ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA Pradeep Eshwar: ಮಂಚನಬಲೆ ರಸ್ತೆ ಜಲಾವೃತ್ತ ಪ್ರದೇಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ಪರಿಶೀಲನೆ

ಬಲಾಡ್ಯರಿಂದ ಒತ್ತುವರಿ ಆಗಿರುವ ರಾಜಕಾಲುವೆ ತೆರವು ಮಾಡಿಸಬೇಕು. ನಗರದಿಂದ ನೀರು ಸರಾಗ ವಾಗಿ ಹರಿದು ಗೋಪಾಲಕೃಷ್ಣ ಕೆರೆ ಸೇರುವಂತೆ ಮಾಡಲು ಎಲ್ಲೆಲ್ಲಿ ಇದಕ್ಕೆ ಅಡೆತಡೆಗಳಿವೆಯೋ ಅದನ್ನೆಲ್ಲಾ ತೆರವುಗೊಳಿಸುವ ಕೆಲಸ ಮಾಡಬೇಕು ಎಂದು. ಹತ್ತಾರು ಗ್ರಾಮಗಳಿಗೆ ಸಂಪರ್ಕಕಲ್ಪಿಸುವ ಮುಖ್ಯರಸ್ತೆಯು ಜಲಾವೃತ್ತವಾದರೆ ಹೇಗೆ ಎಂದು ಆಯುಕ್ತರನ್ನು ಶಾಸಕರು ಪ್ರಶ್ನಿಸಿದರು.

ಚಿಕ್ಕಬಳ್ಳಾಪುರ : ಪದೇ ಪದೇ ಜಲಾವೃತ್ತವಾಗುತ್ತಾ ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದ ರಾಷ್ಟ್ರೀಯ ಹೆದ್ದಾರಿ ಕೆಳ ಸೇತುವೆಯಾದ ಮಂಚನಬಲೆ ಮುಖ್ಯರಸ್ತೆಗೆ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar) ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಚನಬಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆಳಸೇತುವೆಯ ಮುಖ್ಯರಸ್ತೆ ಸಣ್ಣ ಮಳೆಬಿದ್ದರೂ ಸಾಕು ಜಲಾವೃತ್ತವಾಗುತ್ತಿರುತ್ತದೆ.ಜನಪ್ರತಿನಿಧಿಗಳ ಅಸಡ್ಡೆಯೇ ಇದಕ್ಕೆ ಕಾರಣ ಎಂಬಿತ್ಯಾದಿ ಮಾತುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಪರಿಶೀಲನೆ ವೇಳೆ ಶಾಸಕ ಪ್ರದೀಪ್ ಈಶ್ವರ್ ನಗರಸಭೆ ಆಯುಕ್ತರಿಗೆ ಕರೆ ಮಾಡಿ ೨೪ ಗಂಟೆಯೊಳಗೆ ಚರಂಡಿಪೂರ್ಣಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು.ಯಾವ ನೆಪಗಳೂ ಹೇಳದೆ ಮೊದಲು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.

ಇದನ್ನೂ ಓದಿ: MLA Pradeep Eshwar: ಕಾಂಗ್ರೆಸ್ ಮುಖಂಡ ಕುಪೇಂದ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶಾಸಕ ಪ್ರದೀಪ್ ಈಶ್ವರ್

ಬಲಾಡ್ಯರಿಂದ ಒತ್ತುವರಿ ಆಗಿರುವ ರಾಜಕಾಲುವೆ ತೆರವು ಮಾಡಿಸಬೇಕು. ನಗರದಿಂದ ನೀರು ಸರಾಗವಾಗಿ ಹರಿದು ಗೋಪಾಲಕೃಷ್ಣ ಕೆರೆ ಸೇರುವಂತೆ ಮಾಡಲು ಎಲ್ಲೆಲ್ಲಿ ಇದಕ್ಕೆ ಅಡೆತಡೆಗಳಿವೆ ಯೋ ಅದನ್ನೆಲ್ಲಾ ತೆರವುಗೊಳಿಸುವ ಕೆಲಸ ಮಾಡಬೇಕು ಎಂದು. ಹತ್ತಾರು ಗ್ರಾಮಗಳಿಗೆ ಸಂಪರ್ಕಕಲ್ಪಿಸುವ ಮುಖ್ಯರಸ್ತೆಯು ಜಲಾವೃತ್ತವಾದರೆ ಹೇಗೆ ಎಂದು ಆಯುಕ್ತರನ್ನು ಶಾಸಕರು ಪ್ರಶ್ನಿಸಿದರು.

ಈವೇಳೆ ಶಾಸಕರಿಗೆ ಸ್ಥಳೀಯ ಮುಖಂಡರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿ ಕೊಂಡು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.ಸ್ಪಂಧಿಸಿದ ಶಾಸಕರು ಆದಷ್ಟು ಬೇಗ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಶಾಸಕರ ಭೇಟಿಯ ವೇಳೆಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ರೆಡ್ಡಿ, ಮಂಡಿಕಲ್ ಬ್ಲಾಕ್ ಅಧ್ಯಕ್ಷ ನಾಗಭೂಷಣ್, ಯುವಮುಖಂಡ ವಿನಯ್ ಬಂಗಾರಿ, ನಗರಾಭಿವೃದ್ದಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಹಮೀಮ್,ಸಂದೀಪ್ ಚಕ್ರವರ್ತಿ,ಇಂಟಕ್ ಉಮೇಶ್ ಇದ್ದರು.