ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Adichunchanagiri: ಪರಿಮಳ ಸೂಸುವ ಕುಸುಮದಂತೆ ನಿಮ್ಮ ಜ್ಞಾನದ ಪಯಣವಿರಲಿ : ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

ಒಂದು ಕೊಠಡಿಯಲ್ಲಿಟ್ಟಿರುವ ಪರಿಮಳ ಬೀರುವ ಹೂಗಳನ್ನು ಅಲ್ಲಿಂದ ಬೇರೆಡೆ ತೆಗೆದುಕೊಂಡು ಹೋದರೂ ಹೂವಿನ ಗೈರು ಹಾಜರಿಯಲ್ಲಿ ಕೆಲಕಾಲವಾದರೂ ಪರಿಮಳ ಆ ಕೊಠಡಿಯನ್ನು ಆವರಿಸು ವಂತೆ, ಪರಿವರ್ತನೆಗೆ ಆಶಿಸುವ ಶಿಕ್ಷಣ ನಮ್ಮದಾಗಬೇಕಿದೆ. ದುರಂತವೆಂದರೆ ಇಂದಿನ ವಿದ್ಯಾರ್ಥಿಗಳು ಅಂಕಗಳಿಕೆ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾಗುತ್ತಿರುವುದು ನೋವಿನ ಸಂಗತಿ

ನಗರ ಹೊರವಲಯದ ಎಸ್ ಜೆಸಿ ತಾಂತ್ರಿಕ ಕಾಲೇಜು ಆವರಣದ ಎರೋನಾಟಿಕಲ್ಸ್ ವಿಭಾಗದ ಬಿಜಿಎಸ್ ಸಭಾಂಗಣದಲ್ಲಿ ನಡೆದ ಶಿಕ್ಷಣ ಮಾನವೀಕರಣದತ್ತ ಒಂದು ಹೆಜ್ಜೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು

ಚಿಕ್ಕಬಳ್ಳಾಪುರ: ಬದುಕಿನ ಪರಿವರ್ತನೆಗಾಗಿ ಶಿಕ್ಷಣವೇ ಹೊರತು ಅಂಕ ಪಡೆಯಲು ಅಲ್ಲ ಎಂಬು ದನ್ನು ಎಲ್ಲರೂ ಅಥೈಸಿ ಕೊಳ್ಳಬೇಕು. ಪರಿಮಳ ಸೂಸುವ ಕುಸುಮದಂತೆ ಮಾನವೀಯ ಮೌಲ್ಯ ಗಳಿಂದ ಕೂಡಿದ ಶಿಕ್ಷಣ ನಮ್ಮದಾಗಬೇಕಿದೆ ಎಂದು ಆದಿಚುಂಚನಗಿರಿ(Adichunchanagiri) ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಎಸ್ ಜೆಸಿ ತಾಂತ್ರಿಕ ಕಾಲೇಜು ಆವರಣದ ಎರೋನಾಟಿಕಲ್ಸ್ ವಿಭಾಗದ ಬಿಜಿಎಸ್ ಸಭಾಂಗಣದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಎರ್ಪಡಿಸಿದ್ದ ಶಿಕ್ಷಣ ಮಾನವೀ ಕರಣದತ್ತ ಒಂದು ಹೆಜ್ಜೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಗಾಟಿಸಿ ಮಾತನಾಡಿದರು.

ಒಂದು ಕೊಠಡಿಯಲ್ಲಿಟ್ಟಿರುವ ಪರಿಮಳ ಬೀರುವ ಹೂಗಳನ್ನು ಅಲ್ಲಿಂದ ಬೇರೆಡೆ ತೆಗೆದುಕೊಂಡು ಹೋದರೂ ಹೂವಿನ ಗೈರು ಹಾಜರಿಯಲ್ಲಿ ಕೆಲಕಾಲವಾದರೂ ಪರಿಮಳ ಆ ಕೊಠಡಿಯನ್ನು ಆವರಿಸುವಂತೆ, ಪರಿವರ್ತನೆಗೆ ಆಶಿಸುವ ಶಿಕ್ಷಣ ನಮ್ಮದಾಗಬೇಕಿದೆ. ದುರಂತವೆಂದರೆ ಇಂದಿನ ವಿದ್ಯಾರ್ಥಿಗಳು ಅಂಕಗಳಿಕೆ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾಗುತ್ತಿರುವುದು ನೋವಿನ ಸಂಗತಿ ಎಂದರು.

ಇದನ್ನೂ ಓದಿ: Adichunchanagiri Shri: ಉತ್ತಮ ಶಿಕ್ಷಣ ನೀಡುವ ಶಿಕ್ಷಕರಿಂದ ಮಾತ್ರವೇ ದೇಶದ ಕೀರ್ತಿ ಬೆಳಗಲಿದೆ : ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮೀಜಿ

ಸ್ವಾಮಿ ವಿವೇಕಾನಂದರು ಹೇಳಿದಂತೆ  ಶಿಕ್ಷಣವು ಕೇವಲ ಮಾಹಿತಿಯ ಸಂಗ್ರಹವಲ್ಲ, ಬದಲಿಗೆ ಮಾನವತ್ವದ ನಿರ್ಮಾಣ, ಚಾರಿತ್ರ‍್ಯ ನಿರ್ಮಾಣ, ಮತ್ತು ಜೀವನ ರೂಪಿಸುವ ಒಂದು ಶಕ್ತಿ. ಶಿಕ್ಷಣದ ಮೂಲಕ ಆತ್ಮವಿಶ್ವಾಸ, ಸ್ವಯಂ ನಿಯಂತ್ರಣ, ಹಾಗೂ ಸಕಾರಾತ್ಮಕ ಚಿಂತನೆಯನ್ನು ಬೆಳೆಸಬೇಕು. ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಪ್ರೇರೇಪಿಸಬೇಕು ಎಂದ ಅವರು ವ್ಯಕ್ತಿಯಲ್ಲಿರುವ ಪರಿಪೂರ್ಣತೆಯನ್ನು ಹೊರ ತರುವುದೇ ಶಿಕ್ಷಣದ ಗುರಿಯಾಗಲಿ ಎಂದರು.

ಮೆದುಳಿಗೆ ಮಾಹಿತಿಯನ್ನು ತುಂಬುವುದಕ್ಕಿಂತಲೂ  ಅದನ್ನು ಅರಗಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ. ಮಕ್ಕಳಿಗೆ ಸಕಾರಾತ್ಮಕ ಶಿಕ್ಷಣವನ್ನು ನೀಡಬೇಕು, ಇದರಿಂದ ಅವರು ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ಬೆಳೆಸಿಕೊಳ್ಳುತ್ತಾರೆ. ಭೌತಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕ ಶಕ್ತಿಯನ್ನು ಬೆಸೆಯುವ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ ಪಡೆದವರು ಸುತ್ತಮುತ್ತಲ ಸಮಾಜದ ಬಡವರಿಗೆ ಸಹಾಯ ಮಾಡಬೇಕು. ತನ್ಮೂಲಕ ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸಬೇಕು ಎಂದು ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನವಾನಳ್ಳಿ ಮಾತನಾಡಿ, ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣದ ಬಗ್ಗೆ ಹೇಳಿಕೊಡುತ್ತೇವೆ. ಆದರೆ ಉನ್ನತ ಶಿಕ್ಷಣದಲ್ಲಿ ಇದಕ್ಕೆ ವಿರುದ್ಧವಾದ ನಡೆಯನ್ನು ಅನುಸರಿಸುತ್ತೇವೆ. ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿವಿಯ ಕುಲಪತಿ ಡಾ.ನಿರಂಜನ ವಾನಳ್ಳಿ, ಕುಲ ಸಚಿವ ರಾದ ಡಾ.ಎನ್.ಲೋಕನಾಥ್, ಸಿ.ಎನ್.ಶ್ರೀಧರ್, ಲೆಕ್ಕಾಧಿಕಾರಿ ವಸಂತ್ ಕುಮಾರ್, ಸಿಂಡಿಕೇಟ್ ಸದಸ್ಯರಾದ ನಿರೂಪ್,ಅರ್ಭಾಜ್,ಗೋಪಾಲಗೌಡ, ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾ ವಿವೇಕಮಯಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ. ವಿವಿ ಶಿಕ್ಷಣ ಕಾಲೇಜಿನ ಡೀನ್ ಹಾಗೂ ಪ್ರಾಂಶುಪಾಲ ಡಾ. ಜಿ.ಪಿ.ಬಾಹುಬಲಿ, ಪ್ರಾಧ್ಯಾಪಕ ಡಾ.ಶಂಕರ್, ವಿವಿ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು ಇದ್ದರು.