ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ: ಬಿಇಒ ಎನ್.ವೆಂಕಟೇಶಪ್ಪ

ಸೋತವರು ಗೆದ್ದವರನ್ನು ಅಭಿನಂದಿಸಿ, ಗೆದ್ದವರು ಸೋತವರನ್ನು ಆಲಂಗಿಸಿ ಕ್ರೀಡಾ ಮನೋಭಾವ ದಿಂದ ಸೋಲು-ಗೆಲವನ್ನು ಸಮನಾಗಿ ಸ್ವೀಕರಿಸಿ ಎಂದು ಹೇಳಿದರು. ಕ್ರೀಡಾಕೂಟದಲ್ಲಿ ತೀರ್ಪುಗಾರರು ವಸ್ತ ನಿಷ್ಠೆಯಿಂದ ತೀರ್ಪು ನೀಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ನಿಜವಾದ ಪ್ರತಿಭೆಗಳನ್ನು ಆಯ್ಕೆ ಮಾಡಿ

ಬಾಗೇಪಲ್ಲಿ: ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ, ಸೋಲು ಹಿಂದಿನ ತಪ್ಪುಗಳನ್ನು ಸರಿಪಡಿಸಿ ಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಮಕ್ಕಳು ಸ್ನೇಹಪೂರ್ವಕವಾಗಿ ಕ್ರೀಡೆಗಳಲ್ಲಿ ಭಾಗವಹಿಸ ಬೇಕು ಎಂದು ತಾಲ್ಲೂಕು ಬಿಇಒ ಎನ್. ವೆಂಕಟೇಶಪ್ಪ ಎಂದು ಸಲಹೆ ನೀಡಿದರು.

ಅವರು ಗೂಳೂರು ಹೋಬಳಿ ಮಾನವ ಧರ್ಮ ಪೀಠ ಜಚನಿ ಪ್ರೌಢಶಾಲಾ ಆವರಣದಲ್ಲಿ ಸೋಮ ವಾರ ಶಾಲಾ ಸಾರ್ವಜನಿಕ ಶಿಕ್ಷಣ ಇಲಾಖೆ ,ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಡಾ.ಜಚನಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗೂಳೂರು ಹೋಬಳಿ ಮಟ್ಟದ 2025-26 ನೇ ಸಾಲಿನ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸಿ ತದನಂತರ ಮಾತನಾಡಿ, 'ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ, ಸೋಲು ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ.

ಇದನ್ನೂ ಓದಿ: Chikkaballapur News: ಒಂದು ವಿಶ್ವ ಒಂದು ಕುಟುಂಬ ಮಿಷನ್ ವತಿಯಿಂದ ಭಾರತದಲ್ಲಿ 100-ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವ ಆಯೋಜನೆ

ಮಕ್ಕಳು ಸ್ನೇಹಪೂರ್ವಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು, ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸಿ. ತೀರ್ಪುಗಾರರು ನೀಡುವ ತೀರ್ಪು ಗೌರವಿಸಬೇಕು' ಎಂದು ತಿಳಿಸಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ್ ಮಾತನಾಡಿ, ಸೋತವರು ಗೆದ್ದವರನ್ನು ಅಭಿನಂದಿಸಿ, ಗೆದ್ದವರು ಸೋತವರನ್ನು ಆಲಂಗಿಸಿ ಕ್ರೀಡಾ ಮನೋಭಾವದಿಂದ ಸೋಲು-ಗೆಲವನ್ನು ಸಮನಾಗಿ ಸ್ವೀಕರಿಸಿ ಎಂದು ಹೇಳಿದರು. ಕ್ರೀಡಾಕೂಟದಲ್ಲಿ ತೀರ್ಪುಗಾರರು ವಸ್ತ ನಿಷ್ಠೆಯಿಂದ ತೀರ್ಪು ನೀಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ನಿಜವಾದ ಪ್ರತಿಭೆಗಳನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿದರು. 

ಡಾ.ಜಚನಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ನಾಗರಾಜು ಮಾತನಾಡಿ ಗೂಳೂರು ಮಾನವ ಧರ್ಮ ಪೀಠ ಡಾ.ಜಚನಿ ಶಾಲೆಯಲ್ಲಿ 35 ವರ್ಷಗಳ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಇಲಾಖೆ ಗೆ ಅಭಿನಂಧನೆಗಳನ್ನು ಸಲ್ಲಿಸುತ್ತೇನೆ ಈ ಹೋಬಳಿ ಮಟ್ಟದ ಕ್ರೀಡಾ ಕೂಟಕ್ಕೆ ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ,ಶಿಕ್ಷಕರಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲ ಎ.ಜಿ.ಸುಧಾಕರ್, ಶಿಕ್ಷಣ ಸಮನ್ವಯ ಅಧಿಕಾರಿಗಳಾದ ವೆಂಕಟ ರಾಮ್, ಗೂಳೂರು ಇಸಿಓ ರವಿಕುಮಾರ್, ಶಿಕ್ಷಕರಾದ ಎನ್.ಶಿವಪ್ಪ, ಬಾಲರಾಜು, ವೆಂಕಟೇಶ್, ಸುಬ್ರಮಣಿ, ನಾಗರಾಜು ನರಸಿಂಹ ಮೂರ್ತಿ,ಹಾಗೂ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹಾಜರಿದ್ದರು.