ಚಿಂತಾಮಣಿ : ಪ್ರಸ್ತುತ ದಿನಗಳಲ್ಲಿ ಬರಪೀಡಿತ ಜಿಲ್ಲೆಗಳು ಎದುರಿಸುತ್ತಿರುವ ತೀವ್ರ ಮಳೆ ಕೊರತೆಗೆ ಪರ್ಯಾಯ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಚಿಂತಾಮಣಿಯ ಯುವ ಕೃಷಿಕರು “ನೀರು ಜಾಡು” ಎಂಬ ಅಧ್ಯಯನ ಯಾತ್ರೆಯನ್ನು ಕೈಗೊಂಡಿದ್ದಾರೆ.
ಮಳೆ ಅಭಾವದಿಂದ ಕೃಷಿಯನ್ನು ಸುಧಾರಿಸಿಕೊಳ್ಳುವ ಪ್ರಕ್ರಿಯೆಗಳ ಕುರಿತು ಅಧ್ಯಯನ ನಡೆಸುವ ನಿಟ್ಟಿನಲ್ಲಿ ಬಳ್ಳಿ ಬಳಗ ಕೃಷಿಕರ ವೇದಿಕೆಯ ವತಿಯಿಂದ 25 ಜನ ಯುವಕೃಷಿಕರು ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಗತಿಪರ ರೈತರ ಹೊಲಗಳಿಗೆ ಭೇಟಿ ಮಾಡುವ ಯಾತ್ರೆಗೆ ಕವಿ ಸಮಾಜಿಕ ಕಾರ್ಯಕರ್ತ ಶಶಿರಾಜ್ ಹರತಲೆ ಅವರು ಚಾಲನೆ ನೀಡಿದರು. ಅಭಿವೃದ್ದಿಯ ಹೆಸರಿನಲ್ಲಿ ಬಂದ ದೊಡ್ಡ ಕೃಷಿ ಮಾದರಿಗಳು, ಕಾರ್ಪೋರೇಟ್ ಕೃಷಿ ಪದ್ದತಿಗಳು, ಸರ್ಕಾರದ ಅವೈಜ್ಙಾನಿಕ ನೀತಿಗಳು ನಮ್ಮ ರೈತರನ್ನು ರಕ್ಷಿಸಲಿಲ್ಲ. ಆದರೆ ಬೆವರು ಸುರಿಸಿ ಹೊಲ ಗದ್ದೆಗಳಲ್ಲಿ ದುಡಿಯುವ ಮೂಲಕ ಸಾಕಷ್ಟು ಪರ್ಯಾಯ ಮಾದರಿಗಳನ್ನು ಕಂಡಕೊಂಡ ರೈತರನ್ನು ಬೇಟಿ ಮಾಡುವ “ನೀರ ಜಾಡು” ಯಾತ್ರೆ ವಿಭಿನ್ನ ಪ್ರಯೋಗ ಇದು ನೆಲ ತಾಯಿ ಮಕ್ಕಳ ಯಶಸ್ವಿನ ಯಾತ್ರೆಯಾಗಲಿ ಎಂದು ಆಶಿಸಿದರು.
ಇದನ್ನೂ ಓದಿ: Vishwavani Editorial: ದೇವಭೂಮಿಯ ಘೋರ ದುರಂತ
ಇತ್ತೀಚಿನ ವರ್ಷಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಳೆ ಕೊರತೆಯು ತೀವ್ರವಾಗಿ ಕಾಡುತ್ತಿದೆ. ಪ್ರತಿವರ್ಷವು ಕೃಷಿ ಮಾಡುವ ಪ್ರಮಾಣ ಇಳಿಮುಖವಾಗುತ್ತಿದೆ. ಪ್ರಸ್ತುತ ವರ್ಷ ಆರಂಭದಲ್ಲಿ ಮುಂಗಾರು ಆಸೆ ತೋರಿಸಿ ಬಿತ್ತನೆ ಸಮಯದಲ್ಲಿ ಕೈಕೊಟ್ಟಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಡಿಮೆ ಮಳೆಯ ನಡುವೆಯೂ ಕೃಷಿಯಲ್ಲಿ ಬದುಕು ಕಂಡುಕೊಂಡ ಬಹಳಷ್ಟು ರೈತರು ನಮ್ಮ ನಡುವೆ ಇದ್ದಾರೆ. ಕೃಷಿಯಲ್ಲಿ ಸಸ್ಥಿರ ಬೇಸಾಯ ಬೆಳೆ ಪದ್ದತಿಗಳು, ಮಳೆ ನೀರು ಕೊಯ್ಲು, ಬರ ಎದುರಿಸಿ ಬೆಳೆವ ಸ್ಥಳಿಯ ನಾಟಿ ಬೀಜಗಳು, ಮಣ್ಣು ತೇವಾಂಶ ಕಾಪಡುವ ಮಾದರಿಗಳು, ಹೀಗೆ ಹಲವು ಸ್ಥಳಿಯ ಜನರ ಜ್ಙಾನದ ಆಧಾರದ ಮೇಲೆ ಕಂಡುಕೊAಡ ಪರ್ಯಾಯ ಮಾದರಿಗಳನ್ನು ಕಲಿಯಲು ಈ ಯಾತ್ರೆ ಬಹಳ ಮುಖ್ಯ ಆಗುತ್ತದೆ. ಎಂದು ಬಳ್ಳಿ ಬಳಗ ರೈತ ನಾಗಸಂದ್ರಗಡ್ಡೆ ಸುರೇಶ್ ಅಭಿಪ್ರಾಯ ಪಟ್ಟರು.
ಬಯಲು ಸೀಮೆಗೆ ನೀರಿನ ಪರ್ಯಾಯಗಳನ್ನು ಸೂಚಿಸುವ ಹಲವಾರು ಯೋಜನೆಗಳು, ಕಾರ್ಯ ಕ್ರಮಗಳು ಇದ್ದರೂ ಜನರೇ ಕಂಡುಕೊAಡ ಸುಸ್ಥಿರ ನೀರಿನ ಸೂತ್ರಗಳು, ಅವರ ಅನುಭವಗಳು ಹೆಚ್ಚು ಮಹತ್ವ ಪಡೆಯುತ್ತವೆ. ಈ ನಿಟ್ಟಿನಲ್ಲಿ ಮುಳಬಾಗಿಲಿನ ಅಕ್ಕಡಿಸಾಲು ಪದ್ದತಿಯಲ್ಲಿ ಗೆದ್ದ ಪ್ರಭಾಕರ್, ಕಡಿಮೆ ನೀರಿನಲ್ಲಿ ತೋಟಗಾರಿಕೆ ಮಾಡಿ ಯಶಸ್ವಿಯಾದ ರ‍್ಮಲಿಂಗA, ಚಿಂತಾಮಣಿಯ ಪ್ರಗತಿಪರ ರೈತ ರ‍್ಟಹಳ್ಳಿ ರಾಧಕೃಷ್ಣ, ತೇವಾಂಶ ಗುಂಡಿ ಮೂಲಕ ಬರದಲ್ಲಿ ಬೆಳೆ ರಕ್ಷಿಸಿಕೊಂಡು ಕೃಷಿ ಮಾಡುವ ಮೈಲಾಪುರ ರವಿ, ನಾಟು ಪದ್ದತಿಯಲ್ಲಿ ಅಧಿಕ ಇಳುವರಿ ಪಡೆವ ಕೊಡಿಗೆಹಳ್ಳಿ ದೇವರಾಜ್, ಗುಳಿಪದ್ದತಿಯಲ್ಲಿ ಮಾದರಿಯಾದ ಮಾಲೂರಿನ ವೆಂಕಟೇಶಪ್ಪ, ಹೀಗೆ ಹತ್ತು ಹಲವು ಪ್ರಗತಿ ಪರ ರೈತರ ನೆಲ ಜ್ಙಾನ, ಅವರು ಮಾಡಿರುವ ವಿಭಿನ್ನ ಚಟುವಟಿಕೆಗಳು ಬೇಸಾಯದಲ್ಲಿ ಭರವಸೆಯನ್ನು ಮೂಡಿಸುತ್ತವೆ. ಇಂತಹ ಅನೇಕ ನೆಲ ಪ್ರಯೋಗಗಳನ್ನು ನೋಡಿ ಕಲಿತು ದಾಖಲೀಕರಿಸಿ ಅಳವಡಿಸಿಕೊಳ್ಳುವ ಮತ್ತು ಇತರರಿಗೆ ತಿಳಿಸುವ ಅರ್ಥಪೂರ್ಣ ಯಾತ್ರೆ ಇದಗಾಲಿದೆ ಎಂದು ಬಳ್ಳಿ ಬಳಗದ ಕೃಷಿಕ ಚಲಪತಿ ತಿಳಿಸಿದರು.
ಈ ಯಾತ್ರೆಯು ನಿರಂತರವಾದ ಅಧ್ಯಯನದ ಕಡೆ ಗಮನಹರಿಸಲಿದ್ದು ಕೃಷಿಕರು, ಕೃಷಿಕರ ನಡುವೆ ಅರಿವಿನ ವಿನಿಮಯ ಮಾಡಿಕೊಳ್ಳುವ, ಹೊಸ ಮಾದರಿಯ ಸುಸ್ಥಿರ ಪದ್ದತಿಗಳನ್ನು ತಿಳಿದು “ನನ್ನ ಹೊಲ ನನ್ನ ಯೋಜನೆ” ಯನ್ನು ಪ್ರತಿಯೊಬ್ಬ ಕೃಷಿಕರು ಮಾಡಿಕೊಳ್ಳುತ್ತೇವೆ. ನಮ್ಮ ಮಣ್ಣಿಗೆ ತೊಂದರೆಯಾಗದ ಪದ್ದತಿಗಳನ್ನು ಇಲಾಖೆಯ ಮೂಲಕವು, ಇತರೆ ಸಂಘ ಸಂಸ್ಥೆಗಳ ಸಹಕಾರ ವನ್ನು ಪಡೆಯುತ್ತೇವೆ. ರ‍್ನಾಟಕದಲ್ಲಿ ವಿವಿಧ ಮಾದರಿಗಳ ಮೂಲಕ ಯಶಸ್ವಿಯಾದ ರೈತರ ಜೀವನಾಗಥೆಗಳನ್ನು ಓದುತ್ತೇವೆ. ಅಧ್ಯಯನ, ಸಂಶೋಧನೆ, ವಿಶ್ವವಿಧ್ಯಾಲಯದ ಪ್ರಾತ್ಯೀಕ್ಷಿಕೆಗಳು, ಈ ಎಲ್ಲವುಗಳಿಗಿಂತ ರೈತರ ಅನುಭವದ ತಿಳುವಳಿಕೆಯೇ ದೊಡ್ಡದು ಎಂಬ ನಂಬಿಕೆಯನ್ನು ಹೆಚ್ಚು ನಂಬುವ ನಾವು ಮಣ್ಣು ಮುಟ್ಟಿ ದುಡಿದವರ ಅನುಭವಗಳಲ್ಲಿ ಹೆಚ್ಚು ಕಲಿಕೆ ಇರುತ್ತದೆ. ಅಂತಹ ಜನರ ಬೇಟಿ ಮಾಡುವುದಕ್ಕಾಗಿ ಈ ಯಾತ್ರೆ ಕೈಗೊಂಡಿದ್ದೇವೆ ಎಂದು ಆನೂರು ಶ್ರೀನಿವಾಸ್ ಹೇಳಿದರು.
ಈ ಯಾತ್ರೆಯಲ್ಲಿ ಯುವ ಕೃಷಿಕರಾದ ಚೌಡದೇನಹಳ್ಳಿ ಆನಂದ ಸಿ.ಎಂ., ಪಾಲೇಪಲ್ಲಿ ಶಂಕರರೆಡ್ಡಿ, ಕೊಡಿಗೇನಹಳ್ಳಿ ದೇವರಾಜು, ಮೈಲಾಪುರ ಮುನಿಬಸಪ್ಪ, ಚೌಡದೇನಹಳ್ಳಿ ನಾರಾಯಣಸ್ವಾಮಿ, ಮಹಮದ್ ಪುರ ನಾರಾಯಣಸ್ವಾಮಿ, ಲಕ್ಷö??ಪ್ಪ, ಆನೂರು ನಾಗೇಶ್, ಮಂಜುನಾಥ, ಸೇರಿದಂತೆ ವಿವಧ ಹಳ್ಳಿಗಳಿಂದ ಆಗಮಿಸಿದ್ದ ಹತ್ತಾರು ಯುವಜನರು ಪಾಲ್ಗೊಂಡಿದ್ದರು.