ಚಿಂತಾಮಣಿ : ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಪ್ರಗತಿ ಕಾಲೇಜಿನಲ್ಲಿ ಆ.೯ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಮಾಜಿ ಶಾಸಕರಾದ ಜೆ.ಕೆ.ಕೃಷ್ಣಾರೆಡ್ಡಿ (Ex MLA J K Krishna Reddy)ಹೇಳಿದರು.
ನಗರದ ಹೊರವಲಯದ ಜೆಕೆ ಭವನದಲ್ಲಿ ಉದ್ಯೋಗ ಮೇಳ(Job Mela) ಕುರಿತು ಆಯೋಜಿಸ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಸ್ತೇನಹಳ್ಳಿ, ಕೋಲಾರ, ನರಾಸಾಪುರ, ಪೀಣ್ಯ, ದೊಮ್ಮಸಂದ್ರ, ಆನೇಕಲ್ ಸೇರಿದಲ್ಲಿ 40ಕ್ಕಿಂತ ಹೆಚ್ಚು ಕಂಪನಿಗಳು ಭಾಗಿಯಾಗಲಿದ್ದು, ಎಸ್‌ಎಸ್ ಎಲ್‌ಸಿ, ಪಿಯುಸಿ, ಡಿಗ್ರಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವೆಂದು ಹೇಳಿದರು.
ಇದನ್ನೂ ಓದಿ: Chikkaballapur News: ಸರಕಾರಿ ಶಾಲೆ, ವಸತಿ ಶಾಲೆ, ಅಂಗನವಾಡಿಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಈ ಹಿಂದೆಯೂ ಸಹ ೨೦೧೮ರಲ್ಲಿ ಉದ್ಯೋಗ ಮೇಳಾ ಆಯೋಜನೆ ಮಾಡಲಾಗಿದ್ದು ಮತ್ತೆ ೯ ಆಗಸ್ಟ್ ರಂದು ನಡೆಯಲಿರುವ ಉದ್ಯೋಗ ಮೇಳ ಬಡವರ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಉತ್ತಮ ಅವಕಾಶವಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜಸೇವಕರಾದ ಸುರೇಂದ್ರ ರೆಡ್ಡಿ,ಬೈರೆಡ್ಡಿ,ನಗರಸಭಾ ಸದಸ್ಯರಾದ ಅಗ್ರಹಾರ ಮುರುಳಿ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.