ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadguru Shri Madhusudhan Sai: ಸಂವಹನದ ಆಂತರ್ಯ ಅರಿತವರು ಋಷಿಗಳಿಗೆ ಸಮಾನ : ಸದ್ಗುರು ಶ್ರೀ ಮಧುಸೂದನ ಸಾಯಿ

ಒಳ್ಳೆಯ ಕೆಲಸಗಳನ್ನು ಮಾಡಲು ಹೋದಾಗ ಟೀಕೆಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಶಿವನು ವಿಷವನ್ನು ಕಂಠದಲ್ಲಿ ಧರಿಸಿದಂತೆ ಇಂಥ ಟೀಕೆಗಳನ್ನು ನಿರ್ವಹಿಸಬೇಕಾಗುತ್ತದೆ. ಅಂಥವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ಜಗತ್ತಿಗೆ ಹಾನಿಯಾಗುತ್ತದೆ. ಹಾಗೆಂದು ವಿಪರೀತ ಮನಸ್ಸಿಗೆ ಹಚ್ಚಿ ಕೊಂಡರೆ ನಮಗೆ ಹಾನಿಯಾಗುತ್ತದೆ. ಹೀಗಾಗಿ ಅದನ್ನು ಕಂಠದಲ್ಲಿಯೇ ಇರಿಸಿಕೊಂಡು ಶಿವನಂತೆ ಧ್ಯಾನ ಮಗ್ನರಾಗಬೇಕು

ಚಿಕ್ಕಬಳ್ಳಾಪುರ: ದೇವತೆಗಳು ಮತ್ತು ರಾಕ್ಷಸರು ಸಮುದ್ರವನ್ನು ಮಥಿಸಿದಾಗ ಅಮೃತ ಮತ್ತು ವಿಷ ಎರಡೂ ಬಂತು. ಅಮೃತಕ್ಕೆ ಎಲ್ಲರಿಂದಲೂ ಬೇಡಿಕೆಯಿತ್ತು. ಆದರೆ ವಿಷ ಯಾರಿಗೂ ಬೇಡವಾಗಿತ್ತು. ಕೊನೆಗೆ ಜಗತ್ತು ಉಳಿಸಲು ಶಿವ ವಿಷ ಕುಡಿದ. ಆದರೆ ಅದನ್ನು ಕಂಠದಲ್ಲಿಯೇ ಉಳಿಸಿಕೊಂಡು ಜಗತ್ತಿಗೆ ಬಹುದೊಡ್ಡ ಸಂದೇಶ ನೀಡಿದ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ(Sadguru Shri Madhusudhan Sai) ಹೇಳಿದರು.

ನವರಾತ್ರಿ ಆಚರಣೆ(Navarathri)ಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ಒಳ್ಳೆಯ ಕೆಲಸಗಳನ್ನು ಮಾಡಲು ಹೋದಾಗ ಟೀಕೆಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಶಿವನು ವಿಷವನ್ನು ಕಂಠದಲ್ಲಿ ಧರಿಸಿದಂತೆ ಇಂಥ ಟೀಕೆಗಳನ್ನು ನಿರ್ವಹಿಸಬೇಕಾಗುತ್ತದೆ. ಅಂಥವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ಜಗತ್ತಿಗೆ ಹಾನಿಯಾಗುತ್ತದೆ. ಹಾಗೆಂದು ವಿಪರೀತ ಮನಸ್ಸಿಗೆ ಹಚ್ಚಿಕೊಂಡರೆ ನಮಗೆ ಹಾನಿಯಾಗುತ್ತದೆ. ಹೀಗಾಗಿ ಅದನ್ನು ಕಂಠದಲ್ಲಿಯೇ ಇರಿಸಿಕೊಂಡು ಶಿವನಂತೆ ಧ್ಯಾನ ಮಗ್ನರಾಗಬೇಕು ಎಂದು ಸಲಹೆ ಮಾಡಿದರು.

ಅನ್ನ, ಅಕ್ಷರ, ಆರೋಗ್ಯ ಸೇವೆಗಳನ್ನು ಭಾರತದಲ್ಲಿ ಎಂದಿಗೂ ಲಾಭದ ಆಸೆಯಿಂದ ನಿರ್ವಹಿಸು ತ್ತಿರಲಿಲ್ಲ. ನಾವು ಈ ದೇಶದ ಅದ್ಭುತ ಭೂತಕಾಲವನ್ನು ಪುನಃ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಶಿಕ್ಷಕರು, ವೈದ್ಯರು ಅವರ ಕರ್ತವ್ಯಗಳನ್ನು ನೆರವೇರಿಸುತ್ತಿದ್ದರು. ಆದರೆ ಸಂಭಾವನೆಯನ್ನು ನಿರೀಕ್ಷೆ ಮಾಡುತ್ತಿರಲಿಲ್ಲ. ಶುಲ್ಕವಿಲ್ಲದೆ ಈ ಸೇವೆಗಳನ್ನು ಪಡೆಯಬಹು ದಾಗಿತ್ತು. ನಾವು ಈ ಸೇವೆಗಳನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ನೆರವೇರಿಸಲು ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸಿ ಧನ್ವಂತರಿ ಹೋಮ, ಮೃತ್ಯುಂಜಯ ಹೋಮ ಮಾಡುತ್ತಿದ್ದೇವೆ ಎಂದರು. 

ಇದನ್ನೂ ಓದಿ: Chinthamani News: ವರ್ಗಾವಣೆಯಾದ ಉಪನೋಂದಣಾಧಿಕಾರಿಗೆ ಸನ್ಮಾನಿಸಿದ ಪತ್ರ ಬರಹಗಾರರು

ಸರ್ಜನ್‌ಗಳು ಮಾತ್ರವೇ ಸರಿಯಾದ ಕ್ರಮದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಬಲ್ಲರು. ಅದೇ ರೀತಿ ಪುರೋಹಿತರು ಹೋಮಗಳನ್ನು ಸರಿಯಾದ ಕ್ರಮದಲ್ಲಿ ಮಾಡಿಸಬೇಕು. ಇದೂ ಸಹ ಲೋಕ ಸೇವೆಯೇ ಆಗುತ್ತದೆ. ನವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಪುರೋಹಿತರಿಗಾಗಿ ನಮ್ಮ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ಕಾರ್ಡ್‌ ಮಾಡಿಕೊಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.

ನವರಾತ್ರಿ ಆಚರಣೆಯ ಭಾಗವಾಗಿ ಧನ್ವಂತರಿ ಹೋಮ ಮತ್ತು ವಿಷ್ಣು ಸಹಸ್ರನಾಮ ಹೋಮ ನೆರವೇರಿಸಲಾಯಿತು. ಬೆಂಗಾಲಿ ಶೈಲಿಯಲ್ಲಿ ದುರ್ಗಾ ಪೂಜೆ ಮತ್ತು ಆರತಿ ನಡೆಯಿತು. ರುದ್ರ ಹೋಮದಲ್ಲಿ ಪೂರ್ಣಾಹುತಿ ಮತ್ತು ಅಷ್ಟಾವಧಾನ ಸೇವೆ, ಚತುರ್ವೇದ ಪಾರಾಯಣ, ಸಂಗೀತ, ನಾದಸ್ವರ, ಪಂಚವಾದ್ಯ ಸೇವೆಗಳು ನಡೆದವು.

*ಸಂವಹನ ಬಹಳ ಮುಖ್ಯ*

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ಚನ ನೀಡಿದ ಸದ್ಗುರುಗಳು, ಹಿಂದಿನ ಕಾಲದಲ್ಲಿ ಋಷಿಗಳು ತಮಗೆ ಆದ ದರ್ಶನವನ್ನು ಮಂತ್ರಗಳು, ಶ್ಲೋಕಗಳ ರೂಪದಲ್ಲಿ ದಾಖಲಿಸಿಟ್ಟರು. ಅವರು ಹಾಗೆ ಮಾಡದಿದ್ದರೆ ನಮಗೆ ವೇದಮಂತ್ರಗಳಾಗಲಿ, ರಾಮಾಯಣ-ಮಹಾಭಾರತಗಳಾಗಲಿ ಸಿಗುತ್ತಿರಲಿಲ್ಲ. ಹಿಂದಿನ ಕಾಲದ ಋಷಿಗಳಂತೆ ಇಂದು ಸಂವಹನ ವಿಭಾಗದ ಸಹವರ್ತಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸತ್ಯ ಸಾಯಿ ಗ್ರಾಮದಲ್ಲಿ 2012 ರಲ್ಲಿ ಮೊಬೈಲ್ ಕರೆ ಮಾಡಲು ಸರಿಯಾದ ಸಿಗ್ನಲ್ ಸಿಗದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಆದರೆ ಇಂದು ಜಾಗತಿಕ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದೇವೆ ಎಂದು ಹೇಳಿದರು. 

'ಶ್ರೀ ಸತ್ಯ ಸಾಯಿ ಅನ್ನಪೂರ್ಣ ಪೌಷ್ಟಿಕ ಆಹಾರ ಯೋಜನೆ'ಗೆ ಬೆಂಬಲ ನೀಡುತ್ತಿರುವ 'ಸಾಸ್ಕೆಲ್ ಟೆಕ್ನಾಲಜೀಸ್ ಆಫ್ ಇಂಡಿಯಾ' ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಅಧಿಕಾರಿ ಸುನೀಲ್ ದತ್ ಅವರು ಪ್ರಶಸ್ತಿ ಸ್ವೀಕರಿಸಿದರು. 

ಶ್ರೀ ಸತ್ಯ ಸಾಯಿ ಪ್ರೇಮಾಮೃತ ಪ್ರಕಾಶನ ಮತ್ತು ಗ್ಲೋಬಲ್ ಔಟ್‌ರೀಚ್ ಅಂಡ್ ಕಮ್ಯುನಿಕೇಶನ್ಸ್‌ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಚೇತನ್ ಕೊತ್ತ ಅವರು ವಿಭಾಗದ ಕಾರ್ಯ ನಿರ್ವಹಣೆಯ ಕುರಿತು ವಿವರಿಸಿದರು. 'ವಿಶ್ವಮಟ್ಟದ ಸ್ಟುಡಿಯೊ, ಉಪಕರಣಗಳು ನಮ್ಮಲ್ಲಿವೆ. ಸೇವಾ ಮನೋಭಾವದ ಅತ್ಯುತ್ತಮ ತಂಡವು ಎಲ್ಲ ಕಾರ್ಯಕ್ರಮಗಳನ್ನು ತತ್‌ಕ್ಷಣಕ್ಕೆ ಜನರಿಗೆ ಲೈವ್ ರೂಪದಲ್ಲಿ ತಲುಪಿಸಲು ಸದಾ ಶ್ರಮಿಸುತ್ತಿದೆ' ಎಂದು ಹೇಳಿದರು.