ತಾ ಬರಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಚಂದ್ರಪ್ಪ, ಡಾ.ಭಾರ್ಗವಿ ಸುನಿಲ್, ಡಾ.ಲಕ್ಷ್ಮೀನಾರಾಯಣರೆಡ್ಡಿ, ಡಾ.ಪಿ.ಸಿ.ಲಕ್ಷ್ಮೀನಾರಾಯಣ, ಪ್ರೊ.ಮಲ್ಲಣ್ಣ, ಡಾ.ಜಿ.ವಿ.ಜ್ಞಾನೇಂದ್ರರೆಡ್ಡಿ, ಭಾರತೀ ಶ್ರೀನಿವಾಸ್, ನೂತನ, ಡಾ.ರಘು ಅವರಿಗೂ ಕೂಡ ಹಾರ ತುರಾಯಿ ಶಾಲು ಪ್ರಮಾಣಪತ್ರ ಆಯಾರ್ಯ ಶ್ರೇಷ್ಟ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು.
ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಣ್ಣ,ಮಾಜಿ ಅಧ್ಯಕ್ಷ ಬ್ರಹ್ಮಾಚಾರಿ, ಕಾರ್ಯದರ್ಶಿ ಲಯನ್ ಲಕ್ಷ್ಮಣ್ ,ಖಜಾಂಚಿ ಲಯನ್ ರವೀಂದ್ರ, ಲಯನ್ ಸುನಿಲ್ ಇತರರು ಇದ್ದರು.