ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಾದಿಗ ದಂಡೋರ ಸಂಘಟನೆಯಿಂದ ಆ.18ಕ್ಕೆ ‘ಬೆಂಗಳೂರು ಚಲೋ’: ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಕರೆ

ಅಸ್ಪೃಷ್ಯ ಜಾತಿಗಳಲ್ಲೇ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಮಾದಿಗರು ಸಾಮಾಜಿಕ ನ್ಯಾಯಕ್ಕಾಗಿ ಕಳೆದ ಮೂರು ದಶಕಗಳಿಂದ ಅವಿರತವಾಗಿ ಮಾದಿಗ ದಂಡೋರ ಸಂಘಟನೆ ಅಡಿಯಲ್ಲಿ ಹೋರಾಟ ಮಾಡುತ್ತಾ ಬಂದಿದೆ. ನಮ್ಮ ರಾಷ್ಟ್ರಾಧ್ಯಕ್ಷ ಮಂದಕೃಷ್ಣ ಮಾದಿಗರ ನೇತೃತ್ವದಲ್ಲಿ ದೇಶಾದ್ಯಂತ ಒಳ ಮೀಸಲಾತಿ  ಜಾರಿಗೆ ಆಗ್ರಹಿಸಿ ಹೋರಾಟ ನಡೆಸಿದ್ದರ ಪರಿಣಾಮ ಸುಪ್ರಿಂಕೋರ್ಟ್ ಪರಿಶಿಷ್ಟ ಸಮುದಾಯಗಳ ಒಳಗೆ ಒಳಮೀಸಲಾತಿ ಜಾರಿ ಮಾಡುವುದು ಸಂವಿಧಾನ ಬದ್ಧವಾಗಿದೆ.

ರಾಜ್ಯ ಸರಕಾರವು ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಜಾರಿ ಮಾಡಲು ಒಂದು ವರ್ಷದಿಂದ ಮೀನ ಮೇಷ ಎಣಿಸುತ್ತಿರುವುದನ್ನು ಖಂಡಿಸಿ ಮಾದಿಗ ದಂಡೋರ ಸಮಿತಿ ಇದೇ ಆಗಸ್ಟ್ ೧೮ರಂದು ಬೆಂಗಳೂರು ಚಲೋ ಕಾರ್ಯಕ್ರಮ ಆಯೋಜಿಸಿದೆ ಎಂದು ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ದೇವರಾಜ್ ತಿಳಿಸಿದರು.

ಚಿಕ್ಕಬಳ್ಳಾಪುರ : ರಾಜ್ಯ ಸರಕಾರವು ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಜಾರಿ ಮಾಡಲು ಒಂದು ವರ್ಷದಿಂದ ಮೀನ ಮೇಷ ಎಣಿಸುತ್ತಿರುವುದನ್ನು ಖಂಡಿಸಿ ಮಾದಿಗ ದಂಡೋರ ಸಮಿತಿ ಇದೇ ಆಗಸ್ಟ್ ೧೮ರಂದು ಬೆಂಗಳೂರು ಚಲೋ ಕಾರ್ಯಕ್ರಮ ಆಯೋಜಿಸಿದ್ದು ಜಿಲ್ಲೆಯ ಎಲ್ಲಾ ಮಾದಿಗ ಸಮುದಾಯದ ಮುಖಂಡರು, ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ಐಕ್ಯತೆ ಪ್ರದರ್ಶಿಸಬೇಕು ಎಂದು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮಂಗಳವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಅಸ್ಪೃಷ್ಯ ಜಾತಿಗಳಲ್ಲೇ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಮಾದಿಗರು ಸಾಮಾಜಿಕ ನ್ಯಾಯಕ್ಕಾಗಿ ಕಳೆದ ಮೂರು ದಶಕಗಳಿಂದ ಅವಿರತವಾಗಿ ಮಾದಿಗ ದಂಡೋರ ಸಂಘಟನೆ ಅಡಿಯಲ್ಲಿ ಹೋರಾಟ ಮಾಡುತ್ತಾ ಬಂದಿದೆ. ನಮ್ಮ ರಾಷ್ಟ್ರಾಧ್ಯಕ್ಷ ಮಂದಕೃಷ್ಣ ಮಾದಿಗರ ನೇತೃತ್ವದಲ್ಲಿ ದೇಶಾದ್ಯಂತ ಒಳ ಮೀಸಲಾತಿ  ಜಾರಿಗೆ ಆಗ್ರಹಿಸಿ ಹೋರಾಟ ನಡೆಸಿದ್ದರ ಪರಿಣಾಮ ಸುಪ್ರಿಂಕೋರ್ಟ್ ಪರಿಶಿಷ್ಟ ಸಮುದಾಯಗಳ ಒಳಗೆ ಒಳಮೀಸಲಾತಿ ಜಾರಿ ಮಾಡುವುದು ಸಂವಿಧಾನ ಬದ್ಧವಾಗಿದೆ.ಆದರೆ ಜಾರಿ ಮಾಡುವುದು ಆಯಾ ರಾಜ್ಯ ಸರಕಾರಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ತೀರ್ಪುನೀಡಿ ಆ.೧ ೨೦೨೫ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಆದರೂ ಈ ವಿಚಾರದಲ್ಲಿ ಸಿದ್ಧರಾಮಯ್ಯ ಸರಕಾರ ಅನಗತ್ಯ ವಿಳಂಭವಾನ್ನು ಮಾಡುತ್ತಿದೆ.ಇದು ಸರಿಯಲ್ಲ. ಮಾದಿಗರ ಸಹನೆ ಪರೀಕ್ಷೆ ಮಾಡುತ್ತಿರುವ ಸರಕಾರಕ್ಕೆ ಬಿಸಿ ಮುಟ್ಟಿಸುವ ಸಂಬಂಧ ಸೆ.18ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ:

ಮಾದಿಗ ಸಮುದಾಯದ ನ್ಯಾಯಯುತ ಹಕ್ಕುಗಳ ಕುರಿತು ವಿಳಂಬ ಧೋರಣೆ ತೋರುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವವುಳ್ಳ ಭಾರತ ದಂತಹ ದೇಶದಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗದಿರುವುದು ನ್ಯಾಯ ವಲ್ಲ ಎಂದು ಸಂಘಟನೆಯ ನಾಯಕರು ಒತ್ತಡ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಮಾರ್ಗದರ್ಶನ ನೀಡಿದರೂ ಕೂಡ, ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡರ ನಡುವೆ ಇರುವ ತಾರತಮ್ಯವನ್ನು ಸರಿಪಡಿಸಲು ನೇಮಿಸಿರುವ ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ೨ ತಿಂಗಳು ಕಾಲಾವಕಾಶ ಪಡೆದಿದ್ದರೂ ಈವರೆಗೆ ಸರಕಾರಕ್ಕೆ ವರದಿ ಸಲ್ಲಿಸದೆ ಮುಂದೂಡುತ್ತಿರುವ ಕುರಿತು ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದರು.

ಈ ಹಿನ್ನೆಲೆಯಲ್ಲಿ, ಆಗಸ್ಟ್ ೧೮ರ ಸೋಮವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಬೆಂಗಳೂರು ಚಲೋ’ ಎಂಬ ಹೆಸರಿನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟವನ್ನು ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಶ್ರೀ ಬಿ. ನರಸಪ್ಪ ದಂಡೋರ  ನೇತೃತ್ವದಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ “ಅಭಿನವ ಅಂಬೇಡ್ಕರ್”, “ಒಳ ಮೀಸಲಾತಿ ವರ್ಗೀಕರಣದ ಪಿತಾಮಹ” ಎಂದು ಕರೆಯಲ್ಪಡುವ ಪದ್ಮ ಶ್ರೀಮಂದಕೃಷ್ಣ ಮಾದಿಗ ಭಾಗವಹಿಸಲಿದ್ದಾರೆ ಎಂದು ದೇವರಾಜ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಜೆ.ಎಂ.ದೇವರಾಜ್ ದಂಡೋರ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ, ಗೌರವಾ ಧ್ಯಕ್ಷ ಎಂ.ರವಿಕುಮಾರ್, ಜಿಲ್ಲಾಧ್ಯಕ್ಷ ಎ.ಎನ್.ಮಂಜುನಾಥ್, ಜಿಲ್ಲಾ ಮುಖಂಡ ಸೀಕಲ್ ಶಿವಣ್ಣ ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ  ಸರಸ್ವತಿ, ವಿಭಾಗೀಯ ಅಧ್ಯಕ್ಷ ಡಿ.ಎಂ.ಮAಜುನಾಥ್ ಇದ್ದರು.