ಚಿಕ್ಕಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಕೋಟ್ಯಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿದ್ದು, ಇಂತಹ ಧಾರ್ಮಿಕ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕ್ರಮ ಖಂಡನೀಯ ಎಂದು ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳ ಆರೋಪಿಸಿವೆ. ಅಪ ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಉಭಯ ಸಂಘಟನೆಗಳು ಆಗ್ರಹಿಸಿವೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಮಂಜು ನಾಥ್, ಧರ್ಮಸ್ಥಳ ಅನಾದಿ ಕಾಲದಿಂದಲೂ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದ ವಿರುದ್ಧ ಷಡ್ಯಂತರ ನಡೆಯುತ್ತಿದೆ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನ ದಲ್ಲಿ ಹೇಳಿದ್ದಾರೆ. ಹಾಗಿದ್ದರೂ ಷಡ್ಯಂತರ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ದಿರುವುದು ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: Chikkaballapur News: ಬಾಗೇಪಲ್ಲಿಯಲ್ಲಿ: "ಸ್ಟಾಪ್ ವೋಟ್ ಚೊರಿ" ಸ್ಟಿಕರ್ ಅಭಿಯಾನಕ್ಕೆ ಚಾಲನೆ
ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತರ ಖಂಡಿಸಿ, ರಾಜ್ಯಾದ್ಯಂತ ದೇವಾಲಯಗಳಲ್ಲಿ ಶಿವ ನಾಮ ಸ್ಮರಣೆಯನ್ನು ಮಾಡಲು ವಿಶ್ವಹಿಂದೂಪರಿಷತ್ ನಿರ್ಧರಿಸಿದ್ದು, ಸನಾತನ ಧರ್ಮದ ರP??Àಣೆಗಾಗಿ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಮತ್ತು ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಭಜರಂಗದಳದ ಅಂಬರೀಷ್ ಮಾತನಾಡಿ, ಅಕ್ರಮ ಗೋ ಸಾಗಣೆ ಸೇರಿದಂತೆ ಅನೇಕ ಹಿಂದೂ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಇದನ್ನು ತಡೆಯಲು ಯತ್ನಿಸುವ ಹಿಂದೂಪರ ಸಂಘಟನೆಗಳ ವಿರುದ್ಧ ಷಡ್ಯಂತರ ನಡೆಸಿ, ಕೇಸುಗಳನ್ನು ಹಾಕಲಾಗುತ್ತಿದೆ. ಈ ಕ್ರಮ ನಿಲ್ಲಬೇಕು ಮತ್ತು ಧರ್ಮಸ್ಥಳದ ವಿರುದ್ಧ ನಡೆಸುತ್ತಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸ ಬೇಕು. ಸೌಜನ್ಯ ಪರ ಹೋರಾಟಕ್ಕೆ ಹಿಂದೂಪರ ಸಂಘಟನೆಗಳು ಸದಾ ನಡೆಸುತ್ತಿವೆ. ಆದರೆ ಸೌಜನ್ಯ ಹೆಸರಿನಲ್ಲಿ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರ ಸಹಿಸಲು ಸಾಧ್ಯವಿಲ್ಲ ಎಂದರು.