ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA S N Subbareddy: 70 ಲಕ್ಷ ವೆಚ್ಚದಲ್ಲಿ ಪೋತೇಪಲ್ಲಿ ರಸ್ತೆ ಕಾಮಗಾರಿ; ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ

ಅನೇಕ ವರ್ಷಗಳಿಂದ 4 ಗ್ರಾಮಗಳಿಗೆ ವಾಹನ ಸವಾರರು, ಬಸ್ ಗಳ, ಜನರು ಸಂಚರಿಸಲು ತೊಂದರೆ ಆಗಿದೆ. ಗುಂಡಿಗಳು ಬಿದ್ದಿವೆ. ಜಲ್ಲು, ಕಲ್ಲುಗಳ ಚೆಲ್ಲಾಪಿಲ್ಲೆ ಆಗಿದೆ. ಬಸ್ ಗಳ ಸಂಚಾರಕ್ಕೆ ಸಮಸ್ಯೆ ಇರುವುದರಿಂದ ಗ್ರಾಮಸ್ಥರು, ಮಹಿಳೆಯರು, ಮಕ್ಕಳು, ವೃದ್ಧರು ಸಂಚರಿಸಲು ತೊಂದರೆ ಆಗಿದೆ ಎಂದು 4 ಗ್ರಾಮಸ್ಥರು ಜನತಾ ದರ್ಶನದಲ್ಲಿ ಮನವಿ ಮಾಡಿದ್ದರು

ಬಾಗೇಪಲ್ಲಿ: ತಾಲ್ಲೂಕಿನ ಪೋತೇಪಲ್ಲಿ ಕ್ರಾಸ್ ನ ಮೂಲಕ ಪೋತೇಪಲ್ಲಿ, ನಲ್ಲಪರೆಡ್ಡಿಪಲ್ಲಿ, ಜಿಲಾಜರ್ಲು, ರಾಯದುರ್ಗಂಪಲ್ಲಿ, ಗೌನಪಲ್ಲಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯನ್ನು ಸುಮಾರು 70 ಲಕ್ಷ ವೆಚ್ಚದಲ್ಲಿ ರಸ್ತೆ ಮಾಡಿಸಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. 

ತಾಲ್ಲೂಕಿನ ಪೋತೇಪಲ್ಲಿ ಕ್ರಾಸ್ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ

ಅನೇಕ ವರ್ಷಗಳಿಂದ 4 ಗ್ರಾಮಗಳಿಗೆ ವಾಹನ ಸವಾರರು, ಬಸ್ ಗಳ, ಜನರು ಸಂಚರಿಸಲು ತೊಂದರೆ ಆಗಿದೆ. ಗುಂಡಿಗಳು ಬಿದ್ದಿವೆ. ಜಲ್ಲು, ಕಲ್ಲುಗಳ ಚೆಲ್ಲಾಪಿಲ್ಲೆ ಆಗಿದೆ. ಬಸ್ ಗಳ ಸಂಚಾರಕ್ಕೆ ಸಮಸ್ಯೆ ಇರುವುದರಿಂದ ಗ್ರಾಮಸ್ಥರು, ಮಹಿಳೆಯರು, ಮಕ್ಕಳು, ವೃದ್ಧರು ಸಂಚರಿಸಲು ತೊಂದರೆ ಆಗಿದೆ ಎಂದು 4 ಗ್ರಾಮಸ್ಥರು ಜನತಾ ದರ್ಶನದಲ್ಲಿ ಮನವಿ ಮಾಡಿದ್ದರು.

ಇದನ್ನೂ ಓದಿ: Chikkaballapur News: ಎಪಿಎಂಸಿ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯಗಳಿಗೆ ಒತ್ತು ನೀಡಿ, ದಲ್ಲಾಳಿಗಳ ಕಮಿಷನ್ ತಪ್ಪಿಸಲು ಕ್ರಮ : ತಹಸೀಲ್ದಾರ್ ಮನಿಷಾ ಮಹೇಶ್ ಎನ್ ಪತ್ರಿ

ಇದೀಗ ರಸ್ತೆ ಮಾಡಲು ಸರ್ಕಾರದಿಂದ 35 ಲಕ್ಷ ಹಣ ಬಿಡುಗಡೆ ಆಗಿದೆ. ಉಳಿದಮ 35 ಲಕ್ಷ ಹಣವನ್ನು ತಮ್ಮ ಶಾಸಕರ ನಿಧಿಯಿಂದ ಹಂಚಿಕೆ ಮಾಡಲಾಗುವುದು. ಕುಸಿತಗೊಂಡಿರುವ ಸೇತುವೆಯನ್ನು, ರಸ್ತೆಯನ್ನು ಗುಣಮಟ್ಟದಿಂದ ಮಾಡಲು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು. 

ತಾಲ್ಲೂಕು ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಎಚ್.ಎಸ್.ನರೇಂದ್ರ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಸದಸ್ಯ ಶ್ರೀನಿವಾಸರೆಡ್ಡಿ, ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ, ದರಖಾಸ್ತು ಸಮಿತಿ ಸದಸ್ಯ ಬೂರಗಮಡುಗುನರಸಿಂಹಪ್ಪ, ಮುಖಂಡರಾದ ಕೃಷ್ಣಾರೆಡ್ಡಿ, ನಲ್ಲಪರೆಡ್ಡಿಪಲ್ಲಿ ಜಯರಾಮರೆಡ್ಡಿ, ಪೋತೇಪಲ್ಲಿ ಶ್ರೀರಾಮರೆಡ್ಡಿ, ಪಿ.ಎನ್.ಭಾಸ್ಕರರೆಡ್ಡಿ, ಪಿ.ಎನ್.ಶಂಕರರೆಡ್ಡಿ, ಶಿವಪ್ಪ, ಕೆ.ವಿ.ಶ್ರೀನಿವಾಸ್ ಮತ್ತಿತರರು ಇದ್ದರು.