ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MP K Sudhakar: ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರನ್ನು ಜನ ನಂಬಲ್ಲ: ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ

ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಒಂದೇ ಕಟ್ಟಡದಲ್ಲಿದೆ. ಈ ಕಟ್ಟಡದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವಕ, ಕಾರು ಚಾಲಕ ಬಾಬು ಆವರಣದ ಮರದಲ್ಲಿ ನೇಣಿಗೆ ಶರಣಾಗಿದ್ದಾರೆ. ಇದು ನನಗೆ ಬಹಳ ದುಃಖ ತಂದಿದೆ.

ಚಿಕ್ಕಬಳ್ಳಾಪುರ ಸಂಸದರ ನಿವಾಸದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಡಾ.ಕೆ.ಸುಧಾಕರ್ ಮಾತನಾಡಿದರು.

ಬಾಬು ಆತ್ಮಹತ್ಯೆ ಪ್ರಕರಣ ರಾಜಕೀಯಕ್ಕೆ ಬಳಕೆಯಾಗಿರುವುದು ಸ್ಪಷ್ಟ

ನನ್ನ ಅವಧಿಯಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ ಒಂದೇ ಒಂದು ಉದಾಹರಣೆ ತೋರಿಸಿ

ಚಿಕ್ಕಬಳ್ಳಾಪುರ : ಚಾಲಕ ಬಾಬು ಆತ್ಮಹತ್ಯೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರಯತ್ನ ಮಾಡಿದ್ದಾರೆ. ಆದರೆ ಜನರು ಇದನ್ನು ನಂಬುವುದಿಲ್ಲ. ಪರಿಶಿಷ್ಟ ಜಾತಿ/ಪಂಗಡದ ಸಮುದಾಯದ ಜನರಿಗಾಗಿ ನಾನು ಮಾಡಿ ರುವ ಕೆಲಸಗಳು ಜನರಿಗೆ ತಿಳಿದಿದೆ. ಈ ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಗೆ ಬರುತ್ತೇನೆ.ಜನರೇ ಇವರಿಗೆ ಬುದ್ದಿಕಲಿಸಲಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ನಗರದ ಸಂದದರ ನಿವಾಸದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ದರು.

ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಒಂದೇ ಕಟ್ಟಡದಲ್ಲಿದೆ. ಈ ಕಟ್ಟಡದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವಕ, ಕಾರು ಚಾಲಕ ಬಾಬು ಆವರಣದ ಮರದಲ್ಲಿ ನೇಣಿಗೆ ಶರಣಾಗಿ ದ್ದಾರೆ. ಇದು ನನಗೆ ಬಹಳ ದುಃಖ ತಂದಿದೆ. ಆ ಕುಟುಂಬಕ್ಕೆ ಭಗವಂತನ ಶಕ್ತಿ ಹಾಗೂ ಚೈತನ್ಯ ವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಸಮಗ್ರ ಕೀಟ ನಿರ್ವಹಣೆ ಮೂಲಕ ಬೂದಿ ಹುಳು ಹಾವಳಿ ನಿವಾರಣೆ ಸಾಧ್ಯ : ರಾಧಾಕೃಷ್ಣನ್

ಆಗಸ್ಟ್ ೭ ರ ಬೆಳಗ್ಗೆ ಆತ್ಮಹತ್ಯೆ ನಡೆದಿದೆ. ಇದು ಬೆಳಗ್ಗೆ ೭.೩೦ ಸುಮಾರಿಗೆ ಪೊಲೀಸರ ಗಮನಕ್ಕೆ ಬಂದಿದೆ. ಗಂಟೆ ೧೦.೩೦ ಆದರೂ ಮೃತ ದೇಹವನ್ನು ಮರದಿಂದ ಇಳಿಸಿರುವುದಿಲ್ಲ. ಅಲ್ಲಿಯ ವರೆಗೂ ಡೆತ್‌ನೋಟ್ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ನಾಲ್ಕು ಪುಟಗಳ ಡೆತ್‌ನೋಟ್ ಇದೆ ಎಂದು ಹೇಳುತ್ತಿದ್ದರೂ, ಅದು ಚಾಲಕ ಬಾಬು ಅವರೇ ಬರೆದಿದ್ದಾ ಎಂದು ಗೊತ್ತಿಲ್ಲ. ಆದರೆ ಇದಕ್ಕೂ ಮುನ್ನವೇ ಮೂರು ದಿನಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಡೆತ್‌ನೋಟ್ ಹರಿದಾಡಿದೆ ಎಂದು ತಿಳಿದುಬಂದಿದೆ. ಆಗಲೇ ಕುಟುಂಬದವರು, ಸ್ಥಳೀಯ ಅಧಿಕಾರಿಗಳು, ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಎಫ್‌ಎಸ್‌ಎಲ್‌ನಲ್ಲಿ ಅವರೇ ಈ ಪತ್ರ ಬರೆದಿದ್ದಾ? ಎಂಬುದು ಸಾಬೀತಾಗಬೇಕಿದೆ ಎಂದರು.

ನಾನು ದೆಹಲಿಯಲ್ಲಿ ಸಂಸತ್ತಿನಲ್ಲಿದ್ದೆ. ಮೂರು ದಿನಗಳ ಹಿಂದೆಯೇ ಡೆತ್‌ನೋಟ್ ಬಂದಿದ್ದರೂ, ಸ್ಥಳೀಯ ಅಧಿಕಾರಿಗಳು ಏಕೆ ಕ್ರಮ ವಹಿಸಿಲ್ಲ? ಕ್ರಮ ವಹಿಸಿದ್ದರೆ ಆ ಯುವಕನ ಜೀವ ಕಾಪಾಡ ಬಹುದಿತ್ತು. ಚಾಲಕ ಬಾಬು ಅವರದ್ದು ಎನ್ನಲಾದ ಡೆತ್‌ನೋಟ್ ಪ್ರಕಾರ, ಉದ್ಯೋಗ ಕೊಡಿಸಲು 40 ಲಕ್ಷ ರೂ. ಲಂಚ ಪಡೆಯಲಾಗಿದೆ. ಕಚೇರಿಯ ಇಬ್ಬರು ನೌಕರರಾದ ನಾಗೇಶ್ ಮತ್ತು ಮಂಜು ನಾಥ್ ಹಣ ಪಡೆದಿದ್ದಾರೆ ಎಂಬ ಆರೋಪ ಬಂದಿದೆ. ಸಾಲಕ್ಕೆ ಸಿಲುಕಿದ್ದೇನೆ, ಆನ್‌ಲೈನ್ ಜೂಜು ಆಡಿದ್ದೇನೆ, ಅದರಲ್ಲಿ ೧೧ ಲಕ್ಷ ರೂ. ನಷ್ಟವಾಗಿದೆ ಎಂದು ಡೆತ್‌ನೋಟ್‌ನಲ್ಲಿ ಬರೆಯ ಲಾಗಿದೆ ಎಂದರು.

ನನಗೆ ನಾಗೇಶ್, ಮಂಜುನಾಥ್ ಹಾಗೂ ಚಾಲಕ ಬಾಬು ಅವರ ಪರಿಚಯವಿಲ್ಲ. ನಂತರ ಅವರ ಬಗ್ಗೆ ತಿಳಿದುಕೊಂಡಿದೆ. ದಲಿತ ಮುಖಂಡರಾದ ಕೃಷ್ಣಮೂರ್ತಿ ಅವರನ್ನು ಕುಡಾ ಅಧ್ಯಕ್ಷರನ್ನಾಗಿ ಮಾಡಿದ್ದೆ. ಅವರ ಅಳಿಯನೇ ಈ ನಾಗೇಶ್. ನನಗೆ ಕೃಷ್ಣಮೂರ್ತಿ ಅವರ ಪರಿಚಯವಿದೆಯೇ ಹೊರತು, ನಾಗೇಶ್ ಪರಿಚಯವಿಲ್ಲ. ಮಂಜುನಾಥ್ ಕೂಡ ನನಗೆ ಆಪ್ತರಲ್ಲ. ಅವರ ತಮ್ಮ ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಅವರ ಮದುವೆಗೆ ಬರಬೇಕೆಂದು ಕರೆದಾಗ ಒಮ್ಮೆ ಅವರ ಮನೆಗೆ ಹೋಗಿದ್ದು, ಬಿಟ್ಟರೆ ಮತ್ತೆ ಯಾರ ನೇರ ಸಂಪರ್ಕವೂ ಇಲ್ಲ. ಚಾಲಕ ಬಾಬು ಅವರನ್ನು ಒಮ್ಮೆಯೂ ನೋಡಿಯೇ ಇಲ್ಲ. ಚಾಲಕ ಬಾಬು ಎಂದಿಗೂ ನನ್ನ ಬಳಿ ಬಂದು ಉದ್ಯೋಗ ಕೇಳಿಲ್ಲ. ನಾನು ಅನೇಕರಿಗೆ ಗುತ್ತಿಗೆ ಉದ್ಯೋಗಗಳನ್ನು ಕೊಡಿಸಿದ್ದೇನೆ. ಆದರೆ ಸರ್ಕಾರಿ ಕೆಲಸ ಕೊಡಿಸುವುದು ಸುಲಭವಲ್ಲ ಎಂದು ಹೇಳಿದರು.

ಶಾಸಕರ ಹಿಂಬಾಲಕರ ಪ್ರವೇಶ

ಪೊಲೀಸರು ತನಿಖೆ ಮಾಡುವಾಗ ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ಹೋಗಿಲ್ಲ. ಆದರೆ ಶಾಸಕರ ಹಿಂಬಾಲಕರು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಚಾಲಕ ಬಾಬು ಹೆಂಡತಿ ದೂರು ನೀಡಲು ಹೋದಾಗ, ಈ ರೀತಿ ದೂರು ನೀಡಬಾರದು ಡೆತ್‌ನೋಟ್‌ನಲ್ಲಿರುವುದನ್ನೇ ಬರೆದುಕೊಡಿ ಎಂದು ಪಿಎಸ್‌ಐ ಶರಣಪ್ಪ ಒತ್ತಡ ಹಾಕಿದ್ದಾರೆ. ಪೊಲೀಸರು ಪ್ರಾಥಮಿಕ ತನಿಖೆ ಮಾಡಿ ನನಗೂ ಆ ವ್ಯಕ್ತಿಗೂ ಸಂಬಂಧ ಇದೆಯೇ ಎಂದು ವಿಚಾರಣೆ ಮಾಡಬೇಕಿತ್ತು. ಆದರೆ ಯಾವುದನ್ನೂ ವಿಚಾರಿ ಸದೆ ಸಂಸದನಾದ ನನ್ನ ಮೇಲೆ ಎಫ್‌ಐಆರ್ ದಾಖಲಿಸಿ ಎ೧ ಆರೋಪಿ ಮಾಡಿದ್ದಾರೆ. ಜೊತೆಗೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ನಾನು ಮೂರು ಬಾರಿ ಶಾಸಕನಾಗಿ, ಒಮ್ಮೆ ಸಂಸದನಾಗಿ ಕೆಲಸ ಮಾಡಿದ್ದರೂ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಶಾಸಕರಿಗೆ ಸಾವಾಗಿರುವುದಕ್ಕೆ ದುಃಖ ಇಲ್ಲ. ಕೆಲವು ದಿನಗಳ ಹಿಂದೆ ಒಬ್ಬ ದಲಿತ ಯುವಕ ನೇಣಿಗೆ ಶರಣಾಗಿದ್ದರೂ ಶಾಸಕರು ಆ ಸ್ಥಳಕ್ಕೆ ಹೋಗಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ತಂದು ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ದಲಿತರನ್ನು ನನ್ನ ವಿರುದ್ಧವಾಗಿ ನಿಲ್ಲಿಸುವ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ಪೊಲೀಸರು ಕೂಡ ಶಾಸಕರ ಗುಲಾಮರಂತೆ ವರ್ತಿಸಿದ್ದಾರೆ.ಸಮಯ ಬಂದಾಗ ತಕ್ಕ ಪಾಠ ಕಲಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ನಿಂದನೆ ಎಲ್ಲಿದೆ?

ಈ ಪ್ರಕರಣದಲ್ಲಿ ನಾನು ಯಾರ ಜಾತಿ ನಿಂದನೆಯನ್ನೂ ಮಾಡಿಲ್ಲ. ನೇರವಾಗಿ ಭೇಟಿ ಮಾಡಿ ನಿಂದಿಸಿಲ್ಲ. ಚಾಲಕ ಬಾಬು ಅವರಿಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿಲ್ಲ. ಆದರೂ ಅಂತಹ ಸೆಕ್ಷನ್‌ ಗಳನ್ನೇ ನನ್ನ ವಿರುದ್ಧ ದಾಖಲಿಸಿದ್ದಾರೆ. ನಾನು ಹಿಂದೆ ಆರೋಗ್ಯ ಸಚಿವನಾಗಿ ಜನರ ಜೀವ ಉಳಿಸಿದ್ದೇನೆಯೇ ಹೊರತು ಯಾರ ಜೀವವನ್ನೂ ತೆಗೆದಿಲ್ಲ. ಜನರಿಗೆ ಬದುಕು ಕಟ್ಟಿಕೊಡಲು ಶ್ರಮ ಪಟ್ಟಿದ್ದೇನೆಯೇ ಹೊರತು ಯಾರಿಗೂ ಆಮಿಷ ಒಡ್ಡಿ ಹಣ ಪಡೆದಿಲ್ಲ. ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಕುಗ್ಗಿಸಿದರೆ ಬಿಜೆಪಿ ಪ್ರಭಾವ ಕುಗ್ಗಿಸಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ಇದರಿಂದಾಗಿಯೇ ಇವರ ರಾಜಕೀಯ ಅವನತಿ ಆರಂಭವಾಗಿದೆ. ಜನರು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ದಲಿತ ಅಸ್ತçವನ್ನು ಮುಂದಿಟ್ಟುಕೊಂಡು ನನ್ನನ್ನು ನಾಶ ಮಾಡಲು ಇವರಿಂದ ಅಲ್ಲ ಕಾಂಗ್ರೆಸ್‌ನಿAದಲೂ ಸಾಧ್ಯವಿಲ್ಲ ಎಂದರು.

ಪೋಸ್ಟರ್ ವಾರ್

ಸ್ಥಳೀಯ ಶಾಸಕರು ಅವರ ಬೆಂಬಲಿಗರ ಜೊತೆ ಪೋಸ್ಟರ್‌ಗಳನ್ನು ತಯಾರಿಸಿದ್ದಾರೆ. ಇಡೀ ದಲಿತ ಸಮುದಾಯ ಜೊತೆಗಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಅದನ್ನು ಅಂಟಿಸಲು ಮುಂದಾದಾಗ ನಾನು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದೆ. ಹಾಗೆಯೇ ಸ್ಥಳೀಯ ಮುಖಂಡ ರಿಗೆ ತಿಳಿಸಿದೆ. ನಮ್ಮ ಮುಖಂಡರು ಅವರನ್ನು ಹಿಡಿದ ನಂತರ ಪೊಲೀಸರು ದಿಢೀರನೆ ಬಂದಿದ್ದಾರೆ. ಆ ಸಮಯದಲ್ಲಿ ದಲಿತ ಮುಖಂಡರಾದ ಕೌನ್ಸಿಲರ್ ಮುನಿರಾಜು ಅವರು ದೂರು ದಾಖಲಿಸಿ ಎಂದರೆ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೂ ಪೊಲೀಸರು ಜಾತಿನಿಂದನೆ ಪ್ರಕರಣದ ದಾಖಲಿಸಿಲ್ಲ ಕಿಡಿಕಾರಿದರು.

ದಲಿತ ಸಮುದಾಯಕ್ಕೆ ಕೊಡುಗೆ

ಕಳೆದ ಹತ್ತು ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿ ೬೦ ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದೇನೆ. ವಿಶ್ವೇಶ್ವರಯ್ಯ ಜಲ ನಿಗಮದ ಮೂಲಕ ೪೬.೫೦ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಮಾಡಿದ್ದೇನೆ. ಸಣ್ಣ ನೀರಾವರಿ ಇಲಾಖೆಯಡಿ ೧೨೦ ಕೊಳವೆ ಬಾವಿ ಗಳನ್ನು ಮಾಡಿಸಿದ್ದೇನೆ. ೪೫ ಚೆಕ್‌ಡ್ಯಾಮ್‌ಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಡಾ.ಸುಧಾಕರ್ ಫೌಂಡೇಶನ್‌ನಿಂದ ೨೮೬ ದೇವಸ್ಥಾನಗಳಿಗೆ ೬.೪೨ ಕೋಟಿ ರೂ. ಅನುದಾನ ನೀಡಿದ್ದೇನೆ. ಆದರೆ ಸ್ಥಳೀಯ ಶಾಸಕರು ಕಾಲೋನಿಗೆ ಹೋಗಿ ಚಿತ್ರಾನ್ನ ತಿಂದಿದ್ದು ಬಿಟ್ಟರೆ ಅವರಿಗಾಗಿ ಮನೆ ಕಟ್ಟಿಸಲಿಲ್ಲ. ಒಬ್ಬರನ್ನೂ ಪಂಚಾಯಿತಿ ಸದಸ್ಯರನ್ನಾಗಿ ಮಾಡಿಲ್ಲ ಎಂದರು.

ನಗರಸಭೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ದಲಿತರಿಗೆ ೪೪೧ ಮನೆ ಮಾಡಿಸಿಕೊಟ್ಟಿದ್ದೇನೆ. ಗ್ರಾಮೀಣ ಭಾಗಗಳಲ್ಲಿ ಬಡ ಕುಟುಂಬಗಳಿಗೆ ೧೪,೧೬೧ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಮಂಚೇನಹಳ್ಳಿ ತಾಲೂಕಿಗೆ ೧೨೦೨ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಒಟ್ಟು ಹತ್ತು ವರ್ಷಗಳಲ್ಲಿ ೧೫,೩೦೩ ಮನೆಗಳನ್ನು ದಲಿತರಿಗೆ ಕಟ್ಟಿಸಿಕೊಟ್ಟಿದ್ದೇನೆ. ಸ್ಲಂ ಬೋರ್ಡ್ನಿಂದ ದಲಿತ ಕಾಲೋನಿ ಗಳಲ್ಲಿ ೨೪೨ ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. ದಲಿತರು ಹೆಚ್ಚಿರುವ ಕಡೆ ನನ್ನ ಟ್ರಸ್ಟ್ನಿಂದ ಅಮೃತಗಂಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಜರಬಂಡಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ೨೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ರೇಣುಮಾಕಲಹಳ್ಳಿಯಲ್ಲಿ ೧೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ೧೦೪ ಎಸ್‌ಸಿ ಸದಸ್ಯರು ಹಾಗೂ ೪೪ ಎಸ್‌ಟಿ ಸದಸ್ಯರು ಗ್ರಾಮ ಪಂಚಾಯಿತಿ ಗಳಲ್ಲಿದ್ದಾರೆ. ೧೨ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಲ್ಲಿ ದಲಿತ ರಿದ್ದಾರೆ. ಈ ಮೂಲಕ ದಲಿತರಿಗೆ ರಾಜಕೀಯ ಶಕ್ತಿ ನೀಡಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಈ ರೀತಿ ಇರಲಿಲ್ಲ. ಅವರನ್ನು ಎಲ್ಲರೂ ಸೇರಿ ಹಾಳು ಮಾಡಿದ್ದಾರೆ. ಅವರ ನೀತಿ ಪಾಠಗಳನ್ನು ನಾವು ಕೇಳಿದ್ದೇವೆ. ಅದಕ್ಕೆ ವಿರುದ್ಧವಾಗಿ ಅವರೇ ನಡೆಯುತ್ತಿದ್ದಾರೆ. ಗೃಹ ಸಚಿವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಗುಲಾಮಗಿರಿ ಮಾಡುವ ಪೊಲೀಸರ ಠಾಣೆಗಳಿಗೆ ನಮ್ಮ ಕಾರ್ಯಕರ್ತರು ನುಗ್ಗಬೇಕಾಗುತ್ತದೆ. ಸುಳ್ಳು ಪ್ರಕರಣ ದಾಖಲಿಸಿದರೆ ಸುಮ್ಮನಿರುವುದಿಲ್ಲ. ಕಾಂಗ್ರೆಸ್ ಕಡೆಯವರು ತಪ್ಪು ಮಾಡಿದರೆ ನಮ್ಮ ಮುಖಂಡರ ವಿರುದ್ಧ ಕೇಸು ದಾಖಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮರಳುಕುಂಟೆ ಕೃಷ್ಣಮೂರ್ತಿ,ಕೆ.ಎನ್.ಕೇಶವರೆಡ್ಡಿ, ಕಣಜೇನಹಳ್ಳಿ ನಾಗರಾಜ್, ನವೀನ್‌ ಕಿರಣ್, ಮುನಿಕೃಷ್ಣ, ನಾಗೇಶ್, ಲೀಲಾವತಿ, ಮೂರ್ತಿ, ರಾ£ಮಸ್ವಾಮಿ, ಮುನಿರಾಜು, ಎಸ್.ಆರ್.ಎಸ್.ದೇವರಾಜ್, ವರುಣ್‌ಕುಮಾರ್,ಜೆ.ನಾಗರಾಜ್ ಮತ್ತಿತರರು ಇದ್ದರು.